ಕನ್ನಡ ಸುದ್ದಿ  /  Karnataka  /  Bengaluru Schools Find Condoms Contraceptive Pills Cigarettes In Students Bag

Bengaluru schools: ಪೋಷಕರೇ ಏನ್ ಮಾಡ್ತಿದ್ದೀರಾ? ಶಾಲೆಗಳ ವಿದ್ಯಾರ್ಥಿಗಳ ಬ್ಯಾಗ್‌ನಲ್ಲಿ ಕಾಂಡೋಮ್, ಗರ್ಭನಿರೋಧಕ ಮಾತ್ರೆ, ಸಿಗರೇಟ್ ಪತ್ತೆ

ಬೆಂಗಳೂರಿನಲ್ಲಿ ವಿದ್ಯಾರ್ಥಿಗಳು ಶಾಲೆಗೆ ಮೊಬೈಲ್ ತರುತ್ತಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಬ್ಯಾಗ್ ಗಳನ್ನು ದಿಢೀರ್ ತಪಾಸಣೆ ಮಾಡಿದಾಗ ಶಿಕ್ಷಕರೇ ದಂದಾಗಿ ಹೋಗಿದ್ದಾರೆ.

ವಿದ್ಯಾರ್ಥಿಗಳ ಬ್ಯಾಗ್ ಗಳಲ್ಲಿ ಕಾಂಡೋಮ್, ಗರ್ಭನಿರೋಧಕ ಮಾತ್ರೆಗಳ ಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವಿದ್ಯಾರ್ಥಿಗಳ ಬ್ಯಾಗ್ ಗಳಲ್ಲಿ ಕಾಂಡೋಮ್, ಗರ್ಭನಿರೋಧಕ ಮಾತ್ರೆಗಳ ಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು: ವಿದ್ಯಾರ್ಥಿಗಳು ಶಾಲೆಗೆ ಮೊಬೈಲ್ ತರುತ್ತಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಬ್ಯಾಗ್ ಗಳನ್ನು ದಿಢೀರ್ ತಪಾಸಣೆ ಮಾಡಿದಾಗ ಶಿಕ್ಷಕರೇ ದಂದಾಗಿ ಹೋಗಿದ್ದಾರೆ. ವಿದ್ಯಾರ್ಥಿಗಳ ಬ್ಯಾಗ್ ಗಳಲ್ಲಿ ಕಾಂಡೋಮ್‌ಗಳು, ಗರ್ಭನಿರೋಧಕ ಮಾತ್ರೆಗಳು ಮತ್ತು ಸಿಗರೇಟ್‌ಗಳಂತಹ ವಸ್ತುಗಳನ್ನು ಪತ್ತೆಯಾಗಿವೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ವರದಿಯ ಪ್ರಕಾರ, 8, 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳ ಶಾಲಾ ಬ್ಯಾಗ್‌ಗಳಲ್ಲಿ ಹೆಚ್ಚುವರಿ ನಗದು ಮತ್ತು ಸೆಲ್ ಫೋನ್‌ಗಳು ಕಂಡುಬಂದಿವೆ. ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಮಂಡಳಿಯ ಸೂಚನೆ ಮೇರೆಗೆ ಈ ತಪಾಸಣೆ ನಡೆಸಲಾಗಿದೆ ಎಂದು ಹೇಳಲಾಗಿದೆ.

ಸಮಸ್ಯೆಯನ್ನು ಪರಿಹರಿಸಲು ಶಾಲೆಗಳು ಪೋಷಕರ-ಶಿಕ್ಷಕರ ಸಭೆಗಳನ್ನು ಸಹ ನಡೆಸಿವೆ ಎಂದು ವರದಿ ಹೇಳಿದೆ. ಇಂತಹ ಘಟನೆಗಳ ಬಗ್ಗೆ ನಮಗೆ ಮಾತ್ರವಲ್ಲ, ಪೋಷಕರೂ ಸಹ ಆಘಾತಕ್ಕೊಳಗಾಗಿದ್ದಾರೆ. ಮಕ್ಕಳ ವರ್ತನೆಯಲ್ಲಿ ಬದಲಾವಣೆ ಕಾಣಲಾಗಿದೆ ಎಂದು ಪ್ರಾಂಶುಪಾಲರೊಬ್ಬರು ಹೇಳಿರುವುದಾಗಿ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಶಾಲೆಗಳ ಆಡಳಿತ ಮಂಡಳಿಗಳು ವಿದ್ಯಾರ್ಥಿಗಳನ್ನು ಅಮಾನತುಗೊಳಿಸದಿರಲು ನಿರ್ಧರಿಸಿವೆ. ಬದಲಾಗಿ, ವಿದ್ಯಾರ್ಥಿಗಳ ವರ್ತನೆಯ ಬದಲಾವಣೆಯನ್ನು ನೋಡಿ ಕೌನ್ಸೆಲಿಂಗ್ ಸೆಷನ್‌ಗಳಿಗೆ ಕಳುಹಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಕೆಎಎಂಎಸ್ ಪ್ರಧಾನ ಕಾರ್ಯದರ್ಶಿ ಡಿ ಶಶಿಕುಮಾರ್ ಮಾತನಾಡಿ, ಕೆಲವು ಶಾಲೆಗಳಲ್ಲಿ ನೀರಿನ ಬಾಟಲಿಗಳಲ್ಲಿ ಮೌಖಿಕ ಗರ್ಭನಿರೋಧಕ ಮಾತ್ರೆಗಳು ಮತ್ತು ಆಲ್ಕೋಹಾಲ್ ಕೂಡ ಕಂಡುಬಂದಿದೆ. ಇದು ಮಾತ್ರವಲ್ಲದೆ 5ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಅಸಭ್ಯ ಭಾಷೆ, ಬೆದರಿಸುವ ಕೃತ್ಯಗಳನ್ನು ಸಹ ಗಮನಿಸಲಾಗಿದೆ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಶಾಲೆಗಳಲ್ಲಿ ನೀಡುತ್ತಿರುವ ನೈತಿಕ ಶಿಕ್ಷಣ ಯಾವುದೇ ರೀತಿಯ ಪರಿಣಾಮ ಬೀರುತ್ತಿಲ್ಲ ಎಂಬುದು ಈ ಬೆಳವಣಿಗೆಯಿಂದ ತಿಳಿದು ಬಂದಿದೆ. ಶಾಲೆಗಳಿಗಿಂತ ಪೋಷಕರೇ ಮಕ್ಕಳ ಬಗ್ಗೆ ಹೆಚ್ಚಿನ ನಿರ್ಲಕ್ಷ್ಯ ವಹಿಸುತ್ತಿರುವುದು ಕೂಡ ಇದರಿಂದ ಕಂಡು ಬಂದಿದೆ. ವಿದ್ಯಾರ್ಥಿಗಳ ಕೌನ್ಸೆಲಿಂಗ್ ಸೆಷನ್ ಗಳ ಬಳಿಕ ಸರಿ ದಾರಿಗೆ ಮರಬೇಕಿದೆ. ಫೋಷಕರು ತಮ್ಮ ಮಕ್ಕಳ ಚಟುವಟಿಕೆಗಳ ಬಗ್ಗೆ ಹೆೆಚ್ಚಿನ ಗಮನ ಹರಿಸುವುದು ಕೂಡ ಅತಿ ಮುಖ್ಯವಾಗಿದೆ.

IPL_Entry_Point