ಇಂದು ಬಳ್ಳಾರಿ ರಸ್ತೆಯಲ್ಲಿ ಸಂಚರಿಸುವ ಯೋಜನೆ ಇದೆಯೇ? ಅರಮನೆ ಮೈದಾನದಲ್ಲಿ ಕಾರ್ಯಕ್ರಮ; ಸಂಚಾರ ಮಾರ್ಗದಲ್ಲಿ ಬದಲಾವಣೆ
ಕನ್ನಡ ಸುದ್ದಿ  /  ಕರ್ನಾಟಕ  /  ಇಂದು ಬಳ್ಳಾರಿ ರಸ್ತೆಯಲ್ಲಿ ಸಂಚರಿಸುವ ಯೋಜನೆ ಇದೆಯೇ? ಅರಮನೆ ಮೈದಾನದಲ್ಲಿ ಕಾರ್ಯಕ್ರಮ; ಸಂಚಾರ ಮಾರ್ಗದಲ್ಲಿ ಬದಲಾವಣೆ

ಇಂದು ಬಳ್ಳಾರಿ ರಸ್ತೆಯಲ್ಲಿ ಸಂಚರಿಸುವ ಯೋಜನೆ ಇದೆಯೇ? ಅರಮನೆ ಮೈದಾನದಲ್ಲಿ ಕಾರ್ಯಕ್ರಮ; ಸಂಚಾರ ಮಾರ್ಗದಲ್ಲಿ ಬದಲಾವಣೆ

ಬೆಂಗಳೂರಿನ ಅರಮನೆ ಮೈದಾನ ಸುತ್ತಮುತ್ತ ಭಾನುವಾರ (ಫೆ.9) ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಪ್ರಯಾಣಿಕರಿಗೆ ಸುಲಭವಾಗುವಂತೆ ಬದಲಿ ರಸ್ತೆಗಳ ಮಾಹಿತಿ ಇಲ್ಲಿದೆ. (ವರದಿ: ಎಚ್.‌ ಮಾರುತಿ, ಬೆಂಗಳೂರು)

ಪ್ರಯಾಣಿಕರೇ ಗಮನಿಸಿ: ಬಳ್ಳಾರಿ ರಸ್ತೆಯಲ್ಲಿ ವಾಹನ ನಿಲುಗಡೆ, ಸಂಚಾರ ಮಾರ್ಗದಲ್ಲಿ ಬದಲಾವಣೆ (File Photo)
ಪ್ರಯಾಣಿಕರೇ ಗಮನಿಸಿ: ಬಳ್ಳಾರಿ ರಸ್ತೆಯಲ್ಲಿ ವಾಹನ ನಿಲುಗಡೆ, ಸಂಚಾರ ಮಾರ್ಗದಲ್ಲಿ ಬದಲಾವಣೆ (File Photo) (PTI)

ಬೆಂಗಳೂರು: ಬಳ್ಳಾರಿ ರಸ್ತೆಯ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಇಂದು (ಭಾನುವಾರ, ಫೆ. 09) ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮಗಳಿಗೆ ರಾಜ್ಯದ ವಿವಿಧ ಭಾಗಗಳಿಂದ ಒಂದು ಲಕ್ಷಕ್ಕೂ ಹೆಚ್ಚ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದ್ದು, ಕಾರ್ಯಕ್ರಮ ನಡೆಯುವ ಸ್ಥಳ ಮತ್ತು ಸುತ್ತಮುತ್ತಲಿನ ರಸ್ತೆಗಳಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಸಂಚಾರ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದಾರೆ.

ಅರಮನೆ ರಸ್ತೆ, ಎಂ.ವಿ. ಜಯರಾಮ ರಸ್ತೆ, ಜಯಮಹಲ್ ರಸ್ತೆ, ಸರ್ ಸಿ.ವಿ. ರಾಮನ್‌ ರಸ್ತೆ, ಬಳ್ಳಾರಿ ರಸ್ತೆ, ರಮಣಮಹರ್ಷಿ ರಸ್ತೆ, ನಂದಿದುರ್ಗ ರಸ್ತೆ, ತರಳಬಾಳು ರಸ್ತೆಯಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ನಗರದ ಒಳಭಾಗದಿಂದ ಕಾರ್ಯಕ್ರಮಕ್ಕೆ ಬರುವ ವಾಹನಗಳು ವಿಂಡ್ಸರ್‌ ಮ್ಯಾನರ್ ಜಂಕ್ಷನ್-ಬಿಡಿಎ ಅಪ್ ರ್ಯಾಂಪ್ -ರಮಣ ಮಹರ್ಷಿ ರಸ್ತೆ, ಪಿ.ಜಿ.ಹಳ್ಳಿ ಬಸ್ ನಿಲ್ದಾಣ - ಕಾವೇರಿ ಜಂಕ್ಷನ್-ಮೇಕ್ರಿ ಸರ್ಕಲ್ ಸರ್ವಿಸ್ ರಸ್ತೆ-ಮೇಕ್ರಿ ಸರ್ಕಲ್ ಬಳಿ ಯೂ ತಿರುವು ಪಡೆದು ಮೇಕ್ರಿ ಸರ್ಕಲ್ ಸರ್ವಿಸ್ ರಸ್ತೆಯಲ್ಲಿ ಸಾಗಿ, ಅರಮನೆ ಮೈದಾನದ ಗೇಟ್ ನಂ 1 ಕೃಷ್ಣ ವಿಹಾರ, ಗೇಟ್ ನಂಬರ್ 4 ಗಾಯತ್ರಿ ವಿಹಾರ್ ಮತ್ತು ಗೇಟ್ ನಂಬರ್ 5 ಕಿಂಗ್ಸ್ ಕೋರ್ಟ್‌ಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಿ, ಬಳಿಕ ಕಾರ್ಯಕ್ರಮದ ಸ್ಥಳ ತಲುಪಬೇಕು.

ನಿರ್ಗಮನ: ಅರಮನೆ ಮೈದಾನದ ಗೇಟ್‌ ನಂ-1ರಲ್ಲಿ ವಾಹನ ನಿಲುಗಡೆ ಮಾಡಿರುವವರು ಅಮಾನುಲ್ಲಾ ಖಾನ್‌ ಗೇಟ್‌ ಮೂಲಕ ಜಯಮಹಲ್ ರಸ್ತೆಯಲ್ಲಿ ಸಂಚರಿಸಬಹುದು. ಗೇಟ್‌ ನಂ-4 ಮತ್ತು ಗೇಟ್‌ ನಂ-5ರಲ್ಲಿ ವಾಹನ ನಿಲುಗಡೆ ಮಾಡಿರುವವರು ಸರ್ಕಸ್ ಗೇಟ್ ಮೂಲಕ ಹೊರಬಂದು ಜಯಮಹಲ್ ರಸ್ತೆ ಮೂಲಕ ಸಂಚರಿಸಬಹುದು.

ಬಳ್ಳಾರಿ ರಸ್ತೆ ಹೆಬ್ಬಾಳ ಕಡೆಯಿಂದ ಬರುವ ವಾಹನಗಳು ಮೇಕ್ರಿ ಸರ್ಕಲ್ ಸರ್ವಿಸ್ ರಸ್ತೆಯಲ್ಲಿ ಎಡ ತಿರುವು ಪಡೆದು, ಜಯಮಹಲ್‌ ರಸ್ತೆಯಲ್ಲಿ ಬಂದು ಅರಮನೆ ಮೈದಾನದ ಸರ್ಕಸ್ ಗೇಟ್‌ನಲ್ಲಿ ವಾಹನಗಳ ನಿಲುಗಡೆ ಮಾಡಿ, ಕಾರ್ಯಕ್ರಮದ ಸ್ಥಳಕ್ಕೆ ತೆರಳಬಹುದು.

ನಿರ್ಗಮನ: ಅರಮನೆ ಮೈದಾನದ ಸರ್ಕಸ್ ಗೇಟ್‌ನಲ್ಲಿ ನಿಲುಗಡೆ ಮಾಡಿರುವ ವಾಹಗಳು ಸರ್ಕಸ್ ಗೇಟ್ ಜಯಮಹಲ್ ರಸ್ತೆಯಲ್ಲಿ ಬಂದು ಮೇಕ್ರಿ ಸರ್ಕಲ್ ಮೂಲಕ ಸಂಚರಿಸಬಹುದಾಗಿದೆ.

ಯಶವಂತಪುರ ಕಡೆಯಿಂದ ಬರುವ ವಾಹನಗಳು ಸರ್ ಸಿ.ವಿ.ರಾಮನ್ ರಸ್ತೆಯ ಬಿ.ಎಚ್.ಇ.ಎಲ್ ಸರ್ಕಲ್ - ಸದಾಶಿವನಗರ ಪಿ.ಎಸ್.ಜಂಕ್ಷನ್ - ಮೇಕ್ರಿ ಸರ್ಕಲ್ ಬಳಿ ಬಲ ತಿರುವು ಪಡೆದುಕೊಳ್ಳಬೇಕು. ಮೇಕ್ರಿ ಸರ್ಕಲ್ - ಜಯಮಹಲ್‌ ರಸ್ತೆಯಲ್ಲಿ ಸಾಗಿ ಸರ್ಕಸ್‌ ಗೇಟ್‌ ಅರಮನೆ ಮೈದಾನದಲ್ಲಿ ವಾಹನ ನಿಲುಗಡೆ ಮಾಡಿ ಕಾಲ್ನಡಿಗೆಯಲ್ಲಿ ಕಾರ್ಯಕ್ರಮದ ಸ್ಥಳಕ್ಕೆ ತೆರಳಬಹುದಾಗಿದೆ.

ನಿರ್ಗಮನ: ಅರಮನೆ ಮೈದಾನದ ಸರ್ಕಸ್ ಗೇಟ್‌ನಲ್ಲಿ ನಿಲುಗಡೆ ಮಾಡಿರುವ ವಾಹಗಳು ಸರ್ಕಸ್ ಗೇಟ್ ಜಯಮಹಲ್ ರಸ್ತೆಯಲ್ಲಿ ಹೊರಬಂದು ಮೇಕ್ರಿ ಸರ್ಕಲ್ ಮೂಲಕ ಸಂಚರಿಸಬಹುದಾಗಿದೆ.

ಟೆಂಪೋ ಟ್ರಾವೆಲರ್, ಕಾರುಗಳು ಮತ್ತು ದ್ವಿಚಕ್ರ ವಾಹನಗಳಲ್ಲಿ ಬರುವವರು

ನಗರದ ಒಳಭಾಗದಿಂದ ಕಾರ್ಯಕ್ರಮಕ್ಕೆ ಬರುವ ವಾಹನಗಳು ವಿಂಡರ್‌ಮ್ಯಾನರ್‌ ಜಂಕ್ಷನ್-ಬಿ.ಡಿ.ಎ ಅಪ್‌ಲ್ಯಾಂಪ್‌-ರಮಣ ಮಹರ್ಷಿ ರಸ್ತೆ, ಪಿ.ಜಿ.ಹಳ್ಳಿ ಬಸ್‌ ನಿಲ್ದಾಣ-ಕಾವೇರಿ ಜಂಕ್ಷನ್ - ಮೇಕ್ರಿ ಸರ್ಕಲ್ ಸರ್ವಿಸ್ ರಸ್ತೆ-ಮೇಕ್ರಿ ಸರ್ಕಲ್ ಯೂ ತಿರುವು ಪಡೆದು ಮೇಕ್ರಿ ಸರ್ಕಲ್ ಸರ್ವಿಸ್ ರಸ್ತೆಯಲ್ಲಿ ಸಾಗಿ, ಗೇಟ್ ನಂ -1 ಕೃಷ್ಣ ವಿಹಾರ್ ಅರಮನೆ ಮೈದಾನದಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದು.

ನಿರ್ಗಮನ: ಅರಮನೆ ಮೈದಾನದ ಗೇಟ್ ನಂ-1 ಕೃಷ್ಣ ವಿಹಾರ್‌ನಲ್ಲಿ ಪಾರ್ಕಿಂಗ್‌ ಮಾಡಿರುವವರು, ಅಮಾನುಲ್ಲಾ ಖಾನ್ ಗೇಟ್, ಜಯಮಹಲ್ ರಸ್ತೆ, ಮೇಕ್ರಿ ಸರ್ಕಲ್‌ ಮೂಲಕ ಸಂಚರಿಸಬಹುದು.

  • ವರದಿ: ಎಚ್.‌ ಮಾರುತಿ, ಬೆಂಗಳೂರು

ಬೆಂಗಳೂರು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner