ಕನ್ನಡ ಸುದ್ದಿ  /  Karnataka  /  Bengaluru Weather Today Partly Cloudy With Temp Forecast Likely To Be Above Normal Karnataka Weather Today Feb 26 Uks

ಕರ್ನಾಟಕ ಹವಾಮಾನ ಫೆ 26; ಬೆಂಗಳೂರು, ಗ್ರಾಮಾಂತರಗಳಲ್ಲಿ ಸಹಜ ವಾತಾವರಣ, ಕೆಲವೆಡೆ ಭಾಗಶಃ ಮೋಡ, ರಾಜ್ಯದೆಲ್ಲೆಡೆ ಒಣಹವೆ, ಉಷ್ಣಾಂಶ ಹೆಚ್ಚಳ

ಕರ್ನಾಟಕ ಹವಾಮಾನ ಫೆ.26 ರಂದು ಬಹುತೇಕ ಕಡೆ ಒಣಹವೆ ಇದ್ದರೂ, ಬೆಂಗಳೂರು ನಗರ, ಗ್ರಾಮಾಂತರಗಳಲ್ಲಿ ಸಹಜ ವಾತಾವರಣ ಇರಲಿದ್ದು, ಕೆಲವೆಡೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ರಾಜ್ಯದಲ್ಲಿ ಒಣ ಹವೆ, ಉಷ್ಣಾಂಶ ಹೆಚ್ಚಳ ನಿರೀಕ್ಷಿಸಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕ ಹವಾಮಾನ ಫೆ 26; ಬೆಂಗಳೂರು, ಗ್ರಾಮಾಂತರಗಳಲ್ಲಿ ಸಹಜ ವಾತಾವರಣ, ಕೆಲವೆಡೆ ಭಾಗಶಃ ಮೋಡ, ಕವಿದ ವಾತಾವರಣ ಇರಬಹುದು. ರಾಜ್ಯದೆಲ್ಲೆಡೆ ಒಣಹವೆ, ಉಷ್ಣಾಂಶ ಹೆಚ್ಚಳವಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕ ಹವಾಮಾನ ಫೆ 26; ಬೆಂಗಳೂರು, ಗ್ರಾಮಾಂತರಗಳಲ್ಲಿ ಸಹಜ ವಾತಾವರಣ, ಕೆಲವೆಡೆ ಭಾಗಶಃ ಮೋಡ, ಕವಿದ ವಾತಾವರಣ ಇರಬಹುದು. ರಾಜ್ಯದೆಲ್ಲೆಡೆ ಒಣಹವೆ, ಉಷ್ಣಾಂಶ ಹೆಚ್ಚಳವಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರಗಳಲ್ಲಿ ನಿರ್ಮಲ ಆಕಾಶದ ವಾತಾವರಣ ಇರಲಿದ್ದು, ಮುಂಜಾನೆ ವೇಳೆ ಸ್ವಲ್ಪ ತಂಪಾದ ವಾತಾವರಣ ಇರಲಿದೆ. ಕೆಲವು ಕಡೆಗೆ ಭಾಗಶಃ ಮೋಡ ಕವಿದ ವಾತಾವರಣ ಗೋಚರಿಸಬಹುದು. ಗ್ರಾಮೀಣ ಪ್ರದೇಶಗಳಲ್ಲಿ ರಾತ್ರಿ ಮತ್ತು ಮುಂಜಾನೆ ಸ್ವಲ್ಪ ತಂಪು ವಾತಾವರಣ ಇರಲಿದೆ. ಉಳಿದಂತೆ ರಾಜ್ಯದಲ್ಲಿ ಹಲವೆಡೆ ಉಷ್ಣಾಂಶ ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಶಿಯಸ್‌ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ತಿಳಿಸಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯದಲ್ಲಿ ಮುಂದಿನ 24 ಗಂಟೆಗಳ ಅವಧಿಗೆ ಮಳೆ ಮುನ್ಸೂಚನೆ ನೀಡಿರುವ ಬೆಂಗಳೂರು ಹವಾಮಾನ ಕೇಂದ್ರ, ರಾಜ್ಯದ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಭಾಗದ ಬಹುತೇಕ ಪ್ರದೇಶಗಳಲ್ಲಿ ಮತ್ತು ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಒಣ ಹವೆ ಮುಂದುವರಿಯಲಿದೆ. ಹೆಚ್ಚಿನ ಬದಲಾವಣೆಯಾಗಲೀ ಬೇರೆ ಯಾವುದೇ ಮುನ್ನೆಚ್ಚರಿಕೆಯಾಗಲೀ ಇಲ್ಲ ಎಂದು ಹೇಳಿದೆ.

ಕಳೆದ 24 ಗಂಟೆ ಅವಧಿಯಲ್ಲಿ ರಾಜ್ಯದ ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ಕೊಡಗು, ತುಮಕೂರು ವ್ಯಾಪ್ತಿಯ ಕೆಲವೆಡೆ ಚದುರಿದ ಮಳೆ ಉಂಟಾಗಿದೆ ರಾಜ್ಯದ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗಮನಾರ್ಹವೆನ್ನುವಂತೆ ಕನಿಷ್ಠ 2.1 ಡಿಗ್ರಿ ಸೆಲ್ಶಿಯಸ್‌ನಿಂದ 4 ಡಿಗ್ರಿ ಸೆಲ್ಶಿಯಸ್ ತನಕ ಉಷ್ಣಾಂಶ ಹೆಚ್ಚಳವಾಗಿದೆ. ಅದೇ ರೀತಿ ದಕ್ಷಿಣ ಒಳನಾಡಿನ ಒಂದೆಡರು ಕಡೆಗಳಲ್ಲಿ ಅತ್ಯಂತ ಹೆಚ್ಚು ಅಂದರೆ 4.1 ಡಿಗ್ರಿ ಸೆಲ್ಶಿಯಸ್‌ ಉಷ್ಣಾಂಶ ಏರಿದೆ ಎಂದು ವರದಿ ಹೇಳಿದೆ. ರಾಜ್ಯದ ಸಮತಟ್ಟಾದ ಪ್ರದೇಶಗಳ ಪೈಕಿ ಅತಿ ಕನಿಷ್ಠ ಉಷ್ಣಾಂಶ ಬೆಳಗಾವಿ ವಿಮಾನ ನಿಲ್ದಾಣದಲ್ಲಿ 15 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರದಲ್ಲಿ ಹವಾಮಾನ ಇಂದು (ಫೆ. 26) ಮತ್ತು ನಾಳೆ (ಫೆ.27)

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಸುತ್ತಮುತ್ತ ಜಿಲ್ಲೆಗಳಲ್ಲಿ ಸೋಮವಾರ (ಫೆ 26) ಕೆಲವೆಡೆ ಮುಂಜಾನೆ ಸ್ವಲ್ಪ ತಂಪು ವಾತಾವರಣ ಇರಲಿದೆ ಎಂದು ವರದಿ ಹೇಳಿದೆ. ಎರಡೂ ಜಿಲ್ಲೆಗಳ ವ್ಯಾಪ್ತಿಯಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕೆಲವು ಕಡೆ ಗೋಚರಿಸಬಹುದು. ನಾಳೆ (ಫೆ.27) ಯೂ ಇದೇ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇಂದು (ಫೆ. 26) ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಶಿಯಸ್‌ ಮತ್ತು ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಶಿಯಸ್ ಅನುಭವಕ್ಕೆ ಬರಲಿದೆ. ನಿನ್ನೆ (ಫೆ.25) 32.5 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ 21 ಡಿಗ್ರಿ ಸೆಲ್ಶಿಯಸ್ ಇತ್ತು. ಅದೇ ರೀತಿ ಬೆಂಗಳೂರು ಗ್ರಾಮಾಂತರದಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಶಿಯಸ್‌ ಮತ್ತು ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಶಿಯಸ್ ಇರಲಿದೆ. ನಿನ್ನೆ (ಫೆ. 25) ಕನಿಷ್ಠ ತಾಪಮಾನ 20.6 ಡಿಗ್ರಿ ಸೆಲ್ಶಿಯಸ್‌ ಇತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪ್ರಮುಖ ನಗರಗಳಲ್ಲಿ ಈಗಿನ (ಫೆ. 26 ರ ಬೆಳಗ್ಗೆ 6 ಗಂಟೆಗೆ) ತಾಪಮಾನ

ಭಾರತೀಯ ಹವಾಮಾನ ಇಲಾಖೆಯ ದತ್ತಾಂಶ ಪ್ರಕಾರ, ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದು (ಫೆ.26 ರ) ಬೆಳಗ್ಗೆ 6 ಗಂಟೆಗೆ ದಾಖಲಾಗಿರುವ ತಾಪಮಾನಗಳ ವಿವರ.

ಬೆಂಗಳೂರು – 23.4 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 69)

ಮಂಗಳೂರು - 27 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 68)

ಚಿತ್ರದುರ್ಗ – 26.6 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 66)

ಗದಗ – 26 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 50)

ಹೊನ್ನಾವರ – 31.6 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 34)

ಕಲಬುರಗಿ – 28.8 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 48)

ಬೆಳಗಾವಿ - 32.8 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 26)

ಕಾರವಾರ – 32.8 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 46)

ರಾಜ್ಯದ ಕೃಷಿಕರಿಗೆ ಹವಾಮಾನ ಇಲಾಖೆಯಿಂದ 5 ಪ್ರಮುಖ ಕೃಷಿ ಸಲಹೆಗಳು

1) ಮುಂಜಾನೆಯ ಸಮಯದಲ್ಲಿ ತಂಪಾದ ವಾತಾವರಣದಿಂದ ರೋಗಗಳು ಸಂಭವಿಸುವ ಸಾಧ್ಯತೆಗಳಿವೆ, ಆದ್ದರಿಂದ ರೈತರು ಬೆಳೆದ ಬೆಳೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಲಾಗುತ್ತದೆ.

2) ಚಾಲ್ತಿಯಲ್ಲಿರುವ ಶುಷ್ಕ ಹವಾಮಾನ ಮತ್ತು ಮುನ್ಸೂಚನೆಯ ಶುಷ್ಕ ಹವಾಮಾನವು ಕೊಯ್ದು ಮಾಡಿದ ಬೆಳೆಗಳನ್ನು ಬಿಸಿಲಿನಲ್ಲಿ ಒಣಗಿಸಲು ಅನುಕೂಲಕರವಾಗಿದೆ. ಉಗ್ರಾಣದಲ್ಲಿ ಕೀಟ ಹಾನಿಯನ್ನು ಕಡಿಮೆ ಮಾಡಲು ಸರಿಯಾದ ತೇವಾಂಶದ ಶೇಕಡಾವಾರು ಪ್ರಮಾಣವನ್ನು ಉಳಿಸಿಕೊಳ್ಳುವ ಮೂಲಕ ಧಾನ್ಯಗಳನ್ನು ಸರಿಯಾಗಿ ಒಣಗಿಸಲು ರೈತರಿಗೆ ಸಲಹೆ ನೀಡಲಾಗುತ್ತದೆ. ಹತ್ತಿ, ಕಬ್ಬು, ರಾಬಿ ಸೋರ್ಗಮ್, ಕಡ್ಲೆಕಾಳು, ಈರುಳ್ಳಿ ಮತ್ತು ಮೆಣಸಿನಕಾಯಿಗಳ ಕೊಯ್ದು ಮುಂದುವರಿಸಿ.

3) ಕಾಳು ತುಂಬುವ ಹಂತಗಳಲ್ಲಿ ರಾಬಿ ಸೋರ್ಗಮ್ ಧಾನ್ಯಗಳ ಸರಿಯಾದ ಅಭಿವೃದ್ಧಿಗಾಗಿ ಒಂದು ಅಥವಾ ಎರಡು ಸಲ ರಕ್ಷಣಾತ್ಮಕ ನೀರಾವರಿ ಒದಗಿಸಿ ಮತ್ತು ಕಬ್ಬಿಗೆ ನೀರಾವರಿಯನ್ನು ಮಾಡಿ.

4) ಮಣ್ಣಿನ ತೇವಾಂಶದ ಆವಿಯಾಗುವ ನಷ್ಟವನ್ನು ತಪ್ಪಿಸಲು ಬೆಳೆ ಕ್ಷೇತ್ರದಲ್ಲಿ ಮಲ್ಟಿಂಗ್‌ನಂತಹ ತೇವಾಂಶ ಸಂರಕ್ಷಣೆ ಅಭ್ಯಾಸವನ್ನು ಅಳವಡಿಸಿಕೊಳ್ಳಿ.

5) ಮಲೆನಾಡು ಪ್ರದೇಶದಲ್ಲಿ ಭತ್ತದ ನರ್ಸರಿ ತಯಾರಿಯನ್ನು ಮತ್ತು ಹೆಸರುಬೇಳೆ ಹಾಗೂ ಕರಿಬೇವಿನ ಬಿತ್ತನೆಯನ್ನು ಕೈಗೊಳ್ಳಿ.

----------------------

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point