Bengaluru Power Cut: ನಾಳೆ ಬೆಂಗಳೂರಿನ ಹಲವೆಡೆ ವಿದ್ಯುತ್ ಕಡಿತ; ಯಾವೆಲ್ಲ ಏರಿಯಾದಲ್ಲಿ ಪವರ್ ಕಟ್ - ಇಲ್ಲಿದೆ ಪೂರ್ತಿ ವಿವರ
Bengaluru Power Cut: ಬೆಂಗಳೂರಿನ ವಿವಿಧೆಡೆ ನಾಳೆ (ಜನವರಿ 16) ವಿದ್ಯುತ್ ಪೂರೈಕೆ ಇರಲ್ಲ. ಪಾಟರಿ ರಸ್ತೆಯ 66/11ಕೆವಿ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವ ಕಾರಣ ಪವರ್ ಕಟ್ ಇರಲಿದೆ. ವಿದ್ಯುತ್ ಕಡಿತ ಯಾವೆಲ್ಲ ಪ್ರದೇಶದಲ್ಲಿ ಎಂಬ ವಿವರ ಇಲ್ಲಿದೆ.

Bengaluru Power Cut; ಬೆಂಗಳೂರು ಭಾಗದ ಜನರಿಗೆ ವಿದ್ಯುತ್ ಕಡಿತ ಹೊಸದಲ್ಲ. ವಾರಾಂತ್ಯದಲ್ಲಿ ಮತ್ತು ವಾರದ ನಡುವೆ ಅಲ್ಲಲ್ಲಿ ವಿದ್ಯುತ್ ಸ್ಟೇಷನ್‌ಗಳ ನಿರ್ವಹಣೆಗಳ ಕಾರಣ ನಿಯತ ಲೋಡ್‌ಶೆಡ್ಡಿಂಗ್ ನಡೆಯುತ್ತಲೇ ಇದೆ. ಈ ವಾರವೂ ವಾರದ ಮಧ್ಯೆ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಬೆಂಗಳೂರು ವಿದ್ಯುತ್ ಪೂರೈಕೆ ಕಂಪನಿ (ಬೆಸ್ಕಾಂ) ವ್ಯಾಪ್ತಿಯ ಬೆಂಗಳೂರು ನಗರದ ವಿವಿಧ ಪ್ರದೇಶಗಳಲ್ಲಿ ನಾಳೆ (ಜನವರಿ 16) ಪವರ್ ಕಟ್ ಇರಲಿದೆ. ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿರುವ ಕಾರಣ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ. ಪೂರ್ವಾಹ್ನ 11 ಗಂಟೆಯಿಂದ ಸಂಜೆ 5 ಗಂಟೆ ತನಕ ವಿದ್ಯುತ್ ಕಡಿತವಾಗಲಿದೆ ಎಂದು ಬೆಸ್ಕಾಂ ವಿವರಿಸಿದೆ.
ನಾಳೆ ಬೆಂಗಳೂರು ಪವರ್ ಕಟ್
ಬೆಂಗಳೂರಿನ ಪಾಟರಿ ರಸ್ತೆಯ 66/11ಕೆವಿ ಸ್ಟೇಷನ್‌ನಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ತುರ್ತು ನಿರ್ವಹಣೆಯನ್ನು ನಾಳೆ (ಜನವರಿ 16) ನಿರ್ವಹಿಸಲಿದೆ. ಈ ನಿರ್ಣಾಯಕ ನಿರ್ವಹಣೆಯ ಕಾರಣದಿಂದಾಗಿ ಈ ಸ್ಟೇಷನ್‌ನಿಂದ ಯಾವೆಲ್ಲ ಏರಿಯಾಕ್ಕೆ ವಿದ್ಯುತ್ ಪೂರೈಕೆಯಾಗುವುದೋ ಆ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ಹೇಳಿದೆ.
ಜನವರಿ 16 ರಂದು ಯಾವೆಲ್ಲ ಏರಿಯಾದಲ್ಲಿ ಕರೆಂಟ್ ಇರಲ್ಲ
ಬೆಂಗಳೂರಿನ ಪಾಟರಿ ರಸ್ತೆಯ 66/11ಕೆವಿ ಸ್ಟೇಷನ್‌ನಿಂದ ವಿದ್ಯುತ್ ಪೂರೈಕೆಯಾಗುವ ಪ್ರದೇಶಗಳಲ್ಲಿ ನಾಳೆ (ಜನವರಿ 16) ಕರೆಂಟ್ ಇರಲ್ಲ. ವಿದ್ಯುತ್ ಪೂರೈಕೆ ವ್ಯತ್ಯಯವಾಗುವ ಪ್ರದೇಶಗಳಿವು.
ಹಳೇ ಬೈಯಪ್ಪನಪಾಳ್ಯ, ನಾಗೇನಪಾಳ್ಯ, ಸತ್ಯನಗರ, ಗಜೇಂದ್ರನಗರ, ಎಸ್ ಕುಮಾರ್ ಲೇಔಟ್, ಆಂಧ್ರ ಬ್ಯಾಂಕ್ ರೋಡ್, ಕುಕ್‌ಸನ್ ರೋಡ್, ಡೇವಿಸ್ ರೋಡ್, ಹಳೆ ಮಿಲ್ ರಸ್ತೆ, ಸದಾಶಿವ ದೇವಸ್ಥಾನದ ರಸ್ತೆ, ಕಾಮನಹಳ್ಳಿ ಮುಖ್ಯರಸ್ತೆ, ಕೆಎಚ್‌ಬಿ ಕಾಲನಿ, ಜೈಭಾರತ್ ನಗರ, ಸಿಕೆ ಗಾರ್ಡನ್, ಡಿ ಕೋಸ್ಟಾ ಲೇಔಟ್, ಹಚ್ಚಿನ್ ರಸ್ತೆ, ನಾರ್ತ್ ರೋಡ್, ವ್ಹೀಲರ್ ರೋಡ್, ಅಶೋಕಾ ರಸ್ತೆ, ಬಾಣಸವಾಡಿ ರೈಲ್ವೆ ನಿಲ್ದಾಣ ರಸ್ತೆ, ಮಾರಿಯಮ್ಮ ದೇಗುಲ ರಸ್ತೆ, ಲೇಝರ್ ಲೇಔಟ್, ವಿವೇಕಾನಂದ ನಗರ, ಕ್ಲೈನ್ ರೋಡ್, ಟೆಲಿಫೋನ್ ಎಕ್ಸ್‌ಚೇಂಜ್ ರಸ್ತೆ, ಗ್ಯಾಂಗ್‌ಮನ್ ಕ್ವಾರ್ಟರ್ಸ್ಸ್, ಹಚ್ಚಿನ್ ರೋಡ್ ಪಾರ್ಕ್ ರೋಡ್, ಸನ್‌ಶಾನ್‌ನಗರ ಸ್ಲಮ್, 5 ಮತ್ತು 6ನೇ ಕ್ರಾಸ್ ಹಚ್ಚಿನ್ಸ್ ರೋಡ್, ಫಿಸಿಕಲಿ ಹ್ಯಾಂಡಿಕ್ಯಾಪ್ಡ್ ಇನ್‌ಸ್ಟಿಟ್ಯೂಟ್, ಲಿಂಗರಾಜಪುರ, ಕರಿಯನಪಾಳ್ಯ, ರಾಮಚಂದ್ರಪ್ಪ ಲೇಔಟ್, ಕರಮ್‌ಚಂದ್ ಲೇಔಟ್, ಅಶೋಕಾ ಲೇಔಟ್, ಶ್ರೀನಿವಾಸ ಲೇಔಟ್, ಸ್ಪೆಕ್ಟ್ರಾ ಅಪಾರ್ಟ್‌ಮೆಂಟ್ಸ್, ಮಿಲ್ಟನ್ ಸ್ಟ್ರೀಟ್, ಪುರವಂಕರ ಅಪಾರ್ಟ್‌ಮೆಂಟ್ಸ್, ಐಟಿಸಿ ಮುಖ್ಯ ರಸ್ತೆ, ಲೆವಿಸ್ ರಸ್ತೆ, ಕೃಷ್ಣಪ್ಪ ಗಾರ್ಡನ್, ರಾಘವಪ್ಪ ಗಾರ್ಡನ್, ಜೀವನಹಳ್ಳಿ ಪಾರ್ಕ್ ರಸ್ತೆ, ಶ್ರೀ ಧರಿಯಂ ಕಣ್ಣಿನ ಆಸ್ಪತ್ರೆ, ಹೀರಾಚಂದ್ ಲೇಔಟ್, ಓರಿಯನ್ ಮಾಲ್, ಬಾಣಸವಾಡಿ ಮುಖ್ಯ ರಸ್ತೆ, ತ್ಯಾಗರಾಜ್ ಲೇಔಟ್ (ಪ್ರೇಮಾ ಕಾರ್ಯಪ್ಪ), ಮುದಪ್ಪ ರಸ್ತೆ, ಕೆಂಪಣ್ಣ ರಸ್ತೆ, ರಾಘವಪ್ಪ ರಸ್ತೆ, ಮುಕುಂದ ಥಿಯೇಟರ್, ಪವನ್ ರೇಸಿಂಗ್ ಹೋಮ್, ಪೋಸ್ಟ್ ಆಫೀಸ್ ರಸ್ತೆ, ವೆಂಕಟರಮಣ ಲೇಔಟ್, ಎಂಎಸ್‌ಒ ಕಾಲನಿ, ಎಂಇಜಿ ಆಫೀಸಸ್ ಕಾಲನಿ, ಪ್ರಣವ್ ಡಯಾಗ್ನಾಸ್ಟಿಕ್ಸ್, ಸೇಂಟ್ ಜಾನ್ಸ್ ರೋಡ್, ರುಕ್ಮಿಣಿ ಕಾಲನಿ, ಮಾಮುಂಡಿ ಪಿಳ್ಳೈ ಸ್ಟ್ರೀಟ್, ಹಾಲ್ ರಸ್ತೆ, ರೋಜರ್ ರಸ್ತೆ, ಪಿಲ್ಲಣ್ಣ ಗಾರ್ಡನ್ 1 ನೇ ಹಂತ, ನ್ಯೂ ಬೆಂಗಳೂರು ಲೇಔಟ್, ಚಿನಪ್ಪ ಗಾರ್ಡನ್, ಎಸ್ ಕೆ ಗಾರ್ಡನ್, ಹ್ಯಾರಿಸ್ ರಸ್ತೆ ,ಬೋರ್ ಬ್ಯಾಂಕ್ ರಸ್ತೆ, ಐಟಿಸಿ ಮುಖ್ಯ ರಸ್ತೆಗಳ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಾಸವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
