ಕನ್ನಡ ಸುದ್ದಿ  /  Karnataka  /  Bhagavad Gita In Schools: When Will Be Bhagavad Gita Taught In Karnataka Government Schools What Education Minister B C Nagesh Said

Bhagavad Gita in schools: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠ್ಯ ಯಾವಾಗದಿಂದ?

Bhagavad Gita in schools: ಸರ್ಕಾರಿ ಶಾಲೆಗಳಲ್ಲಿ ನೈತಿಕ ಪಠ್ಯವಾಗಿ ಭಗವದ್ಗೀತೆಯನ್ನು ಪರಿಚಯಿಸುವುದಾಗಿ ಸರ್ಕಾರ ಹೇಳುತ್ತ ಬಂದಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾರ್ಚ್‌ ತಿಂಗಳಲ್ಲಿ ಈ ಕುರಿತ ಹೇಳಿಕೆ ನೀಡಿದ್ದರು. ಈಗ ಶಿಕ್ಷಣ ಸಚಿವರು ಕೂಡ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಹಾಗಾದರೆ ಯಾವಾಗದಿಂದ ಇದು ಜಾರಿ ಬರುತ್ತೆ. ಇಲ್ಲಿದೆ ವರದಿ.

ನೈತಿಕ ಶಿಕ್ಷಣದ ಭಾಗವಾಗಿ ಶಾಲೆಗಳಲ್ಲಿ ಭಗವದ್ಗೀತೆಯನ್ನು ಪರಿಚಯಿಸಲಾಗುವುದು ಎಂದು ಸಚಿವ ಬಿ.ಸಿ.ನಾಗೇಶ್ ಸೋಮವಾರ ಹೇಳಿದರು.
ನೈತಿಕ ಶಿಕ್ಷಣದ ಭಾಗವಾಗಿ ಶಾಲೆಗಳಲ್ಲಿ ಭಗವದ್ಗೀತೆಯನ್ನು ಪರಿಚಯಿಸಲಾಗುವುದು ಎಂದು ಸಚಿವ ಬಿ.ಸಿ.ನಾಗೇಶ್ ಸೋಮವಾರ ಹೇಳಿದರು.

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಡಿಸೆಂಬರ್‌ ತಿಂಗಳಿಂದ ನೈತಿಕ ಪಠ್ಯದ ಅಭಿಯಾನ ಶುರುವಾಗಲಿದೆ. ಇದರಲ್ಲಿ ಭಗವದ್ಗೀತೆ ನೈತಿಕ ಪಠ್ಯವಾಗಿ ವಿದ್ಯಾರ್ಥಿಗಳಿಗೆ ಕಲಿಸಲ್ಪಡಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದ್ದಾರೆ.

ವಿಧಾನಪರಿಷತ್‌ ಸದಸ್ಯ ಬಿಜೆಪಿಯ ಎಂ.ಕೆ.ಪ್ರಾಣೇಶ್‌ ಅವರ ಪ್ರಶ್ನೆಗೆ ಉತ್ತರಿಸಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌, ಹಿಂದುಗಳ ಪವಿತ್ರ ಗ್ರಂಥವನ್ನು ಪ್ರತ್ಯೇಕವಾಗಿ ಶಾಲಾ ಪಠ್ಯದಲ್ಲಿ ಪರಿಚಯಿಸುವ ಯಾವುದೇ ಇರಾದೆ ಸರ್ಕಾರಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಡೆಕನ್‌ ಹೆರಾಲ್ಡ್ ವರದಿ ಪ್ರಕಾರ, ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಗೀತಾ ಬೋಧನೆಯನ್ನು ಏಕೆ ಜಾರಿಗೊಳಿಸಿಲ್ಲ ಎಂಬುದನ್ನು ತಿಳಿಸಬೇಕು ಎಂದು ಪ್ರಾಣೇಶ್ ಆಗ್ರಹಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌, "ಶಾಲೆಗಳಲ್ಲಿ ಭಗವದ್ಗೀತೆಯನ್ನು ನೈತಿಕ ಪಠ್ಯವಾಗಿ ಪರಿಚಯಿಸುವ ಬಗ್ಗೆ ನಮ್ಮ ಸರ್ಕಾರವು ಚಿಂತನೆ ನಡೆಸಿದೆ. ಈಗಾಗಲೇ ಸಮಿತಿ ರಚಿಸಲಾಗಿದ್ದು, ಅದು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಡಿಸೆಂಬರ್‌ನಿಂದ ಅದನ್ನು ಜಾರಿಗೆ ತರಲು ನಾವು ಯೋಜಿಸಿದ್ದೇವೆ . ಆದರೆ, ಇದು ಪಠ್ಯಕ್ರಮದ ಭಾಗವಲ್ಲ ಮತ್ತು ಪಠ್ಯವಾಗಿ ಇರುವುದಿಲ್ಲ. ಬೋಧನೆಗಳ ಆಧಾರದ ಮೇಲೆ ಪರೀಕ್ಷೆಯೂ ಇರಲ್ಲ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದಾದ್ಯಂತ 6ನೇ ತರಗತಿಯಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣದ ಭಾಗವಾಗಿ ಭಗವದ್ಗೀತೆಯನ್ನು ಸೇರಿಸಲು ಸರ್ಕಾರ ಪರಿಗಣಿಸುತ್ತಿದೆ ಎಂದು ಬೊಮ್ಮಾಯಿ ಈ ವರ್ಷ ಮಾರ್ಚ್‌ನಲ್ಲಿ ಹೇಳಿದ್ದರು.

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವತ್ತ ಸರಕಾರ ಗಮನಹರಿಸಬೇಕು. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಭಗವದ್ಗೀತೆ, ಕುರಾನ್ ಅಥವಾ ಬೈಬಲ್ ಅನ್ನು ಕಲಿಸಬಹುದು ಆದರೆ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುವಲ್ಲಿ ಸರ್ಕಾರದ ಆದ್ಯತೆ ಇರಬೇಕು. ಅದು ಪ್ರಾಥಮಿಕ ಧ್ಯೇಯವಾಗಬೇಕು. ಶಾಲೆಗಳಲ್ಲಿ ಪವಿತ್ರ ಗ್ರಂಥವನ್ನು ನೈತಿಕ ಶಿಕ್ಷಣವಾಗಿ ಕಲಿಸಲು ನಮ್ಮ ಪಕ್ಷಕ್ಕೆ ಯಾವುದೇ ಅಭ್ಯಂತರವಿಲ್ಲ. ಎಂದು ಕಾಂಗ್ರೆಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Karnataka education minister BC Nagesh: ಭಗವದ್ಗೀತೆ ಧಾರ್ಮಿಕ ಪುಸ್ತಕವಲ್ಲ ಮತ್ತು ಇದು ಯಾವುದೇ ಧಾರ್ಮಿಕ ಆಚರಣೆಗಳನ್ನು ಉತ್ತೇಜಿಸುವುದಿಲ್ಲ. ಆದರೆ ಕುರಾನ್ ಧಾರ್ಮಿಕ ಗ್ರಂಥವಾಗಿದೆ ಎಂದು ರಾಜ್ಯದ ಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದ್ದಾರೆ. Bhagavad Gita is not a religious book: ಖುರಾನ್‌ ಧಾರ್ಮಿಕ ಗ್ರಂಥ ಆದರೆ ಭಗವದ್ಗೀತೆ ಅಲ್ಲ; ಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌