ಬೆಂಗಳೂರು ನಗರ ಸಂಚಾರ: ನಾಲ್ಕೇ ಗಂಟೆಗಳಲ್ಲಿ 1757 ನಿಯಮ ಉಲ್ಲಂಘನೆ ಪ್ರಕರಣ, 88 ಲಕ್ಷ ರೂ ದಂಡ ಸಂಗ್ರಹಿಸಿದ ಸಂಚಾರ ಪೊಲೀಸರು
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ನಗರ ಸಂಚಾರ: ನಾಲ್ಕೇ ಗಂಟೆಗಳಲ್ಲಿ 1757 ನಿಯಮ ಉಲ್ಲಂಘನೆ ಪ್ರಕರಣ, 88 ಲಕ್ಷ ರೂ ದಂಡ ಸಂಗ್ರಹಿಸಿದ ಸಂಚಾರ ಪೊಲೀಸರು

ಬೆಂಗಳೂರು ನಗರ ಸಂಚಾರ: ನಾಲ್ಕೇ ಗಂಟೆಗಳಲ್ಲಿ 1757 ನಿಯಮ ಉಲ್ಲಂಘನೆ ಪ್ರಕರಣ, 88 ಲಕ್ಷ ರೂ ದಂಡ ಸಂಗ್ರಹಿಸಿದ ಸಂಚಾರ ಪೊಲೀಸರು

ಬೆಂಗಳೂರು ನಗರ ಸಂಚಾರ: ನಾಲ್ಕೇ ಗಂಟೆಗಳಲ್ಲಿ 1757 ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿಕೊಂಡ ಬೆಂಗಳೂರು ಸಂಚಾರ ಪೊಲೀಸರು, 88 ಲಕ್ಷ ರೂಪಾಯಿ ದಂಡ ಸಂಗ್ರಹಿಸಿದರು. ಪ್ರತ್ಯೇಕ ಪ್ರಕರಣ ಒಂದರಲ್ಲಿ ಮನೆಯ ಹೂಕುಂಡದಲ್ಲಿ ಗಾಂಜಾ ಗಿಡ ಬೆಳೆದಿದ್ದ ದಂಪತಿಯನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದ್ದಾರೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು ಅಪರಾಧ ಸುದ್ದಿ; ಬೆಂಗಳೂರು ನಗರ ಸಂಚಾರ ಪೊಲೀಸರು ನಾಲ್ಕೇ ಗಂಟೆಗಳಲ್ಲಿ 1757 ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿ 88 ಲಕ್ಷ ರೂ ದಂಡ ಸಂಗ್ರಹಿಸಿದ್ದಾರೆ. ಪ್ರತ್ಯೇಕ ಪ್ರಕರಣ ಒಂದರಲ್ಲಿ ಮನೆಯ ಹೂಕುಂಡದಲ್ಲಿ ಗಾಂಜಾ ಗಿಡ ಬೆಳೆದಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.(ಸಾಂಕೇತಿಕ ಚಿತ್ರ)
ಬೆಂಗಳೂರು ಅಪರಾಧ ಸುದ್ದಿ; ಬೆಂಗಳೂರು ನಗರ ಸಂಚಾರ ಪೊಲೀಸರು ನಾಲ್ಕೇ ಗಂಟೆಗಳಲ್ಲಿ 1757 ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿ 88 ಲಕ್ಷ ರೂ ದಂಡ ಸಂಗ್ರಹಿಸಿದ್ದಾರೆ. ಪ್ರತ್ಯೇಕ ಪ್ರಕರಣ ಒಂದರಲ್ಲಿ ಮನೆಯ ಹೂಕುಂಡದಲ್ಲಿ ಗಾಂಜಾ ಗಿಡ ಬೆಳೆದಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.(ಸಾಂಕೇತಿಕ ಚಿತ್ರ)

ಬೆಂಗಳೂರು: ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧಶುಕ್ರವಾರ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದ ಬೆಂಗಳೂರು ಸಂಚಾರಿ ಪೊಲೀಸರು, ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ 1,757 ಪ್ರಕರಣಗಳನ್ನು ದಾಖಲಿಸಿ 88.6 ಲಕ್ಷ ರೂ ದಂಡ ಸಂಗ್ರಹಿಸಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಏಕಮುಖ ಸಂಚಾರದಲ್ಲಿ ವಾಹನ ಚಲಾಯಿಸುತ್ತಿದ್ದ ಪ್ರಕರಣಗಳೇ ಹೆಚ್ಚು ಕಂಡು ಬಂದಿವೆ. ಒನ್‌ ವೇ ಯಲ್ಲಿ ವಾಹನ ಚಲಾಯಿಸುತ್ತಿದ್ದ 739 ಹಾಗೂ ಹೆಲ್ಮೆಟ್‌ ಧರಿಸದ್ದಕ್ಕೆ 718 ಪ್ರಕರಣಗಳಲ್ಲಿ ದಂಡ ವಿಧಿಸಲಾಗಿದೆ. 3,395 ಶಾಲಾ ವಾಹನಗಳ ತಪಾಸಣೆ ನಡೆಸಲಾಗಿದ್ದು, ಇದರಲ್ಲಿ ಮದ್ಯ ಸೇವಿಸಿ ಕುಡಿದು ವಾಹನ ಚಲಾಯಿಸುತ್ತಿದ್ದ 24 ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಾಗಿದೆ. ಅನುಮತಿಗಿಂತ ಹೆಚ್ಚು ಮಕ್ಕಳನ್ನು ಸಾಗಿಸುತ್ತಿದ್ದಕ್ಕೆ 327 ಪ್ರಕರಣಗಳನ್ನು ದಾಖಲಿಸಿದ್ದಾರೆ. ಹೀಗೆ ಶಾಲಾ ಬಸ್‌ ಗಳಿಗೆ ಸಂಬಂಧಿಸಿದಂತೆ 327 ಪ್ರಕರಣಗಳನ್ನು ದಾಖಲಿಸಿ, 65,400 ರೂ. ದಂಡ ಸಂಗ್ರಹಿಸಿದ್ದಾರೆ.

ಕಳವು ಆಗಿದ್ದ ಬೈಕ್ ಪತ್ತೆ, ಆರೋಪಿಯ ಬಂಧನ

ವಿಶೇಷ ಕಾರ್ಯಾಚರಣೆ ನಡೆಸುವಾಗ ಸಬ್‌ ಇನ್‌ಸ್ಪೆಕ್ಟರ್‌ ಕುಮಾರಪ್ಪ ಅವರು ಕಳುವಾಗಿದ್ದ ವಾಹನವೊಂದು ಪತ್ತೆ ಹಚ್ಚಿದ್ದಾರೆ. ಕಳವು ಮಾಡಿ ಬೈಕ್‌ ಚಲಾಯಿಸುತ್ತಿದ್ದ ಸವಾರನನ್ನು ಬಂಧಿಸಿದ್ದಾರೆ. ಈತ ಒನ್‌ ವೇಯಲ್ಲಿ ವಾಹನ ಚಲಾಯಿಸುವಾಗ ಸಿಕ್ಕಿ ಬಿದ್ದಿದ್ದಾನೆ. ವಾಹನದ ದಾಖಲೆಗಳನ್ನು ಹಾಜರುಪಡಿಸಲು ಹೇಳಿದಾಗ ಈತನ ಬಳಿ ಯಾವುದೇ ದಾಖಲೆಗಳು ಇರುವುದಿಲ್ಲ. ನಂತರ ಕುಮಾರಪ್ಪ ಅವರು ವಾಹನದ ದಾಖಲೆಗಳನ್ನು ಪರಿಶೀಲಿಸಿದಾಗ ಕಳವು ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ವಿದ್ಯಾರಣ್ಯಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಬೈಕ್‌ ಕಳುವಾಗಿರುತ್ತದೆ ಎಂದು ದೂರು ದಾಖಲಾಗಿರುತ್ತದೆ. ಹೆಚ್ಚಿನ ವಿಚಾರಣೆಗಾಗಿ ವಾಹನ ಸವಾರರನ್ನು ವಿದ್ಯಾರಣ್ಯಪುರ ಪೊಲೀಸ್‌ ಠಾಣಾ ಪೊಲೀಸರಿಗೆ ಒಪ್ಪಿಸಲಾಗಿದೆ. ಇ ಬೈಕ್‌ ಗಳ ವಿರುದ್ದವೂ ಕಾರ್ಯಾಚರಣೆ ನಡೆದಿದೆ. ಈ ಪೈಕಿ ಒನ್‌ ವೇಯಲ್ಲಿ ವಾಹನ ಚಲಾಯಿಸುತ್ತಿದ್ದಕ್ಕಾಗಿ 141 ಮತ್ತು ಪಾದಾಚಾರಿ ರಸ್ತೆಯಲಿ ಚಲಾಯಿಸುತ್ತಿದ್ದಕ್ಕೆ 35 ಕೇಸ್‌ ಗಳನ್ನು ಹಾಕಲಾಗಿದೆ.

ಕುಂಡದಲ್ಲಿ ಗಾಂಜಾ ಗಿಡ ಬೆಳೆದಿದ್ದ ದಂಪತಿ ಬಂಧನ

ಮನೆಯ ತಾರಸಿ ಮೇಲೆ ಹೂವಿನ ಕುಂಡದಲ್ಲಿ ಗಾಂಜಾ ಗಿಡ ಬೆಳೆಸಿದ್ದ ದಂಪತಿಯನ್ನು ಸದಾಶಿವನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ನೇಪಾಳ ಮೂಲದ ಊರ್ಮಿಳಾ ಹಾಗೂ ಗುರುಂಗ್ ದಂಪತಿ ಗಾಂಜಾ ಬೆಳಸಿದ್ದ ಆರೋಪಿಗಳು. ಪೊಲೀಸರು ಠಾಣಾ ಜಾಮೀನಿನ ಮೇಲೆ ಇಬ್ಬರನ್ನೂ ಬಿಡುಗಡೆ ಮಾಡಿದ್ದಾರೆ. ಸದಾಶಿವನಗರದ ಎಮ್.ಎಸ್.ಆರ್. ನಗರದಲ್ಲಿ ವಾಸವಾಗಿದ್ದ ದಂಪತಿಯು ಮನೆಯ ಬಾಲ್ಕನಿಯಲ್ಲಿ ಕುಂಡಗಳಲ್ಲಿ ಹೂಗಿಡಗಳನ್ನು ಬೆಳೆಸಿದ್ದರು. ಒಂದರಲ್ಲಿ ಗಾಂಜಾ ಗಿಡ ಬೆಳಸಿದ್ದರು.

ಇತ್ತೀಚಿಗೆ ಊರ್ಮಿಳಾ ಮನೆಯ ಬಾಲ್ಕನಿಯಲ್ಲಿ ಕುಂಡಗಳ ಹಿನ್ನೆಲೆಯಲ್ಲಿ ರೀಲ್ಸ್ ಮಾಡಿ ಪೋಸ್ಟ್ ಮಾಡಿದ್ದರು. ಊರ್ಮಿಳಾ ಮಾಡಿದ್ದ ರೀಲ್ಸ್ ನಲ್ಲಿ ಗಾಂಜಾ ಗಿಡ ಕಾಣಿಸಿಕೊಂಡಿದೆ. ಈ ವಿಡಿಯೋ ನೋಡಿದ ವ್ಯಕ್ತಿಯೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಪರಿಶೀಲನೆ ನಡೆಸಿದಾಗ ಗಾಂಜಾ ಗಿಡ ಪತ್ತೆಯಾಗಿದೆ. ಪೊಲೀಸರು 54 ಗ್ರಾಂ ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡಿದ್ದಾರೆ.

ನಕಲಿ ಉತ್ಪನ್ನಗಳ ತಯಾರಿಕೆ: ಇಬ್ಬರ ಬಂಧನ

ಶೌಚಾಲಯ ಸ್ವಚ್ಛತೆಗೆ ಬಳಸುವ ಲೈಜಾಲ್‌ ಮತ್ತು ಹಾರ್ಪಿಕ್‌ ಗಳ ನಕಲಿ ಉತ್ಪನ್ನ ತಯಾರಿಕಾ ಗೋದಾಮಿನ ಮೇಲೆ ದಾಳಿ ನಡೆಸಿರುವ ಸಿಸಿಬಿ ಮತ್ತು ಜೀವನ್‌ ಭೀಮಾನಗರ ಪೊಲೀಸರು ದಾಳಿ ನಡೆಸಿ ಭಾರಿ ಪ್ರಮಾಣದ ನಕಲಿ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ದಂಧೆಯಲ್ಲಿ ತೊಡಗಿದ್ದ ಅನಿಲ್‌ ಪಟೇಲ್‌ ಮತ್ತು ಅನಂತ್‌ ಪಟೇಲ್‌ ಎಂಬುವರನ್ನು ಬಂಧಿಸಲಾಗಿದೆ. ಜೀವನ್‌ ವಿಮಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳು ಬೆಂಗಳೂರಿನ ಹೊರವಲಯದ ಆವಲಹಳ್ಳಿಯಲ್ಲಿ ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ಸ್ವಚ್ಛತಾ ಉತ್ಪನ್ನಗಳ್ನು ತಯಾರಿಸಿ ನಕಲಿ ಲೇಬಲ್‌ ಅಂಟಿಸಿ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಲೈಜಾಲ್ ಹಾರ್ಪಿಕ್‌, ವಿಮ್‌ ಲಿಕ್ವಿಡ್‌ ಗಳು ಹಾಗೂ ಎರಡು ಸರಕು ಸಾಗಾಣೆ ವಾಹನಗಳು ತಯಾರಿಕಾ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

(ವರದಿ- ಎಚ್.ಮಾರುತಿ, ಬೆಂಗಳೂರು)

Whats_app_banner