Bengaluru Rains: ಮಳೆಗೆ ಹೊಳೆಯಾದ ಬೆಂಗಳೂರು ರಸ್ತೆಗಳಲ್ಲಿ ಟ್ರಾಫಿಕ್‌ ಪೊಲೀಸರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Rains: ಮಳೆಗೆ ಹೊಳೆಯಾದ ಬೆಂಗಳೂರು ರಸ್ತೆಗಳಲ್ಲಿ ಟ್ರಾಫಿಕ್‌ ಪೊಲೀಸರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ

Bengaluru Rains: ಮಳೆಗೆ ಹೊಳೆಯಾದ ಬೆಂಗಳೂರು ರಸ್ತೆಗಳಲ್ಲಿ ಟ್ರಾಫಿಕ್‌ ಪೊಲೀಸರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ

Bengaluru Rains: ಬೆಂಗಳೂರು ಟ್ರಾಫಿಕ್‌ ಪೊಲೀಸರು ಮಳೆ ಸಿಡಿಲಿಗೆ ಜಗ್ಗದೆ ಸುಗಮ ಸಂಚಾರಕ್ಕಾಗಿ ಪ್ರಯತ್ನಿಸುತ್ತಿರುವ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಹೊಳೆಯಂತೆ ರಸ್ತೆಯಲ್ಲಿ ನೀರು ಹರಿಯುವುದನ್ನು ತಡೆಯಲು ಊಟ ತಿಂಡಿ ಮನೆ ಎಲ್ಲವನ್ನೂ ಮರೆತು ಶತಾಯಗತಾಯ ಯತ್ನಿಸುತ್ತಿರುವುದು ನೆಟ್ಟಿಗರ ಹೃದಯತಟ್ಟಿದೆ.

ಬೆಂಗಳೂರು ಮಳೆಗೆ ಹೊಳೆಯಾದ ರಸ್ತೆಯಲ್ಲಿ ಟ್ರಾಫಿಕ್‌ ಪೊಲೀಸರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ
ಬೆಂಗಳೂರು ಮಳೆಗೆ ಹೊಳೆಯಾದ ರಸ್ತೆಯಲ್ಲಿ ಟ್ರಾಫಿಕ್‌ ಪೊಲೀಸರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಬೆಂಗಳೂರು ಮಳೆಗೆ (Bengaluru Rains) ಜನರು ತತ್ತರಿಸಿದ್ದಾರೆ. ಆಫೀಸ್‌, ಬಿಸ್ನೆಸ್‌ ಅಥವಾ ಇತರೆ ಕಾರ್ಯಗಳಿಗೆ ಮನೆಯಿಂದ ಹೊರ ಹೋಗಲು ಭಯ ಪಡುವಂತೆ ಆಗಿದೆ. ಬೆಳಗ್ಗೆ ನಿರ್ಮಲ ಆಕಾಶ ಕಂಡು ಹೊರಕ್ಕೆ ಹೋದವರು ಮಧ್ಯಾಹ್ನದ ವೇಳೆಗೆ ಭಾರಿ ಮಳೆಗೆ ಸಿಕ್ಕಿ ಬೀಳೋದು ಸಾಮಾನ್ಯ ಎಂಬಂತೆ ಆಗಿದೆ. ಈ ಸಮಯದಲ್ಲಿ ಮಳೆಗೆ, ಟ್ರಾಫಿಕ್‌ಗೆ ಹಿಡಿಶಾಪ ಹಾಕುತ್ತ ಒಮ್ಮೆ ಮನೆ ಅಥವಾ ಆಫೀಸ್‌ ಮುಟ್ಟುವ ಧಾವಂತದಲ್ಲಿ ಎಲ್ಲರೂ ಇರುತ್ತಾರೆ. ಬೆಂಗಳೂರು ಮಳೆಗೆ ರಸ್ತೆಗಳಲ್ಲಿ ನೀರು ತುಂಬಿ ಹೊಳೆಯಂತೆ ಹರಿಯುತ್ತಿರುವ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಇದೇ ಸಮಯದಲ್ಲಿ ಈ ಮಳೆಯಲ್ಲಿ ಬೆಳಗ್ಗಿನಿಂದ ರಾತ್ರಿ ತನಕ ಒದ್ದೆಮುದ್ದೆಯಾಗಿ ಕಾರ್ಯನಿರ್ವಹಿಸುವ ಟ್ರಾಫಿಕ್‌ ಪೊಲೀಸರ ಕಾರ್ಯಗಳಿಗೂ ಸೋಷಿಯಲ್‌ ಮೀಡಿಯಾದಲ್ಲಿ ಚಪ್ಪಾಳೆ, ಶ್ಲಾಘನೆಯ ಮಾತುಗಳು ಕೇಳಿಬರುತ್ತಿವೆ.

ಟ್ವಿಟ್ಟರ್‌, ಇನ್‌ಸ್ಟಾಗ್ರಾಂನಲ್ಲಿ ಟ್ರಾಫಿಕ್‌ ಪೊಲೀಸರು ರಸ್ತೆಯಲ್ಲಿ ನೀರು ತಗ್ಗಲು ಮಾಡುವ ಪ್ರಯತ್ನಗಳ ವಿಡಿಯೋಗಳು ಹರಿದಾಡುತ್ತಿವೆ. ತಾವು ದೊಡ್ಡ ಅಧಿಕಾರಿ ಅಥವಾ ತಾನು ಕಿರಿಯ ಅಧಿಕಾರಿ ಎಂದುಕೊಳ್ಳದೇ ರಸ್ತೆಯಲ್ಲಿ ವಾಹನಗಳು ಸಲೀಸಾಗಿ ಹೋಗುವಂತೆ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ಎಲ್ಲೆಲ್ಲಿ ನೀರು ಬ್ಲಾಕ್‌ ಆಗಿದೆಯೋ ಅಲ್ಲಿ ನೀರು ಸಲೀಸಾಗಿ ಹೋಗುವಂತೆ ನೋಡಿಕೊಳ್ಳುತ್ತಾರೆ.

 

ಇಲ್ಲಿ ಈ ವಿಡಿಯೋದಲ್ಲಿ "ಏನೂ ಮಾಡದೆ ನೀವು ಕೋಪ ತೋರಿಸುವಾಗ ಏನಾದರೂ ಮಾಡಲು ಪ್ರಯತ್ನಿಸುವವರನ್ನೂ ಕಂಡಾಗ ಹೃದಯ ತುಂಬಿಬರುತ್ತದೆ. ನೀರು ಕ್ಲಿಯರ್‌ ಮಾಡಲು ಈ ಟ್ರಾಫಿಕ್‌ ಪೊಲೀಸ್‌ ಮಾಡುವ ಕಾರ್ಯಕ್ಕೆ ಚಪ್ಪಾಳೆ ಹೊಡೆಯಬೇಕೆನಿಸುತ್ತದೆ" ಎಂದು ಟ್ವೀಟ್‌ ಮಾಡಿದ್ದಾರೆ. ಇದು ಟ್ರಾಫಿಕ್‌ ಪೊಲೀಸರ ಕುರಿತಾಗಿ ಸೋಷಿಯಲ್‌ ಮೀಡಿಯಾದಲ್ಲಿ ಅತಿಯಾಗಿ ವೈರಲ್‌ ಆಗುತ್ತಿರುವ ವಿಡಿಯೋ ಎನ್ನಬಹುದು.

 

 

ಇದೇ ರೀತಿ "ಈ ದಿನ ಮಳೆಯ ಕಾರಣದಿಂದ ಹೊರಮಾವು ಅಂಡರ್ ಪಾಸ್ ನಲ್ಲಿ ನೀರು ನಿಂತಿದ್ದು ನಮ್ಮ ಸಿಬ್ಬಂದಿ ಯವರು ಸರಾಗ ವಾಗಿ ನೀರು ಹರಿಯಲು ಅನುವು ಮಾಡಿರುತ್ತಾರೆ" ಎಂಬ ವಿಡಿಯೋ ಕೂಡ ಟ್ರಾಫಿಕ್‌ ಪೊಲೀಸರ ಶ್ರಮದ ಕಥೆಯನ್ನು ಹೇಳುತ್ತದೆ.

ಇವರಡು ಟ್ವೀಟ್‌ಗಳು ಸ್ಯಾಂಪಲ್‌ ಅಷ್ಟೇ. ಫೇಸ್‌ಬುಕ್‌, ಟ್ವಿಟ್ಟರ್‌, ಇನ್‌ಸ್ಟಾಗ್ರಾಂನಲ್ಲಿ ಟ್ರಾಫಿಕ್‌ ಪೊಲೀಸರ ಕೆಲಸದ ಕುರಿತು ಮೆಚ್ಚುಗೆಯ ಮಾತುಗಳು, ಅವರ ಕೆಲಸದ ವಿಡಿಯೋಗಳು ಬೆಂಗಳೂರು ಮಳೆಯಂತೆ ಹರಿಯುತ್ತಿದೆ.

ಮಳೆ ಇರದ ಸಮಯದಲ್ಲಿ ಟ್ರಾಫಿಕ್‌ ಪೊಲೀಸರೆಂದರೆ ಫೈನ್‌ ಹಾಕುತ್ತಾರೆ ಎಂದು ಶಾಪಹಾಕುತ್ತಿದ್ದ ಜನರು ಈ ಸಂದರ್ಭದಲ್ಲಿ ಅವರ ಕಷ್ಟನೋಡಿ "ಶಹಬ್ಬಾಸ್‌ ಬೆಂಗಳೂರು ಟ್ರಾಫಿಕ್‌ ಪೊಲೀಸ್‌" ಎನ್ನುತ್ತಿದ್ದಾರೆ. ಬೆಂಗಳೂರು ಟ್ರಾಫಿಕ್‌ ಪೊಲೀಸರು ಮಳೆ ಸಿಡಿಲಿಗೆ ಜಗ್ಗದೆ ಸುಗಮ ಸಂಚಾರಕ್ಕಾಗಿ ಪ್ರಯತ್ನಿಸುತ್ತಿರುವ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಹೊಳೆಯಂತೆ ರಸ್ತೆಯಲ್ಲಿ ನೀರು ಹರಿಯುವುದನ್ನು ತಡೆಯಲು ಊಟ ತಿಂಡಿ ಮನೆ ಎಲ್ಲವನ್ನೂ ಮರೆತು ಶತಾಯಗತಾಯ ಯತ್ನಿಸುತ್ತಿರುವುದು ನೆಟ್ಟಿಗರ ಹೃದಯತಟ್ಟಿದೆ.

ಬೆಂಗಳೂರು ಟ್ರಾಫಿಕ್‌ ಪೊಲೀಸರು ಮಾತ್ರವಲ್ಲದೆ ಇತರೆ ಎಲ್ಲಾ ಇಲಾಖೆಯವರೂ ನೀರಲ್ಲಿ ತೋಯ್ದು ಕೆಲಸ ಮಾಡುತ್ತಿದ್ದಾರೆ.