Bharat Nivesh: 8ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಭಾರತ್ ನಿವೇಶ್ ಪ್ರಬಂಧ ಸ್ಪರ್ಧೆ, ಜ 31 ಕೊನೇ ದಿನ, ಗೆದ್ದವರಿಗೆ ನಗದು ಬಹುಮಾನ
Bharat Nivesh essay competition: ದೇಶಾದ್ಯಂತ ಇರುವ 8ರಿಂದ 12ನೇ ತರಗತಿ ವಿದ್ಯಾರ್ಥಿಗಳು ಭಾರತ್ ನಿವೇಶ್‌ನ ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಈ ಪ್ರಬಂಧ ಸ್ಪರ್ಧೆಯಲ್ಲಿ 1100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುತ್ತದೆ.
Bharat Nivesh essay competition: ಯುವ ಜನತೆಯಲ್ಲಿ ಮ್ಯೂಚುಯಲ್ ಫಂಡ್ ಕುರಿತು ಜ್ಞಾನ ಹೆಚ್ಚಿಸುವ ಭಾರತ್ ನಿವೇಶ್ ವಿದ್ಯಾರ್ಥಿಗಳಿಗೆ ವಿನೂತನ ಸ್ಪರ್ಧೆಗಳನ್ನು ಆಯೋಜಿಸುತ್ತದೆ. ಇದೀಗ ಭಾರತ್ ನಿವೇಶ್‌ನ ಪ್ರಬಂಧ ಸ್ಪರ್ಧೆಗೆ ವಿದ್ಯಾರ್ಥಿಗಳು ಪ್ರಬಂಧ ಸಲ್ಲಿಸಬಹುದು. "ವಿಕಸಿತ ಭಾರತದಲ್ಲಿ ಹಣಕಾಸು ಸಾಕ್ಷರತೆಯ ಅಗತ್ಯ (Importance of Financial Literacy for a Viksit Bharat)ʼ ವಿಷಯದ ಮೇಲೆ ವಿದ್ಯಾರ್ಥಿಗಳು ಕನಿಷ್ಠ 300 ಪದಗಳ ಪ್ರಬಂಧ ಬರೆಯಬೇಕು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಗೆಲುವು ಪಡೆದ 1100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬೊಂಬಾಟ್ ಬಹುಮಾನ ಇರುತ್ತದೆ. ಸುಮಾರು 26 ಲಕ್ಷ ರೂಪಾಯಿಗೂ ಹೆಚ್ಚು ಮೊತ್ತದ ಬಹುಮಾನವನ್ನು ಈ ವಿದ್ಯಾರ್ಥಿಗಳಿಗೆ ಹಂಚಲಾಗುತ್ತದೆ.
ಯಾರು ಪಾಲ್ಗೊಳ್ಳಬಹುದು?: 8ರಿಂದ 12ನೇ ತರಗತಿ ವಿದ್ಯಾರ್ಥಿಗಳು
ಪದ ಮಿತಿ: ಕನಿಷ್ಠ 300 ಪದಗಳು ಇರಬೇಕು. ಗರಿಷ್ಠ ಪದಮಿತಿ 1000 ಪದಗಳು.
ಪ್ರಬಂಧ ವಿಷಯ: Importance of Financial Literacy for Viksit Bharat
ಪ್ರಬಂಧ ಸಲ್ಲಿಸಲು ಕೊನೆಯ ದಿನ: ಜನವರಿ 31, 2025
ಏನಿದು ಭಾರತ್ ನಿವೇಶ್ ಸ್ಪರ್ಧೆ?
ಭಾರತದಲ್ಲಿ ಮ್ಯೂಚುಯಲ್ ಫಂಡ್ ಕುರಿತು ಜನರಲ್ಲಿ ಜ್ಞಾನ ಹೆಚ್ಚಿಸುವ ಸಲುವಾಗಿ ಭಾರತ್ ನಿವೇಶ್ ಕಾರ್ಯನಿರ್ವಹಿಸುತ್ತದೆ. ಸಣ್ಣ ವಯಸ್ಸಿನಲ್ಲಿಯೇ ಹೂಡಿಕೆ ಆರಂಭಿಸಲು ಯುವ ಜನತೆಯನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಭಾರತ್ ನಿವೇಶ್ ಮಾಡುತ್ತಿದೆ. ಇದಕ್ಕಾಗಿ ವಿವಿಧ ಸ್ಪರ್ಧೆಗಳನ್ನು ಭಾರತದಲ್ಲಿ ಆಯೋಜಿಸುತ್ತದೆ. ಅವುಗಳಲ್ಲಿ ಪ್ರಬಂಧ ಬರೆಯುವ ಸ್ಪರ್ಧೆಯೂ ಒಂದಾಗಿದೆ. ಈ ಬಾರಿ ವಿದ್ಯಾರ್ಥಿಗಳು Importance of Financial Literacy for a Viksit Bharat ವಿಷಯದ ಮೇಲೆ ಪ್ರಬಂಧ ಬರೆಯಬೇಕು.
ಈ ಸ್ಪರ್ಧೆಯಲ್ಲಿ ಯಾಕೆ ಪಾಲ್ಗೊಳ್ಳಬೇಕು?
ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಿಕೆ: ಈ ಸ್ಪರ್ಧೆಯಲ್ಲಿ ದೇಶದ ಮೂಲೆಮೂಲೆಗಳಿಂದ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಾರೆ. ನಿಮ್ಮ ಪ್ರಬಂಧ ಗೆದ್ದರೆ ನಿಮ್ಮ ರಾಷ್ಟ್ರ ಮಟ್ಟದಲ್ಲಿ ಬಹುಮಾನ ಗೆದ್ದಂತೆ ಆಗುತ್ತದೆ.
ಆಕರ್ಷಕ ಬಹುಮಾನಗಳು: 1100 ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುತ್ತದೆ. 26 ಲಕ್ಷ ರೂಪಾಯಿ ನಗದು ಬಹುಮಾನ (ಒಬ್ಬ ವಿದ್ಯಾರ್ಥಿಗೆ ಅಲ್ಲ) ಇರುತ್ತದೆ.
ಶುಲ್ಕವಿಲ್ಲ: ಈ ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಪಾವತಿಸಬೇಕಿಲ್ಲ.
ವಿಕಸಿತ ಭಾರತ: ವಿಕಸಿತ ಭಾರತದತ್ತ ಹೆಜ್ಜೆ ಹಾಕಲು ಇದು ಮೆಟ್ಟಿಲಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವುದು ಕೇವಲ ಬಹುಮಾನ ಪಡೆಯಲು ಅಲ್ಲ. ಉಳಿತಾಯ ಮತ್ತು ಹೂಡಿಕೆ ಬಗ್ಗೆ ನಿಮ್ಮಲ್ಲಿ ಜ್ಞಾನ ಹೆಚ್ಚಿಸಲು, ಹಣಕಾಸು ಸಾಕ್ಷರತೆ ಹೆಚ್ಚಿಸಲು ನೆರವಾಗುತ್ತದೆ. ಭಾರತದ ಅಭಿವೃದ್ಧಿಗೆ (ವಿಕಸಿತ ಭಾರತಕ್ಕೆ) ಇದು ಅತ್ಯಂತ ಅಗತ್ಯವಾಗಿದೆ.
ಬಹುಮಾನವೆಷ್ಟು?
- ಮೊದಲ ಬಹುಮಾನ: 20 ಸಾವಿರ ರೂಪಾಯಿ
- ಎರಡನೇ ಬಹುಮಾನ: 15 ಸಾವಿರ ರೂಪಾಯಿ
- ಮೂರನೇ ಬಹುಮಾನ: 10 ಸಾವಿರ ರೂಪಾಯಿ
- ಟಾಪ್ 10 ವಿನ್ನರ್‌ಗಳಿಗೆ ಸರ್‌ಪ್ರೈಸ್ ಪ್ರಶಸ್ತಿಗಳು
- ಟಾಪ್ 1000 ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನಗಳು
ಪ್ರಬಂಧದಲ್ಲಿ ಇರಬೇಕಾದ ವಿಷಯಗಳು
ಹಣಕಾಸು ಸಾಕ್ಷರತೆ ಕುರಿತು ಪೀಠಿಕೆ
ವಿಕಸಿತ ಭಾರತದ ಪರಿಕಲ್ಪನೆ
ಹಣಕಾಸು ಸಾಕ್ಷರತೆ: ಹಣದ ಮೌಲ್ಯ ಅರ್ಥಮಾಡಿಕೊಳ್ಳುವುದು, ಮನೆಯ ಆದಾಯದ ಪರಿಣಾಮಕಾರಿ ಬಳಕೆ, ಯೋಜನೆ, ಬಜೆಟ್, ಉಳಿತಾಯ, ವೆಚ್ಚ. ಹೂಡಿಕೆ, ದೀರ್ಘಕಾಲಕ್ಕೆ ಸಂಪತ್ತು, ಸಾಲ
ವೈಯಕ್ತಿಕ ಪ್ರಗತಿಗೆ ಹಣಕಾಸು ಸಾಕ್ಷರತೆ ಹೇಗೆ ನೆರವಾಗುತ್ತದೆ?
ಸಮಾಜದ ಮೇಲೆ ಪರಿಣಾಮ
ವಿಕಸಿತ ಭಾರತದ ಮೂಲಕ ಹಣಕಾಸು ಸಾಕ್ಷರತೆ ಹೇಗೆ ನಿರ್ಮಿಸಬಹುದು?
ಇತ್ಯಾದಿ ಅಂಶಗಳು ನೀವು ಬರೆಯುವ ಪ್ರಬಂಧದಲ್ಲಿ ಇರಬೇಕು. ಭಾರತ್ ನಿವೇಶ್ ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಮಾಹಿತಿಯನ್ನು ಸರಿಯಾಗಿ ಅರ್ಥಮಾಡಿಕೊಂಡು ಪ್ರಬಂಧ ಬರೆಯಿರಿ.
ಆನ್‌ಲೈನ್ ಮೂಲಕ ಪ್ರಬಂಧ ಸಲ್ಲಿಕೆ ಈಗಾಗಲೇ ಆರಂಭವಾಗಿದೆ. ಜನವರಿ 31ರೊಳಗೆ ಪ್ರಬಂಧ ಬರೆದು ಕಳುಹಿಸಿ. ಹೆಚ್ಚಿನ ಮಾಹಿತಿಗೆ ಮತ್ತು ಪ್ರಬಂಧ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್‌ಸೈಟ್ ವಿಳಾಸ: bharat-nivesh.com
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.