ಕನ್ನಡ ಸುದ್ದಿ  /  Karnataka  /  Bengaluru Traffic Rules: President Of India Droupadi Murmu Arrival In Bangalore Changes In Road Traffic Rules Traffic Restriction On These Roads Ukushi

Bengaluru Traffic Rules: ರಾಷ್ಟ್ರಪತಿ ಇಂದು ಸಂಜೆ ಬೆಂಗಳೂರಿಗೆ; ಸಂಚಾರ ನಿಯಮ ವ್ಯತ್ಯಾಸ; ಎಲ್ಲಿ ಏನು ಬದಲಾವಣೆ ಇಲ್ಲಿದೆ ವಿವರ

Bengaluru Traffic Rules: ಮೈಸೂರಿನಲ್ಲಿ ನಾಡಹಬ್ಬ ದಸರಾ 2022ಕ್ಕೆ ಚಾಲನೆ ನೀಡಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ರಾಜ್ಯ ರಾಜಧಾನಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಗಳ ಸಂಚಾರ ನಿಯಮಗಳು ವ್ಯತ್ಯಾಸವಾಗಲಿದೆ. ಈ ಕುರಿತು ಮಾಹಿತಿ ಇಲ್ಲಿದೆ.

Bangalore traffic rules: ಮೈಸೂರಿನಲ್ಲಿ ನಾಡಹಬ್ಬ ದಸರಾ 2022ಕ್ಕೆ ಚಾಲನೆ ನೀಡಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ರಾಜ್ಯ ರಾಜಧಾನಿ ಬೆಂಗಳೂರಿಗೆ ಆಗಮಿಸುತ್ತಿರುವ ಕಾರಣ ಪ್ರಮುಖ ರಸ್ತೆಗಳ ಸಂಚಾರ ನಿಯಮಗಳು ವ್ಯತ್ಯಾಸವಾಗಲಿದೆ.
Bangalore traffic rules: ಮೈಸೂರಿನಲ್ಲಿ ನಾಡಹಬ್ಬ ದಸರಾ 2022ಕ್ಕೆ ಚಾಲನೆ ನೀಡಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ರಾಜ್ಯ ರಾಜಧಾನಿ ಬೆಂಗಳೂರಿಗೆ ಆಗಮಿಸುತ್ತಿರುವ ಕಾರಣ ಪ್ರಮುಖ ರಸ್ತೆಗಳ ಸಂಚಾರ ನಿಯಮಗಳು ವ್ಯತ್ಯಾಸವಾಗಲಿದೆ.

ಬೆಂಗಳೂರು: ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರು ಇಂದು ಸಂಜೆ ರಾಜ್ಯ ರಾಜಧಾನಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ತನ್ನಿಮಿತ್ತವಾಗಿ ಬೆಂಗಳೂರಿನ ಸಂಚಾರ ನಿಯಮ ( Bengaluru Traffic Rules)ಗಳಲ್ಲಿ ತಾತ್ಕಾಲಿಕ ಬದಲಾವಣೆ ಆಗಲಿದೆ. ಈ ನಿಯಮಗಳು ಸೆ.25ರಿಂದ ಸೆ.27ರವರೆಗೆ ಜಾರಿಯಲ್ಲಿರಲಿದೆ.

ಕೆಲವೊಂದು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧಗಳನ್ನು ಹೇರಲಾಗಿದೆ. ಈ ಬಗ್ಗೆ ಸಾರ್ವಜನಿಕರು ಗಮನಹರಿಸಿ ವಾಹನದಲ್ಲಿ ಸಂಚರಿಸಬೇಕು ಎಂದು ಬೆಂಗಳೂರು ಟ್ರಾಫಿಕ್‌ ಪೊಲೀಸರು ಮನವಿ ಮಾಡಿದ್ದಾರೆ.

ಸಂಚಾರ ನಿರ್ಬಂಧ ಎಲ್ಲೆಲ್ಲಿ ಎಷ್ಟು ಹೊತ್ತು?

ಹಳೇ ವಿಮಾನ ನಿಲ್ದಾಣ ರಸ್ತೆ- ಎಂ.ಜಿ.ರೂಡ್- ಡಿಕನ್ಸನ್ ರಸ್ತೆ- ಕೆ.ಆರ್.ರಸ್ತೆ – ಕಬ್ಬನ್ ರಸ್ತೆ ಮತ್ತು ರಾಜಭವನ ರಸ್ತೆಗಳಲ್ಲಿ ಸಂಚಾರ ನಿರ್ಬಂಧ - ಸೆ.26ರ ಸಂಜೆ 5.30ರಿಂದ 6 ಗಂಟೆಯವರೆಗೆ

ರಾಜಭವನ ರಸ್ತೆ- ಇನ್​ಫೆಂಟ್ರಿ ರಸ್ತೆ- ಕೆ.ಆರ್.ರಸ್ತೆ – ಕಬ್ಬನ್ ರಸ್ತೆ- ಡಿಕನ್ಸನ್ ರಸ್ತೆ – ಎಂ.ಜಿ.ರೋಡ್ – ಹಳೇ ವಿಮಾನ ನಿಲ್ದಾಣ ರಸ್ತೆ ಮತ್ತು ಸುರಂಜನ್​ದಾಸ್ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಇದೆ - ಸೆ.27ರಂದು ಬೆಳಗ್ಗೆ 9.30ರಿಂದ 11.30ರ ವರೆಗೆ

ರಾಜಭವನ ರಸ್ತೆ- ಇನ್​ಫೆಂಟ್ರಿ ರಸ್ತೆ- ಕೆ.ಆರ್.ರಸ್ತೆ – ಕಬ್ಬನ್ ರಸ್ತೆ – ಡಿಕನ್ಸನ್ ರಸ್ತೆ- ಎಂ.ಜಿ.ರಸ್ತೆ ಮತ್ತು ಹಳೇ ವಿಮಾನ ನಿಲ್ದಾಣ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಇದೆ - ಸೆ.28ರಂದು ಬೆಳಗ್ಗೆ 9.00 ಗಂಟೆಯಿಂದ 9.30ರ ವರೆಗೆ

ಇದಲ್ಲದೆ, ಸುಗಮ ಸಂಚಾರ ಮತ್ತು ಸುರಕ್ಷತೆ ದೃಷ್ಟಿಯಿಂದ ಕಬ್ಬನ್ ಪಾರ್ಕ್ ಮತ್ತು ಅಶೋಕನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲವು ಏಕಮುಖ ರಸ್ತೆ (One Way Road)ಗಳನ್ನು ತಾತ್ಕಾಲಿಕವಾಗಿ ದ್ವಿಮುಖ ರಸ್ತೆ (Two Way Road)ಗಳನ್ನಾಗಿ ಮಾರ್ಪಡಿಸಲಾಗಿದೆ.

ವಿಧಾನಸೌಧದ ನಿರ್ಗಮನ ದ್ವಾರ (ಗೇಟ್ ನಂ.4)ದಲ್ಲಿ ಪ್ರವೇಶ ನಿಷೇಧವಿದ್ದು, ಸೆ.27ರ ವರೆಗೆ ರಾಷ್ಟ್ರಪತಿಯವರು ಸಂಚರಿಸುವ ಸಮಯದಲ್ಲಿ ಮುಕ್ತ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿದೆ.

ರಾಜಭವನ ರಸ್ತೆಯನ್ನು ರಾಜಭವನ ಮುಖ್ಯದ್ವಾರದಿಂದ ಪೊಲೀಸ್ ತಿಮ್ಮಯ್ಯ ವೃತ್ತದವರೆಗೆ ತಾತ್ಕಾಲಿಕವಾಗಿ ದ್ವಿಮುಖ ಸಂಚಾರ ರಸ್ತೆಯನ್ನಾಗಿ ಮಾರ್ಪಡಿಸಲಾಗಿದೆ.

ರಿಚ್ಮಂಡ್ ರಸ್ತೆಯಲ್ಲಿ ರಿಚ್ಮಂಡ್ ವೃತ್ತದಿಂದ ಬಾಲ್ಡ್​ವಿನ್ ಬಾಲಕಿಯರ ಶಾಲೆಯ ವೃತ್ತದವರೆಗೆ ತಾತ್ಕಾಲಿಕವಾಗಿ ದ್ವಿಮುಖ ಸಂಚಾರ ರಸ್ತೆಯನ್ನಾಗಿ ಮಾರ್ಪಡಿಸಲಾಗಿದೆ. ರಾಷ್ಟ್ರಪತಿಯವರು ಸಂಚರಿಸುವ ಸಮಯದಲ್ಲಿ ಮಾತ್ರ ಈ ಅನುಕೂಲ ಇರಲಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ ಬೆಂಗಳೂರು ಸಂಚಾರ ನಿಯಮಗಳ ಕುರಿತು ಪ್ರಕಟವಾದ ಗಮನಾರ್ಹ ಸುದ್ದಿಗಳು ಇಲ್ಲಿವೆ

ಬೆಂಗಳೂರಿನಲ್ಲಿ ವಾಹನಗಳ ದಟ್ಟಣೆ ಹೆಚ್ಚಿದ್ದು, ನಗರಗಳ ಪ್ರಮುಖ ಭಾಗಗಳಲ್ಲಿ ಕಾರು ಅಥವಾ ಬೈಕ್‌ ಪಾರ್ಕಿಂಗ್‌ ಮಾಡುವುದೇ ದೊಡ್ಡ ಸಮಸ್ಯೆಯಾಗಿರುತ್ತದೆ. ನಿಗದಿತ ಪಾರ್ಕಿಂಗ್‌ ಸ್ಥಳ ಎಲ್ಲೋ ದೂರದಲ್ಲಿರುವುದರಿಂದ ರಸ್ತೆ ಬದಿಯಲ್ಲಿ ಅಥವಾ ಫುಟ್‌ಪಾತ್‌ನಲ್ಲಿ ವಾಹನ ಪಾರ್ಕಿಂಗ್‌ ಮಾಡುವುದು ಸಾಮಾನ್ಯವಾಗಿದೆ. ಆದರೆ, ಈ ರೀತಿ ನಿರ್ಬಂಧಿತ ಸ್ಥಳಗಳಲ್ಲಿ ವಾಹನ ಪಾರ್ಕಿಂಗ್‌ ಮಾಡಿದರೆ ದಂಡ ಮಾತ್ರವಲ್ಲದೆ ಜೈಲೂಟವೂ ಗ್ಯಾರಂಟಿ. Bangalore traffic rules: ಬೆಂಗಳೂರಲ್ಲಿ ಫುಟ್‌ಪಾತ್‌ ಮೇಲೆ ಪಾರ್ಕಿಂಗ್‌ ಮಾಡಿದರೆ ಜೈಲು

Bengaluru Traffic: ಬೆಂಗಳೂರು ಅಂದರೆ ಟ್ರಾಫಿಕ್‌. ಇಲ್ಲಿ ಸಂಚರಿಸುವವರು ಟ್ರಾಫಿಕ್‌ ಸಂಕೇತಗಳ ಕಡೆಗೂ ಗಮನಹರಿಸುವುದು ಅನಿವಾರ್ಯ. ಬೆಂಗಳೂರಿನಲ್ಲಿ ಕೆಲವೆಡೆ ಹೊಸ ಸಂಚಾರ ಸಂಕೇತ (Traffic Sign) ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಇದೇನಿದು ಎಂದು ಟ್ವಿಟರ್‌ನಲ್ಲಿ ಬೆಂಗಳೂರು ಸಂಚಾರ ಪೊಲೀಸ(BTP)ರನ್ನು ಕೇಳಿದ್ದಾರೆ. ಅದಕ್ಕೆ ಅವರು ನೀಡಿದ ವಿವರಣೆ ಹೀಗಿದೆ ನೋಡಿ. Bengaluru Traffic: ಇದೇನಿದು ಹೊಸ ಸಂಚಾರ ಸಂಕೇತ? ಟ್ರಾಫಿಕ್‌ ಪೊಲೀಸ್‌ ವಿವರಣೆ ಹೀಗಿದೆ ನೋಡಿ