ಕರ್ನಾಟಕ ಹವಾಮಾನ ಇಂದು: ಬೆಂಗಳೂರು ಸುತ್ತಮುತ್ತ ಮುಂಜಾನೆ ಮಂಜು, ಮೋಡ ಕವಿದ ವಾತಾವರಣ, ರಾಜ್ಯದ ಉಳಿದೆಡೆ ಒಣ ಹವೆ, ಚಳಿ
Karnataka Weather Today: ಕರ್ನಾಟಕದಲ್ಲಿ ಇಂದು ಚಳಿಗಾಲದ ಸಹಜ ವಾತಾವರಣ ಇರಲಿದ್ದು, ಒಣ ಹವೆ ಮುಂದುವರೆಯಲಿದೆ. ಬೆಂಗಳೂರು ಸುತ್ತಮುತ್ತಲೂ ಮುಂಜಾನೆ ಮಂಜು, ಮೋಡ ಕವಿದ ವಾತಾವರಣ ಇರಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ ಕರ್ನಾಟಕ ಹವಾಮಾನ ವರದಿ ವಿವರಿಸಿದೆ.
Karnataka Weather Today: ಕರ್ನಾಟಕದಲ್ಲಿ ಇಂದು (ಜನವರಿ 11) ಚಳಿಗಾಲದ ಸಹಜ ವಾತಾವರಣ ಇರಲಿದ್ದು, ಕೆಲವು ಕಡೆ ಮಂಜು ಕಾಡಬಹುದು. ಒಣ ಹವೆ ಮುಂದುವರೆಯಲಿದೆ. ಅದೇ ರೀತಿ, ರಾಜಧಾನಿ ಬೆಂಗಳೂರು ಸುತ್ತಮುತ್ತ ಮುಂಜಾನೆ ಮಂಜು, ಇಬ್ಬನಿ ಹಾಗೂ ಮೋಡ ಕವಿದ ವಾತಾವರಣ ಇರಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಜಲಾಶಯಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಲೈಟಾಗಿ ಚಳಿ ಕಾಡಬಹುದು ಎಂದು ವರದಿ ಹೇಳಿದೆ.
ಬೆಂಗಳೂರು ಹವಾಮಾನ ಇಂದು; ಮುಂಜಾನೆ ಮಂಜು, ಮೋಡ ಕವಿದ ವಾತಾವರಣ
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಬಹುತೇಕ ಪ್ರದೇಶಗಳಲ್ಲಿ ಇಂದು (ಜನವರಿ 11) ಮುಂಜಾನೆ ಮಂಜು ಕವಿದ ವಾತಾವರಣ ಇರಲಿದೆ. ನಾಳೆ ಬೆಳಗ್ಗೆ ಕೂಡ ಇದೇ ವಾತಾವರಣ ಇರಲಿದೆ. ಮೋಡ ಕವಿದ ವಾತಾವರಣದಲ್ಲಿ ಕೆಲವು ಕಡೆ ಸೂರ್ಯ ಕಿರಣ ಕಾಣಬಹುದು. ಉಳಿದಂತೆ ಸಹಜ ವಾತಾವರಣ ಇರಲಿದೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಶಿಯಸ್ ಇರಬಹುದು ಎಂದು ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ವಿಜ್ಞಾನಿ ಡಾ ರಾಜವೇಲ್ ಮಣಿಕ್ಕಮ್ ತಿಳಿಸಿದ್ದಾರೆ.
ಬೆಂಗಳೂರು ನಗರ ಪ್ರದೇಶದಲ್ಲಿ ನಿನ್ನೆ (ಜನವರಿ 10) ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 17.3 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು. ಅದೇ ರೀತಿ ಬೆಂಗಳೂರು ಗ್ರಾಮಾಂತರದಲ್ಲಿ ನಿನ್ನೆ (ಜನವರಿ 10) ಗರಿಷ್ಠ ತಾಪಮಾನ 27.1 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು ಎಂದು ಅವರು ತಿಳಿಸಿದರು.
ಕರ್ನಾಟಕ ಹವಾಮಾನ ಇಂದು; ಚಳಿಗಾಲದ ಸಹಜ ವಾತಾವರಣ, ಒಣಹವೆ
ಹವಾಮಾನದ ಒಟ್ಟು ಸನ್ನಿವೇಶ ಗಮನಿಸುವುದಾದರೆ, ಕೇರಳ ಕರಾವಳಿಯ ಆಗ್ನೇಯ ಅರೇಬಿಯನ್ ಸಮುದ್ರದಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 3.1 ಕಿ.ಮೀ ಎತ್ತರದಲ್ಲಿ ಚಂಡಮಾರುತದ ಪರಿಚಲನೆ ಕಡಿಮೆಯಾಗಿದೆ. ಆದ್ದರಿಂದ ಇಂದು ನಾಳೆ ಮಳೆ ಮುನ್ಸೂಚನೆ ಇಲ್ಲ.
ಕನಿಷ್ಠ ತಾಪಮಾನದಲ್ಲಿ ಏರಿಕೆಯಾಗಿದ್ದು, ಬಹುತೇಕ ಎಲ್ಲ ಕಡೆ ಚಳಿ ಕಡಿಮೆಯಾಗತೊಡಗಿದೆ. ಪ್ರಮುಖ ನಗರಗಳ ಸದ್ಯದ (ಬೆಳಗ್ಗೆ 7 ಗಂಟೆ) ತಾಪಮಾನ ಹೀಗಿದೆ.
ಬೆಂಗಳೂರು ನಗರ - 19.2 ಡಿಗ್ರಿ ಸೆಲ್ಶಿಯಸ್ ತಾಪಮಾನ ಮತ್ತು ಆರ್ದ್ರತೆ 90%
ಮಂಗಳೂರು - 24 ಡಿಗ್ರಿ ಸೆಲ್ಶಿಯಸ್ ತಾಪಮಾನ ಮತ್ತು ಆರ್ದ್ರತೆ 80%
ಚಿತ್ರದುರ್ಗ- 27 ಡಿಗ್ರಿ ಸೆಲ್ಶಿಯಸ್ ತಾಪಮಾನ ಮತ್ತು ಆರ್ದ್ರತೆ 68%
ಗದಗ- 20 ಡಿಗ್ರಿ ಸೆಲ್ಶಿಯಸ್ ತಾಪಮಾನ ಮತ್ತು ಆರ್ದ್ರತೆ 77%
ಹೊನ್ನಾವರ- 22.2 ಡಿಗ್ರಿ ಸೆಲ್ಶಿಯಸ್ ತಾಪಮಾನ ಮತ್ತು ಆರ್ದ್ರತೆ 81%
ಕಲಬುರಗಿ - 23 ಡಿಗ್ರಿ ಸೆಲ್ಶಿಯಸ್ ತಾಪಮಾನ ಮತ್ತು ಆರ್ದ್ರತೆ 53%
ಬೆಳಗಾವಿ- 23 ಡಿಗ್ರಿ ಸೆಲ್ಶಿಯಸ್ ತಾಪಮಾನ ಮತ್ತು ಆರ್ದ್ರತೆ 69%
ಕಾರವಾರ - 34.2 ಡಿಗ್ರಿ ಸೆಲ್ಶಿಯಸ್ ತಾಪಮಾನ ಮತ್ತು ಆರ್ದ್ರತೆ 49%
ಇಂದು (ಜನವರಿ 11) ಕರ್ನಾಟಕದಲ್ಲಿ ಚಳಿಗಾಲದ ಸಹಜ ವಾತಾವರಣ ಇರಲಿದ್ದು, ಒಣ ಹವೆ ಇರುವ ಸಾಧ್ಯತೆಯಿದೆ. ವಿಜಯಪುರ, ಬೀದರ್, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಯಚೂರು, ಬೆಂಗಳೂರು ನಗರ, ರಾಮನಗರ, ತುಮಕೂರು ಮತ್ತು ಚಾಮರಾಜನಗರ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಮಂಜು/ದಟ್ಟ ಮಂಜು ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ಕರ್ನಾಟಕ ಹವಾಮಾನ ವರದಿ ವಿವರಿಸಿದೆ.