Bengaluru Temperature: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬಿಸಿಲ ಝಳ; ಜನ ಹೈರಾಣ
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Temperature: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬಿಸಿಲ ಝಳ; ಜನ ಹೈರಾಣ

Bengaluru Temperature: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬಿಸಿಲ ಝಳ; ಜನ ಹೈರಾಣ

Bengaluru Temperature: ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲ ಝಳ ಹೆಚ್ಚಾಗುತ್ತಿದ್ದು, ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುವಂತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಚಳಿಗಾಲದಿಂದ ದಿಂದ ಬೇಸಿಗೆಗೆ ಋತು ಬದಲಾಗುವ ತಿಂಗಳು ಫೆಬ್ರವರಿಯಲ್ಲಿನ ಬಿಸಿಲ ಝಳಕ್ಕೆ ಬೆಂಗಳೂರಿಗರು ಹೈರಾಣವಾಗಿದ್ದಾರೆ.
ಚಳಿಗಾಲದಿಂದ ದಿಂದ ಬೇಸಿಗೆಗೆ ಋತು ಬದಲಾಗುವ ತಿಂಗಳು ಫೆಬ್ರವರಿಯಲ್ಲಿನ ಬಿಸಿಲ ಝಳಕ್ಕೆ ಬೆಂಗಳೂರಿಗರು ಹೈರಾಣವಾಗಿದ್ದಾರೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಮಂದಿ ಸುಡು ಬಿಸಿಲನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ಸೆಕೆ ಬೆಳಗ್ಗೆ ಸ್ವಲ್ಪ ಕೂಲ್ ಎನಿಸಿದರೆ ಮಧ್ಯಾಹ್ನದ ವೇಳೆಗೆ ಬಿಸಿಲ ಝಳದಿಂದ ಜನ ಹೈರಾಣವಾಗಿದ್ದು, ಮನೆಯಿಂದ ಹೊರ ಬರಲು ಹಿಂದೇಟು ಹಾಕುವಂತಾಗಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಫೆಬ್ರವರಿ ತಿಂಗಳಲ್ಲಿ ಋತು ಬದಲಾಗುತ್ತದೆ. ಚಳಿಗಾಲ ಕಡಿಮೆಯಾಗಿ ಬೇಸಿಗೆ ಆರಂಭವಾಗುತ್ತದೆ. ಸಾಮಾನ್ಯವಾಗಿ ಮಾರ್ಚ್, ಏಪ್ರಿಲ್‌ನಲ್ಲಿ ಹೆಚ್ಚು ಬಿಸಿಲು ಇರಲಿದೆ. ಆದರೆ ಫೆಬ್ರವರಿಯ 2ನೇ ವಾರದಲ್ಲೇ ಬೆಂಗಳೂರಿಗರು ಬೇಸಿಗೆಯ ಬಿಸಿಯನ್ನು ಅನುಭವಿಸುತ್ತಿದ್ದಾರೆ. ಕಳೆದೊಂದು ವಾರದಿಂದಲೂ ತಾಪಮಾನ ಹೆಚ್ಚಾಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಬಿಸಿಯಿಂದ ಪಾರಾಗಲು ಕಲ್ಲಂಗಡಿ ಹಣ್ಣು, ಜ್ಯೋಸ್‌ಗಳು ಹಾಗೂ ತಪ್ಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಹಣ್ಣು, ತಂಪು ಪಾನೀಯಗಳ ವ್ಯಾಪಾರವೂ ದಿನದಿಂದ ದಿನಕ್ಕೆ ಜೋರಾಗಿ ನಡೆಯುತ್ತಿದೆ. ಫೆಬ್ರವರಿ ಮೊದಲ ವಾರಕ್ಕೆ ಹೋಲಿಸಿದರೆ ಎರಡನೇ ವಾರದಿಂದ ವ್ಯಾಪಾರ ಸ್ವಲ್ಪ ಚೆನ್ನಾಗಿ ಆಗುತ್ತಿದೆ. ಜನ ಹಣ್ಣು ಖರೀದಿಗೆ ಬರುತ್ತಿದ್ದಾರೆ ಎಂದು ಆರ್‌ಟಿ ನಗರದ ಕಲ್ಲಂಗಡಿ ವ್ಯಾಪಾರಿಯೊಬ್ಬರು ವಿವರಿಸಿದ್ದಾರೆ.

ಬೆಳಗ್ಗೆ 9 ಗಂಟೆಗೆ ಬಿಸಿ ಜಾಸ್ತಿಯಾಗುತ್ತಿದೆ. ಮಧ್ಯಾಹ್ನದ ಸಮಯದಲ್ಲಿ ಕಚೇರಿಯಿಂದ ಹೊರಗಡೆ ಬಾರದಂತ ಪರಿಸ್ಥಿತಿ ಇದೆ. ಊಟದ ಬದಲಾಗಿ ಎಳೆನೀರು, ಕಬ್ಬು, ಹಣ್ಣುಗಳ ಜ್ಯೂಸ್‌ಗಳನ್ನ ಕುಡಿಯುವಂತಾಗಿದೆ ಎಂದು ಸ್ಥಳೀಯ ಉದ್ಯೋಗಿಯೊಬ್ಬರು ಬಿಸಿಲಿನ ಬಗ್ಗೆ ವಿವರಿಸಿದ್ದಾರೆ. ಉಷ್ಣಾಂಶ ಹೆಚ್ಚಳ ಭಾರಿ ಪರಿಣಾಮ ಬೀರುತ್ತಿದ್ದು, ಸೆಕೆಯಿಂದ ಜನ ಬಸವಳಿದ್ದಾರೆ. ಮನೆಗಳಲ್ಲಿ ಫ್ಯಾನ್, ಎಸಿ ಹಾಗೂ ಕೂಲರ್‌ಗಳ ಮೊರೆ ಹೋಗುತ್ತಿದ್ದಾರೆ.

ಬೆಂಗಳೂರು ನಗರದಲ್ಲಿ ಮುಖ್ಯವಾಗಿ ನಿರ್ಮಲ ಆಕಾಶವಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಸಾಧ್ಯತೆಗಳಿರುತ್ತದೆ. ಗರಿಷ್ಠ ಉಷ್ಣಾಂಶ 33 ಮತ್ತು ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿವೆ ಎಂದು ಬೆಂಗಳೂರು ಹವಾಮಾನ ಕೇಂದ್ರ ತನ್ನ ದೈನಂದಿನ ವರದಿಯಲ್ಲಿ ತಿಳಿಸಿದೆ. ನಗರದಲ್ಲಿ ಇಂದು (ಫೆಬ್ರವರಿ 20, ಮಂಗಳವಾರ) ಮಧ್ಯಾಹ್ನ 1 ಗಂಟೆಯ ವೇಳೆಗೆ 30 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ. ಮುಂದಿನ ದಿನಗಳಲ್ಲಿ ಬಿಸಿಲಿನ ವಾತಾವರಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಹವಾಮಾನ ವರದಿಗಳು ಹೇಳುತ್ತಿವೆ. ದಕ್ಷಿಣ ಒಳನಾಡಿನ ಬೆಂಗಳೂರಿನ ಈ ಪರಿಸ್ಥಿತಿಯೇ ಹೀಗಾದರೆ ಕರಾವಳಿಯ ಭಾಗದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಗರಿಷ್ಠ ಉಷ್ಣಾಂಶವನ್ನು ಎದುರಿಸಲಿವೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ರಾಮನಗರ ಈ ಜಿಲ್ಲೆಗಳಲ್ಲೂ ಬಿಸಿಗೆ ಜನರು ಹೈರಾಣವಾಗುತ್ತಿದ್ದಾರೆ. ದಿನನಿತ್ಯ ಕೃಷಿ ಹಾಗೂ ಇತರೆ ಚಟುವಟಿಕೆಗಳಲ್ಲಿ ತೊಡಗುವ ದುಡಿಯುವ ವರ್ಗದ ಮೇಲೆ ಇದು ಭಾರಿ ಪರಿಣಾಮ ಬೀರುತ್ತಿದೆ. ಗ್ರಾಮೀಣ ಭಾಗದ ಜನರು ಬೆಳಗ್ಗೆ ಬೇಗ ತೋಟದ ಕೆಲಸಕ್ಕೆ ಹೋಗಿ ಮಧ್ಯಾಹ್ನದ ಬಿಸಿಲಿನ ವೇಳೆಗೆ ಮನೆ ಸೇರಿಕೊಳ್ಳುತ್ತಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com )

Whats_app_banner