BJP Candidate list: ಕೊನೆಗೂ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಪ್ರಕಟ; ಪಟ್ಟಿಯಲ್ಲಿರುವ ಪ್ರಮುಖರು ಇವರು
BJP Candidates list: ಅಳೆದೂ ತೂಗಿ ಲೆಕ್ಕಾಚಾರ ಹಾಕಿ ಕೊನೆಗೂ 189 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ವರಿಷ್ಠರು ಪ್ರಕಟಿಸಿದ್ದಾರೆ. 224 ಸ್ಥಾನಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯ ಬಳಿಕ, ಈ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸುದ್ದಿಗೋಷ್ಠಿಯ ನೇರ ಪ್ರಸಾರ ಇಲ್ಲಿದೆ.
ರಾಜ್ಯದ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದೆ. ಮೂರು ದಿನಕ್ಕೂ ಹೆಚ್ಚು ಕಾಲ ಸುದೀರ್ಘ ಸಮಾಲೋಚನೆ ನಡೆಸಿದ ಬಳಿಕ ಮಂಗಳವಾರ ರಾತ್ರಿ ಅಂದರೆ ಈಗ ಬಿಜೆಪಿ ವರಿಷ್ಠರು ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಇದು 189 ಅಭ್ಯರ್ಥಿಗಳ ಮೊದಲ ಪಟ್ಟಿಯಾಗಿದ್ದು, ಇದರಲ್ಲಿ 52 ಹೊಸ ಮುಖಗಳಿವೆ. ಅಭ್ಯರ್ಥಿಗಳ ಪಟ್ಟಿಯಲ್ಲಿ 8 ಮಹಿಳೆಯರಿದ್ದಾರೆ. ಒಬಿಸಿ 32, ಎಸ್‌ಸಿ 30, ಎಸ್‌ಟಿ 16 ಅಭ್ಯರ್ಥಿಗಳು ಪಟ್ಟಿಯಲ್ಲಿದ್ದಾರೆ.
ವೃತ್ತಿಗೆ ಅನುಗುಣವಾಗಿ ಗಮನಿಸುವುದಾದರೆ ಅಭ್ಯರ್ಥಿಗಳ ಪಟ್ಟಿಯಲ್ಲಿ 5 ನ್ಯಾಯವಾದಿಗಳು, 9 ಡಾಕ್ಟರ್ಸ್, 3 ಶಿಕ್ಷಣ ತಜ್ಞರು, ಇಬ್ಬರು ನಿವೃತ್ತ ಐಎಎಸ್/ಐಪಿಎಸ್ ಅಧಿಕಾರಿಗಳು, 3 ಮಾಜಿ ಸರ್ಕಾರಿ ನೌಕರರು, 8 ಸಾಮಾಜಿಕ ಕಾರ್ಯಕರ್ತರು ಅಭ್ಯರ್ಥಿಗಳ ಪಟ್ಟಿಯಲ್ಲಿದ್ದಾರೆ.
ಕ್ಷೇತ್ರವಾರು ಅಭ್ಯರ್ಥಿಗಳ ವಿವರ ಹೀಗಿದೆ -
ನಿಪ್ಪಾಣಿ- ಶಶಿಕಲಾ ಜೊಲ್ಲೆ, ಚಿಕ್ಕೋಡಿ - ರಮೇಶ್ ಕಟ್ಟಿ, ಅಥನಿ - ಮಹೇಶ್ ಕುಮಟಹಳ್ಲಿ, ಕಾಗವಾಡ - ಬಾಳಸಾಹೇಬ್ ಪಾಟೀಲ್, ಕುಡಚಿ - ಪಿ ರಾಜೀವ್,
ರಾಯಭಾಗ - ದುರ್ಯೋಧನ ಮಾಲಿಂಗಪ್ಪ, ಹುಕ್ಕೇರಿ - ನಿಖೀಲ್ ಕಟ್ಟಿ, ಹರಭಾವಿ - ಬಾಲಚಂದ್ರ ಜಾರಕಿಹೊಳಿ, ಗೋಕಾಕ್ - ರಮೇಶ್ ಜಾರಕಿಹೊಳಿ,
ಯಮಕನಮರಡಿ - ಬಸವರಾಜ ಹುಂದ್ರಿ, ಬೆಳಗಾವಿ ಉತ್ತರ - ರವಿ ಪಾಟೀಲ್, ಬಳಗಾವಿ ದ - ಅಭಯ್ ಪಾಟೀಲ್, ಬೆಳಗಾವಿ ಗ್ರಾಮೀಣ - ನಾಗೇಶ್ ಮರೋಲ್ಕರ್,
ಭದ್ರಾವತಿ- ಮಂಗೋಟೆ ರುದ್ರೇಶ್, ಸಾಗರ- ಹರತಾಳು ಹಾಲಪ್ಪ, ಶಿಕಾರಿಪುರ- ಬಿ.ವೈ.ವಿಜಯೇಂದ್ರ, ತೀರ್ಥಹಳ್ಳಿ- ಆರಗ ಜ್ಞಾನೇಂದ್ರ, ಶಿವಮೊಗ್ಗ ಗ್ರಾ- ಅಶೋಕನಾಯ್ಕ್, ಸೊರಬ- ಕುಮಾರ ಬಂಗಾರಪ್ಪ
ಈ ಪಟ್ಟಿಯಲ್ಲಿರು ಪ್ರಮುಖರು ಯಾರು? ಎಂಬಿತ್ಯಾದಿ ವಿವರಗಳು ಇಲ್ಲಿವೆ. ಈಗ ಸುದ್ದಿಗೋಷ್ಠಿಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…
ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಇಲ್ಲಿದೆ.
ಇದಕ್ಕೂ ಮುನ್ನ, ಸೋಮವಾರ ಬೆಳಗ್ಗೆ ನವದೆಹಲಿಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಯಡಿಯೂರಪ್ಪ, “ರಾಜ್ಯದಲ್ಲಿ ಮೇ10ರಂದು ನಡೆಯಲಿರುವ ಕರ್ನಾಟಕ ಅಸೆಂಬ್ಲಿ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. 170ರಿಂದ 180ರ ತನಕ ಅಭ್ಯರ್ಥಿಗಳ ಹೆಸರು ಈ ಪಟ್ಟಿಯಲ್ಲಿ ಇರಲಿದ್ದು, ಇಂದು ಸಂಜೆ ಬಿಡುಗಡೆ ಆಗಲಿದೆ” ಎಂದು ಹೇಳಿದರು.
ರಾಷ್ಟ್ರ ರಾಜಧಾನಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಭಾನುವಾರ ಸಂಜೆ, ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಸಿತು. ಪ್ರಧಾನಿ ಮೋದಿ ಜತೆಗೆ ಕೇಂದ್ರ ಸಚಿವರಾದ ಅಮಿತ್ ಶಾ, ಪ್ರಲ್ಹಾದ್ ಜೋಶಿ, ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸಭೆಯಲ್ಲಿ ಪಾಲ್ಗೊಂಡಿದ್ದರು.
ಕರ್ನಾಟಕ ಸಿಎಂ ಬೊಮ್ಮಾಯಿ ಅವರೊಂದಿಗೆ ಇಂದು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಭಾಗವಹಿಸಲು ರಾಷ್ಟ್ರ ರಾಜಧಾನಿಗೆ ತೆರಳುವ ಮುನ್ನ ಯಡಿಯೂರಪ್ಪ ಅವರು, ಪಕ್ಷವು 224 ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರದಲ್ಲೇ ಅಂತಿಮಗೊಳಿಸಲಿದೆ ಎಂದು ಹೇಳಿದರು.
ಬಿಜೆಪಿ ಸಿಇಸಿ ಸಭೆ, ನಾವು ಸಾಧ್ಯವಾದಷ್ಟು ಬೇಗ ಎಲ್ಲ ಸ್ಥಾನಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತೇವೆ. ಅದಕ್ಕಾಗಿಯೇ ನಾನು ಹೋಗುತ್ತಿದ್ದೇನೆ ಎಂದು ಯಡಿಯೂರಪ್ಪ ವಿಮಾನ ಏರುವ ಮುನ್ನ ಹೇಳಿದರು. ಅದೇ ರೀತಿ, ಬಿಜೆಪಿ ಸಂಪೂರ್ಣ ಬಹುಮತ ಪಡೆಯಲಿದ್ದು, ನಾವು ಶೇ 100 ರಷ್ಟು ಸರ್ಕಾರ ರಚಿಸಲಿದ್ದೇವೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ವಿಧಾನಸಭೆ ಚುನಾವಣೆಗೆ (Assembly Elections) ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪಟ್ಟಿ (BJP List) ಎರಡು ಹಂತದಲ್ಲಿ ಅತಿ ಶೀಘ್ರದಲ್ಲಿ ಬಿಡುಗಡೆ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ತಿಳಿಸಿದರು. ಜಗದೀಶ್ ಶೆಟ್ಟರ್ ಅವರು ಕ್ಷೇತ್ರದಲ್ಲಿ ಇನ್ನಷ್ಟು ಕೆಲಸ ಮಾಡಬೇಕಿದೆ. ಅದಕ್ಕೆ ಇನ್ನೊಂದು ಅವಕಾಶ ಬೇಕೆಂದು ಕೇಳಿದ್ದಾರೆ. ಈ ಬಗ್ಗೆ ಹೈಕಮಾಂಡ್ ಗಮನಕ್ಕೆ ತರಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಜೆಪಿಯ ಹಿರಿಯ ರಾಜಕಾರಣಿಗಳೆಲ್ಲ ಒಬ್ಬೊಬ್ಬರಾಗಿ ವಾಲೆಂಟರಿ ರಿಟೈರ್‌ಮೆಂಟ್ ಸ್ಕೀಮ್ (ವಿಆರ್‌ಎಸ್)ಗೆ ಮೊರೆ ಹೋಗುತ್ತಿರುವುದು ಕಂಡುಬಂದಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಂದ ಸ್ವೀಕರಿಸಲ್ಪಟ್ಟ ವಿಆರ್‌ಎಸ್ ಅನ್ನು ಈಗ ಉಳಿದ ನಾಯಕರೂ ಸ್ವೀಕರಿಸತೊಡಗಿದ್ದಾರೆ!
ರಾಜ್ಯ ವಿಧಾನ ಸಭಾ ಚುನಾವಣೆಯ ಹೊಸ್ತಿಲಲ್ಲಿ ಬಹಳಷ್ಟು ಅನಿರೀಕ್ಷಿತ ರಾಜಕೀಯ ವಿದ್ಯಮಾನಗಳಿಗೆ ರಾಜ್ಯ ವೇದಿಕೆಯಾಗುತ್ತಿದೆ. ಆಡಳಿತಾರೂಢ ಬಿಜೆಪಿಗೆ ಆಡಳಿತ ವಿರೋಧಿ ಅಲೆಯ ಬಿಸಿ ತಟ್ಟಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಾರ್ಟಿಯ ನಾಯಕರು ಅದರ ಪ್ರಯೋಜನ ಪಡೆಯಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ