ಕನ್ನಡ ಸುದ್ದಿ  /  Karnataka  /  Bhaskar Rao Joined Bjp Aap Vice President Bhaskar Rao And His Colleagues Joined Bjp Before Aravind Kejriwal S State Tour.

Bhaskar Rao joined BJP: ಕೇಜ್ರಿವಾಲ್‌ ರಾಜ್ಯ ಪ್ರವಾಸಕ್ಕೆ ಮುನ್ನ ಬಿಜೆಪಿ ಸೇರಿದ ಆಪ್‌ ಉಪಾಧ್ಯಕ್ಷ ಭಾಸ್ಕರ್‌ ರಾವ್‌ ಮತ್ತು ಸಂಗಡಿಗರು

Bhaskar Rao joined BJP: ಆಮ್‌ ಆದ್ಮಿ ಪಕ್ಷದ ಕರ್ನಾಟಕ ಘಟಕದ ಉಪಾಧ್ಯಕ್ಷ, ನಿವೃತ್ತ ಪೊಲೀಸ್‌ ಅಧಿಕಾರಿ ಭಾಸ್ಕರ್ ರಾವ್‌‌ ಇಂದು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸೇರಿದರು. ಬೆಂಗಳೂರಿನಲ್ಲಿ ಪಕ್ಷದ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮತ್ತು ಪಕ್ಷದ ಶಿಸ್ತು ಸಮಿತಿ ಅಧ್ಯಕ್ಷ ಶಂಕರಪ್ಪ ಅವರ ಉಪಸ್ಥಿತಿಯಲ್ಲಿ ಪಕ್ಷ ಸೇರ್ಪಡೆ ನಡೆಯಿತು.

ಬೆಂಗಳೂರಿನಲ್ಲಿರುವ ಬಿಜೆಪಿಯ ರಾಜ್ಯ ಕಚೇರಿಯಲ್ಲಿ ಪಕ್ಷದ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮತ್ತು ಪಕ್ಷದ ಶಿಸ್ತು ಸಮಿತಿ ಅಧ್ಯಕ್ಷ ಶಂಕರಪ್ಪ ಅವರ ಉಪಸ್ಥಿತಿಯಲ್ಲಿ ಭಾಸ್ಕರ್‌ ರಾವ್‌ ಮತ್ತು ಬೆಂಬಲಿಗರು ಬಿಜೆಪಿ ಸೇರಿದರು.
ಬೆಂಗಳೂರಿನಲ್ಲಿರುವ ಬಿಜೆಪಿಯ ರಾಜ್ಯ ಕಚೇರಿಯಲ್ಲಿ ಪಕ್ಷದ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮತ್ತು ಪಕ್ಷದ ಶಿಸ್ತು ಸಮಿತಿ ಅಧ್ಯಕ್ಷ ಶಂಕರಪ್ಪ ಅವರ ಉಪಸ್ಥಿತಿಯಲ್ಲಿ ಭಾಸ್ಕರ್‌ ರಾವ್‌ ಮತ್ತು ಬೆಂಬಲಿಗರು ಬಿಜೆಪಿ ಸೇರಿದರು.

ಬೆಂಗಳೂರು: ಆಮ್‌ ಆದ್ಮಿ ಪಾರ್ಟಿ (ಎಎಪಿ)ಯ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರು ರಾಜ್ಯಕ್ಕೆ ಭೇಟಿ ನೀಡುವ ಸಂದರ್ಭದಲ್ಲೇ ಅವರ ಪಕ್ಷಕ್ಕೆ ಒಂದು ಆಘಾತ ಉಂಟಾಗಿದೆ. ಆಮ್‌ ಆದ್ಮಿ ಪಕ್ಷದ ಕರ್ನಾಟಕ ಘಟಕದ ಉಪಾಧ್ಯಕ್ಷ, ನಿವೃತ್ತ ಪೊಲೀಸ್‌ ಅಧಿಕಾರಿ ಭಾಸ್ಕರ್ ರಾವ್‌‌ ಇಂದು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸೇರಿದರು.

ಬೆಂಗಳೂರಿನಲ್ಲಿರುವ ಬಿಜೆಪಿಯ ರಾಜ್ಯ ಕಚೇರಿಯಲ್ಲಿ ಪಕ್ಷದ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮತ್ತು ಪಕ್ಷದ ಶಿಸ್ತು ಸಮಿತಿ ಅಧ್ಯಕ್ಷ ಶಂಕರಪ್ಪ ಅವರ ಉಪಸ್ಥಿತಿಯಲ್ಲಿ ಭಾಸ್ಕರ್‌ ರಾವ್‌ ಮತ್ತು ಬೆಂಬಲಿಗರು ಬಿಜೆಪಿ ಸೇರಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಳಿನ್‌ ಕುಮಾರ್‌ ಕಟೀಲ್‌ ಅವರು, ಇವತ್ತು ದೇಶದಲ್ಲಿ, ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಪರವಾದ ಅಲೆ ಇದೆ. ಚುನಾವಣೆಯ ಬಿಸಿ ವಾತಾವರಣದಲ್ಲಿ ಇಡೀ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎಂಬ ಅನಿಸಿಕೆ, ಭಾವನೆ ಜನರಲ್ಲಿದೆ. ಹತ್ತಾರು ನಾಯಕರು, ವಿವಿಧ ಪಕ್ಷಗಳ ಮುಖಂಡರು ಈಗ ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ.

ಇಂತಹ ಸನ್ನಿವೇಶದಲ್ಲಿ ಭಾಸ್ಕರ್‌ ರಾವ್‌ ಅವರು ಬಿಜೆಪಿ ಸೇರಿದ್ದಾರೆ. ಅವರ ಆಡಳಿತಾತ್ಮಕ ಅನುಭವಗಳನ್ನು ಪಕ್ಷ ಸ್ವೀಕರಿಸಿದೆ, ಬಳಸಿಕೊಳ್ಳಲಿದೆ. ಪಕ್ಷದ ಕಾರ್ಯಕರ್ತನಾಗಿ ಅವರು ಕೆಲಸ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಕಲ್ಯಾಣ ಆಗಬೇಕು ಎಂದು ಅವರೆಲ್ಲ ಬಯಸಿದ್ದಾರೆ. ಪಾರ್ಟಿಯ ಸಿದ್ಧಾಂತಗಳನ್ನು ಒಪ್ಪಿಕೊಂಡು, ಅದಕ್ಕೆ ಬದ್ಧರಾಗಿ ಕೆಲಸ ಮಾಡುವ ಭರವಸೆಯನ್ನು ಅವರು ನೀಡಿದ್ದಾರೆ.

ಭಾಸ್ಕರ್‌ ರಾವ್‌ ಅವರು ಸ್ವಯಂ ನಿವೃತ್ತಿ ಪಡೆದ ಬಳಿಕ ಒಂದು ವರ್ಷ ಕಾಲ ಆಮ್‌ ಆದ್ಮಿ ಪಾರ್ಟಿಯಲ್ಲಿ ರಾಜಕಾರಣದ ಅನುಭವವನ್ನು ಪಡೆದುಕೊಂಡಿದ್ದಾರೆ. ಈಗ ಡಬಲ್‌ ಇಂಜಿನ್‌ ಸರ್ಕಾರವನ್ನು ಬಲಪಡಿಸಲು ಬೆಂಬಲಿಗರೊಂದಿಗೆ ಬಿಜೆಪಿಯನ್ನು ಸೇರಿದ್ದಾರೆ. ಅವರನ್ನೆಲ್ಲ ಆತ್ಮೀಯವಾಗಿ ಬರಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಸ್ಕರ್‌ ರಾವ್‌, ನನ್ನ ಬದುಕಿನಲ್ಲಿ ಇಂದು ಬಹಳ ಸಂತೋಷದ ದಿನ. ಸನಾತನ ಧರ್ಮಕ್ಕೆ ಸೇರಿದ ರಾಷ್ಟ್ರೀಯತೆ, ರಾಷ್ಟ್ರದ ಹಿತ ಬಯಸುವ ಪಕ್ಷಕ್ಕೆ ನಾನು ಸೇರ್ಪಡೆ ಆಗಿರುವುದಕ್ಕೆ ಖುಷಿ ಇದೆ. ಬಾಲ್ಯದಿಂದಲೂ ನಾನು ರಾಷ್ಟ್ರೀಯತೆ, ಸನಾತನ ಧರ್ಮಕ್ಕೆ ಬದ್ಧನಾಗಿದ್ದವನು.

ಸ್ವಯಂ ನಿವೃತ್ತಿ ಪಡೆದು ಕೆಲವು ಕಾಲ ಸಮಾಜಕ್ಕೆ, ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬ ಆಶಯದೊಂದಿಗೆ ರಾಜಕಾರಣಕ್ಕೆ ಇಳಿದೆ. ಆಮ್‌ ಆದ್ಮಿ ಪಾರ್ಟಿಗೆ ಸೇರಿದ. ಆದರೆ, ಒಂದು ವರ್ಷ ಕಾಲ ಆ ಪಕ್ಷವನ್ನು ಕಟ್ಟಲು ರಾಜ್ಯದಲ್ಲಿ ಬಹಳಷ್ಟು ಶ್ರಮವಹಿಸಿದೆವು. ಆದರೆ, ಅದು ಸಾಧ್ಯವಾಗಲೇ ಇಲ್ಲ. ಅವರ ಕಾರ್ಯವಿಧಾನದಲ್ಲೂ ಒಂದು ಪ್ರಗತಿ ಇರಲಿಲ್ಲ.

ನಂಗೆ ಈಗಾಗಲೇ 58 ವರ್ಷ ವಯಸ್ಸಾಗಿದೆ. ಆದ್ದರಿಂದ ಇನ್ನಷ್ಟು ಸಮಯ ವ್ಯರ್ಥ ಮಾಡದೇ ಬಿಜೆಪಿಗೆ ಸೇರಿ, ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಬೇಕು ಎಂಬ ಆಶಯದೊಂದಿಗೆ ಇಲ್ಲಿ ಸೇರ್ಪಡೆ ಆಗಿದ್ದೇನೆ. ನನ್ನ ಪಾತ್ರವನ್ನು, ನನ್ನ ಹೊಣೆಗಾರಿಕೆಯನ್ನು ಪಕ್ಷ ಬಯಸುವ ಕೆಲಸವನ್ನು ಮಾಡಲು ಬದ್ಧನಾಗಿದ್ದೇನೆ.

ಅಖಂಡ ಭಾರತ, ಒಂದು ಭಾರತ, ಸಮೃದ್ಧ ಭಾರತವನ್ನು ಕಟ್ಟಲು ಸಾಧ್ಯವಾದರೆ ಅದು ಈಗ ಬಿಜೆಪಿಯಿಂದ ಮಾತ್ರವೇ ಸಾಧ್ಯ. ಇದುವರೆಗೆ ಜನಪರ ವಿಚಾರಗಳನ್ನು ಹೊರಗಿನಿಂದ ವ್ಯಕ್ತಪಡಿಸುತ್ತಿದ್ದೆ. ಈಗ ಅಧಿಕಾರದಲ್ಲಿರುವ ಪಕ್ಷವನ್ನೇ ಸೇರಿರುವ ಕಾರಣ ಕೆಲಸ ಮಾಡಿಸಿಕೊಡಲು ಎಲ್ಲರ ನೆರವನ್ನೂ ಕೋರುತ್ತೇನೆ.

ಪ್ರಪಂಚದಲ್ಲಿ ನಮ್ಮ ದೇಶ ಭಾರತ ಒಂದು ಛಾಪು ಮೂಡಿಸಿದ್ದು, ಅದನ್ನು ಬಲಪಡಿಸಲು ಪ್ರಧಾನಿ ಮೋದಿಯವರ ಆಡಳಿತವನ್ನು ಬಲಪಡಿಸಬೇಕು. ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.

IPL_Entry_Point