ಮೀನು ತಿನ್ನುವಾಗ ಹುಷಾರು, ಮುಳ್ಳು ಹೊಟ್ಟೆಗಿಳಿದರೆ ಗೊತ್ತಾಗಲ್ಲ, 5 ವರ್ಷದಿಂದ ಹೊಟ್ಟೆಯಲ್ಲಿದ್ದ ಮೀನಿನ ಮುಳ್ಳು ಹೊರತೆಗೆದ ಬೆಂಗಳೂರು ವೈದ್ಯರು
ಕನ್ನಡ ಸುದ್ದಿ  /  ಕರ್ನಾಟಕ  /  ಮೀನು ತಿನ್ನುವಾಗ ಹುಷಾರು, ಮುಳ್ಳು ಹೊಟ್ಟೆಗಿಳಿದರೆ ಗೊತ್ತಾಗಲ್ಲ, 5 ವರ್ಷದಿಂದ ಹೊಟ್ಟೆಯಲ್ಲಿದ್ದ ಮೀನಿನ ಮುಳ್ಳು ಹೊರತೆಗೆದ ಬೆಂಗಳೂರು ವೈದ್ಯರು

ಮೀನು ತಿನ್ನುವಾಗ ಹುಷಾರು, ಮುಳ್ಳು ಹೊಟ್ಟೆಗಿಳಿದರೆ ಗೊತ್ತಾಗಲ್ಲ, 5 ವರ್ಷದಿಂದ ಹೊಟ್ಟೆಯಲ್ಲಿದ್ದ ಮೀನಿನ ಮುಳ್ಳು ಹೊರತೆಗೆದ ಬೆಂಗಳೂರು ವೈದ್ಯರು

ಮೀನು ಪ್ರಿಯರ ಗಮನಕ್ಕೆ. ಮೀನು ತಿನ್ನುವಾಗ ಅದರ ಮೂಳೆ ಅಥವಾ ಮೀನು ಮುಳ್ಳು ಗಂಟಲಲ್ಲಿ ಸಿಲುಕಿದರೆ ಸಂಕಷ್ಟ ಅಷ್ಟಿಷ್ಟಲ್ಲ. ಮೀನು ಮುಳ್ಳು ಹೊಟ್ಟೆಗಿಳಿದರೆ ಗೊತ್ತಾಗಲ್ಲ. 5ವರ್ಷದಿಂದ ಹೊಟ್ಟೆಯಲ್ಲಿದ್ದ 2ಸೆಂ.ಮೀ. ಉದ್ದದ ಮೀನು ಮುಳ್ಳನ್ನು ಬೆಂಗಳೂರು ವೈದ್ಯರು ಹೊರ ತೆಗೆದಿದ್ದಾರೆ.

ಪದೇಪದೇ ಹೊಟ್ಟೆ ನೋವು ಅನುಭವಿಸಿದ್ದ 61 ವರ್ಷದ ವ್ಯಕ್ತಿಯ ಹೊಟ್ಟೆಯಲ್ಲಿತ್ತು ಈ ಮೀನು ಮುಳ್ಳು. 5 ವರ್ಷದಿಂದ ಹೊಟ್ಟೆಯಲ್ಲಿದ್ದ 2ಸೆಂ.ಮೀ. ಉದ್ದದ ಮೀನು ಮುಳ್ಳನ್ನು ಬೆಂಗಳೂರು ವೈದ್ಯರು ಹೊರ ತೆಗೆದಿದ್ದಾರೆ.
ಪದೇಪದೇ ಹೊಟ್ಟೆ ನೋವು ಅನುಭವಿಸಿದ್ದ 61 ವರ್ಷದ ವ್ಯಕ್ತಿಯ ಹೊಟ್ಟೆಯಲ್ಲಿತ್ತು ಈ ಮೀನು ಮುಳ್ಳು. 5 ವರ್ಷದಿಂದ ಹೊಟ್ಟೆಯಲ್ಲಿದ್ದ 2ಸೆಂ.ಮೀ. ಉದ್ದದ ಮೀನು ಮುಳ್ಳನ್ನು ಬೆಂಗಳೂರು ವೈದ್ಯರು ಹೊರ ತೆಗೆದಿದ್ದಾರೆ.

ಬೆಂಗಳೂರು: ಮೀನು ಪ್ರಿಯರೇ ಮೀನು ತಿನ್ನುವಾಗ ಹುಷಾರಾಗಿರಿ. ಅಕಸ್ಮಾತ್ ಮೀನಿನ ಮುಳ್ಳು ಗಂಟಲಲ್ಲಿ ಸಿಲುಕಿ ಹೊಟ್ಟೆಗಿಳಿದರೆ ಗೊತ್ತಾಗಲ್ಲ. ಹೊಟ್ಟೆನೋವಿನಂತಹ ಸಮಸ್ಯೆ ಕಾಡುತ್ತಿರುತ್ತದೆ. ಈ ರೀತಿ ಕಳೆದ ಐದು ವರ್ಷದಿಂದ ಒಂದಿಲ್ಲೊಂದು ರೀತಿಯ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 61 ವರ್ಷದ ವ್ಯಕ್ತಿಯ ಹೊಟ್ಟೆಯಿಂದ 2 ಸೆಂ.ಮೀ ಉದ್ದದ ಮೀನಿನ ಮುಳ್ಳನ್ನು ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಹೊರತೆಗೆದಿದೆ.

ಹೊಟ್ಟೆಯಲ್ಲಿತ್ತು 2 ಸೆಂಮೀ ಉದ್ದದ ಮೀನಿನ ಮುಳ್ಳು

ರಾಜೇಶ್ (ಹೆಸರು ಬದಲಾಯಿಸಲಾಗಿದೆ) ಎಂಬ 61 ವರ್ಷದ ವ್ಯಕ್ತಿ 5 ವರ್ಷದ ಹಿಂದೆ ಮೀನು ತಿಂದಿದ್ದಾರೆ. ಆ ಸಂದರ್ಭದಲ್ಲಿ ಅವರ ಗಂಟಲಲ್ಲಿ ಮೀನಿನ ಮುಳ್ಳು ಸಿಲುಕಿಕೊಂಡಿದೆ. ಬಳಿಕ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಹೋದ ಅವರು ಅದನ್ನು ತೆಗೆಸಿದ್ದರು. ಎಂಡೋಸ್ಕೋಪಿಕ್ ಕಾರ್ಯವಿಧಾನದ ಮೂಲಕ ಮುಳನ್ನು ಅಂದು ತೆಗೆಸಿದ್ದರು. ಆಗ ಒಂದು ಮುಳ್ಳು ಮಾತ್ರ ಹೊರ ಬಂದಿತ್ತು. ಇನ್ನೊಂದು ಮುಳ್ಳು ಹೊಟ್ಟೆಯೊಳಗೆ ಇಳಿದಿತ್ತು. ಅದು ಡಾಕ್ಟರ್‌ಗಳ ಗಮನಕ್ಕೂ ಬಂದಿರಲಿಲ್ಲ. ಈ ರಾಜೇಶ್ ಅವರ ಗಮನಕ್ಕೂ ಬಂದಿರಲಿಲ್ಲ ಎಂದು ಈಗ ಚಿಕಿತ್ಸೆ ನೀಡಿರುವ ನಾಗರಬಾವಿ ಫೋರ್ಟಿಸ್ ಆಸ್ಪತ್ರೆಯ ಜೀರ್ಣಾಂಗ ವ್ಯೂಹದ ಶಸ್ತ್ರಚಿಕಿತ್ಸಾ ಸಮಾಲೋಚಕ ಡಾ. ಪ್ರಣವ್‌ ಹೊನ್ನಾವರ ತಿಳಿಸಿದ್ದಾರೆ.

5 ವರ್ಷ ಕಾರಣ ತಿಳಿಯದೆ ನೋವು ತಿಂದ ವ್ಯಕ್ತಿ

ಇದಾಗಿ ಐದು ವರ್ಷ ಕಳೆದಿದೆ. ಐದು ವರ್ಷಗಳಿಂದಲೂ ಒಂದಲ್ಲ ಒಂದು ರೀತಿಯ ಹೊಟ್ಟೆನೋವು, ವಿವಿಧ ರೀತಿಯ ಅಸ್ವಸ್ಥತೆ ಅನುಭವಿಸಿದ್ದಾರೆ. ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆಗೆ ಒಳಗಾಗಿದ್ದರೂ ಈ ಮೂಳೆ ಕಾಣಿಸಿಕೊಂಡಿಲ್ಲ. ಈ ಮುಳ್ಳಿನಿಂದಾಗಿ ಅವರ ಆರೋಗ್ಯ ಕ್ಷೀಣಿಸಿದೆ. ಅಲ್ಲದೆ, ಹೊಟ್ಟೆ ನೋವು ಹೆಚ್ಚುತ್ತಲೇ ಹೋಗಿದೆ ಎಂದು ಡಾ. ಪ್ರಣವ್‌ ಹೊನ್ನಾವರ ಹೇಳಿದ್ದಾರೆ.

ನಂತರ ರಾಜೇಶ್‌ ಅವರು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು. ಅವರ ಸಂಪೂರ್ಣ ತಪಾಸಣೆಯ ಬಳಿಕ ಓಮೆಂಟಮ್‌ನಲ್ಲಿ (ಕಿಬ್ಬೊಟ್ಟೆಯ ಅಂಗಗಳ ಸುತ್ತಲಿನ ಅಂಗಾಂಶದ ಪದರ) ಈ ಮುಳ್ಳುವುದು ಇರುವುದು ಕಂಡು ಬಂದಿತು. ಐದು ವರ್ಷಗಳಿಂದ ಈ ಮುಳ್ಳು ಒಂದಿಲ್ಲೊಂದು ರೀತಿಯಲ್ಲಿ ನೋವು ನೀಡುತ್ತಿರುವುದು ರೋಗಿಗೂ ಆಗಲೇ ತಿಳಿದಿದ್ದು. ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸಾ ವಿಧಾನದ ಮೂಲಕ ಅವರ ಹೊಟ್ಟೆಯಲ್ಲಿದ್ದ ಮೀನಿನ ಮುಳ್ಳನ್ನು ತೆಗೆದು ಹಾಕಲಾಗಿದ್ದು, ರೋಗಿಯು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಡಾಕ್ಟರ್ ವಿವರಿಸಿದ್ದಾರೆ.

ಈ ಶಸ್ತ್ರಚಿಕಿತ್ಸೆ ವೇಳೆ ಅವರಿಗೆ ಪಿತ್ತಕೋಶದ ಕಾಯಿಲೆ ಹಾಗೂ ಹೊಕ್ಕುಳಿನ ಅಂಡವಾಯು ಸಮಸ್ಯೆ ಇರುವುದು ತಿಳಿದು ಬಂತು. ಈ ಸಮಸ್ಯೆಗಳಿಗೂ ಚಿಕಿತ್ಸೆ ನೀಡಲಾಗಿದೆ ಎಂದು ಡಾಕ್ಟರ್‌ ಹೇಳಿದರು.

Whats_app_banner