BHEL Recruitment 2025: ಬಿಎಚ್‌ಇಎಲ್‌ನಿಂದ ಎಂಜಿನಿಯರ್ ಟ್ರೇನಿಗಳ ನೇಮಕ, 400 ಹುದ್ದೆಗಳಿಗೆ ಅರ್ಜಿ ಆಹ್ವಾನ
ಬಿಎಚ್‌ಇಎಲ್ ಎಂಜಿನಿಯರ್ ಟ್ರೇನಿ ಮತ್ತು ಸೂಪರ್‌ವೈಸರ್ ಟ್ರೇನಿ(ಟೆಕ್) ನೇಮಕ: ಫೆಬ್ರವರಿ 1ರಿಂದ ಬಿಎಚ್‌ಇಎಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 28 ಕೊನೆಯ ದಿನಾಂಕವಾಗಿದೆ. ಒಟ್ಟು 400 ಹುದ್ದೆಗಳಿಗೆ ಎಂಜಿನಿಯರಿಂಗ್ ಪದವಿ ಮತ್ತು ಡಿಪ್ಲೊಮಾ ವಿದ್ಯಾರ್ಹತೆ ಬಯಸಲಾಗಿದೆ.

ಬಿಎಚ್‌ಇಎಲ್ ಎಂಜಿನಿಯರ್ ಟ್ರೇನಿ ಮತ್ತು ಸೂಪರ್‌ವೈಸರ್ ಟ್ರೇನಿ(ಟೆಕ್) ನೇಮಕ: ಭಾರತ್ ಹೆವ್ವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್)ನಲ್ಲಿ ಉದ್ಯೋಗ ಪಡೆಯಬೇಕೆನ್ನುವವರಿಗೆ ಸಿಹಿಸುದ್ದಿಯಿದೆ. ಎಂಜಿನಿಯರ್ ಟ್ರೇನಿ ಮತ್ತು ಸೂಪರ್‌ವೈಸರ್ ಟ್ರೇನಿ(ಟೆಕ್) ನೇಮಕಕ್ಕೆ ಬಿಎಚ್‌ಇಎಲ್ ಕಿರು ಅಧಿಸೂಚನೆ ಪ್ರಕಟಿಸಿದೆ. ವಿಸ್ತೃತವಾದ ಅಧಿಸೂಚನೆ ಸದ್ಯದಲ್ಲಿಯೇ ಪ್ರಕಟವಾಗುವ ನಿರೀಕ್ಷೆಯಿದೆ. ಫೆಬ್ರವರಿ 1ರಿಂದ ಬಿಎಚ್‌ಇಎಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 28 ಕೊನೆಯ ದಿನಾಂಕವಾಗಿದೆ.
ಕ್ವಿಕ್ ಲುಕ್
ಕಂಪನಿ: ಭಾರತ್ ಹೆವ್ವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್)
ಹುದ್ದೆಯ ಹೆಸರು: ಎಂಜಿನಿಯರ್ ಟ್ರೇನಿ ಮತ್ತು ಸೂಪರ್‌ವೈಸರ್ ಟ್ರೇನಿ(ಟೆಕ್)
ಹುದ್ದೆಗಳ ಸಂಖ್ಯೆ: 400 (ಎಂಜಿನಿಯರ್ ಟ್ರೇನಿ 250 ಹುದ್ದೆಗಳು, ಸೂಪರ್‌ವೈಸರ್ ಟ್ರೇನಿ 150 ಹುದ್ದೆಗಳು)
ವಿದ್ಯಾರ್ಹತೆ: ಬಿಟೆಕ್/ಡಿಪ್ಲೊಮಾ
ಅರ್ಜಿ ಶುಲ್ಕ: 795 ರೂಪಾಯಿ
ಆಯ್ಕೆ ಪ್ರಕ್ರಿಯೆ: ಸಿಬಿಟಿ ಮತ್ತು ಸಂದರ್ಶನ
ಅರ್ಜಿ ಸಲ್ಲಿಸಲು ವೆಬ್ ವಿಳಾಸ: careers.bhel.in
ಅರ್ಜಿ ಸಲ್ಲಿಸುವುದು ಹೇಗೆ?
ಬಿಎಚ್‌ಇಎಲ್‌ನ ಎಂಜಿನಿಯರ್ ಟ್ರೇನಿ ಮತ್ತು ಸೂಪರ್‌ವೈಸರ್ ಟ್ರೇನಿ(ಟೆಕ್) ಹುದ್ದೆಗಳಿಗೆ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಬೇರೆ ಯಾವುದೇ ವಿಧಾನದ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
- ಮೊದಲಿಗೆ careers.bhel.in ವೆಬ್‌ಸೈಟ್‌ಗೆ ಹೋಗಿ
- ರಿಕ್ರೂಟ್‌ಮೆಂಟ್ ಆಫ್ ಎಂಜಿನಿಯರ್ ಟ್ರೇನಿ ಆಂಡ್ ಸೂಪರ್‌ವೈಸರ್ ಟ್ರೈನಿ (ಟೆಕ್ 2025 ಎಂಬ ಲಿಂಕ್ ಅನ್ನು ಕ್ಲಿಕ್ ಮಾಡಿ
- ಇಲ್ಲಿ ಅಪ್ಲೈ ಆನ್‌ಲೈನ್‌ಎಂಬ ಆಯ್ಕೆ ಕಾಣಿಸಲಿದೆ. ಅದನ್ನು ಕ್ಲಿಕ್ ಮಾಡಿದಾಗ ಆನ್‌ಲೈನ್ ಅರ್ಜಿ ನಮೂನೆ ಕಾಣಿಸಿಕೊಳ್ಳುತ್ತದೆ.
- ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಕೇಳಲಾದ ವಿವರಗಳನ್ನು ಭರ್ತಿ ಮಾಡಿ. ದಾಖಲೆಗಳು ಮತ್ತು ಫೋಟೋ, ಸಹಿಯ ಸ್ಕ್ಯಾನ್ ಮಾಡಿರುವ ಪ್ರತಿಗಳನ್ನು ಅಪ್ಲೋಡ್ ಮಾಡಿ.
- ಭರ್ತಿ ಮಾಡಿರುವ ವಿವರಗಳನ್ನು ಓದಿ, ಪ್ರತಿಯೊಂದು ಮಾಹಿತಿಯು ಸಮರ್ಪಕವಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಬಳಿಕ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ. ಭವಿಷ್ಯದ ಅವಶ್ಯಕತೆಗಾಗಿ ಆನ್‌ಲೈನ್ ಅರ್ಜಿ ಸಲ್ಲಿಕೆಯ ಪ್ರತಿಯನ್ನು ಪ್ರಿಂಟೌಟ್ ತೆಗೆದುಕೊಳ್ಳಿ.
ಹುದ್ದೆಗಳ ವಿವರ
ಎಂಜಿನಿಯರ್ ಟ್ರೇನಿ: ಮೆಕ್ಯಾನಿಕಲ್ 70, ಎಲೆಕ್ಟ್ರಿಕಲ್ 25, ಸಿವಿಲ್ 25, ಎಲೆಕ್ಟ್ರಾನಿಕ್ಸ್ 20, ಕೆಮಿಕಲ್ 5 ಮತ್ತು ಮೆಟಲರ್ಜಿ 5 ಹುದ್ದೆಗಳಿವೆ.
ಸೂಪರ್‌ವೈಸರ್ ಟ್ರೇನಿ: ಮೆಕ್ಯಾನಿಕಲ್ 140, ಎಲೆಕ್ಟ್ರಿಕಲ್ 55, ಸಿವಿಲ್ 35, ಎಲೆಕ್ಟ್ರಾನಿಕ್ಸ್ 20 ಹುದ್ದೆಗಳಿವೆ.
ವಿದ್ಯಾರ್ಹತೆ ಮತ್ತು ವಯೋಮಿತಿ
ಎಂಜಿನಿಯರ್ ಟ್ರೇನಿ ಹುದ್ದೆಗಳಿಗೆ ಬಿಟೆಕ್, ಬಿಇ, ಬಿಇ ಎಂಇ, ಮೆಟೆಕ್ ಇತ್ಯಾದಿ ವಿದ್ಯಾರ್ಥರ್ಹತೆ ಬಯಸಲಾಗಿದೆ. ಜನವರಿ 1, 2025ಕ್ಕೆ ಅನ್ವಯವಾಗುವಂತೆ ಕನಿಷ್ಠ 21 ವರ್ಷ ಮತ್ತು ಗರಿಷ್ಠ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವಯೋಮಿತಿಯಲ್ಲಿ ಸರಕಾರದ ನಿಯಮಗಳಂತೆ ಅರ್ಹರಿಗೆ ಸಡಿಲಿಕೆ ನೀಡಲಾಗುತ್ತದೆ.
ಸೂಪರ್‌ವೈಸರ್ ಟ್ರೇನಿ ಹುದ್ದೆಗಳಿಗೆ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ವಿದ್ಯಾರ್ಹತೆ ಬಯಸಲಾಗಿದೆ. ವಯೋಮಿತಿ ಕನಿಷ್ಠ 18 ವರ್ಷ ಮತ್ತು ಗರಿಷ್ಠ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವಯೋಮಿತಿಯಲ್ಲಿ ಸರಕಾರದ ನಿಯಮಗಳಂತೆ ಅರ್ಹರಿಗೆ ಸಡಿಲಿಕೆ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿ ಪಡೆಯಲು ಭೇಟಿ ನೀಡಬೇಕಾದ ವೆಬ್‌ಸೈಟ್ ವಿಳಾಸ: careers.bhel.in
ಬಿಎಚ್‌ಇಎಲ್ ಎಂಜಿನಿಯರ್ ಟ್ರೇನಿ ಮತ್ತು ಸೂಪರ್‌ವೈಸರ್ ಟ್ರೇನಿ(ಟೆಕ್) ನೇಮಕ ಅಧಿಸೂಚನೆ ಪಿಡಿಎಫ್
ಗಮನಿಸಿ: ಉದ್ಯೋಗಾಕಾಂಕ್ಷಿಗಳಿಗೆ ಮಾಹಿತಿ ನೀಡುವ ಸಲುವಾಗಿ ಈ ಮಾಹಿತಿ ಪ್ರಕಟಿಸಲಾಗಿದೆ. ಉದ್ಯೋಗದ ಕುರಿತು ಸಂಪೂರ್ಣ ಮಾಹಿತಿ ಪಡೆಯಲು ಸಂಬಂಧಪಟ್ಟ ಸಂಸ್ಥೆಯ ಅಧಿಕೃತ ಅಧಿಸೂಚನೆ ಮತ್ತು ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
