ಹೊಸ ವರ್ಷದ ಮೊದಲ ಮಳೆಯ ನಿರೀಕ್ಷೆ; ಜನವರಿ 13,14 ರಂದು ಬೆಂಗಳೂರು ಮತ್ತು ಯಾವ ಊರಲ್ಲಿ ಸುರಿಯಲಿದೆ ವರ್ಷಧಾರೆ, ಇಲ್ಲಿದೆ ಹವಾಮಾನ ಮುನ್ನೋಟ
ಕನ್ನಡ ಸುದ್ದಿ  /  ಕರ್ನಾಟಕ  /  ಹೊಸ ವರ್ಷದ ಮೊದಲ ಮಳೆಯ ನಿರೀಕ್ಷೆ; ಜನವರಿ 13,14 ರಂದು ಬೆಂಗಳೂರು ಮತ್ತು ಯಾವ ಊರಲ್ಲಿ ಸುರಿಯಲಿದೆ ವರ್ಷಧಾರೆ, ಇಲ್ಲಿದೆ ಹವಾಮಾನ ಮುನ್ನೋಟ

ಹೊಸ ವರ್ಷದ ಮೊದಲ ಮಳೆಯ ನಿರೀಕ್ಷೆ; ಜನವರಿ 13,14 ರಂದು ಬೆಂಗಳೂರು ಮತ್ತು ಯಾವ ಊರಲ್ಲಿ ಸುರಿಯಲಿದೆ ವರ್ಷಧಾರೆ, ಇಲ್ಲಿದೆ ಹವಾಮಾನ ಮುನ್ನೋಟ

Bengaluru Rain Forecast: ಕರ್ನಾಟಕದ ಜನ ಹೊಸ ವರ್ಷದ ಮೊದಲ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಬೆಂಗಳೂರಿಗೆ ವರ್ಷದ ಮೊದಲ ಮಳೆ ಬೇಗವೇ ಬರಲಿದೆ. ಹೌದು, ಜನವರಿ 13,14 ರಂದು ವಿವಿಧೆಡೆ ಮಳೆ ಸುರಿಯಲಿದೆ. ಬೆಂಗಳೂರು ಮತ್ತು ಯಾವೆಲ್ಲ ಊರಲ್ಲಿ ಮಳೆ ಬೀಳಲಿದೆ ಎಂಬ ಪ್ರಶ್ನೆಗೆ ಉತ್ತರವೆಂಬಂತೆ ಇಲ್ಲಿದೆ ಹವಾಮಾನ ಮುನ್ನೋಟದ ವಿವರ.

ಹೊಸ ವರ್ಷದ ಮೊದಲ ಮಳೆಯ ನಿರೀಕ್ಷೆ; ಜನವರಿ 13,14 ರಂದು ಬೆಂಗಳೂರು ಮತ್ತು ಯಾವ ಊರಲ್ಲಿ ಸುರಿಯಲಿದೆ ವರ್ಷಧಾರೆ ಎಂಬ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)
ಹೊಸ ವರ್ಷದ ಮೊದಲ ಮಳೆಯ ನಿರೀಕ್ಷೆ; ಜನವರಿ 13,14 ರಂದು ಬೆಂಗಳೂರು ಮತ್ತು ಯಾವ ಊರಲ್ಲಿ ಸುರಿಯಲಿದೆ ವರ್ಷಧಾರೆ ಎಂಬ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ) (Pixabay)

Bengaluru Rain Forecast: ಬೆಂಗಳೂರಿಗರಿಗೆ ವಿಪರೀತ ಮಳೆ, ವಿಪರೀತ ಚಳಿ, ಒಣಹವೆಯ ಅನುಭವದ ಬಳಿಕ ಈಗ ಹೊಸ ವರ್ಷದ ಮಳೆಯ ಸಿಂಚನ ಸ್ವಲ್ಪ ಬೇಗವೇ ಆಗಲಿದೆ. ಹೌದು, ಜನವರಿ 13 ಮತ್ತು 14 ರಂದು ಬೆಂಗಳೂರು ಸುತ್ತಮುತ್ತ ಪ್ರದೇಶಗಳಲ್ಲಿ ಹೊಸ ವರ್ಷದ ಮೊದಲ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ಕೆಲವೆಡೆ ವರ್ಷದ ಮೊದಲ ಮಳೆ ಯಾವಾಗ

ಕೇರಳ ಕರಾವಳಿಯ ಆಗ್ನೆಯ ಅರೇಬಿಯನ್ ಸಮುದ್ರದಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 3.1 ಕಿ.ಮೀ ಎತ್ತರದಲ್ಲಿ ಚಂಡಮಾರುತದ ಪರಿಚಲನೆ ಕಡಿಮೆಯಾಗಿದೆ. ಆದರೆ, ಆಗ್ನೆಯ ಬಂಗಾಳ ಕೊಲ್ಲಿಯ ಮೇಲೆ ಚಂಡಮಾರುತದ ಪರಿಚಲನೆ ಉಂಟಾಗಿದ್ದು, ಇದು ಈಗ ಆಗ್ನೆಯ ಬಂಗಾಳ ಕೊಲ್ಲಿಯ ಮತ್ತು ಪಕ್ಕದ ನೈಋತ್ಯ ಬಂಗಾಳ ಕೊಲ್ಲಿಯ ಮೇಲೆ ಚಲಿಸುತ್ತಿದೆ. ಇದೇ ಕಾರಣಕ್ಕೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗಗಳ ಕೆಲವು ಕಡೆಗಳಲ್ಲಿ ಸಣ್ಣ ಪ್ರಮಾಣದ ಮಳೆ ಸುರಿಯಬಹುದು ಎಂದು ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ವಿಜ್ಞಾನ ಡಾ ಎನ್ ಪುವಿಯರಸನ್‌ ತಿಳಿಸಿದ್ದಾರೆ.

ಕಳೆದ ಎರಡು ದಿನಗಳಿಂದ ಬಂಗಾಳ ಕೊಲ್ಲಿ ಭಾಗದಿಂದ ಬೀಸುತ್ತಿರುವ ಪೂರ್ವ ಮಾರುತಗಳ ಕಾರಣ ಬೆಂಗಳೂರಿನಲ್ಲಿ ತಾಪಮಾನ ಏರಿಕೆಯಾಗಿದೆ. ಬೆಂಗಳೂರಿನ ಕನಿಷ್ಠ ತಾಪಮಾನ 16.3 ಡಿಗ್ರಿ ಸೆಲ್ಶಿಯಸ್ ಮತ್ತು 17.3 ಡಿಗ್ರಿ ಸೆಲ್ಶಿಯಸ್ ದಾಖಲಾಗಿರುವುದು ಇದನ್ನು ದೃಢೀಕರಿಸಿದೆ.

ಬೆಂಗಳೂರು ನಗರದಲ್ಲಿ ಜನವರಿ ತಿಂಗಳ ಇದುವರೆಗಿನ ಸರಾಸರಿ ದೈನಂದಿನ ಕನಿಷ್ಠ ತಾಪಮಾನ 15.8 ಡಿಗ್ರಿ ಸೆಲ್ಶಿಯಸ್‌ ಆಗಿದೆ. ಶುಕ್ರವಾರ, ನಗರದಲ್ಲಿ ಕನಿಷ್ಠ ತಾಪಮಾನ 17.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ 16.3 ಡಿಗ್ರಿ ಸೆಲ್ಸಿಯಸ್ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಎರಡನೆಯದು ಸಾಮಾನ್ಯಕ್ಕಿಂತ 2.6 ಡಿಗ್ರಿ ಸೆಲ್ಶಿಯಸ್‌ ಹೆಚ್ಚಾಗಿದೆ. ದೈನಂದಿನ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಿದ್ದರೂ, ಜನವರಿ 14 ರ ನಂತರ ಕುಸಿಯುವ ಸಾಧ್ಯತೆಯಿದೆ ಎಂದು ಪುವಿಯರಸನ್ ವಿವರಿಸಿದ್ದಾರೆ.

ಪೂರ್ವ ದಿಕ್ಕಿನ ಮಾರುತಳ ಕಾರಣ ಮಂಜು ಮತ್ತು ಇಬ್ಬನಿ ಕಡಿಮೆಯಾಗಬಹುದು. ಇದು ಮುಂದಿನ ಎರಡು ದಿನಗಳಲ್ಲಿ ಮಳೆಗೆ ಕಾರಣವಾಗಬಹುದು. 1884ರ ಜನವರಿ 13 ರಂದು ಬೆಂಗಳೂರಿನಲ್ಲಿ ಸಾರ್ವಕಾಲಿಕ ಕನಿಷ್ಠ ತಾಪಮಾನ 7.8 ಡಿಗ್ರಿ ಸೆಲ್ಶಿಯಸ್‌ ಆಗಿತ್ತು. ಜನವರಿ ತಿಂಗಳ ಇದುವರೆಗಿನ ಗರಿಷ್ಠ ತಾಪಮಾನ 2020ರ ಜನವರಿ 31 ರಂದು 33.4 ಡಿಗ್ರಿ ಸೆಲ್ಶಿಯಸ್ ಇತ್ತು.

ಜನವರಿ 13, 14 ರಂದು ಎಲ್ಲೆಲ್ಲಿ ಮಳೆಯಾಗಲಿದೆ?

ಜನವರಿ 13 ರಂದು ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಗಳ ಒಂದೆರಡು ಕಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ.ಕರಾವಳಿ ಕರ್ನಾಟಕ, ಉತ್ತರ ಒಳನಾಡು ಕರ್ನಾಟಕ ಮತ್ತು ದಕ್ಷಿಣ ಒಳನಾಡು ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಒಣ ಹವಾಮಾನ ಇರುವ ಸಾಧ್ಯತೆ ಇದೆ.ವಿಜಯಪುರ, ಬೀದರ್, ರಾಯಚೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ತುಮಕೂರು ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಮಧ್ಯಮ ಪ್ರಮಾಣದ ಮಂಜು ಕವಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ವಿವರಿಸಿದೆ.

ಇದೇ ರೀತಿ, ಜನವರಿ 14 ರಂದು ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಮತ್ತು ರಾಮನಗರ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ.ಕರಾವಳಿ ಕರ್ನಾಟಕ, ಉತ್ತರ ಒಳನಾಡು ಕರ್ನಾಟಕ ಮತ್ತು ದಕ್ಷಿಣ ಒಳನಾಡು ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರುವ ಸಾಧ್ಯತೆ ಇದೆ ಎಂದು ಬೆಂಗಳೂರಿನ ಪ್ರಾದೇಶಿಕ ಹವಾಮಾನ ಕೇಂದ್ರ ಪ್ರಕಟಿಸಿರುವ ಹವಾಮಾನ ವರದಿ ವಿವರಿಸಿದೆ.

Whats_app_banner