Bengaluru Powercut: ಬೆಂಗಳೂರಿನಲ್ಲಿ ಇನ್ನೆರೆಡು ದಿನ ವಿದ್ಯುತ್ ವ್ಯತ್ಯಯ, ಈ ಭಾಗಗಳಲ್ಲಿ ಸೋಮವಾರ, ಮಂಗಳವಾರ ಕರೆಂಟ್ ಇರಲ್ಲ
ಬಹುತೇಕ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಇದ್ಯುತ್ ಪೂರೈಕೆ ಕಡಿತವಾಗಲಿದೆ. ಕೆಲವೆಡೆ ಇನ್ನೂ ಬೇಗ ವಿದ್ಯುತ್ ಕಡಿತವಾಗಬಹುದು. ಸಂಜೆ 6 ರ ನಂತರವೇ ವಿದ್ಯುತ್ ಸಂಪರ್ಕ ಮರುಸ್ಥಾಪನೆಯಾಗಬಹುದು.
ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಸೇರಿದಂತೆ ವಿದ್ಯುತ್ ಏಜೆನ್ಸಿಗಳು ನಿಗದಿತ ನಿರ್ವಹಣಾ ಕಾರ್ಯಗಳು ಮತ್ತು ವಿದ್ಯುತ್ ಮೂಲಸೌಕರ್ಯಗಳಿಗೆ ಮೇಲ್ದರ್ಜೆಗೇರಿಸುವ ಕಾಮಗಾರಿ ಆರಂಭಿಸಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಭಾನುವಾರದಿಂದ (ಆಗಸ್ಟ್ 18) ಮಂಗಳವಾರದವರೆಗೆ (ಆಗಸ್ಟ್ 20) ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ. ಬೆಂಗಳೂರಿನ ಪಶ್ಚಿಮ, ಉತ್ತರ, ಪೂರ್ವ ಮತ್ತು ದಕ್ಷಿಣ ಭಾಗದ ಹಲವು ಬಡಾವಣೆಗಳು ಮತ್ತು ಜನವಸತಿ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳ್ಳುವ ನಿರೀಕ್ಷೆಯಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಬಹುತೇಕ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ನಿರೀಕ್ಷಿಸಲಾಗಿದೆ, ಕೆಲವೆಡೆ ಇನ್ನೂ ಬೇಗ ವಿದ್ಯುತ್ ಕಡಿತವಾಗಬಹುದು. ಸಂಜೆ 6 ರವರೆಗೆ ವಿದ್ಯುತ್ ಸಂಪರ್ಕ ಸಿಗುವುದು ತಡವಾಗಬಹುದು.
ಸೋಮವಾರ (ಆಗಸ್ಟ್ 19) ಬೆಳಿಗ್ಗೆ 10 ರಿಂದ ಸಂಜೆ 6 ವಿದ್ಯುತ್ ಕಡಿತ
ಯಲಹಂಕ ಸಮೀಪದ ಕೆಎಂಎಫ್ ಮದರ್ ಡೈರಿ, ಮೇಜರ್ ಉನ್ನಿಕೃಷ್ಣನ್ ರಸ್ತೆ, ಬಿ ಸೆಕ್ಟರ್, ಎನ್‌ಇಎಸ್ ರಸ್ತೆ, ಸಿಎಂ ಎನ್‌ಕ್ಲೇವ್, ಮಾತೃ ಲೇಔಟ್, ಸೋಮೇಶ್ವರ ನಗರ, ಕನಕ ನಗರ, ನ್ಯಾಯಾಂಗ ಬಡಾವಣೆ, ಯಲಹಂಕ ಓಲ್ಡ್ ಟೌನ್, ಗಾಂಧಿ ನಗರ, ಬಿಬಿಎಂಪಿ ಬಂಡ್ ರಸ್ತೆ, ಬಿಡಬ್ಲ್ಯೂಎಸ್‌ಎಸ್‌ಬಿ ಎಸ್‌ಟಿಪಿ, ಜಕ್ಕಸಂದ್ರ, ಎಚ್‌ಎಸ್‌ಆರ್ 5 ವಲಯ, ಶಿಕ್ಷಕರು ಕಾಲೋನಿ, ವೆಂಕಟಾಪುರ ಭಾಗಗಳು, ಕೋರಮಂಗಲ ಎಕ್ಸ್‌ಟೆನ್ಷನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಮಂಗಳವಾರ (ಆಗಸ್ಟ್ 20) ಈ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ
ಕೋಣನಕುಂಟೆ, ತಲಘಟ್ಟಪುರ, ದೊಡ್ಡಕಲ್ಲಸಂದ್ರ, ಆವಲಹಳ್ಳಿ, ಶ್ರೀನಿಧಿ ಲೇಔಟ್ ಹಾಗೂ ಸುತ್ತಮುತ್ತಲ ಪ್ರದೇಶಗಳು. ಆಡುಗೋಡಿ, ಸಲಾರ್ ಪುರಿ ಟವರ್, ಬಿಗ್ ಬಜಾರ್, ಅಕ್ಸೆಂಚರ್, ಕೆಎಂಎಫ್ ಗೋದಾಮು, ನಂಜಪ್ಪ ಲೇಔಟ್, ನ್ಯೂ ಮೈಕೋ ರಸ್ತೆ, ಬೆಂಗಳೂರು ಡೈರಿ, ಫೋರಂ ಮಾಲ್, ಲಕ್ಕಸಂದ್ರ, ವಿಲ್ಸನ್ ಗಾರ್ಡನ್, ನಿಮ್ಹಾನ್ಸ್ ಅಡ್ಮಿನ್ ಬ್ಲಾಕ್, ಎನ್ ಡಿಆರ್ ಐ-ಪೊಲೀಸ್ ಕ್ವಾರ್ಟರ್ಸ್, ಕೋರಮಂಗಲ 3, 4, 5, 6, 7, 8 ಬ್ಲಾಕ್ ಗಳು, ಎನ್ ಡಿಆರ್ ಐ, ಎನ್ ಐಎಎನ್ ಪಿ, ಸೇಂಟ್ ಜಾನ್ಸ್ ಆಸ್ಪತ್ರೆ, ಹಳೆ ಮಡಿವಾಳ, ಒರಾಕಲ್, ಮಡಿವಾಳ, ಚಿಕ್ಕ ಆಡುಗೋಡಿ, ಕೃಷ್ಣನಗರ ಕೈಗಾರಿಕಾ ಪ್ರದೇಶ.
ನಿರ್ವಹಣಾ ಚಟುವಟಿಕೆ ಮತ್ತು ಹೊಸ ಯೋಜನೆಗಳ ಅನುಷ್ಠಾನ ಕಾಮಗಾರಿಗಳನ್ನು ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಆಗಾಗ ಕೈಗೆತ್ತಿಕೊಳ್ಳುತ್ತಿರುತ್ತದೆ. ಬೆಂಗಳೂರಿನಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯಕ್ಕೆ ಇದು ಮುಖ್ಯ ಕಾರಣ. ಸಾಮಾನ್ಯವಾಗಿ ವಾರಾಂತ್ಯದಲ್ಲಿ ಗ್ರಿಡ್‌ನಲ್ಲಿ ಬೇಡಿಕೆ ಕಡಿಮೆಯಾದಾಗ ವಿದ್ಯುತ್ ವ್ಯತ್ಯಯದ ಸಮಯವನ್ನು ನಿಗದಿಪಡಿಸಲಾಗುತ್ತದೆ.
ಈ ಯೋಜನೆಗಳಲ್ಲಿ ಮೂಲಸೌಕರ್ಯ ನವೀಕರಣ, ಆಧುನೀಕರಣ, ಲೈನ್ ನಿರ್ವಹಣೆ, ಓವರ್‌ಹೆಡ್ ಲೈನ್‌ಗಳನ್ನು ಭೂಮಿಯೊಳಗೆ ಅಳವಡಿಸುವುದು, ಕಂಬಗಳ ಸ್ಥಳಾಂತರ, ರಿಂಗ್ ಮುಖ್ಯ ಘಟಕ ನಿರ್ವಹಣೆ, ಮರ ಕತ್ತರಿಸುವುದು ಮತ್ತು ನೀರು ಸರಬರಾಜು ಸುಧಾರಣೆಗಳು ಸೇರಿವೆ.