ಕರ್ನಾಟಕ ಹವಾಮಾನ: ಬೆಂಗಳೂರಲ್ಲಿ ಇಂದು ಕೂಡ ಮೋಡ ಕವಿದ ವಾತಾವರಣ, ಚಳಿ, ಕೋಲಾರ ಭಾಗದಲ್ಲಿ ಇಂದು ಮಳೆ ಸಾಧ್ಯತೆ, ಉಳಿದೆಡೆ ಚಳಿ, ಒಣಹವೆ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಹವಾಮಾನ: ಬೆಂಗಳೂರಲ್ಲಿ ಇಂದು ಕೂಡ ಮೋಡ ಕವಿದ ವಾತಾವರಣ, ಚಳಿ, ಕೋಲಾರ ಭಾಗದಲ್ಲಿ ಇಂದು ಮಳೆ ಸಾಧ್ಯತೆ, ಉಳಿದೆಡೆ ಚಳಿ, ಒಣಹವೆ

ಕರ್ನಾಟಕ ಹವಾಮಾನ: ಬೆಂಗಳೂರಲ್ಲಿ ಇಂದು ಕೂಡ ಮೋಡ ಕವಿದ ವಾತಾವರಣ, ಚಳಿ, ಕೋಲಾರ ಭಾಗದಲ್ಲಿ ಇಂದು ಮಳೆ ಸಾಧ್ಯತೆ, ಉಳಿದೆಡೆ ಚಳಿ, ಒಣಹವೆ

Weather forecast: ಬಂಗಾಳ ಕೊಲ್ಲಿಯಲ್ಲಿ ವಾಯಭಾರ ಕುಸಿತದ ಕಾರಣ ಕೋಲಾರ ಭಾಗದಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಸುತ್ತಮುತ್ತ ಮೋಡ ಕವಿದ ವಾತಾವರಣ ಮತ್ತು ಚಳಿ ಇರಲಿದೆ. ಉಳಿದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ, ಕೆಲವು ಕಡೆ ಚಳಿ ಇರುವ ಸಾಧ್ಯತೆ ಇದೆ ಎಂದು ಕರ್ನಾಟಕ ಹವಾಮಾನ ಮುನ್ಸೂಚನೆ ವರದಿ ಹೇಳಿದೆ.

ಕರ್ನಾಟಕ ಹವಾಮಾನ: ಬೆಂಗಳೂರಲ್ಲಿ ಇಂದು ಕೂಡ ಮೋಡ ಕವಿದ ವಾತಾವರಣ, ಚಳಿ ಅನುಭವಕ್ಕೆ ಬಂದೀತು.  ಕೋಲಾರ ಭಾಗದಲ್ಲಿ ಇಂದು ಮಳೆ ಸಾಧ್ಯತೆ ಇದ್ದು ಉಳಿದೆಡೆ ಚಳಿ, ಒಣಹವೆ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಮುನ್ಸೂಚನೆ ವರದಿ ತಿಳಿಸಿದೆ. (ಸಾಂಕೇತಿಕ ಚಿತ್ರ)
ಕರ್ನಾಟಕ ಹವಾಮಾನ: ಬೆಂಗಳೂರಲ್ಲಿ ಇಂದು ಕೂಡ ಮೋಡ ಕವಿದ ವಾತಾವರಣ, ಚಳಿ ಅನುಭವಕ್ಕೆ ಬಂದೀತು. ಕೋಲಾರ ಭಾಗದಲ್ಲಿ ಇಂದು ಮಳೆ ಸಾಧ್ಯತೆ ಇದ್ದು ಉಳಿದೆಡೆ ಚಳಿ, ಒಣಹವೆ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಮುನ್ಸೂಚನೆ ವರದಿ ತಿಳಿಸಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಬಂಗಾಳ ಕೊಲ್ಲಿ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ಸದ್ಯ ತಮಿಳು ನಾಡು, ಕೇರಳ ಭಾಗದಲ್ಲಿ ಮಳೆಯಾಗುತ್ತಿದೆ. ಇದರ ಪರಿಣಾಮ ಇಂದು (ನವೆಂಬರ್ 28) ಕೋಲಾರ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಮತ್ತು ಸುತ್ತ ಮುತ್ತ ಇಂದು ಮೋಡ ಕವಿದ ವಾತಾವರಣ ಇರಲಿದ್ದು, ಚಳಿ ಹೆಚ್ಚಾಗಿರಲಿದೆ. ಕನಿಷ್ಠ ತಾಪಮಾನ 18- 19 ಡಿಗ್ರಿ ಸೆಲ್ಶಿಯಸ್‌ ಆಸುಪಾಸಿನಲ್ಲಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ವರದಿ ತಿಳಿಸಿದೆ. ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ವರದಿ ಪ್ರಕಾರ, ಹವಾಮಾನ ಲಕ್ಷಣ ಗಮನಿಸುವಾಗ, ನೈಋತ್ಯ ಬಂಗಾಳ ಕೊಲ್ಲಿಯ ಮೇಲಿನ ಆಳವಾದ ಖಿನ್ನತೆಯು ಕಳೆದ 6 ಗಂಟೆಗಳಲ್ಲಿ ಗಂಟೆಗೆ 13 ಕಿಮೀ ವೇಗದಲ್ಲಿ ವಾಯುವ್ಯಕ್ಕೆ ಚಲಿಸಿತು. ನವೆಂಬರ್ 27ರಂದು ಬೆಳಗ್ಗೆ 08.30 ತಮಿಳುನಾಡು ಭಾಗದ ಕಡೆಗೆ ಚಲಿಸಿದೆ. ಟ್ರಂಕೋಮಲಿಯ ಪೂರ್ವ ಆಗೇಯಕ್ಕೆ ಸುಮಾರು 120 ಕಿ.ಮೀ, ಅಗೇಯಕ್ಕೆ 370 ಕಿ.ಮೀ ನಾಗಪಟ್ಟಣಂ, ಪುದುಚೇರಿಯ ಆಗ್ನಿಯಕ್ಕೆ 470 ಕಿ.ಮೀ ಮತ್ತು ಚೆನ್ನೈನ ಆತ್ಮೀಯಕ್ಕೆ 550 ಕಿ.ಮೀ. ಇದು ಮುಂದಿನ 12 ಗಂಟೆಗಳಲ್ಲಿ ಉತ್ತರ-ವಾಯುವ್ಯದ ಕಡೆಗೆ ಚಲಿಸುವುದನ್ನು ಮುಂದುವರೆಸುವ ಸಾಧ್ಯತೆಯಿದೆ ಮತ್ತು ಚಂಡಮಾರುತದ ಚಂಡಮಾರುತವಾಗಿ ಮತ್ತಷ್ಟು ತೀವ್ರಗೊಳ್ಳುತ್ತದೆ. ಅದರ ನಂತರ, ಮುಂದಿನ 2 ದಿನಗಳಲ್ಲಿ ಇದು ಉತ್ತರ-ವಾಯುವ್ಯವಾಗಿ ತಮಿಳುನಾಡು ಕರಾವಳಿಯ ಕಡೆಗೆ ಶ್ರೀಲಂಕಾ ಕರಾವಳಿಯ ಕಡೆಗೆ ಚಲಿಸುತ್ತಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು ಹವಾಮಾನ ಇಂದು; ಮೈ ನಡುಗಿಸುವ ಚಳಿ, ಮೋಡ ಕವಿದ ವಾತಾವರಣ

ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರ ಪ್ರಕಟಿಸಿರುವ ಹವಾಮಾನ ವರದಿ ಪ್ರಕಾರ ಇಂದು (ನವೆಂಬರ್ 28) ಬೆಂಗಳೂರು ಸುತ್ತ ಮುತ್ತ ಅಂದರೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಮೈ ನಡುಗಿಸುವ ಚಳಿ ಅನುಭವಕ್ಕೆ ಬರಲಿದೆ. ಇಂದು ಅಪರಾಹ್ನ ತನಕ ಬಹುತೇಕ ಮೋಡ ಕವಿದ ವಾತಾವರಣ ಇರಲಿದೆ. ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಶಿಯಸ್ ಇರಲಿದೆ. ಅದೇ ರೀತಿ ನವೆಂಬರ್ 29 ರ ಅಂದರೆ ನಾಳೆ ಬೆಳಗ್ಗೆ ತನಕ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಕಾಣಬಹುದು ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ ಸುಮಾರು 25 ಮತ್ತು 19 ಡಿಗ್ರಿ ಸೆಲ್ಸಿಯಸ್ ಆಗಿರಬಹುದು. ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಕಾರಣ ನಾಳೆ (ನವೆಂಬರ್ 29) ಬೆಂಗಳೂರು ಸುತ್ತಮುತ್ತ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ.

ಕರ್ನಾಟಕ ಹವಾಮಾನ ಇಂದು; ಕೋಲಾರ ಭಾಗದಲ್ಲಿ ಮಳೆ, ರಾಜ್ಯದ ಉಳಿದೆಡೆ ಒಣ ಹವೆ, ಕೆಲವು ಕಡೆ ಚಳಿ

ಕೋಲಾರ ಜಿಲ್ಲೆಯ ಒಂದೆರೆಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಒಂದೆರೆಡು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 1-3 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರುವ ಸಾಧ್ಯತೆಯಿದೆ ಎಂದು ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ವಿಜ್ಞಾನಿ ಡಾ ಎನ್ ಪುವಿಯರಸನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ನಿನ್ನೆ (ನವೆಂಬರ್ 27) ಬೆಳಗ್ಗೆ ತನಕದ ಗರಿಷ್ಠ ಉಷ್ಣಾಂಶ 35.4 ಡಿಗ್ರಿ ಸೆಲ್ಶಿಯಸ್ ಹೊನ್ನಾವರ ಹಾಗೂ ಕಾರವಾರದಲ್ಲಿ, ಕನಿಷ್ಠ ಉಷ್ಣಾಂಶ 13.5 ಡಿಗ್ರಿ ಸೆಲ್ಶಿಯಸ್ ವಿಜಯಪುರದಲ್ಲಿ ದಾಖಲಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಪ್ರಕಟಿಸಿರುವ ಉಷ್ಣಾಂಶ ವಿವರ ಹೀಗಿದೆ ನೋಡಿ

ಕರ್ನಾಟಕ ತಾಪಮಾನ: ರಾಜ್ಯದ 31 ಜಿಲ್ಲೆಗಳಲ್ಲಿ ನಿನ್ನೆ ದಾಖಲಾದ ಗರಿಷ್ಠ ಮತ್ತು ಕನಿಷ್ಠ ತಾಪಮಾನ ವಿವರ
ಕರ್ನಾಟಕ ತಾಪಮಾನ: ರಾಜ್ಯದ 31 ಜಿಲ್ಲೆಗಳಲ್ಲಿ ನಿನ್ನೆ ದಾಖಲಾದ ಗರಿಷ್ಠ ಮತ್ತು ಕನಿಷ್ಠ ತಾಪಮಾನ ವಿವರ (KarnatakaSNDMC)

ಕರ್ನಾಟಕ ಹವಾಮಾನ: ತೇವಾಂಶದಲ್ಲೂ ವ್ಯತ್ಯಾಸ

ಕರ್ನಾಟಕದಲ್ಲಿ ಒಣಹವೆ ಇದ್ದು ತೇವಾಂಶದಲ್ಲೂ ವ್ಯತ್ಯಾಸವಿದೆ. ತೇವಾಂಶದಲ್ಲಿ ಇಳಿಕೆಯಾಗಿರುವ ಕಾರಣ ಅನೇಕ ಕಡೆ ಶುಷ್ಕ ವಾತಾವರಣವಿದೆ. ಜಿಲ್ಲಾವಾರು ತೇವಾಂಶ ವಿವರ ಇಲ್ಲಿದೆ.

ಕರ್ನಾಟಕ ತೇವಾಂಶ ವಿವರ: ರಾಜ್ಯದ 31 ಜಿಲ್ಲೆಗಳ ಗರಿಷ್ಠ ಮತ್ತು ಕನಿಷ್ಠ ತೇವಾಂಶ ವಿವರ
ಕರ್ನಾಟಕ ತೇವಾಂಶ ವಿವರ: ರಾಜ್ಯದ 31 ಜಿಲ್ಲೆಗಳ ಗರಿಷ್ಠ ಮತ್ತು ಕನಿಷ್ಠ ತೇವಾಂಶ ವಿವರ

ಕರ್ನಾಟಕದಲ್ಲಿ ನಿನ್ನೆ ಕನಿಷ್ಠ ತೇವಾಂಶ ಶೇಕಡ 22.8 ಕಲಬುರಗಿಯಲ್ಲಿ, ಶೇಕಡ 25.8 ಬೀದರ್‌ನಲ್ಲಿ ದಾಖಲಾಗಿದೆ. ಇನ್ನುಳಿದಂತೆ, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನಾಳೆ, ನಾಡಿದ್ದು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿ ತಿಳಿಸಿದೆ.

Whats_app_banner