ಬೆಂಗಳೂರಲ್ಲಿ ಸುರಿದ ಮಳೆಯಿಂದ ದ್ವಿಚಕ್ರ ವಾಹನದ ಮೇಲೆ ಮರ ಬಿದ್ದು ಬೈಕ್ ಸವಾರ ಸಾವು, ಮತ್ತೊಬ್ಬನಿಗೆ ಗಾಯ
ಬೆಂಗಳೂರಿನಾದ್ಯಂತ ವ್ಯಾಪಕ ಮಳೆಯಾಗಿದ್ದು, ಮರಗಳು ಬಿದ್ದು ತೀವ್ರ ಸಂಚಾರ ಅಡೆತಡೆಗಳು ಉಂಟಾಗಿವೆ. ಇದರ ನಡುವೆಯೇ ಮರ ಬಿದ್ದು ಬೈಕ್ ಸವಾರ ಜೀವ ಕಳೆದುಕೊಂಡಿದ್ದಾನೆ.

ಬೆಂಗಳೂರು: ಭಾರಿ ಗಾಳಿಗೆ ಮರವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ ಎನ್ಡಿಟಿವಿ ವರದಿಯ ಪ್ರಕಾರ, ಬೃಹತ್ ಮರವು ಯಾವುದೇ ಮುನ್ಸೂಚನೆಯಿಲ್ಲದೆ ಕುಸಿದು, ಚಲಿಸುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದು ಸವಾರ ಮತ್ತು ಹಿಂಬದಿ ಸವಾರ ಇಬ್ಬರೂ ರಸ್ತೆಗೆ ಉರುಳುವ ಭಯಾನಕ ಕ್ಷಣವನ್ನು ಸಿಸಿಟಿವಿ ದೃಶ್ಯಾವಳಿಗಳು ಸೆರೆಹಿಡಿದಿವೆ. ಗಾಯಾಳುಗಳನ್ನು ಕೂಡಲೇ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸವಾರ ತೀವ್ರವಾಗಿ ಗಾಯಗೊಂಡಿದ್ದು, ಹಿಂಬದಿ ಸವಾರ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವರದಿ ತಿಳಿಸಿದೆ.
ಬೆಂಗಳೂರು ನಗರದಾದ್ಯಂತ ಸುರಿದಿರುವ ಮಳೆಯ ಮಧ್ಯೆ ಈ ಘಟನೆ ನಡೆದಿದ್ದು, ಈ ವೇಳೆ ಮರಗಳು ಬಿದ್ದು ಮತ್ತು ತೀವ್ರ ಸಂಚಾರ ಅಡೆತಡೆಗಳಿಗೆ ಕಾರಣವಾಯಿತು. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬೆಂಗಳೂರಿನಲ್ಲಿ ಗಾಳಿಯೊಂದಿಗೆ ಹಗುರದಿಂದ ಮಧ್ಯಮ ಮಳೆಯಾಗುವ ಮುನ್ಸೂಚನೆ ನೀಡಿತ್ತು.
ತೀವ್ರ ಹವಾಮಾನದಿಂದಾಗಿ ಮರಗಳು ಉರುಳಿದ ಹಲವಾರು ಪ್ರಕರಣಗಳನ್ನು ಬೆಂಗಳೂರಿನ ಅಧಿಕಾರಿಗಳು ವರದಿ ಮಾಡಿದ್ದಾರೆ. ಏಕೆಂದರೆ ಗ್ರೇಟರ್ ಬೆಂಗಳೂರು ವ್ಯಾಪ್ತಿಯ ತಂಡಗಳು ಉರುಳಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸಲು ಮತ್ತು ತೊಂದರೆಗೆ ಒಳಗಾದ ಪ್ರದೇಶಗಳಲ್ಲಿ ಸಾಮಾನ್ಯ ಸ್ಥಿತಿಯನ್ನು ಪುನರ್ ಸ್ಥಾಪಿಸಲು ಕೆಲಸ ಮಾಡುತ್ತಿವೆ.
ವಿದ್ಯುತ್ ಸ್ಪರ್ಶದಿಂದ ಇಬ್ಬರು ಸಾವು
ವಿದ್ಯುತ್ ತಂತಿ ತಗುಲಿಇಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನ ಬಿಟಿಎಂ ಲೇಔಟ್ ನ ಎನ್ ಎಸ್ ಪಾಳ್ಯದಲ್ಲಿ ಸೋಮವಾರ ನಡೆದಿದೆ. ಮಧುವನ್ ಅಪಾರ್ಟ್ಮೆಂಟ್ ನಿವಾಸಿ ಮನಮೋಹನ್ ಕಾಮತ್ (63) ಅವರು ತಮ್ಮ ಕಟ್ಟಡದ ನೆಲಮಾಳಿಗೆಯಿಂದ ಮಳೆನೀರನ್ನು ತೆಗೆದುಹಾಕಲು ಮೋಟಾರು ಪಂಪ್ ಅನ್ನು ನಿರ್ವಹಿಸಲು ಪ್ರಯತ್ನಿಸುತ್ತಿದ್ದಾಗ ವಿದ್ಯುತ್ ಆಘಾತಕ್ಕೊಳಗಾಗಿದ್ದಾರೆ ಎಂದು ವರದಿಯಾಗಿದೆ.
ಹತ್ತಿರದ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿದ್ದ ನೇಪಾಳ ಮೂಲದ ಭರತ್ ಅವರ ಪುತ್ರ 12 ವರ್ಷದ ಬಾಲಕ ದಿನೇಶ್ ಕೂಡ ಇದೇ ರೀತಿಯ ಪರಿಸ್ಥಿತಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ.
ಆಗ್ನೇಯ ಬೆಂಗಳೂರು ಉಪ ಪೊಲೀಸ್ ಆಯುಕ್ತ ರಾದ ಸಾರಾ ಫಾತಿಮಾ ಎರಡೂ ಸಾವುಗಳನ್ನು ದೃಢಪಡಿಸಿದ್ದು ದುರಂತಗಳಿಗೆ ಕಾರಣವೇನೆಂದು ಖಚಿತಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ ಎಂದು ಹೇಳಿದರು.