ಕನ್ನಡ ಸುದ್ದಿ  /  ಕರ್ನಾಟಕ  /  ಬೀದರ್‌ನಲ್ಲಿ ಭೀಕರ ಅಪಘಾತ; ವಿದ್ಯುತ್ ಕಂಬಕ್ಕೆ ಕ್ರೂಸರ್ ವಾಹನ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು, ಇಬ್ಬರ ಸ್ಥಿತಿ ಗಂಭೀರ

ಬೀದರ್‌ನಲ್ಲಿ ಭೀಕರ ಅಪಘಾತ; ವಿದ್ಯುತ್ ಕಂಬಕ್ಕೆ ಕ್ರೂಸರ್ ವಾಹನ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು, ಇಬ್ಬರ ಸ್ಥಿತಿ ಗಂಭೀರ

ವೇಗವಾಗಿ ಬಂದ ಕ್ರೂಸರ್ ವಾಹನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೀದರ್‌ನಲ್ಲಿ ನಡೆದಿದೆ. ಅಪಘಾತದಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ವಿದ್ಯುತ್ ಕಂಬಕ್ಕೆ ಕ್ರೂಸರ್ ವಾಹನ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೀದರ್‌ನಲ್ಲಿ ನಡೆದಿದೆ. (ಫೋಟೊ-ಬೀದರ್ ಅಪ್ಡೇಟ್)
ವಿದ್ಯುತ್ ಕಂಬಕ್ಕೆ ಕ್ರೂಸರ್ ವಾಹನ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೀದರ್‌ನಲ್ಲಿ ನಡೆದಿದೆ. (ಫೋಟೊ-ಬೀದರ್ ಅಪ್ಡೇಟ್)

ಬೀದರ್‌ನಲ್ಲಿ ಇಂದು (ಮೇ 2, ಗುರುವಾರ) ಮುಂಜಾನೆ ಸಂಭವಿಸಿರುವ ಭೀಕರ ಕ್ರೂಸರ್ ವಾಹನ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಇಬ್ಬರ ಸ್ಥಿತಿ ಗಂಭೀರವಾಗಿ ಗಾಯಗೂಂಡಿದ್ದಾರೆ ಎಂದು ವರದಿಯಾಗಿದೆ. ಗಾಯಾಳುಗಳನ್ನು ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ನೆಲಕ್ಕೆ ಉರಿಳಿ ಬಿದ್ದರೆ, ಕ್ರೂಸರ್ ವಾಹನ ಸಂಪೂರ್ಣವಾಗಿ ನಜ್ಜು ಗುಜ್ಜಾಗಿದೆ. ಚಾಲಕ ನಿದ್ದೆ ಮಂಪರಿನಲ್ಲಿ ಇದ್ದಿದ್ದೇ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಬೀದರ್ ಎಸ್‌ಪಿ ಚನ್ನಬಸವಣ್ಣ ಎಸ್‌ಎಲ್ ಅವರು ಪರಿಶೀಲನೆ ನಡೆಸಿದ್ದಾರೆ. ಇಂದು ಮುಂಜಾನೆ 4.30ರ ಸುಮಾರಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಮಕ್ಕಳ ಮಾರಾಟ ಪ್ರಕರಣ ಮುಂಬೈ ಪೊಲೀಸರಿಂದ ಮತ್ತೆ ನಾಲ್ವರ ಬಂಧನ

ಮಕ್ಕಳಿಲ್ಲದ ದಂಪತಿಗಳಿಗೆ ಕನಿಷ್ಠ 14 ಮಕ್ಕಳನ್ನು ಮಾರಾಟ ಮಾಡಿದ ಮಕ್ಕಳ ಕಳ್ಳಸಾಗಣೆ ದಂಧೆಗೆ ಸಂಬಂಧಿಸಿದಂತೆ ಮುಂಬೈ ಅಪರಾಧ ವಿಭಾಗ ಮಂಗಳವಾರ (ಏಪ್ರಿಲ್ 30) ಇನ್ನೂ ನಾಲ್ವರು ಮಹಿಳೆಯರನ್ನು ಬಂಧಿಸಿದೆ. ನಾಲ್ವರು ಮಹಿಳೆಯರನ್ನು ವಿಶಾಖಪಟ್ಟಣಂನಿಂದ ಬಂಧಿಸಲಾಗಿದ್ದು, ಅವರ ಬಂಧನದೊಂದಿಗೆ, ಈ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಸಂಖ್ಯೆ 14 ಕ್ಕೆ ಏರಿದೆ, ಇದರಲ್ಲಿ 12 ಮಹಿಳೆಯರು ಸೇರಿದ್ದಾರೆ.

ವಿಶಾಖಪಟ್ಟಣಂನ ಎಂಟು ತಿಂಗಳ ಹೆಣ್ಣು ಮಗು ಮತ್ತು ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಎರಡು ವರ್ಷದ ಗಂಡು ಮಗುವನ್ನು ಮಂಗಳವಾರ ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಲ್ಲದೆ, ಏಪ್ರಿಲ್ 27 ರಂದು ಮಲಾಡ್ ಮತ್ತು ರತ್ನಗಿರಿಯಿಂದ 2 ವರ್ಷದ ಇಬ್ಬರು ಮಕ್ಕಳನ್ನು ಪೊಲೀಸರು ರಕ್ಷಿಸಿದ್ದಾರೆ. ಅವುಗಳನ್ನು ಏಪ್ರಿಲ್ 2023 ಮತ್ತು ಡಿಸೆಂಬರ್ 2022 ರಲ್ಲಿ ದಂಪತಿಗಳಿಗೆ ಕ್ರಮವಾಗಿ 2 ಲಕ್ಷ ಮತ್ತು 5 ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

"ಅಪರಾಧ ವಿಭಾಗವು ಇಲ್ಲಿಯವರೆಗೆ ರಕ್ಷಿಸಿದ ಎಲ್ಲಾ ನಾಲ್ಕು ಮಕ್ಕಳನ್ನು ಖಾಸಗಿ ಅನಾಥಾಶ್ರಮದಲ್ಲಿ ಇರಿಸಲಾಗಿದೆ" ಎಂದು ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ ರಾಗಸುಧಾ ಆರ್ ತಿಳಿಸಿದ್ದಾರೆ. ಘಾಟ್ಕೋಪರ್ನ ಅಸಲ್ಫಾ ಗ್ರಾಮದ ಪೂನಂ ಸಂತೋಷ್ ಖರಾಡೆ (29), ನಲಸೊಪರದ ರೀನಾ ರಾಜ್ಕಿಶೋರ್ ಗುಪ್ತಾ (29) ಮತ್ತು ನೈಗಾಂವ್‌ನ ಸ್ವಾತಿ ಸಹದೇವ್ ಭೈರಾ ಎಂಬ ಮೂವರು ಮಹಿಳೆಯರನ್ನು ಅಪರಾಧ ವಿಭಾಗದ ಪೊಲೀಸರ ತಂಡ ಸೋಮವಾರ (ಏಪ್ರಿಲ್ 29) ಬಂಧಿಸಿದೆ. ಅಂಡಾಣು ದಾನಿ ಸ್ನೇಹಾ ಸೂರ್ಯವಂಶಿ ಮೂಲಕ ಹೈದರಾಬಾದ್ ಮತ್ತು ವಿಶಾಖಪಟ್ಟಣಂನಲ್ಲಿ ಮಕ್ಕಳಿಲ್ಲದ ದಂಪತಿಗಳಿಗೆ ಎರಡು ತಿಂಗಳಿಗಿಂತ ಕಡಿಮೆ ವಯಸ್ಸಿನ ಮೂರು ಮಕ್ಕಳನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

IPL_Entry_Point