ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ದಕ್ಷಿಣದಲ್ಲಿ ಪ್ರಜ್ವಲಿಸಿದ ತೇಜಸ್ವಿ ಸೂರ್ಯ, ಲೋಕಸಭಾ ಚುನಾವಣೆಯಲ್ಲಿ ಫಲಿಸದ ಕಾಂಗ್ರೆಸ್‌ ಕಾರ್ಯತಂತ್ರ- ವಿಶ್ಲೇಷಣೆ

ಬೆಂಗಳೂರು ದಕ್ಷಿಣದಲ್ಲಿ ಪ್ರಜ್ವಲಿಸಿದ ತೇಜಸ್ವಿ ಸೂರ್ಯ, ಲೋಕಸಭಾ ಚುನಾವಣೆಯಲ್ಲಿ ಫಲಿಸದ ಕಾಂಗ್ರೆಸ್‌ ಕಾರ್ಯತಂತ್ರ- ವಿಶ್ಲೇಷಣೆ

ಬೆಂಗಳೂರು ದಕ್ಷಿಣದಲ್ಲಿ ಪ್ರಜ್ವಲಿಸಿದ ತೇಜಸ್ವಿ ಸೂರ್ಯ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸೌಮ್ಯಾ ರೆಡ್ಡಿ ವಿರುದ್ಧ 2.44 ಲಕ್ಷ ಮತಗಳ ಅಂತರದ ದಾಖಲೆ ಗೆಲುವು ಸಾಧಿಸಿದ್ದಾರೆ. ಈ ಚುನಾವಣೇಲಿ ಕಾಂಗ್ರೆಸ್‌ ಕಾರ್ಯತಂತ್ರ ಫಲಿಸಿಲ್ಲ. (ವಿಶ್ಲೇಷಣೆ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು ದಕ್ಷಿಣದಲ್ಲಿ ಪ್ರಜ್ವಲಿಸಿದ ತೇಜಸ್ವಿ ಸೂರ್ಯ, ಲೋಕಸಭಾ ಚುನಾವಣೆಯಲ್ಲಿ ಫಲಿಸದ ಕಾಂಗ್ರೆಸ್‌ ಕಾರ್ಯತಂತ್ರ. (ಸಾಂದರ್ಭಿಕ ಚಿತ್ರ)
ಬೆಂಗಳೂರು ದಕ್ಷಿಣದಲ್ಲಿ ಪ್ರಜ್ವಲಿಸಿದ ತೇಜಸ್ವಿ ಸೂರ್ಯ, ಲೋಕಸಭಾ ಚುನಾವಣೆಯಲ್ಲಿ ಫಲಿಸದ ಕಾಂಗ್ರೆಸ್‌ ಕಾರ್ಯತಂತ್ರ. (ಸಾಂದರ್ಭಿಕ ಚಿತ್ರ)

ಬೆಂಗಳೂರು: ಯಾರೇ ಅಭ್ಯರ್ಥಿಯಾದರೂ ಇಡೀ ದೇಶದಲ್ಲಿ ಬಿಜೆಪಿ ಸುಲಭವಾಗಿ ಗೆಲ್ಲುವ ಕೆಲವೇ ಕ್ಷೇತ್ರಗಳಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವೂ ಒಂದು. ನಂದನ್‌ ನಿಲೇಕಣಿ, ಬಿಕೆ ಹರಿಪ್ರಸಾದ್‌ ಅವರಂತಹ ದಿಗ್ಗಜರು ಅಭ್ಯರ್ಥಿಗಳಾದರೂ ಇಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿತ್ತು.

ಟ್ರೆಂಡಿಂಗ್​ ಸುದ್ದಿ

ಬಿಜೆಪಿ ಯುವ ಘಟಕದ ಅಧ್ಯಕ್ಷ ತೇಜಸ್ವಿ ಸೂರ್ಯ ಕಾಂಗ್ರೆಸ್‌ ನ ಸೌಮ್ಯ ರೆಡ್ಡಿ ಅವರನ್ನು 2.44 ಲಕ್ಷ ಮತಗಳ ಅಂತರದಿಂಧ ಪರಾಭವಗೊಳಿಸಿದ್ದಾರೆ. ತೇಜಸ್ವಿ ಅವರು 7,50,830 ಮತ್ತು ಸೌಮ್ಯ ಅವರು 4,73,747 ಮತ ಗಳಿಸಿದ್ದಾರೆ.

ಬಿಜೆಪಿಯದ್ದೇ ಭದ್ರಕೋಟೆ ಬೆಂಗಳೂರು ದಕ್ಷಿಣ

1991 ರಿಂದಲೂ ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಆಗ ಮೊದಲ ಬಾರಿಗೆ ಗೆಲುವು ಸಾಧಿಸಿದ್ದ ಅನಂತಕುಮಾರ್‌ ಸತತ 6 ಬಾರಿ ಲೋಕಸಭೆ ಪ್ರವೇಶಿಸಿದ್ದರು. ಈ ಕ್ಷೇತ್ರದ ವ್ಯಾಪ್ತಿಗೆ 8 ವಿಧಾನಸಭಾ ಕ್ಷೇತ್ರಗಳು ಒಳಪಡುತ್ತವೆ. ಚಿಕ್ಕಪೇಟೆ, ಬಸವನಗುಡಿ, ಜಯನಗರ, ಪದ್ಮನಾಭನಗರ, ಬೊಮ್ಮನಹಳ್ಳಿ, ಕ್ಷೇತ್ರಗಳಲ್ಲಿ ಬಿಜೆಪಿ, ವಿಜಯನಗರ, ಗೋವಿಂದರಾಜ ನಗರ ಮತ್ತು ಬಿಟಿಎಂ ಲೇ ಔಟ್‌ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ದಾಖಲಿಸಿದೆ. ಇದೇ ಕ್ಷೇತ್ರದ ರಾಮಲಿಂಗಾ ರೆಡ್ಡಿ ಸಾರಿಗೆ ಸಚಿವರಾಗಿದ್ದರೆ ಆರ್. ಆಶೋಕ್‌ ಪ್ರತಿಪಕ್ಷದ ನಾಯಕರಾಗಿದ್ದಾರೆ.‌

ಅನಂತಕುಮಾರ್‌ ನಿಧನದ ನಂತರ 2019ರಲ್ಲಿ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್‌ ಅವರಿಗೆ ಬದಲಾಗಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್‌ ನೀಡಿ ಅಚ್ಚರಿ ಮೂಡಿಸಿತ್ತು. ಆ ಸಂದರ್ಭದಲ್ಲಿ ಅವರು ಕೇವಲ ಸಂಘ ಪರಿವಾರದ ಕಾರ್ಯಕರ್ತ ಮತ್ತು ವಕೀಲ ಮಾತ್ರ. ಆಗ ಅವರು ಕಾಂಗ್ರೆಸ್‌ ನ ಬಿ.ಕೆ. ಹರಿಪ್ರಸಾದ್ ಅವರನ್ನು 3,31,192 ಮತಗಳ ಅಂತರದಿಂದ ಗೆಲುವು ದಾಖಲಿಸಿ ಇಡೀ ದೇಶದಲ್ಲಿ ಅಚ್ಚರಿ ಮೂಡಿಸಿದ್ದರು. ಮೊದಲ ಪ್ರಯತ್ನದಲ್ಲೇ ಭರ್ಜರಿ ಗೆಲುವು ಅವರದ್ದಾಗಿತ್ತು. ಈಗ ಎರಡನೇ ಬಾರಿಯೂ ಬಾರಿ ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. ಇದು ಸೌಮ್ಯ ಅವರಿಗೆ ಎರಡನೇ ಸೋಲು. ಕಳೆದ ವಿಧಾನಸಬಾ ಚುನಾವಣೆಯಲ್ಲಿ ಕೆಲವೇ 16 ಮತಗಳ ಅಂತರದಿಂದ ಸೋಲು ಕಂಡಿದ್ದರು.

5 ಗ್ಯಾರೆಂಟಿ, ಅನುಕಂಪವನ್ನೇ ನೆಚ್ಚಿಕೊಂಡಿದ್ದ ಸೌಮ್ಯ ರೆಡ್ಡಿ

ಸೌಮ್ಯ ರೆಡ್ಡಿ ಅವರು ಐದು ಗ್ಯಾರಂಟಿಗಳನ್ನು ನೆಚ್ಚಿಕೊಂಡಿದ್ದರು. ಆ ಮೂಲಕ ಮಹಿಳೆಯರ ಮತಗಳು ಸುಲಭವಾಗಿ ತಮಗೆ ದಕ್ಕುತ್ತವೆ ಎಂದು ಭಾವಿಸಿದ್ದರು. ಜೊತೆಗೆ ವಿಧಾನಸಭಾ ಕ್ಷೇತ್ರದ ಸೋಲಿನ ಅನುಕಂಪವೂ ತಮ್ಮ ಗೆಲುವಿಗೆ ಸಹಕಾರಿಯಾಗಲಿದೆ ಎಂದೂ ಭಾವಿಸಿದ್ದರು.

ಬೆಂಗಳೂರಿನ ಉಸ್ತುವಾರಿ ವಹಿಸಿಕೊಂಡಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಯಾವುದೇ ಕಾರ್ಯತಂತ್ರವೂ ಇಡೀ ಬೆಂಗಳೂರಿನಲ್ಲಿ ಒಂದೂ ಕ್ಷೇತ್ರವನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಪ್ರಧಾನಿ ಮೋದಿಯ ಭರವಸೆಗಳು, ಸಂಘ ಪರಿವಾರದ ಬೆಂಬಲ, ಬಿಜೆಪಿ ಜೆಡಿಎಸ್‌ ಮೈತ್ರಿ ಮತ್ತು ಬ್ರಾಹ್ಮಣ ಸಮುದಾಯದ ಮತಗಳು ತೇಜಸ್ವಿ ಸೂರ್ಯ ಅವರನ್ನು ಗೆಲ್ಲಿಸುವಲ್ಲಿ ಸಹಕಾರಿಯಾಗಿವೆ. ಎಂದಿನಂತೆ ನಗರ ಪ್ರದೇಶದ ಮತದಾರರ ಮೋದಿ ಅವರ ಮೇಲಿನ ಪ್ರೀತಿ ಭಾರಿ ಪ್ರಮಾಣದ ಅಂತರಕ್ಕೆ ಕಾರಣವಾಗಿದೆ. ಚೊಚ್ಚಲ ಪ್ರಯತ್ನದಲ್ಲೇ ಸಂಸತ್‌ ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.

ಪ್ರಖರ ವಾಗ್ಮಿ ಮತ್ತು ಹಿಂದುತ್ವದ ಪ್ರಚಂಡ ಪ್ರತಿಪಾದಕರಾದ ತೇಜಸ್ವಿ ಸೂರ್ಯ ಅವರು ಕೇಂದ್ರ ಸಂಪುಟ ಸೇರಿದರೂ ಅಚ್ಚರಿಯಿಲ್ಲ.

(ವಿಶ್ಲೇಷಣೆ- ಎಚ್.ಮಾರುತಿ, ಬೆಂಗಳೂರು)

👉🏻 ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್

ಟಿ20 ವರ್ಲ್ಡ್‌ಕಪ್ 2024