Breaking News: ಬೀದರ್‌ ಜಿಲ್ಲೆಯಲ್ಲಿ ಲಘು ಭೂಕಂಪನ, 8 ತಿಂಗಳಲ್ಲಿ ಮೂರನೇ ಭಾರಿ ಅನುಭವ, ಆತಂಕ ಬೇಡ ಎಂದ ತಜ್ಞರು
ಕನ್ನಡ ಸುದ್ದಿ  /  ಕರ್ನಾಟಕ  /  Breaking News: ಬೀದರ್‌ ಜಿಲ್ಲೆಯಲ್ಲಿ ಲಘು ಭೂಕಂಪನ, 8 ತಿಂಗಳಲ್ಲಿ ಮೂರನೇ ಭಾರಿ ಅನುಭವ, ಆತಂಕ ಬೇಡ ಎಂದ ತಜ್ಞರು

Breaking News: ಬೀದರ್‌ ಜಿಲ್ಲೆಯಲ್ಲಿ ಲಘು ಭೂಕಂಪನ, 8 ತಿಂಗಳಲ್ಲಿ ಮೂರನೇ ಭಾರಿ ಅನುಭವ, ಆತಂಕ ಬೇಡ ಎಂದ ತಜ್ಞರು

Bidar Earthquake ಬೀದರ್‌ ಜಿಲ್ಲೆಯ ಹುಮ್ನಾಬಾದ್‌ನಲ್ಲಿ ಶನಿವಾರ ಸಂಜೆ ಭೂಕಂಪನದ ಅನುಭವವಾಗಿದೆ.

ಬೀದರ್‌ ಜಿಲ್ಲೆಯಲ್ಲಿ ಮತ್ತೆ ಭೂಕಂಪನದ ಅನುಭವವಾಗಿದೆ.
ಬೀದರ್‌ ಜಿಲ್ಲೆಯಲ್ಲಿ ಮತ್ತೆ ಭೂಕಂಪನದ ಅನುಭವವಾಗಿದೆ.

ಬೀದರ್‌: ಬೀದರ್‌ ಜಿಲ್ಲೆಯಲ್ಲಿ ಶನಿವಾರ ಸಂಜೆ ಭೂಕಂಪನವಾದ ಅನುಭವವಾಗಿದೆ. ಕೆಲವೇ ಸೆಕೆಂಡ್‌ಗಳು ಭೂಮಿ ಕಂಪಿಸಿದ್ದು, ಇದು ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (KSNDMC)ದಲ್ಲಿ ದಾಖಲಾಗಿದೆ. ಈ ಕುರಿತು ಕೇಂದ್ರದ ಯಲಹಂಕದಲ್ಲಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರವು ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದೆ. ಬೀದರ್‌ ಜಿಲ್ಲಾಧಿಕಾರಿ ಶಿಲ್ಪಾ ಶರ್ಮ ಅವರ ಮಾಹಿತಿ ಆಧರಿಸಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರೂ ಬೀದರ್‌ ಜಿಲ್ಲೆಯಲ್ಲಿ ಭೂಕಂಪನ ಆಗಿರುವುದನ್ನು ದೃಢೀಕರಿಸಿದ್ದಾರೆ.

ಬೀದರ್‌ ಜಿಲ್ಲೆಯ ಹುಮನಾಬಾದ್‌ ತಾಲ್ಲೂಕಿನ ಸೀತಲಗೇರಾ ಅವರನ್ನು ಕೇಂದ್ರವಾಗಿಟ್ಟುಕೊಂಡು ಭೂಕಂಪನವಾಗಿದೆ. ಇದರ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 2.6 ಇತ್ತು. ಲಘು ಭೂಕಂಪವಾಗಿರುವುದರಿಂದ ಎಲ್ಲಿಯೂ ಯಾವುದೇ ಅನಾಹುತಗಳು ಆಗಿರುವ ವರದಿಗಳಾಗಿಲ್ಲ.ಕಂಪನದ ಅನುಭವದಿಂದ ಹುಮ್ನಾಬಾದ್‌ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಜನ ಭೀತಿಗೊಂಡು ಹೊರಗೆ ಬಂದಿದ್ದಾರೆ. ಕೆಲವೇ ಕ್ಷಣಗಳಲ್ಲಿ ಈ ಅನುಭವವಾಯಿತು. ಏನೂ ತೊಂದರೆಯಾಗಿಲ್ಲ ಎಂದು ಜನ ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ನವೆಂಬರ್‌ ಹಾಗೂ 2024ರ ಮಾರ್ಚ್‌ ತಿಂಗಳಲ್ಲೂ ಇದೇ ರೀತಿ ಭೂಕಂಪನವಾದ ಅನುಭವವನ್ನು ಜಿಲ್ಲೆಯ ಜನ ಅನುಭವಿಸಿದ್ದರು.

ಇದು ಕಡಿಮೆ ಪ್ರಮಾಣದ ಕಂಪನ. ಹಿಂದೆಯೂ ಈ ರೀತಿ ಆಗಿರುವ ಉದಾಹರಣೆಯಿದೆ. ಆತಂಕ ಪಡುವ ಅಗತ್ಯವೇನೂ ಇಲ್ಲ. ಕಂಪನದ ತೀವ್ರತೆ ಹೆಚ್ಚಾದರೆ ಮಾತ್ರ ಅನಾಹುತವಾಗಬಹುದು ಅಷ್ಟೇ# ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

Whats_app_banner