ಕನ್ನಡ ಸುದ್ದಿ  /  Karnataka  /  Bidar News: Community Health Camp Organized At Mannakheli Village Bidar

Bidar News: ಮನ್ನಾಖೇಳ್ಳಿ ಗ್ರಾಮದ ವಾರದ ಸಂತೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ

Bidar News: ಮನ್ನಾಖೇಳ್ಳಿ ಗ್ರಾಮದ ವಾರದ ಸಂತೆಯಲ್ಲಿ ಶುಕ್ರವಾರ ಸಮುದಾಯ ಆಧಾರಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಮನ್ನಾಖೇಳ್ಳಿ ಗ್ರಾಮದ ವಾರದ ಸಂತೆಯಲ್ಲಿ ಶುಕ್ರವಾರ ಸಮುದಾಯ ಆಧಾರಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಮನ್ನಾಖೇಳ್ಳಿ ಗ್ರಾಮದ ವಾರದ ಸಂತೆಯಲ್ಲಿ ಶುಕ್ರವಾರ ಸಮುದಾಯ ಆಧಾರಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಬೀದರ್‌: ಜಿಲ್ಲೆಯ ಮನ್ನಾಖೇಳ್ಳಿ ಗ್ರಾಮದ ವಾರದ ಸಂತೆಯಲ್ಲಿ ಶುಕ್ರವಾರ ಸಮುದಾಯ ಆಧಾರಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಬೀದರ್‌ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಬೀದರ್, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಐಸಿಟಿಸಿ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರ ಮನ್ನಾಖೇಳ್ಳಿ ಸಂಯುಕ್ತಾಶ್ರಯದಲ್ಲಿ ಈ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ಮನ್ನಾ ಖೇಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗುಂಡಮ್ಮ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದರು. ಸಸಿಗೆ ನೀರು ಎರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಸಾಮುದಾಯಿಕ ಆರೋಗ್ಯ ಜಾಗೃತಿಯ ಕರಪತ್ರವನ್ನು ಅಲ್ಲಿದ್ದವರಿಗೆಲ್ಲ ಹಂಚಿದರು. ಶಿಬಿರದಲ್ಲಿ ಗ್ರಾಮಸಂತೆಗೆ ಆಗಮಿಸಿದ್ದ 227 ಜನರ ರಕ್ತದೊತ್ತಡ, ಮಧುಮೇಹ, ಕಫ ಮತ್ತು ಎಚ್‌ಐವಿ ಪರೀಕ್ಷೆಗಳನ್ನು ನಡೆಸಲಾಗಿದೆ.

ಈ ಶಿಬಿರದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಮನ್ನಾ ಖೇಳ್ಳಿ ವೈದ್ಯಾಧಿಕಾರಿಗಳಾದ ಡಾ. ಅಶೋಕ್ ಮೈಲಾರೆ, ಡಾ.ಜಯರಾಜ್, ಆಸ್ಪತ್ರೆ ಸಿಬ್ಬಂದಿಗಳಾದ ಭಾಗ್ಯಶ್ರೀ, ಸದಾಶಿವ್ ಗಟಾಟೆ, ಜಟ್ಟಪ್ಪ ಪೂಜಾರಿ, ಅಶೋಕ್ ಕುಮಾರ್, ಯಮುನಾ, ಕೃಷ್ಣರಾಜ, ಬಸವರಾಜ್ ಸಿಂಗ್ರಿ ಮತ್ತು ಎಲ್ಲ ಸ್ವಯಂಸೇವಾ ಸಂಸ್ಥೆಗಳ ಸಿಬ್ಬಂದಿ ಉಪಸ್ಥಿತರಿದ್ದರು.

IPL_Entry_Point