Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಅಕ್ಟೋಬರ್ 20 ರಿಂದ 23ರವರೆಗೆ ವಿದ್ಯುತ್ ವ್ಯತ್ಯಯ
ಬೆಂಗಳೂರು ವಿದ್ಯುತ್ ವ್ಯತ್ಯಯ: ಬೆಂಗಳೂರು ನಗರ ಭಾಗದದಲ್ಲಿ ಅಕ್ಟೋಬರ್ 20 ರಿಂದ 23ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಯಾವ ಏರಿಯಾದಲ್ಲಿ ಎಷ್ಟು ಸಮಯ ಕರೆಂಟ್ ಇರುವುದಿಲ್ಲ ಎಂಬುದನ್ನು ಗಮನಿಸಿ.

ಬೆಂಗಳೂರು: ಬೆಂಗಳೂರು ನಗರ ಭಾಗದದಲ್ಲಿ ಅಕ್ಟೋಬರ್ 20 ರಿಂದ 23ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಯಾವ ಏರಿಯಾದಲ್ಲಿ ಎಷ್ಟು ಸಮಯ ಕರೆಂಟ್ ಇರುವುದಿಲ್ಲ ಎಂಬುದನ್ನು ನಾವಿಲ್ಲಿ ನೀಡಿದ್ದೇವೆ. ಬೆಂಗಳೂರಿನ 66/11ಕೆ.ವಿ ಟೆಲಿಕಾಂ ಸ್ಟೇಷನ್‌ನಲ್ಲಿ 11ಕೆ,ವಿ ಬ್ಯಾಂಕ್-2 ನ ಬ್ರೇಕರ್‌ಗಳನ್ನು ಬದಲಿಸುವ ಕಾರಣಕ್ಕಾಗಿ ಪವರ್ ಕಟ್ ಮಾಡಲಾಗುತ್ತಿದೆ. ತುರ್ತು ನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಅಕ್ಟೋಬರ್ 20 ರಿಂದ 23 ರವರೆಗೆ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಗರದ ಕೆಲ ಭಾಗಗಳಲ್ಲಿ ಕರೆಂಟ್ ಇರುವುದಿಲ್ಲ.
ಎಲ್ಲೆಲ್ಲಿ ಕರೆಂಟ್ ಇರೋದಿಲ್ಲ?
ಓಬಳೇಶ್ ಕಾಲೋನಿ, ರೋಸ್ ಗಾರ್ಡನ್, ರಾಯಪುರ, ಬಿನ್ನಿ ಪೇಟ್, ಪಾದರಾಯನಪುರ, ಜೆಜೆಆರ್ ನಗರ, ಗೋಪಾಲನ್ ಮಾಲ್, ಮೈಸೂರು ರಸ್ತೆ 1ನೇ, 2ನೇ, 3ನೇ ಕ್ರಾಸ್, ಮೋಮಿಂಪುರ, ಜಂಥಾ ಕಾಲೋನಿ, ಶಾಮನಾ ಗಾರ್ಡನ್, ರಫತ್ ನಗರ, ರಂಗನಾಥ್ ಕಾಲೋನಿ, ಹೊಸಹಳ್ಳಿ ಮುಖ್ಯರಸ್ತೆ, ಪರ‍್ಕ್ ನಾವು ಬಿನ್ನಿ ಪೇಟೆ, ಅಂಜನಪ್ಪ ಗಾರ್ಡನ್, ದೊರೆಸ್ವಾಮಿ ನಗರ, ಹೂವಿನ ಉದ್ಯಾನ, ಹೊಸ ಪೊಲೀಸ್ ಕ್ವಾಟ್ರಸ್.
ಎಸ್‌ಡಿ ಮಠ, ಕಾಟನ್ ಪೆಟ್, ಅಕ್ಕಿಪೇಟೆ, ಬಾಲಾಜಿ ಕಾಂಪ್ಲೆಕ್ಸ್, ಮನರ‍್ತಿ ಪೆಟ್, ಸುಲ್ತಾನ್ ಪೆಟ್, ನಲ್ಬಂಡ್‌ವಾಡಿ ಎದುರು ಚಿಕ್ಕಪೇಟೆ ಮೆಟ್ರೋ ಸ್ಟೇಷನ್, ಪೊಲೀಸ್ ರಸ್ತೆ, ಗೋಪಾಲನ್ ಅಪಾರ್ಟ್‌ಮೆಂಟ್, ಮರಿಯಪ್ಪ ಎ. ಕೆಪಿಎಸ್ ಮಠ, ಗಂಗಪ್ಪ ಗಾರ್ಡನ್, ಭುವನೇಶ್ವರಿ ನಗರ, ಪ್ರೆಸ್ಟೀಜ್ ವುಡ್ಸ್ ಅಪಾರ್ಟ್ಮೆಂಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
