ಕನ್ನಡ ಸುದ್ದಿ  /  ಕರ್ನಾಟಕ  /  Bidar Election Result: ಬೀದರ್‌ನಲ್ಲಿ 26 ವರ್ಷ ವಯಸ್ಸಿನ ಸಾಗರ್‌ ಖಂಡ್ರೆಗೆ ಗೆಲುವು, ಬಿಜೆಪಿಯ ಹಿರಿಯ ರಾಜಕಾರಣಿ ಭಗವಂತ ಖೂಬಾರಿಗೆ ಸೋಲು

Bidar Election Result: ಬೀದರ್‌ನಲ್ಲಿ 26 ವರ್ಷ ವಯಸ್ಸಿನ ಸಾಗರ್‌ ಖಂಡ್ರೆಗೆ ಗೆಲುವು, ಬಿಜೆಪಿಯ ಹಿರಿಯ ರಾಜಕಾರಣಿ ಭಗವಂತ ಖೂಬಾರಿಗೆ ಸೋಲು

ಬೀದರ್‌ ಲೋಕಸಭಾ ಚುನಾವಣೆ ಫಲಿತಾಂಶ 2024: ಬೀದರ್‌ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್‌ನಿಂದ ಸಾಗರ್‌ ಖಂಡ್ರೆ ಮತ್ತು ಬಿಜೆಪಿಯ ಭಗವಂತ ಖೂಬಾ ಕಣದಲ್ಲಿದ್ದರು. ಕಾಂಗ್ರೆಸ್‌ನ ಸಾಗರ್‌ ಖಂಡ್ರೆ ಇದೀಗ ಗೆಲುವಿನ ನಗೆ ಬೀರಿದ್ದಾರೆ. ಬೀದರ್‌ನಲ್ಲಿ ಭಗವಂತ ಖೂಬಾ ಸೋತಿದ್ದಾರೆ. Bidar Lok Sabha MP Election 2024 Result

ಬೀದರ್‌ ಲೋಕಸಭಾ ಚುನಾವಣೆ ಫಲಿತಾಂಶ 2024
ಬೀದರ್‌ ಲೋಕಸಭಾ ಚುನಾವಣೆ ಫಲಿತಾಂಶ 2024

ಬೆಂಗಳೂರು: ಕೇಂದ್ರ ಲೋಕಸಭಾ ಚುನಾವಣೆ 2024ರ ಫಲಿತಾಂಶದ ಕುರಿತು ಎಲ್ಲರಲ್ಲಿಯೂ ಕುತೂಹಲ ಹೆಚ್ಚಾಗಿದೆ. ಲೋಕಸಭಾ ಚುನಾವಣೆ 2024ರ ಮತಎಣಿಕೆ ಚುರುಕಾಗಿ ಸಾಗಿದೆ. ಬೀದರ್‌ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ (Gulbarga Lok Sabha MP Election 2024 Result) ಹೊರಬಿದ್ದಿದೆ. ಕಾಂಗ್ರೆಸ್‌ ಈ ಬಾರಿ ಈಶ್ವರ್‌ ಖಂಡ್ರೆ (Eshwara Khandre) ಅವರ ಮಗ ಸಾಗರ್‌ ಖಂಡ್ರೆ (Sagar Eshwar Khandre) ಅವರನ್ನು ಕಣಕ್ಕಿಳಿಸಿತ್ತು. ಬಿಜೆಪಿಯಿಂದ ಹಾಲಿ ಸಂಸದ, ಕೇಂದ್ರ ಸಚಿವ ಭಗವಂತ ಖೂಬಾ (Bhagwanth Khuba) ಕಣದಲ್ಲಿದ್ದರು. ಈ ಬಾರಿ ಚುನಾವಣೆಯಲ್ಲಿ ಈಶ್ವರ್‌ ಖಂಡ್ರೆ ತಮ್ಮ ಮಗನನ್ನು ಗೆಲ್ಲಿಸುವ ಸಲುವಾಗಿ ಸಾಕಷ್ಟು ಶ್ರಮವಹಿಸಿದ್ದರು. ತಮ್ಮ ಸಂಪೂರ್ಣ ಶಕ್ತಿ ವಿನಿಯೋಗಿಸಿ ಚುನಾವಣಾ ಪ್ರಚಾರ ಕೈಗೊಂಡಿದ್ದರು. ಇದೇ ಸಮಯದಲ್ಲಿ ಕೇಂದ್ರ ಸಚಿವ ಖೂಬಾ ಅವರಿಗೂ ಇದು ಪ್ರತಿಷ್ಠೆಯ ವಿಷಯವಾಗಿ ಪರಿಣಮಿಸಿತ್ತು. ಚುನಾವಣಾ ಸಮಯದಲ್ಲಿ ಈ ಎರಡು ನಾಯಕರ ನಡುವೆ ಸಾಕಷ್ಟು ಟೀಕೆಗಳು, ಹೇಳಿಕೆಗಳು ಹೊರಬಿದ್ದಿದ್ದವು. ಆದರೆ, ಬಿಜೆಪಿಯ ತಾರಾ ಪ್ರಚಾರಕರು ಭಗವನ್‌ ಖೂಬಾರ ಪ್ರಚಾರಕ್ಕೆ ಬಂದಿರಲಿಲ್ಲ. ಬೀದರ್‌ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವುದು ಡೌಟ್‌ ಎಂಬ ಸಂದೇಹದಲ್ಲಿದ್ದರು. ಇತ್ತಿಚೆಗೆ ಹೊರಬಿದ್ದ ಎಕ್ಸಿಟ್‌ ಪೋಲ್‌ ಬಿಜೆಪಿ ಲೆಕ್ಕಾಚಾರವನ್ನು ಉಲ್ಟಾ ಮಾಡಿತ್ತು. ಬೀದರ್‌ನಲ್ಲಿ ಬಿಜೆಪಿ ಗೆಲುವು ಪಡೆಯುವ ಸೂಚನೆ ನೀಡಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ತಂದಿತ್ತು. ಇದೀಗ ಲೋಕಸಭಾ ಚುನಾವಣೆಯ ಅಂತಿಮ ಫಲಿತಾಂಶ ಬಂದಿದೆ.

ಟ್ರೆಂಡಿಂಗ್​ ಸುದ್ದಿ

ಬೀದರ್‌ನಲ್ಲಿ ಕಾಂಗ್ರೆಸ್‌ನ ಯುವ ಅಭ್ಯರ್ಥಿ ಸಾಗರ್‌ ಖಂಡ್ರೆ ಗೆಲುವು ಪಡೆದಿದ್ದಾರೆ. ಈಶ್ವರ್‌ ಖಂಡ್ರೆಯ ಪುತ್ರ 1 ಲಕ್ಷ 25 ಲಕ್ಷಕ್ಕೂ ಹೆಚ್ಚು ಮತಗಳಿಂದ ಹಿರಿಯ ರಾಜಕಾರಣಿ ಭಗವಂತ ಖೂಬಾ ವಿರುದ್ಧ ಗೆಲುವು ಪಡೆದಿದ್ದಾರೆ. ಸಚಿವ ಈಶ್ವರ್‌ ಖಂಡ್ರೆ ಪುತ್ರ, ಮಾಜಿ ಸಚಿವ ಭೀಮಣ್ಣ ಖಂಡ್ರೆ ಮೊಮ್ಮಗ ಇದೀಗ ಚಿಕ್ಕ ವಯಸ್ಸಿನಲ್ಲಿಯೇ ಎಂಪಿ ಚುನಾವಣೆಯಲ್ಲಿ ಗೆಲುವಿನತ್ತ ಮುಖ ಮಾಡಿದ್ದಾರೆ.

ಬೀದರ್‌ ಲೋಕಸಭೆ ಎಲೆಕ್ಷನ್ ಕ್ವಿಕ್‌ ಲುಕ್‌

ಸಾಗರ್‌ ಖಂಡ್ರೆ (ಕಾಂಗ್ರೆಸ್‌): 1,25 ಲಕ್ಷಕ್ಕೂ ಹೆಚ್ಚು

ಭಗವಂತ ಖೂಬಾ (ಬಿಜೆಪಿ): 

ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಪಡೆದ ಸಾಗರ್‌ ಸಾಗರ್‌ ಖಂಡ್ರೆ ಪರಿಚಯ

ಕಾಂಗ್ರೆಸ್‌ ಮುಖಂಡ ಈಶ್ವರ್‌ ಖಂಡ್ರೆ ಪುತ್ರ ಸಾಗರ್‌ ಈಶ್ವರ್‌ ಖಂಡ್ರೆ. ವಯಸ್ಸು 26. ಸಮಾಜ ಸೇವೆ, ಕೃಷಿ ಮತ್ತು ವಕೀಲಿಕೆ ವೃತ್ತಿಯೆಂದು ತಮ್ಮ ಪ್ರೊಫೈಲ್‌ನಲ್ಲಿ ನಮೂದಿಸಿದ್ದಾರೆ. ಈಶ್ವರ್‌ ಖಂಡ್ರೆಯ ಪುತ್ರರಾಗಿದ್ದುಕೊಂಡು, ರಾಜಕೀಯಕ್ಕೆ ಈ ಚುನಾವಣೆಯ ಮೂಲಕ ಎಂಟ್ರಿ ನೀಡುವ ಪ್ರಯತ್ನ ಮಾಡಿದ್ದಾರೆ.

ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಸೋತ ಭಗವಂತ ಖೂಬಾ ಪರಿಚಯ

ಬಿಜೆಪಿಯ ಹಿರಿಯ ರಾಜಕಾರಣಿ. ಕೇಂದ್ರ ಸರಕಾರದಲ್ಲಿ ರಾಸಾಯನಿಕ, ರಸಗೊಬ್ಬರ, ಹೊಸ ಮತ್ತು ನವೀಕರಿಸಬಹುದಾದ ಇಂಧನಗಳ ರಾಜ್ಯ ಸಚಿವರಾಗಿದ್ದಾರೆ. 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಬೀದರ್‌ನಿಂದ ಇವರು ಗೆಲುವು ಪಡೆದಿದ್ದರು.

ಚುನಾವಣಾ ಕಣ: ಬೀದರ್‌ ಲೋಕಸಭಾ ಕ್ಷೇತ್ರ

ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಬೀದರ್‌ ಲೋಕಸಭಾ ಕ್ಷೇತ್ರ ಹೊಂದಿದೆ. ಕಲಬುರಗಿ ಜಿಲ್ಲೆಯ ಚಿಂಚೋಳಿ, ಆಳಂದ ಕೂಡ ಬೀದರ್‌ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಉಳಿದಂತೆ, ಬೀದರ್‌ನ ಬಸವಕಲ್ಯಾಣ, ಹುಮ್ನಾಬಾದ್, ಬೀದರ್ ದಕ್ಷಿಣ, ಭಾಲ್ಕಿ ಮತ್ತು ಔರಾದ್ ವಿಧಾನಸಭಾ ಕ್ಷೇತ್ರಗಳು ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಭಗವಂತ್‌ ಖೂಬಾ ಇಲ್ಲಿ ಸಂಸದರಾಗಿ ಆಯ್ಕೆಯಾಗಿದ್ದರು. ಅದಕ್ಕೂ ಮೊದಲು 2009ರಲ್ಲಿ ಕಾಂಗ್ರೆಸ್‌ನ ಧರಂ ಸಿಂಗ್‌ ಮತ್ತು 2004ರಲ್ಲಿ ನರಸಿಂಗ್‌ರಾವ್‌ ಸೂರ್ಯವಂಶಿ ಸಂಸದರಾಗಿದ್ದರು.

ಟಿ20 ವರ್ಲ್ಡ್‌ಕಪ್ 2024