ಬೆಂಗಳೂರು: ಚಾಮರಾಜಪೇಟೆಯ ಕೋಟೆ ಪ್ರೌಢಶಾಲೆ ಆವರಣದಲ್ಲಿ ಏ 6 ರಿಂದ ಶ್ರೀ ರಾಮನವಮಿ ಸಂಗೀತೋತ್ಸವ, ಟಿಕೆಟ್ ಖರೀದಿ ಎಲ್ಲಿ, ಕಾರ್ಯಕ್ರಮ ವಿವರ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು: ಚಾಮರಾಜಪೇಟೆಯ ಕೋಟೆ ಪ್ರೌಢಶಾಲೆ ಆವರಣದಲ್ಲಿ ಏ 6 ರಿಂದ ಶ್ರೀ ರಾಮನವಮಿ ಸಂಗೀತೋತ್ಸವ, ಟಿಕೆಟ್ ಖರೀದಿ ಎಲ್ಲಿ, ಕಾರ್ಯಕ್ರಮ ವಿವರ

ಬೆಂಗಳೂರು: ಚಾಮರಾಜಪೇಟೆಯ ಕೋಟೆ ಪ್ರೌಢಶಾಲೆ ಆವರಣದಲ್ಲಿ ಏ 6 ರಿಂದ ಶ್ರೀ ರಾಮನವಮಿ ಸಂಗೀತೋತ್ಸವ, ಟಿಕೆಟ್ ಖರೀದಿ ಎಲ್ಲಿ, ಕಾರ್ಯಕ್ರಮ ವಿವರ

ಬೆಂಗಳೂರು ಚಾಮರಾಜಪೇಟೆಯ ಕೋಟೆ ಪ್ರೌಢಶಾಲೆ ಆವರಣದಲ್ಲಿ 87ನೇ ಶ್ರೀ ರಾಮನವಮಿ ಜಾಗತಿಕ ಸಂಗೀತೋತ್ಸವ 2025 ಏಪ್ರಿಲ್ 6 ರಿಂದ ಮೇ 2 ರ ತನಕ ನಡೆಯಲಿದೆ. ಕಾರ್ಯಕ್ರಮ ವಿವರ, ಟಿಕೆಟ್‌ ಎಲ್ಲಿ ಖರೀದಿಸಬೇಕು ಎಂಬಿತ್ಯಾದಿ ವಿವರ ಇಲ್ಲಿದೆ.

ಚಾಮರಾಜಪೇಟೆಯ ಕೋಟೆ ಪ್ರೌಢಶಾಲೆ ಆವರಣದಲ್ಲಿ ಏ 6 ರಿಂದ ಶ್ರೀ ರಾಮನವಮಿ ಸಂಗೀತೋತ್ಸವ
ಚಾಮರಾಜಪೇಟೆಯ ಕೋಟೆ ಪ್ರೌಢಶಾಲೆ ಆವರಣದಲ್ಲಿ ಏ 6 ರಿಂದ ಶ್ರೀ ರಾಮನವಮಿ ಸಂಗೀತೋತ್ಸವ (Shree Ramaseva Mandali)

ಬೆಂಗಳೂರು: ಚಾಮರಾಜಪೇಟೆಯ ಕೋಟೆ ಪ್ರೌಢಶಾಲೆ ಆವರಣದಲ್ಲಿ ಈ ವರ್ಷ 87ನೇ ಶ್ರೀ ರಾಮನವಮಿ ಸಂಗೀತೋತ್ಸವ ಏಪ್ರಿಲ್ 6 ರಿಂದ ಮೇ 2 ರ ತನಕ ನಡೆಯಲಿದೆ. ಶ್ರೀರಾಮ ಸೇವಾ ಮಂಡಳಿ ರಾಮನವಮಿ ಸೆಲೆಬ್ರೇಷನ್‌ ಟ್ರಸ್ಟ್‌ ಇದನ್ನು ಆಯೋಜಿಸುತ್ತಿದ್ದು, ತಿಂಗಳು ಪೂರ್ತಿ ನಡೆಯುವ ಸಂಗೀತೋತ್ಸವದಲ್ಲಿ ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕರು, ವೀಣೆ, ಪಿಟೀಲು, ಕೊಳಲು ಸೇರಿ ವಿವಿಧ ಕಲಾವಿದರು ಕಛೇರಿ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದ ವಿವರವನ್ನೂ ಟ್ರಸ್ಟ್ ಬಹಿರಂಗಪಡಿಸಿದೆ.

ಚಾಮರಾಜಪೇಟೆಯ ಕೋಟೆ ಪ್ರೌಢಶಾಲೆ ಆವರಣದಲ್ಲಿ ಶ್ರೀ ರಾಮನವಮಿ ಸಂಗೀತೋತ್ಸವ

ಏಪ್ರಿಲ್‌ 6ರ ಬೆಳಿಗ್ಗೆ 8.30ರಿಂದ ರಾಮನವಮಿ ಮಹಾ ಅಭಿಷೇಕ ನಡೆಯಲಿದೆ. ಮಲ್ಲಾಡಿ ಸಹೋದರರು ವಿಶೇಷ ಸಂಗೀತ ಸೇವೆ ಸಲ್ಲಿಸಲಿದ್ದಾರೆ. ಸಂಜೆ 4 ರಿಂದ ಮೈಸೂರು ವಿಜಯ ಸೂರ್ಯ ರವರಿಂದ ನಾಧಸ್ವರ ಕಛೇರಿ ನಡೆಯಲಿದೆ. ಸಂಜೆ 5.45ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಪ್ರಸಕ್ತ ವರ್ಷದಿಂದ ಆರಂಭಿಸಿರುವ ‘ಎಸ್‌.ಎಂ.ಕೃಷ್ಣ ಸ್ಮಾರಕ ರಾಷ್ಟ್ರೀಯ ಸಂಗೀತ ಪ್ರಶಸ್ತಿ’ಯನ್ನೂ ಇದೇ ಸಮಾರಂಭದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ಸಂದೀಪ್ ನಾರಾಯಣ್‌ ಅವರಿಗೆ ಪ್ರದಾನ ಮಾಡಲಾಗುತ್ತದೆ. ಬಳಿಕ ಸಂದೀಪ್ ನಾರಾಯಣ್, ಹೆಚ್ ಎನ್ ಭಾಸ್ಕರ್, ಕೆ ವಿ ಪ್ರಸಾದ್, ಜಿ ಗುರುಪ್ರಸನ್ನ ಅವರಿಂದ ಕರ್ನಾಟಕ ಸಂಗೀತ ಕಛೇರಿ ನಡೆಯಲಿದೆ.

ಏಪ್ರಿಲ್ 12 ರಂದು ಶ್ರೀ ಹನುಮ ಜಯಂತಿ ಮಹಾ ಅಭಿಷೇಕ ನಡೆಯಲಿದೆ. ಒಂದು ತಿಂಗಳ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಯು ರಾಜೇಶ್ ಮತ್ತು ಪಂ ಜಯತೀರ್ಥ ಮೇವುಂಡಿ, ತ್ರಿಚೂರ್ ಸಹೋದರರು, ವಿದ್ಯಾಭೂಷಣ, ರಂಜನಿ ಮತ್ತು ಗಾಯತ್ರಿ, ಪ್ರವೀಣ್ ಗೋಡ್ಖಿಂಡಿ, ಅಭಿಷೇಕ್ ರಘುರಾಂ, ವೆಂಕಟೇಶ್ ಕುಮಾರ್, ಶಾಹಿದ್ ಪರ್ವಿಜ್, ಸುಮಾ ಸುಧೀಂದ್ರ, ಎಸ್. ಸಾಕೇತರಾಮನ್, ಮೈಸೂರು ನಾಗರಾಜ್ ಮತ್ತು ಮೈಸೂರು ಮಂಜುನಾಥ್ ಸೇರಿ ಸಂಗೀತ ಕ್ಷೇತ್ರದ ಪ್ರಮುಖ ಗಾಯಕರು ಹಾಗೂ ಕಲಾವಿದರು ಕ‌ಛೇರಿ ನಡೆಸಿಕೊಡಲಿದ್ದಾರೆ. ಈ ಸಂಗೀತ ಕಛೇರಿಗಳು ಪ್ರತಿನಿತ್ಯ ಸಂಜೆ 5 ಗಂಟೆಯ ಬಳಿಕ ನಡೆಯಲಿವೆ.

ಸಂಗೀತೋತ್ಸವದ ದಿನಗಳಲ್ಲಿ ನಿತ್ಯ ಬೆಳಿಗ್ಗೆ ವಾಲ್ಮೀಕಿ ರಾಮಾಯಣ ಉಪನ್ಯಾಸ

ಸಂಗೀತೋತ್ಸವದ ಅವಧಿಯಲ್ಲಿ ಪ್ರತಿದಿನ ಬೆಳಿಗ್ಗೆ 8ರಿಂದ 9.30ರವರೆಗೆ ವಾಲ್ಮೀಕಿ ರಾಮಾಯಣ ಉಪನ್ಯಾಸ ಮಾಲಿಕೆ ನಡೆಯಲಿದೆ. ವೀರನಾರಾಯಣ ಪಾಂಡುರಂಗಿ, ವೇದವರ್ಧನತೀರ್ಥ ಸ್ವಾಮೀಜಿ, ವಿದ್ಯಾಶ್ರೀಶತೀರ್ಥ ಸ್ವಾಮೀಜಿ, ಸತ್ಯಾತ್ಮತೀರ್ಥ ಸ್ವಾಮೀಜಿ, ವಿಶ್ವವಲ್ಲಭತೀರ್ಥ ಸ್ವಾಮೀಜಿ ಉಪನ್ಯಾಸ ಮಾಲಿಕೆ ನೀಡಲಿದ್ದಾರೆ.

ಹೆಚ್ಚಿನ ಮಾಹಿತಿಗೆ www.ramanavami.org ಗಮನಿಸಬಹುದು. ಅದೇ ರೀತಿ, www.ramanavamitickets.com ವೆಬ್‌ಸೈಟ್‌ ಮೂಲಕ ಸಂಗೀತೋತ್ಸವದ ಟಿಕೆಟ್‌ ಕಾಯ್ದಿರಿಸಬಹುದು. ವಿವರಕ್ಕೆ 9448079079 ಅಥವಾ 9483518012ಕ್ಕೆ ಸಂಪರ್ಕಿಸಬಹುದು ಎಂದು ಬೆಂಗಳೂರು ಚಾಮರಾಜಪೇಟೆಯ ಶ್ರೀರಾಮ ಸೇವಾ ಮಂಡಳಿ ರಾಮನವಮಿ ಸೆಲೆಬ್ರೇಷನ್‌ ಟ್ರಸ್ಟ್‌ ತಿಳಿಸಿದೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner