Bengaluru Power Cut: ಜನವರಿ 25, 27 ಮತ್ತು 28 ರಂದು ಬೆಂಗಳೂರಿನ ವಿವಿಧೆಡೆ ಪವರ್ ಕಟ್, ವಿವರ ಹೀಗಿದೆ
Bengaluru Power Cut: ಬೆಸ್ಕಾಂ ವ್ಯಾಪ್ತಿಯಲ್ಲಿ ವಿಶೇಷವಾಗಿ ಬೆಂಗಳೂರು ನಗರದ ವಿವಿಧ ಪ್ರದೇಶಗಳಲ್ಲಿ ಜನವರಿ 25, 27 ಮತ್ತು 28 ರಂದು ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ. ಯಾವ ದಿನಾಂಕದಂದು ಎಲ್ಲಿ ಪವರ್ ಕಟ್ ಇರಲಿದೆ ಎಂಬ ವಿವರವನ್ನು ಬೆಸ್ಕಾಂ ನೀಡಿದ್ದು, ಅದು ಹೀಗಿದೆ. (ವರದಿ- ಎಚ್ ಮಾರುತಿ, ಬೆಂಗಳೂರು)

Bengaluru Power Cut: ಬೆಂಗಳೂರು ವಿದ್ಯುತ್ ಪೂರೈಕೆ ನಿಗಮ ನಿಯಮಿತ (ಬೆಸ್ಕಾಂ) ವ್ಯಾಪ್ತಿಯಲ್ಲಿ ಬೆಂಗಳೂರಿನ ವಿವಿಧೆಡೆ ಜನವರಿ 25, 27 ಮತ್ತು 28 ರಂದು ಪವರ್ ಕಟ್ ಇರಲಿದೆ. ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿಗಳನ್ನು ನಡೆಸಲಿರುವ ಕಾರಣ, ನಿಗದಿತ ಸಮಯದಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ. ಇಂದು (ಜನವರಿ 24) ಕೂಡ ಪವರ್ ಕಟ್ ಚಾಲ್ತಿಯಲ್ಲಿತ್ತು ಎಂದು ಬೆಸ್ಕಾಂ ತಿಳಿಸಿದೆ.
ಬೆಂಗಳೂರು ನಗರದ ವಿವಿಧೆಡೆ ಜನವರಿ 25 ರಂದು ವಿದ್ಯುತ್ ವ್ಯತ್ಯಯ
ಬೆಂಗಳೂರು ವ್ಯಾಪ್ತಿಯಲ್ಲಿ ಗ್ಲೋಬಲ್ ಟೆಕ್ ಪಾರ್ಕ್‌ನ 66/11ಕೆವಿ ಉಪಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುವ ಹಿನ್ನೆಲೆಯಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ಶನಿವಾರ ಜನವರಿ 25 ರಂದು ಬೆಳಗ್ಗೆ 10 ರಿಂದ ಅಪರಾಹ್ನ 2 ಗಂಟೆ ತನಕ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಇದರಂತೆ, ಎಕೊವರ್ಲ್ಡ್ ಕ್ಯಾಂಪಸ್, ಮ್ಯಾರಿಯಟ್ ಹೋಟೆಲ್, ದೇವರಬೀಸನಹಳ್ಳಿ, ವಜ್ರಮ್ ಅಪಾರ್ಟ್ಮೆಂಟ್, ದೇವರಬೀಸನಹಳ್ಳಿ ಗ್ರಾಮ, ದೊಡ್ಡಕನ್ನೆಳ್ಳಿ ರೋಡ್, ಗೇರ್ ಸ್ಕೂಲ್ ರೋಡ್, ಆದರ್ಶ್, ಸಾಯಿ ಶೃತಿ, ಸ್ಟರ್ಲಿಂಗ್ ಅಸೆಂಟಿಯಾ, ಸಾಮ್ವಿ, ಜೆ.ವಿ ಹೋಟೆಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಇರಲ್ಲ.
ಬೆಂಗಳೂರು ನಗರದ ವಿವಿಧೆಡೆ ಜನವರಿ 27ರಂದು ಪವರ್ ಕಟ್ ಎಲ್ಲೆಲ್ಲಿ
ಬೆಂಗಳೂರು ವ್ಯಾಪ್ತಿಯಲ್ಲಿ ಸೇಂಟ್‌ಜಾನ್‌ವುಡ್ 66/11ಕೆವಿ ಉಪಕೇಂದ್ರದಲ್ಲಿನ ಈ ಕೆಳಕಂಡ ಪ್ರದೇಶಗಳಲ್ಲಿ ಸೋಮವಾರ ಜನವರಿ 27 ರಂದು ಬೆಳಗ್ಗೆ 10:00 ರಿಂದ ಸಂಜೆ 3:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಇದರಂತೆ, ಸೇಂಟ್‌ಜಾನ್‌ವುಡ್ ಅಪಾರ್ಟ್ಮೆಂಟ್ & ಆಸ್ಪತ್ರೆ, ತಾವರೆಕೆರೆ, ಅಕ್ಸೆಂಚರ್, ಒರೆಕಲ್, ಚರಿಸ್ಟ್ ಕಾಲೇಜು, ಮತ್ತು ಸುತ್ತಮುತ್ತಲಿನ ಸ್ಥಳ. ಬಿಟಿಎಮ್ ಲೇಔಟ್,ಮೆಜೆಸ್ಟಿಕ್ ಅಪಾರ್ಟ್ಮೆಂಟ್, ಎಕ್ಷಾ , ಆಕ್ಷಿಸ್ ಭವನ, ಸುದ್ದಗುಂಟೆ ಪಾಳ್ಯ, ಗುರಪ್ಪನ ಲೇಔಟ್,ಬಿಜಿ ರೋಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಗದಿತ ಅವಧಿಯಲ್ಲಿ ಪವರ್ ಕಟ್ ಚಾಲ್ತಿಯಲ್ಲಿರಲಿದೆ.
ಬೆಂಗಳೂರು ನಗರದ ವಿವಿಧೆಡೆ ಜನವರಿ 28ರಂದು ವಿದ್ಯುತ್ ವ್ಯತ್ಯಯ ಎಲ್ಲೆಲ್ಲಿ
ಬೆಸ್ಕಾಂ ವ್ಯಾಪ್ತಿಯ ಬೆಂಗಳೂರು ಬಿ.ಎಮ್.ಟಿ.ಸಿ ಸ್ಟೇಷನ್ 66/11ಕೆವಿ ಉಪಕೇಂದ್ರದಲ್ಲಿನ ಈ ಕೆಳಕಂಡ ಪ್ರದೇಶಗಳಲ್ಲಿ ಮಂಗಳವಾರ ಜನವರಿ 28 ರಂದು ಬೆಳಗ್ಗೆ 10:00 ರಿಂದ ಸಂಜೆ 15:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಇದರಂತೆ, ಯು.ಬಿ.ಸಿಟಿ, ಐ.ಟಿ.ಸಿ ಹೋಟೆಲ್, ಲ್ಯಾವೆಲ್ಲೆ ರಸ್ತೆ, ವಿಠ್ಠಲ್ ಮಲ್ಯ ರಸ್ತೆ, ಹೊಂಬೇಗೌಡ ನಗರ, ಸಂಪಗಿ ನಗರ, ಜೆ.ಸಿ ರೋಡ, ಶಾಂತಿನಗರ, ಬಿಟಿಎಸ್ ರೋಡ, ರಿಚ್ಮಂಡ ಸರ್ಕಲ್, ರೆಸಿಡೆನೆಸ್ಸಿ ರೋಡ, ಸುಧಾಮನಗರ, ಕೆ.ಎಚ್ ರೋಡ,ವೀಲ್ಸನ್ ಗಾರ್ಡನ್, ಡಬಲ್ ರೋಡ, ಲಾಲಬಾಗ್ ರೋಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ.
ಬೆಂಗಳೂರಿನ ಶೋಭಾ ಅಪಾರ್ಟ್ ಮೆಂಟ್ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಇಂದು (ಜನವರಿ 24) ಬೆಳಗ್ಗೆ 10 ಗಂಟೆಯಿಂದ ಅಪರಾಹ್ನ 3 ಗಂಟೆ ತನಕ ವಿದ್ಯುತ್ ಪೂರೈಕೆ ಇರಲಿಲ್ಲ. ಇದರ ಪರಿಣಾಮವು, ಬೆಂಗಳೂರಿನ ಸರ್ಜಾಪುರ, ಸೆಸ್ಸಾನ ಗಾರ್ಡನ್, ಔಟರ್ ರಿಂಗ್ ರೋಡ್, ಸೆಂಟ್ರಲ್ ಮಾಲ್ ಎಕ್ಸೋರಾ ಬಿಸಿನೆಸ್ ಪಾರ್ಕ್, ಶೋಭಾ ಅಪಾರ್ಟ್ ಮೆಂಟ್, ಸರ್ಜಾಪುರ ಸಾಫ್ಟ್ ಜೋನ್, ತಕ್ಷಶಿಲಾ ಹೆಲ್ತ್ ಕೇರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಇತ್ತು ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ.
(ವರದಿ- ಎಚ್ ಮಾರುತಿ, ಬೆಂಗಳೂರು)
