Bengaluru Rains: ಬೆಂಗಳೂರಿಗೆ ಬಿಡುವೇ ಇಲ್ಲ; ಈ ವಾರವೂ ಭಾರಿ ಮಳೆಯ ಮುನ್ಸೂಚನೆ
ಬೆಂಗಳೂರಿನಲ್ಲಿ ಹಲವೆಡೆ ಸತತ ಎರಡನೆ ದಿನವೂ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಸಂಚಾರ ದಟ್ಟಣೆ, ವಿದ್ಯುತ್ ಕಡಿತ, ನೀರಿನ ಸಮಸ್ಯೆ ಕೂಡ ಕಾಡಿದೆ. ಇವೆಲ್ಲದರ ನಡುವೆಯೂ ಮಳೆಯ ವಿಚಾರದಲ್ಲಿ ಬೆಂಗಳೂರಿಗೆ ಈ ವಾರ ಕೂಡ ಬಿಡುವೇ ಇಲ್ಲ. ಭಾರಿ ಮಳೆಯ ಬೀಳಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಅಸಾಧಾರಣ-ಮಳೆಗಾಲದ ಹೆಚ್ಚಿನ ಮಳೆಯ ಕಾರಣ ವಿವಿಧೆಡೆ ಟ್ರಾಫಿಕ್ ಜಾಮ್, ವಿದ್ಯುತ್ ಕಡಿತ ಜನಜೀವನ ಅಸ್ತವ್ಯಸ್ತವಾಯಿತು. ಭಾರತದ ಟೆಕ್ ಪವರ್‌ಹೌಸ್ ಖ್ಯಾತಿಯ ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ಜಲಾವೃತಗೊಂಡಿದ್ದು, ಆಸ್ತಿ ಪಾಸ್ತಿಗಳಿಗೆ ಹಾನಿ ಆಗಿದೆ.
ಮಳೆಗಾಲ ಜೂನ್ 1 ರಂದು ಪ್ರಾರಂಭವಾದ ಆಗಿನಿಂದ, ಹಲವಾರು ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ಸ್ವದೇಶಿ ಉದ್ಯಮಿಗಳಿಗೆ ನೆಲೆಯಾಗಿರುವ ಬೆಂಗಳೂರು ನಗರದಲ್ಲಿ ವಾಡಿಕೆಗಿಂತ ಶೇಕಡ 162 ಹೆಚ್ಚುವರಿ ಮಳೆ ಬಿದ್ದಿದೆ. ಕೆಲವು ಸ್ಥಳೀಯರು ಮಳೆ ನೀರ ಪ್ರವಾಹಕ್ಕೆ ಒಳಗಾದ ನೆಲಮಾಳಿಗೆಗಳು ಮತ್ತು ಅಂಗಡಿಗಳನ್ನು ಸ್ವಚ್ಛಗೊಳಿಸಲು ಪ್ರಯತ್ನಿಸಿದರೆ, ಅನೇಕ ಕಂಪನಿಗಳು ಮನೆಯಿಂದಲೇ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಹೇಳಿವೆ.
ಮಳೆಯ ವಿಚಾರದಲ್ಲಿ ಬೆಂಗಳೂರಿಗೆ ಈ ವಾರ ಬಿಡುವೇ ಇಲ್ಲದಂತಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) - ಬೆಂಗಳೂರು ಹವಾಮಾನ ಕೇಂದ್ರದ ಪ್ರಕಾರ, ಬೆಂಗಳೂರು ನಗರ ಜಿಲ್ಲೆಯಲ್ಲಿ ಸೆಪ್ಟೆಂಬರ್ 9 ರವರೆಗೆ ಭಾರೀ ಮಳೆ, ಗುಡುಗು ಮತ್ತು ಮಿಂಚುಗಳ ಮುನ್ಸೂಚನೆ ನೀಡಿದೆ.
ಮಹಾನಗರದಲ್ಲಿ ಸೆಪ್ಟೆಂಬರ್ 6 ರಂದು ಅಂದರೆ ಇಂದು ಸಾಮಾನ್ಯ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆ ಮತ್ತು ಗುಡುಗು ಸಹಿತ ಮಳೆಯು ಕೆಲವೊಮ್ಮೆ ಭಾರೀ ಪ್ರಮಾಣದಲ್ಲಿರಬಹುದು ಎಂದು ಮುನ್ಸೂಚನೆ ನೀಡಿದೆ. ಮರುದಿನ ಅಂದರೆ ನಾಳೆ ಬೆಂಗಳೂರು ನಗರದಲ್ಲಿ ಇಂಥದ್ದೇ ವಾತಾವರಣ ಮುಂದುವರಿಯಲಿದೆ. ಸೆಪ್ಟೆಂಬರ್ 8 ಮತ್ತು 9 ರಂದು ಹಗುರದಿಂದ ಸಾಧಾರಣ ಮಳೆಯಾಗಲಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 5 ದಶಕಗಳಲ್ಲೇ ದಾಖಲೆಯ ಭಾರಿ ಮಳೆಗೆ ಹಲವು ಪ್ರದೇಶಗಳು ಜಲಾವೃತವಾಗಿವೆ. ಭಾನುವಾರದಿಂದ ಭಾರೀ ಮಳೆ ಸುರಿದ ಕಾರಣ, ಬೆಂಗಳೂರಿನ ಮನೆಗಳು ಮತ್ತು ಖಾಸಗಿ ವಿಲ್ಲಾಗಳು ಜಲಾವೃತವಾಗಿವೆ. ಗಣ್ಯರು ಮತ್ತು ವಿಐಪಿಗಳು ಸೇರಿ ಕರ್ನಾಟಕ ರಾಜಧಾನಿಯ ಯಮಲೂರು ಐಷಾರಾಮಿ ವಿಲ್ಲಾ ಪ್ರದೇಶದಲ್ಲಿ ಮಂಗಳವಾರ ಮಳೆ ನೀರು ಸಂಕಷ್ಟ ಯಾರನ್ನೂ ಬಿಡಲಿಲ್ಲ.
ಬಡಾವಣೆಗಳು ಜಲಾವೃತಗೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರದ ಯೋಜನಾ ರಹಿತ ಹಾಗೂ ದುರಾಡಳಿತದ ಫಲವಾಗಿ ಈ ಬಡಾವಣೆಗಳು ಜಲಾವೃತಗೊಳ್ಳುವ ಸ್ಥಿತಿ ಎದುರಿಸಬೇಕಾಗಿದೆ ಎಂದು ಆರೋಪಿಸಿದ್ದಾರೆ.
ಎಗ್ಗಿಲ್ಲದೆ ಕೆರೆಗಳಲ್ಲಿ, ಕೆರೆ ಬಂಡ್ ಹಾಗೂ ಬಫರ್ ವಲಯಗಳಲ್ಲಿ ಅನುಮತಿಗಳನ್ನು ನೀಡಿದ್ದಾರೆ. ಈ ಪರಿಸ್ಥಿತಿಗೆ ಕಾಂಗ್ರೆಸ್ ಕಾರಣ. ಕೆರೆಗಳ ನಿರ್ವಹಣೆಯ ಬಗ್ಗೆ ಅವರು ಯೋಚಿಸಿಯೂ ಇಲ್ಲ. ನಾನು ಇದನ್ನು ಸವಾಲಾಗಿ ಸ್ವೀಕರಿಸಿದ್ದು 1500 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ನಿನ್ನೆ ಪುನಃ 300 ಕೋಟಿ ರೂ.ಗಳನ್ನು ಒತ್ತುವರಿ ತೆರೆವುಗೊಳಿಸಲು ನೀಡಲಾಗಿದೆ. ರಾಜಕಾಲುವೆಗಳಿಗೆ ಪಕ್ಕಾ ಕಟ್ಟಡ ಕಟ್ಟುವಂತೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಹರಿವೆಗೆ ಯಾವುದೇ ತೊಂದರೆ ಇಲ್ಲದಂತೆ ವ್ಯವಸ್ಥೆ ಮಾಡಲಾಗುವುದು. ಒತ್ತುವರಿಗೂ ಅವಕಾಶವಿಲ್ಲದಂತೆ ಎಚ್ಚರ ವಹಿಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.
ಭಾರತದ ಐಟಿ ಕೇಂದ್ರ ಬೆಂಗಳೂರು. ತೀವ್ರ ಧಾರಾಕಾರ ಮಳೆ ಮತ್ತು ಮೂಲಸೌಕರ್ಯಗಳ ದುರುಪಯೋಗ, ಅವ್ಯವಸ್ಥೆಗಳಿಂದ ಜರ್ಜರಿತವಾಗಿರುವ ನಗರದ ಅನೇಕ ಪ್ರದೇಶಗಳು ಜಲಾವೃತವಾಗಿವೆ. ಇಲ್ಲಿವೆ ಕೆಲವು ಫೋಟೋಸ್. Bengaluru floods in images:ಜಲಾವೃತ ಬೆಂಗಳೂರಲ್ಲಿ ಟ್ರ್ಯಾಕ್ಟರ್, ಬೋಟ್, ಬುಲ್ಡೋಜರ್ಸ್!
ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್ ಮತ್ತು ಟ್ವಿಟರ್ ನಲ್ಲಿ ಫಾಲೋಮಾಡಿ.