Bengaluru roads turned into river: ಬೆಂಗಳೂರು ರಸ್ತೆ ʻನದಿʼ ಆಗಿದೆ; ಬನ್ನಿ ಮೀನು ಹಿಡಿಯೋಣ!
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Roads Turned Into River: ಬೆಂಗಳೂರು ರಸ್ತೆ ʻನದಿʼ ಆಗಿದೆ; ಬನ್ನಿ ಮೀನು ಹಿಡಿಯೋಣ!

Bengaluru roads turned into river: ಬೆಂಗಳೂರು ರಸ್ತೆ ʻನದಿʼ ಆಗಿದೆ; ಬನ್ನಿ ಮೀನು ಹಿಡಿಯೋಣ!

ಬೆಂಗಳೂರಿನಲ್ಲಿ ಸತತ ಮಳೆ ಕಾರಣ ರಸ್ತೆಗಳು ʻನದಿʼಯಂತಾಗಿವೆ. ನೀರು ನಿಂತು ಸಂಕಷ್ಟಕ್ಕೀಡಾದ ಪ್ರದೇಶಗಳಿಂದ ಜನರನ್ನು ಸಾಗಿಸಲು ಬೋಟ್‌ಗಳನ್ನು ಬಳಸಿದ ದೃಶ್ಯಗಳು ವೈರಲ್‌ ಆಗಿವೆ. ಬೆಂಗಳೂರಿನ ರಸ್ತೆ ʻನದಿʼಯಂತಾದರೆ ಮೀನುಗಳೇನು ಹಿಂದುಳೀತಾವಾ?

<p>ಬನ್ನಿ ಬೆಂಗಳೂರಿಗೆ, ರಸ್ತೆ ಮಧ್ಯದಲ್ಲೇ ತಾಜಾ ಮೀನು ಹಿಡಿಯೋಣ! ಎಂಬ ಟ್ವೀಟ್‌ ವೈರಲ್‌!&nbsp;</p>
ಬನ್ನಿ ಬೆಂಗಳೂರಿಗೆ, ರಸ್ತೆ ಮಧ್ಯದಲ್ಲೇ ತಾಜಾ ಮೀನು ಹಿಡಿಯೋಣ! ಎಂಬ ಟ್ವೀಟ್‌ ವೈರಲ್‌!&nbsp;

ಬೆಂಗಳೂರು: ಸತತ ಮಳೆಯಿಂದ ಸಮಸ್ಯೆ ಎದುರಿಸುತ್ತಿರುವ ರಾಜ್ಯ ರಾಜಧಾನಿ ಬೆಂಗಳೂರು ಒಂದೇ ಒಂದು ಟ್ವೀಟ್‌ನಿಂದಾಗಿ ಈಗ ವಿಲಕ್ಷಣ ಸುದ್ದಿಯ ಕೇಂದ್ರ ಬಿಂದುವಾಗಿದೆ!.

ಬೆಂಗಳೂರಲ್ಲಿ ವಿಲಕ್ಷಣ ಸುದ್ದಿಗಳಿಗೆ ಬರ ಕೂಡ ಇಲ್ಲ ಬಿಡಿ. ಗೊಂದಲಮಯ ರಸ್ತೆ ಫಲಕ, ಬೈಕ್‌ನಲ್ಲಿ ಹಿಂಬದಿ ಸವಾರಿ ಮಾಡುತ್ತ ಲ್ಯಾಪ್‌ಟಾಪ್‌ ಹಿಡಿದು ಕೆಲಸ ಮಾಡುವ ಐಟಿ ಉದ್ಯೋಗಿ, ಕಾಂಪೌಂಡ್‌ ಬದಿಯ ಪಾದಚಾರಿ ಮಾರ್ಗಕ್ಕೆ ಬೇಲಿ ಹಾಕಿ ಇಲ್ಲಿ ವಾಹನ ಪಾರ್ಕ್‌ ಮಾಡಬೇಡಿ ಎಂದು ಬೋರ್ಡ್‌ ಹಾಕುವ ತನಕ ಹಲವು ವಿಲಕ್ಷಣ ವಿಚಾರಗಳು ಪದೇಪದೆ ಗಮನಸೆಳೆಯುತ್ತಿರುತ್ತವೆ.

ಆದರೆ, ಕಳೆದ ಕೆಲವು ದಿನಗಳಲ್ಲಿ ಸತತ ಮಳೆಯ ಕಾರಣ ಬೆಂಗಳೂರಿನ ಹಲವೆಡೆ ತೊಂದರೆಗಳಾಗಿವೆ. ರಸ್ತೆ ಮೇಲೆ ನೀರು ಹರಿದು ಸಂಚಾರ, ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು ಕೆಲವು ಪ್ರದೇಶಗಳು ಮುಳುಗಡೆ ಆಗಿವೆ. ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ದೋಣಿಗಳನ್ನು ಬಳಸಿದ ದೃಶ್ಯಗಳು ವೈರಲ್‌ ಆಗಿದ್ದವು.

ನಗರದ ರಸ್ತೆಗಳು ʻನದಿʼಯಂತಾದರೆ ಅಲ್ಲಿ ಮೀನುಗಳೂ ಇರಬೇಕಲ್ಲವೇ? ಬೆಂಗಳೂರಿನ ರಸ್ತೆಯಲ್ಲಿ ನೀರು ಹರಿದ ಜಾಗದಲ್ಲಿದ್ದ ಒಂದು ದೊಡ್ಡ ಮೀನನ್ನು ನಾಗರಿಕ ಸ್ವಯಂಸೇವಕರು ಹಿಡಿದುಕೊಂಡಿರುವ ಫೋಟೋ ವೈರಲ್‌ ಆಗಿದೆ.

ಇದೇ ಫೋಟೋವನ್ನು ಸಮೀರ್‌ ಮೋಹನ್‌ ಟ್ವೀಟ್‌ ಮಾಡಿದ್ದು, ʻಬನ್ನಿ ಬೆಂಗಳೂರಿಗೆ; ರಸ್ತೆ ಮಧ್ಯದಲ್ಲೇ ತಾಜಾ ಮೀನು ಹಿಡಿಯೋದಕ್ಕೆ ʼ ಎಂದು ಶೀರ್ಷಿಕೆ ಕೊಟ್ಟು ಗಮನಸೆಳೆದಿದ್ದಾರೆ.

ಆ ಟ್ವೀಟ್‌ ಇಲ್ಲಿದೆ ನೋಡಿ

ನಾಗರಿಕ ಸ್ವಯಂಸೇವಕನು ನದಿಯಲ್ಲಿ ಸಿಗುವ ಕ್ಯಾಟ್‌ ಫಿಶ್‌ (ಸ್ಥಳೀಯವಾಗಿ ಸಿಂಘರಾ ಎನ್ನುತ್ತಾರೆ) ನಂತೆ ಕಾಣುವ 'ತಾಜಾ ಮೀನು' ಹಿಡಿದಿರುವುದನ್ನು ತೋರಿಸುತ್ತದೆ. ಅವರ ಜತೆಗಿದ್ದವರು ಅದರ ಫೋಟೋ ತೆಗೆದುಕೊಳ್ಳುತ್ತಿರುವುದು ಫೋಟೋದಲ್ಲಿದೆ.

ಟ್ವಿಟರ್ ಬಳಕೆದಾರರು ಫೋಟೋ ನೋಡಿ ಬೆರಗಾಗಿದ್ದಾರೆ. "ಬೆಂಗಳೂರು 'ನಿಮ್ಮ ಗ್ರಾಹಕರನ್ನು' ಅನ್ನು ಸಂಪೂರ್ಣ ಹೊಸ (ಸಮುದ್ರ) ಮಟ್ಟಕ್ಕೆ ಕೊಂಡೊಯ್ಯುತ್ತದೆ" ಎಂದು ಒಬ್ಬರು ಟ್ವೀಟ್‌ ಮಾಡಿದ್ದಾರೆ.

"ರಸ್ತೆ ದಾಟಲು ಇದು ಅಪೇಕ್ಷಣೀಯ" ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ಕೆಲವರು ಸ್ಥಳದ ಬಗ್ಗೆ ಚರ್ಚಿಸಿದ್ದಾರೆ ಮತ್ತು ಇದು ಬೆಳ್ಳಂದೂರು ಪ್ರದೇಶದಲ್ಲಿ ಇಕೋಸ್ಪೇಸ್ ಬಳಿ ಇದೆ ಎಂದು ತೋರುತ್ತದೆ ಎಂದು ಹೇಳಿದ್ದಾರೆ.

ಮಳೆಯಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಜಲಾವೃತವಾಗಿದ್ದ ರಸ್ತೆಯಲ್ಲಿ ವಾಹನಗಳು ನಿಂತಿದ್ದು, ಪಾದಚಾರಿಗಳು ನಡೆದಾಡಲು ಪರದಾಡಿದರು. ಮಳೆಯ ಕಾರಣ ಸಾರ್ವಜನಿಕರಿಗೆ ಉಂಟಾದ ಅನಾನುಕೂಲತೆಯನ್ನು ಕಡಿಮೆ ಮಾಡಲುಸೇವೆಗೆ ಸ್ವಯಂಸೇವಕರನ್ನು ಕರೆಯಿಸಿಕೊಂಡಿದ್ದರು.

ಕರ್ನಾಟಕದಲ್ಲಿ ಜೂನ್ 1 ರಿಂದ 820 ಮಿಮೀ ಮಳೆ ಬಿದ್ದಿದೆ. ಇದರಿಂದಾಗಿ 27 ಜಿಲ್ಲೆಗಳು ಮತ್ತು 187 ಹಳ್ಳಿಗಳು ತೊಂದರೆಗೊಳಗಾಗಿವೆ. 29,967 ಜನ ಸಂಕಷ್ಟಕ್ಕೀಡಾಗಿದ್ದಾರೆ. ರಾಮನಗರ, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳ 20 ಹಳ್ಳಿಗಳಲ್ಲಿ 24 ಗಂಟೆಗಳ ಅವಧಿಯಲ್ಲಿ ಒಂಬತ್ತು ಮಿಮೀ ಮಳೆ ದಾಖಲಾಗಿದೆ ಮತ್ತು 3,000 ಜನರ ಜೀವನದ ಮೇಲೆ ಪರಿಣಾಮ ಬೀರಿದೆ ಎಂದು ಪಿಟಿಐ ಮಂಗಳವಾರದ ವರದಿಯಲ್ಲಿ ತಿಳಿಸಿತ್ತು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್‌ಡಿಆರ್‌ಎಫ್) ಮಾನದಂಡಗಳ ಪ್ರಕಾರ 1,012.5 ಕೋಟಿ ರೂಪಾಯಿ ಪರಿಹಾರ ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.

ರಾಜ್ಯದಲ್ಲಿ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಉಂಟಾದ ಹಾನಿಯನ್ನು ನಿರ್ಣಯಿಸಲು ಅಂತರ್ ಸಚಿವಾಲಯದ ತಂಡವನ್ನು ನಿಯೋಜಿಸಲು ಸರ್ಕಾರವು ಕೇಂದ್ರವನ್ನು ಕೇಳಲಿದೆ ಎಂದು ಕರ್ನಾಟಕದ ಕಂದಾಯ ಸಚಿವ ಆರ್ ಅಶೋಕ ಅವರು ತಿಳಿಸಿದ್ದಾರೆ.

Whats_app_banner