ಬೆಂಗಳೂರು ರೆಸಿಡೆನ್ಸಿ ರಸ್ತೆಯಲ್ಲಿ ವೈಟ್ ಟಾಪಿಂಗ್‌ ಕಾಮಗಾರಿ; ಪರ್ಯಾಯ ರಸ್ತೆ ಸಂಚಾರ ಸಲಹೆ, ವಾಹನ ಸವಾರರ ಪರದಾಟ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ರೆಸಿಡೆನ್ಸಿ ರಸ್ತೆಯಲ್ಲಿ ವೈಟ್ ಟಾಪಿಂಗ್‌ ಕಾಮಗಾರಿ; ಪರ್ಯಾಯ ರಸ್ತೆ ಸಂಚಾರ ಸಲಹೆ, ವಾಹನ ಸವಾರರ ಪರದಾಟ

ಬೆಂಗಳೂರು ರೆಸಿಡೆನ್ಸಿ ರಸ್ತೆಯಲ್ಲಿ ವೈಟ್ ಟಾಪಿಂಗ್‌ ಕಾಮಗಾರಿ; ಪರ್ಯಾಯ ರಸ್ತೆ ಸಂಚಾರ ಸಲಹೆ, ವಾಹನ ಸವಾರರ ಪರದಾಟ

ಬೆಂಗಳೂರು ರೆಸಿಡೆನ್ಸಿ ರಸ್ತೆಯಲ್ಲಿ ಆಶೀರ್ವಾದಂ ಜಂಕ್ಷನ್ ನಿಂದ ಒಪೇರಾ ಜಂಕ್ಷನ್ ವರೆಗೆ ವೈಟ್ ಟ್ಯಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದ್ದು, ವಾಹನ ಸವಾರರ ಸುಗಮ ಸಂಚಾರಕ್ಕೆ ಪರ್ಯಾಯ ರಸ್ತೆಗಳ ಸಂಚಾರ ಸಲಹೆಯನ್ನು ಪೊಲೀಸರು ನೀಡಿದ್ದಾರೆ. ಆದರೂ ವಾಹನ ಸವಾರರ ಪರದಾಟ ಕಡಿಮೆಯಾಗಿಲ್ಲ.

ಬೆಂಗಳೂರು ರೆಸಿಡೆನ್ಸಿ ರಸ್ತೆಯಲ್ಲಿ ವೈಟ್ ಟಾಪಿಂಗ್‌ ಕಾಮಗಾರಿ ಪ್ರಗತಿಯಲ್ಲಿದೆ. ಪರ್ಯಾಯ ರಸ್ತೆ ಸಂಚಾರ ಸಲಹೆ ನೀಡಲಾಗಿದ್ದರೂ ವಾಹನ ಸವಾರರ ಪರದಾಟ ಕಡಿಮೆಯಾಗಿಲ್ಲ.
ಬೆಂಗಳೂರು ರೆಸಿಡೆನ್ಸಿ ರಸ್ತೆಯಲ್ಲಿ ವೈಟ್ ಟಾಪಿಂಗ್‌ ಕಾಮಗಾರಿ ಪ್ರಗತಿಯಲ್ಲಿದೆ. ಪರ್ಯಾಯ ರಸ್ತೆ ಸಂಚಾರ ಸಲಹೆ ನೀಡಲಾಗಿದ್ದರೂ ವಾಹನ ಸವಾರರ ಪರದಾಟ ಕಡಿಮೆಯಾಗಿಲ್ಲ. (BTP)

ಬೆಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿ ಆಶೀರ್ವಾದಂ ಜಂಕ್ಷನ್‌ನಿಂದ ಬ್ರಿಗೇಡ್‌ ರಸ್ತೆಯ ಜಂಕ್ಷನ್‌ವರೆಗೆ ವೈಟ್‌ ಟಾಪಿಂಗ್‌ ಕಾಮಗಾರಿ ಪ್ರಗತಿಯಲ್ಲಿದೆ. ಹೀಗಾಗಿ ವಾಹನ ಸಂಚಾರ ಬಂದ್‌ ಮಾಡಿದ್ದು, ದ್ವಿಚಕ್ರ ವಾಹನ ಸವಾರರು ಹಾಗೂ ವಾಹನ ಚಾಲಕರು ಪರದಾಟ ಮುಂದುವರಿದಿದೆ. ಶನಿವಾರ (ಮೇ 17) ರಾತ್ರಿ ಎರಡು ತಾಸಿಗೂ ಹೆಚ್ಚು ಕಾಲ ವಾಹನ ರೆಸಿಡೆನ್ಸಿ ರಸ್ತೆ ಮೇಲ್ಸೇತುವೆಯಲ್ಲಿ ಸಾಲುಗಟ್ಟಿ ನಿಂತವು. ಆಂಬುಲೆನ್ಸ್‌ಗಳೂ ದಟ್ಟಣೆಯಲ್ಲಿ ಸಿಲುಕಿದ್ದವು. ಭಾನುವಾರ (ಮೇ 19) ಕೂಡ ಇದೇ ವಾಹನ ದಟ್ಟಣೆ ಪರಿಸ್ಥಿತಿ ಇತ್ತು. ಬ್ಯಾರಿಕೇಡ್ ಹಾಕಿ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆಯಾದರೂ, ಸೇಂಟ್ ಮಾರ್ಕ್ಸ್‌ ರಸ್ತೆ, ಮ್ಯೂಸಿಯಂ ರಸ್ತೆ, ಬ್ರಿಗೇಡ್‌ ರಸ್ತೆಯಲ್ಲಿ ದಟ್ಟಣೆ ಉಂಟಾಗಿದೆ.

ರೆಸಿಡೆನ್ಸಿ ರಸ್ತೆಯಲ್ಲಿ ವೈಟ್ ಟಾಪಿಂಗ್‌ ಕಾಮಗಾರಿ

ರೆಸಿಡೆನ್ಸಿ ರಸ್ತೆಯಲ್ಲಿ ಆಶೀರ್ವಾದಂ ಜಂಕ್ಷನ್ ನಿಂದ ಒಪೇರಾ ಜಂಕ್ಷನ್ ವರೆಗೆ ವೈಟ್ ಟ್ಯಾಪಿಂಗ್ ಮೇ 8 ರಂದು ಶುರುವಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ವಾಹನ ಸವಾರರ ಸುಗಮ ಸಂಚಾರದ ಹಿತ ದೃಷ್ಟಿಯಿಂದ ಈ ಕೆಳಕಂಡ ಮಾರ್ಪಾಡುಗಳನ್ನು ಮಾಡಲಾಗಿರುತ್ತದೆ ಸಾರ್ವಜನಿಕರು ಸಹಕರಿಸಬೇಕು ಎಂದು ಅಶೋಕನಗರ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ. ಆದರೂ, ವಾಹನ ಸವಾರರ ಸಂಕಷ್ಟಕ್ಕೆ ಪರಿಹಾರ ಸಿಕ್ಕಿಲ್ಲ.

ಮೇ 31 ರ ತನಕ ಪರ್ಯಾಯ ರಸ್ತೆ ಸಂಚಾರ ಸಲಹೆ

ರೆಸಿಡೆನ್ಸಿ ರಸ್ತೆ ವೈಟ್ ಟಾಪಿಂಗ್ ಕಾಮಗಾರಿ: ಮೇ 31 ರ ತನಕ ಪರ್ಯಾಯ ರಸ್ತೆ ಸಂಚಾರ ಸಲಹೆ
ರೆಸಿಡೆನ್ಸಿ ರಸ್ತೆ ವೈಟ್ ಟಾಪಿಂಗ್ ಕಾಮಗಾರಿ: ಮೇ 31 ರ ತನಕ ಪರ್ಯಾಯ ರಸ್ತೆ ಸಂಚಾರ ಸಲಹೆ

ಬೆಂಗಳೂರು ನಗರದ ಕೇಂದ್ರ ವಲಯದ ಪ್ರಮುಖ ಮಾರ್ಗ ರೆಸಿಡೆನ್ಸಿ ರಸ್ತೆ. ಇಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ಕಾರಣ ಮೇ 31ರವರೆಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ರಿಚ್ಮಂಡ್‌ ಜಂಕ್ಷನ್‌, ರಿಚ್ಮಂಡ್ ಮೇಲ್ಸೇತುವೆ, ಸೇಂಟ್‌ ಮಾರ್ಕ್ಸ್‌ ರಸ್ತೆ ಕಡೆಯಿಂದ ರೆಸಿಡೆನ್ಸಿ ರಸ್ತೆಯಲ್ಲಿ ಬಂದು ಎಚ್‌ಎಎಲ್‌, ಮಾರತ್ತಹಳ್ಳಿ ಕಡೆಗೆ ಸಂಚರಿಸುವ ವಾಹನ ಸವಾರರು, ಆಶೀರ್ವಾದಂ ಜಂಕ್ಷನ್‌, ಅನಿಲ್‌ ಕುಂಬ್ಳೆ ಜಂಕ್ಷನ್‌ ಮೂಲಕ ಮುಂದೆ ಸಾಗಬಹುದು ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.