ಬೆಂಗಳೂರು ಪವರ್ ಕಟ್: ಮಲ್ಲೇಶ್ವರಂ ಸುತ್ತಮುತ್ತ ಇಂದು ಕರೆಂಟ್ ಇರಲ್ಲ ಎಂದಿದೆ ಬೆಸ್ಕಾಂ, ಯಾವೆಲ್ಲ ಪ್ರದೇಶಗಳು - ಇಲ್ಲಿದೆ ವಿವರ
Bengaluru Power Cut: ಕೆಪಿಟಿಸಿಎಲ್ ಇಂದು (ಜನವರಿ 11) ತುರ್ತು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಂಡಿರುವ ಕಾರಣ ಮಲ್ಲೇಶ್ವರಂ ಸುತ್ತಮುತ್ತ ಇಂದು ಕರೆಂಟ್ ಇರಲ್ಲ. ಬೆಂಗಳೂರು ಪವರ್ ಕಟ್ ಕುರಿತು ಮಾಹಿತಿ ನೀಡಿರುವ ಬೆಸ್ಕಾಂ, ಯಾವೆಲ್ಲ ಏರಿಯಾಗಳಲ್ಲಿ ಕರೆಂಟ್ ಇರಲ್ಲ ಎಂಬ ವಿವರ ನೀಡಿದೆ. ಅದು ಇಲ್ಲಿದೆ.
Bengaluru Power Cut: ಬೆಂಗಳೂರು ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಇಂದು (ಜನವರಿ 11) ತುರ್ತು ನಿರ್ವಹಣಾ ಕಾಮಗಾರಿ ನಡೆಯುವ ಕಾರಣ ಅಲ್ಲಿ ವಿದ್ಯುತ್ ಪೂರೈಕೆ ಕಡಿತವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ವಿಶೇಷವಾಗಿ ಮಲ್ಲೇಶ್ವರಂ ವಿಭಾಗದ ಸಿ6 ಉಪವಿಭಾಗದಲ್ಲಿ 66/11 ಕೆವಿ ಐಐಎಸ್‌ಸಿ ಸಬ್‌ಸ್ಟೇಶನ್‌ನಲ್ಲಿ ನಿರ್ವಹಣಾ ಕಾಮಗಾರಿಯನ್ನು ಕೆಪಿಟಿಸಿಎಲ್ ಕೈಗೆತ್ತಿಕೊಂಡಿದೆ. ಹೀಗಾಗಿ ಆ ಉಪಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುವ ಪ್ರದೇಶಗಳಲ್ಲಿ ಇಂದು ಪವರ್ ಕಟ್ ಇರಲಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ತನಕ ಕರೆಂಟ್ ಇರಲ್ಲ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಬೆಂಗಳೂರು ಪವರ್ ಕಟ್ ಇಂದು: ಮಲ್ಲೇಶ್ವರಂ ಸುತ್ತಮುತ್ತ ಎಲ್ಲೆಲ್ಲಿ ವಿದ್ಯುತ್ ಇರಲ್ಲ
ಮಲ್ಲೇಶ್ವರಂ ವಿಭಾಗದ ಸಿ6 ಉಪವಿಭಾಗದಲ್ಲಿ 66/11 ಕೆವಿ ಐಐಎಸ್‌ಸಿ ಸಬ್‌ಸ್ಟೇಶನ್‌ನಲ್ಲಿ ನಿರ್ವಹಣಾ ಕಾಮಗಾರಿ ನಡೆಯುವ ಕಾರಣ, ಮಲ್ಲೇಶ್ವರಂ, ಎಂಡಿ ಬ್ಲಾಕ್, ವೈಯಾಲಿಕಾವ್, ಸ್ವಿಮ್ಮಿಂಗ್ ಪೂಲ್ ಎಕ್ಸ್‌ಟೆನ್ಶನ್, ಕೋದಂಡರಾಮಪುರ, ರಂಗನಾಥಪುರ, ಬಿಎಚ್‌ಇಎಲ್, ಐಐಎಸ್‌ಸಿ ಬ್ರೇನ್ ಸೆಂಟರ್, ಅಂಬೇಡ್ಕರ್ ನಗರ, ಯಶವಂತಪುರ ಪೈಪ್‌ಲೈನ್ ರೋಡ್, ಎಲ್‌ಎನ್ ಕಾಲನಿ, ಸುಬೇದಾರ್ ಪಾಳ್ಯ, ದಿವಾನರ ಪಾಳ್ಯ, ಕೆಎನ್ ಎಕ್ಸ್‌ಟೆನ್ಶನ್, ಯಶವಂತಪುರ 1ನೇ ಮುಖ್ಯರಸ್ತೆ, ಎಚ್‌ಎಂಟಿ ಮುಖ್ಯರಸ್ತೆ, ಮಾಡೆಲ್ ಕಾಲನಿ, ಶರೀಫ್ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು (ಜನವರಿ 11) ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ತನಕ ಕರೆಂಟ್ ಇರಲ್ಲ ಎಂದು ಬೆಸ್ಕಾಂ ಹೇಳಿದೆ.
ನಿನ್ನೆಯೂ ಇತ್ತು ಪವರ್ ಕಟ್
ಬೆಂಗಳೂರಿನ 66/11 kV ವೆಲ್‌ಕಾಸ್ಟ್ ಸಬ್‌ಸ್ಟೇಷನ್‌ನಲ್ಲಿ ನಿನ್ನೆ (ಜನವರಿ 10) ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಂಡಿತ್ತು. ಹೀಗಾಗಿ, ರವೀಂದ್ರ ನಗರ, ಪ್ರಶಾನಾಥ್ ನಗರ, ಸಂತೋಷ್ ನಗರ, ಏರ್ ಫೋರ್ಸ್ ಜಾಲಹಳ್ಳಿ ಪಶ್ಚಿಮ, ವೈಷ್ಣವಿ ನಕ್ಷತ್ರ ಅಪಾರ್ಟ್ಮೆಂಟ್, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಗತಿ ರಸ್ತೆ, ತ್ರಿವೇಣಿ, ಎಚ್‌ಎಚ್‌ವಿ, ಡಿಎಂಜಿ, ಕೃಷ್ಣ ಫ್ಯಾಬ್ರಿಕೇಶನ್ಸ್, ಜೆಮಿನಿ ಇಂಡಸ್ಟ್ರೀಸ್, ರವಿ-ಕಿರ್ಲೋಸ್ಕರ್ ಆಸ್ಪತ್ರೆ, ಜಾನ್ ಕ್ರೇನ್, ಪ್ರಿಸ್ ಐಎಲ್, ಎಂಎಸ್‌ಐಎಲ್, ವಿಪ್ರೋ ವೆಲ್ಕಾಸ್ಟ್ ಫ್ಯಾಕ್ಟರಿ, ಐಟಿಸಿ, ವೋಲ್ವೋ, ಆವೆರಿ ಡೆನ್ನಿಸನ್, ಹಿಟಾಚಿ ಇಂಡಸ್ಟ್ರೀಸ್, ಗೀತಾ ಟಿಂಬರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿನ್ನೆ (ಜನವರಿ 10) ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ತನಕ ಕರೆಂಟ್ ಇರಲಿಲ್ಲ. ಈ ಬಗ್ಗೆ ಬೆಸ್ಕಾಂ ಮಾಹಿತಿ ಒದಗಿಸಿತ್ತು.