ಸಾರ್ವಜನಿಕ ಸ್ಥಳಗಳ ಸಿಸಿ ಟಿವಿ ಕ್ಯಾಮೆರಾಗಳು ಜಿಯೋ-ಟ್ಯಾಗಿಂಗ್‌ಗೆ ಜೋಡಣೆ: ಬೆಂಗಳೂರು ಪೊಲೀಸರ ಕ್ರಮ
ಕನ್ನಡ ಸುದ್ದಿ  /  ಕರ್ನಾಟಕ  /  ಸಾರ್ವಜನಿಕ ಸ್ಥಳಗಳ ಸಿಸಿ ಟಿವಿ ಕ್ಯಾಮೆರಾಗಳು ಜಿಯೋ-ಟ್ಯಾಗಿಂಗ್‌ಗೆ ಜೋಡಣೆ: ಬೆಂಗಳೂರು ಪೊಲೀಸರ ಕ್ರಮ

ಸಾರ್ವಜನಿಕ ಸ್ಥಳಗಳ ಸಿಸಿ ಟಿವಿ ಕ್ಯಾಮೆರಾಗಳು ಜಿಯೋ-ಟ್ಯಾಗಿಂಗ್‌ಗೆ ಜೋಡಣೆ: ಬೆಂಗಳೂರು ಪೊಲೀಸರ ಕ್ರಮ

ಬೆಂಗಳೂರಿನಲ್ಲಿ ಸಿಸಿಟಿವಿ ಕ್ಯಾಮೆರಾಗಳ ಜಿಯೋ-ಟ್ಯಾಗಿಂಗ್ ಮಾಡಲಾಗುತ್ತಿದೆ. 2025ರ ಏಪ್ರೀಲ್ 30ರ ತನಕ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒಟ್ಟು 5,35,815 ಸಿಸಿ ಟಿವಿ ಕ್ಯಾಮೆರಾಗಳು ಜಿಯೋ-ಟ್ಯಾಗಿಂಗ್ ಆಗಿವೆ ಎಂದು ಬೆಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ. (ವರದಿ: ಮಾರುತಿ ಎಚ್.)

ಬೆಂಗಳೂರಿನಲ್ಲಿ ಸಿಸಿಟಿವಿ ಕ್ಯಾಮೆರಾಗಳ ಜಿಯೋ-ಟ್ಯಾಗಿಂಗ್
ಬೆಂಗಳೂರಿನಲ್ಲಿ ಸಿಸಿಟಿವಿ ಕ್ಯಾಮೆರಾಗಳ ಜಿಯೋ-ಟ್ಯಾಗಿಂಗ್ (Pixabay)

ಬೆಂಗಳೂರು: ಬೆಂಗಳೂರು ನಗರದಲ್ಲಿ ಸಾರ್ವಜನಿಕ ಭದ್ರತೆ ಮತ್ತು ಅಪರಾಧ ನಿಯಂತ್ರಣವನ್ನು ಮತ್ತಷ್ಟು ಬಲಪಡಿಸುವ ದೃಷ್ಠಿಯಿಂದ, MCCTNS (Mobile Companion for Crime and Criminal Tracking Network & Systems) ಸಿಸಿಟಿವಿ ಕ್ಯಾಮೆರಾಗಳ ಜಿಯೋ-ಟ್ಯಾಗಿಂಗ್ ಮಾಡಲಾಗುತ್ತಿದೆ. 2025 ರ ಏಪ್ರೀಲ್-30 ರ ತನಕ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒಟ್ಟು 5,35,815 ಸಿಸಿ ಟಿವಿ ಕ್ಯಾಮೆರಾಗಳು ಜಿಯೋ-ಟ್ಯಾಗಿಂಗ್ ಆಗಿವೆ.

2024 ರ ಜನವರಿ 01 ರ ವೇಳೆಗೆ ಈ ಸಂಖ್ಯೆ 2,32,711ರಷ್ಟಿತ್ತು. ಕಳೆದ ಒಂದು ವರ್ಷದ ಅವಧಿಯಲ್ಲಿ ಅಂದಾಜು 3 ಲಕ್ಷಕ್ಕೂ ಹೆಚ್ಚು ಹೊಸ ಕ್ಯಾಮೆರಾಗಳು ಜಿಯೋ-ಟ್ಯಾಗ್ ಆಗಿರುವುದು ದಾಖಲೆ ಮಟ್ಟದ ಬೆಳವಣಿಗೆಯಾಗಿದೆ.

MCCTNS developers portal ನಲ್ಲಿರುವ ಡೇಟಾ ಪ್ರಕಾರ, ಈ ಕ್ಯಾಮೆರಾಗಳು ವಿವಿಧ ಕ್ಷೇತ್ರಗಳಲ್ಲಿ ಅಂದರೆ ವಸತಿ ಪ್ರದೇಶಗಳು, ವ್ಯಾಪಾರಿಕ ಕೇಂದ್ರಗಳು, ಮುಖ್ಯರಸ್ತೆಗಳು, ಸಿಗ್ನಲ್‌ಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಬ್ಯಾಂಕ್‌ಗಳು ಹಾಗೂ ಇತರೆ ಮಹತ್ವದ ಸ್ಥಳಗಳಲ್ಲಿ ಸ್ಥಾಪನೆಯಾಗಿವೆ. ಈ ಡಿಜಿಟಲ್ ಜಿಯೋ-ಟ್ಯಾಗಿಂಗ್ ಡೇಟಾ ಪೊಲೀಸ್ ಇಲಾಖೆಗೆ ನಿಖರ ಸ್ಥಳಾನುಸಾರ ಮಾಹಿತಿ ನೀಡುವುದರ ಮೂಲಕ ಅಪರಾಧ ತನಿಖೆ ಮತ್ತು ಕಾರ್ಯಾಚರಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಡೆಸಲು ನೆರವಾಗುತ್ತಿದೆ.

ಬೆಂಗಳೂರು ನಗರದ ಪೊಲೀಸ್ ಇಲಾಖೆ ಮತ್ತು MCCTNS ಅಭಿವೃದ್ಧಿ ತಂಡವು ಕೈಗೊಳ್ಳುತ್ತಿರುವ ಈ ಸಂಯುಕ್ತ ಪ್ರಯತ್ನವು ಭವಿಷ್ಯದ "ಸ್ಮಾರ್ಟ್ ಪೆಟ್ರೋಲಿಂಗ್", "ಡಿಜಿಟಲ್ ನಗರ ಭದ್ರತಾ ವ್ಯವಸ್ಥೆ" ಮತ್ತು "ವಿಶ್ಲೇಷಣಾ ತನಿಖೆ" ಯೋಜನೆಗಳಿಗೆ ಭದ್ರ ಅಡಿಪಾಯ ಒದಗಿಸುತ್ತದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವರದಿ: ಮಾರುತಿ ಎಚ್.

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in