ಬೆಂಗಳೂರಲ್ಲಿ ಸಂಚಾರ ನಿಯಮ ಪಾಲಿಸದೇ ಇದ್ರೆ ದಂಡ ಬೀಳುತ್ತೆ, 11340 ಕೇಸ್‌ ದಾಖಲಿಸಿ 69 ಲಕ್ಷ ರೂ ಸಂಗ್ರಹಿಸಿದ ಪೊಲೀಸರು
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಲ್ಲಿ ಸಂಚಾರ ನಿಯಮ ಪಾಲಿಸದೇ ಇದ್ರೆ ದಂಡ ಬೀಳುತ್ತೆ, 11340 ಕೇಸ್‌ ದಾಖಲಿಸಿ 69 ಲಕ್ಷ ರೂ ಸಂಗ್ರಹಿಸಿದ ಪೊಲೀಸರು

ಬೆಂಗಳೂರಲ್ಲಿ ಸಂಚಾರ ನಿಯಮ ಪಾಲಿಸದೇ ಇದ್ರೆ ದಂಡ ಬೀಳುತ್ತೆ, 11340 ಕೇಸ್‌ ದಾಖಲಿಸಿ 69 ಲಕ್ಷ ರೂ ಸಂಗ್ರಹಿಸಿದ ಪೊಲೀಸರು

ಬೆಂಗಳೂರಲ್ಲಿ ಸಂಚಾರ ನಿಯಮ ಪಾಲಿಸದೇ ಇದ್ರೆ ದಂಡ ಬೀಳುತ್ತೆ ಎಚ್ಚರ. ಬೆಂಗಳೂರು ಸಂಚಾರ ಪೊಲೀಸರು ನವೆಂಬರ್ 17ರಿಂದ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದು, 11340 ಕೇಸ್‌ ದಾಖಲಿಸಿ 69 ಲಕ್ಷ ರೂ ಸಂಗ್ರಹಿಸಿದ್ದಾರೆ. (ವರದಿ-ಎಚ್.ಮಾರುತಿ, ಬೆಂಗಳೂರು)

ಬೆಂಗಳೂರಲ್ಲಿ ಸಂಚಾರ ನಿಯಮ ಪಾಲಿಸದೇ ಇದ್ರೆ ದಂಡ ಬೀಳುತ್ತೆ, ಸೋಮವಾರ 11340 ಕೇಸ್‌ ದಾಖಲಿಸಿಕೊಂಡ ಬೆಂಗಳೂರು ಸಂಚಾರ ಪೊಲೀಸರು 69 ಲಕ್ಷ ರೂ ಸಂಗ್ರಹಿಸಿದ್ದಾರೆ. (ಸಾಂಕೇತಿಕ ಚಿತ್ರ)
ಬೆಂಗಳೂರಲ್ಲಿ ಸಂಚಾರ ನಿಯಮ ಪಾಲಿಸದೇ ಇದ್ರೆ ದಂಡ ಬೀಳುತ್ತೆ, ಸೋಮವಾರ 11340 ಕೇಸ್‌ ದಾಖಲಿಸಿಕೊಂಡ ಬೆಂಗಳೂರು ಸಂಚಾರ ಪೊಲೀಸರು 69 ಲಕ್ಷ ರೂ ಸಂಗ್ರಹಿಸಿದ್ದಾರೆ. (ಸಾಂಕೇತಿಕ ಚಿತ್ರ) (BTP)

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವ ವಾಹನ ಸವಾರರು ಹಾಗೂ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು ಮುಂದುವರೆಸಿರುವ ಬೆಂಗಳೂರು ನಗರ ಸಂಚಾರ ವಿಭಾಗದ ಪೊಲೀಸರು ಸೋಮವಾರವೂ ಮುಂದುವರೆಸಿದ್ದಾರೆ. ಸಂಚಾರ ಪೊಲೀಸರು ತಪ್ಪಿತಸ್ಥರ ವಿರುದ್ಧ 11,340 ಪ್ರಕರಣ ದಾಖಲಿಸಿಕೊಂಡು, 69.46 ಲಕ್ಷ ರೂಪಾಯಿ ದಂಡ ಸಂಗ್ರಹಿಸಿದ್ದಾರೆ. ಉತ್ತರ ವಿಭಾಗದ ಸಂಚಾರ ಪೊಲೀಸರು ಏಳು ದಿನ ನಡೆಸಿದ ಕಾರ್ಯಾಚರಣೆಯಲ್ಲಿ 9,912 ಪ್ರಕರಣ ದಾಖಲಿಸಿಕೊಂಡು, ‍66.46 ಲಕ್ಷ ದಂಡ ಸಂಗ್ರಹಿಸಿದ್ದಾರೆ.

ಉತ್ತರ ವಿಭಾಗದ ವ್ಯಾಪ್ತಿಯಲ್ಲಿ ಉಂಟಾಗುತ್ತಿರುವ ಅಪಘಾತಗಳನ್ನು ನಿಯಂತ್ರಿಸಲು ಮತ್ತು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಕಡಿವಾಣ ಹಾಕಲು ನವಂಬರ್ 17ರಿಂದ 23ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಒಂದು ವಾರದ ಕಾಲ ಪ್ರತಿದಿನ ಬೆಳಿಗ್ಗೆ 11.30ರಿಂದ ಸಂಜೆ 4ರ ತನಕ ಕಾರ್ಯಾಚರಣೆ ನಡೆಸಿ ತಪ್ಪಿತಸ್ಥ ಚಾಲಕರನ್ನು ಪತ್ತೆಹಚ್ಚಿ ದಂಡ ಹಾಕಲಾಗಿದೆ ಎಂದು ಸಂಚಾರ ವಿಭಾಗದ ಪೊಲೀಸರು ಹೇಳಿದ್ದಾರೆ.

ಅತಿವೇಗದ ವಾಹನ ಸಂಚಾರ ಮಾಡುತ್ತಿದ್ದವರ ವಿರುದ್ಧ 154, ಮದ್ಯ ಸೇವಿಸಿ ಅಡ್ಡಾದಿಡ್ಡಿ ಚಾಲನೆಯ 12, ಅತಿವೇಗದ ವಾಹನ ಸಂಚಾರ 154, ನಿಗದಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದವರ ವಿರುದ್ಧ 107, ಮದ್ಯ ಸೇವಿಸಿ ಚಾಲನೆ 223, ಸೈಲೆನ್ಸರ್ ಮಾರ್ಪಾಡು ಮಾಡಿದ್ದವರ ವಿರುದ್ಧ 8, ಕರ್ಕಶ ಹಾರ್ನ್ ಅಳವಡಿಸಿದ್ದವರ ವಿರುದ್ಧ 8, ಡಿಎಲ್‌ ಇಲ್ಲದವರ ವಿರುದ್ಧ 134, ಸಿಗ್ನಲ್‌ ಜಂಪ್‌ ಮಾಡಿದ್ದವರ ವಿರುದ್ಧ 92, ನಿಷೇಧಿತ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಿದ್ದ 337, ನಿರ್ಬಂಧಿತ ರಸ್ತೆಗಳಲ್ಲಿ ವಾಹನ ಸಂಚಾರ ಮಮಾಡುತ್ತಿದ್ದ 1,495, ಸಮವಸ್ತ್ರರಹಿತ ವಾಹನ ಚಾಲನೆ 107, ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ಮಾಡಿದ್ದ 117, ದ್ವಿಚಕ್ರ ವಾಹನಗಳಲ್ಲಿ ಮೂವರು ಕುಳಿತು ಸವಾರಿ ಮಾಡುತ್ತಿದ್ದವರ ವಿರುದ್ಧ 154, ಸೀಟ್ ಬೆಲ್ಟ್ ರಹಿತ ಚಾಲನೆಗಾಗಿ 301, ಹೆಲ್ಮಟ್‌ರಹಿತ ಚಾಲನೆಗಾಗಿ 1,194 ಸೇರಿದಂತೆ ಒಟ್ಟು 9,912 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ಪೂರ್ವ ವಿಭಾಗದಲ್ಲೂ ಕಾರ್ಯಾಚರಣೆ ನಡೆಸಿದ ಪೊಲೀಸರು, ನಿಯಮ ಉಲ್ಲಂಘಿಸಿದ ವಾಹನ ಸವಾರರು ಹಾಗೂ ಚಾಲಕರ ವಿರುದ್ಧ ಒಟ್ಟು 626 ಪ್ರಕರಣ ದಾಖಲಿಸಿ ರೂ. 73.13 ಲಕ್ಷ ದಂಡ ಸಂಗ್ರಹಿಸಿದ್ದಾರೆ. ಸಂಚಾರ ವಿಭಾಗದ 50 ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದವರ ವಿರುದ್ಧ 802 ಪ್ರಕರಣಗಳನ್ನು ದಾಖಲಿಸಲಾಗಿದೆ.

ಪತ್ನಿ ಕೊಂದು ಮಗುವಿನೊಂದಿಗೆ ಪರಾರಿಯಾದ ಪತಿರಾಯ

ಪತ್ನಿಯ ಕುತ್ತಿಗೆಯನ್ನು ದುಪ್ಪಟ್ಟಾದಿಂದ ಬಿಗಿದು ಕೊಲೆ ಮಾಡಿ ನಾಲ್ಕು ವರ್ಷದ ಮಗುವಿನೊಂದಿಗೆ ಪರಾರಿಯಾಗಿರುವ ಪ್ರಕರಣ ಗಂಗೊಂಡನಹಳ್ಳಿಯಲ್ಲಿ ನಡೆದಿದೆ. ಗಂಗೊಂಡನಹಳ್ಳಿಯ ಮೂರನೇ ಮುಖ್ಯರಸ್ತೆಯ ನಿವಾಸಿ ಗೌಸಿಯಾ ಎಂಬುವರನ್ನು ಆಕೆಯ ಪತಿ ಇಮ್ರಾನ್ ಖಾನ್ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈ ಸಂಬಂಧ ಚಂದ್ರಾ ಲೇಔಟ್ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೌಸಿಯಾ ಅವರ ಸಹೋದರ ಜಮೀರ್ ಉಲ್ಲಾ ಖಾನ್ ನೀಡಿರುವ ದೂರಿನನ್ವಯ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇಮ್ರಾನ್ ಖಾನ್ ಗಂಗೊಂಡನಹಳ್ಳಿಯಲ್ಲೇ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ. ವಿವಾಹವಾದ ಹೊಸದರಲ್ಲಿ ದಂಪತಿ ಅನೋನ್ಯವಾಗಿದ್ದರು. ಆದರೆ ಇತ್ತೀಚೆಗೆ ಇಬ್ಬರ ನಡುವೆ ಸದಾ ಜಗಳ ನಡೆಯುತ್ತಿತ್ತು ಎಂದು ಗೌಸಿಯಾ ಸಹೋದರ ದೂರಿನಲ್ಲಿ ತಿಳಿಸಿದ್ದಾರೆ.

ಗಲಾಟೆಯಿಂದ ಬೇಸತ್ತು ಗೌಸಿಯಾ ಮಗುವಿನ ಜತೆ ತವರು ಮನೆಗೆ ಆಗಮಿಸಿ ವಾಸವಿದ್ದರು. ನಂತರ ಗಂಡನ ಮನೆಗೆ ತೆರಳಿದ್ದರು.ನಂತರವೂ ಗಲಾಟೆ ನಡೆದು ಆರೋಪಿ ಕೊಲೆ ಮಾಡಿದ್ದಾನೆ. ವೆಲ್ಡಿಂಗ್‌ ಶಾಪ್‌ ಮಾಲೀಕರ ಬಳಿ ಹಣ ಪಡೆದುಕೊಂಡಿದ್ದಾನೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.

(ವರದಿ- ಎಚ್.ಮಾರುತಿ, ಬೆಂಗಳೂರು)

Whats_app_banner