ಶಾಸಕ ಸುರೇಶ್ ಕುಮಾರ್​ಗೆ ಆರೋಗ್ಯದಲ್ಲಿ ಏರುಪೇರು, ಐಸಿಯುನಲ್ಲಿ ಚಿಕಿತ್ಸೆ; ಆವರಿಸಿತೇ ಈ ಮಹಾಮಾರಿ ಸೋಂಕು?-bjp mla suresh kumar hospitalized in bengaluru former minister getting treatment in icu at sheshadripuram apollo prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಶಾಸಕ ಸುರೇಶ್ ಕುಮಾರ್​ಗೆ ಆರೋಗ್ಯದಲ್ಲಿ ಏರುಪೇರು, ಐಸಿಯುನಲ್ಲಿ ಚಿಕಿತ್ಸೆ; ಆವರಿಸಿತೇ ಈ ಮಹಾಮಾರಿ ಸೋಂಕು?

ಶಾಸಕ ಸುರೇಶ್ ಕುಮಾರ್​ಗೆ ಆರೋಗ್ಯದಲ್ಲಿ ಏರುಪೇರು, ಐಸಿಯುನಲ್ಲಿ ಚಿಕಿತ್ಸೆ; ಆವರಿಸಿತೇ ಈ ಮಹಾಮಾರಿ ಸೋಂಕು?

MLA Suresh Kumar: ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ರಾಜಾಜಿನಗರ ಶಾಸಕ ಸುರೇಶ್ ಕುಮಾರ್​ ಅವರು ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಾಸಕ ಸುರೇಶ್ ಕುಮಾರ್​ಗೆ ಆರೋಗ್ಯದಲ್ಲಿ ಏರುಪೇರು
ಶಾಸಕ ಸುರೇಶ್ ಕುಮಾರ್​ಗೆ ಆರೋಗ್ಯದಲ್ಲಿ ಏರುಪೇರು

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿರುವ ರಾಜಾಜಿನಗರ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಸುರೇಶ್‌ ಕುಮಾರ್ ಅವರು ಸೆಪ್ಟೆಂಬರ್ 3ರಂದು ರಾತ್ರಿ ದಿಢೀರ್​​ ಆಸ್ಪತ್ರೆಗೆ ದಾಖಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವು ದಿನಗಳಿಂದಲೂ ತೀವ್ರ ಆಯಾಸಗೊಂಡಿದ್ದರು ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಚಿಕನ್ ಗುನ್ಯಾ ರೂಪಾಂತರಿ ಸೋಂಕಿನಿಂದ ಬಳಲುತ್ತಿದ್ದ ಅವರಿಗೆ ಮಿದುಳು ಹಾಗೂ ಬೆನ್ನುನೋವಿನ ಸಮಸ್ಯೆಗೆ ಒಳಗಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಪ್ರಸ್ತುತ ಶಾಸಕ ಸುರೇಶ್ ಅವರು ಶೇಷಾದ್ರಿಪುರಂ ಅಪೋಲೋ ಹಾಸ್ಪಿಟಲ್​ನಲ್ಲಿ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಲಾಗುತ್ತಿದೆ.

ರಾಜ್ಯ ಕಾಂಗ್ರೆಸ್ ವಿರುದ್ಧ ಬಿಜೆಪಿ ಪಕ್ಷದೊಂದಿಗೆ ಮೈಸೂರು ಪಾದಯಾತ್ರೆ ನಂತರ ಸುರೇಶ್ ತಿರುಪತಿ ಪ್ರವಾಸ ಕೈಗೊಂಡಿದ್ದರು. ಸುರೇಶ್ ಅವರು ಕಳೆದೊಂದು ವಾರದಿಂದ ರೂಪಾಂತರಿ ಚಿಕನ್ ಗುನ್ಯಾ ಎಂದು ಕಾಣಿಸಿಕೊಂಡಿದೆ ಎಂದು ಮಾಹಿತಿ ಲಭ್ಯವಾಗಿದೆ. ಅಲ್ಲದೆ ಬ್ರೈನ್ ಮತ್ತು ಸ್ಪೈನಲ್ ಕಾರ್ಡ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ .

ಹಲವು ದಿನಗಳಿಂದ ಬಳಲಿದ್ದ ಸುರೇಶ್ ಕುಮಾರ್ ಅವರು ಸುಸ್ತಾಗಿದ್ದಾರೆ. ಪ್ರಸ್ತುತ ಅವರಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲವಂತೆ. ಪ್ರಸ್ತುತ ಅವರಿಗೆ 4.5 ಲಕ್ಷದ ನಾಲ್ಕು ಇಂಜೆಕ್ಷನ್ ನೀಡಲಾಗಿದ್ದು, ಇನ್ನೊಂದು ವಾರದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳಲಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.

ಚಿಕುನ್ ಗುನ್ಯಾ ರೂಪಾಂತರಿ ರೋಗದ ಲಕ್ಷಣಗಳೇನು?

ವೈರಸ್ ಸೋಂಕಿನಿಂದ ಉಂಟಾಗುವ ಚಿಕುನ್‌ ಗುನ್ಯಾ ಬಹುತೇಕ ಮುಂಗಾರಿನ ವೇಳೆ ಕಾಣಿಸಿಕೊಳ್ಳುತ್ತದೆ. ಎಯ್ಡೀಸ್ ಇಜಿಪ್ಟಿ ಮತ್ತು ಎಯ್ಡೀಸ್ ಆಲ್ಬೋಪಿಕ್ಟಸ್ ಸೊಳ್ಳೆಗಳು ಈ ವೈರಸ್ ಹಬ್ಬಿಸುತ್ತವೆ. ಈ ಸೊಳ್ಳೆ ಕಚ್ಚಿದಾಗ ಮಾತ್ರ ಮಾನವರಲ್ಲಿ ಈ ರೋಗ ಕಂಡು ಬರುತ್ತದೆ.

1. ಹಠಾತ್ ಜ್ವರ

2. ಕೀಲು ನೋವು

3. ಸ್ನಾಯು ನೋವು

4. ತಲೆನೋವು

5. ವಾಕರಿಕೆ

6. ಆಯಾಸ

7. ದದ್ದು

ಸುರೇಶ್ ಕುಮಾರ್​ ಬೆಳೆದು ಬಂದ ಹಾದಿಯ ಚಿತ್ರಣ

1955ರ ನವೆಂಬರ್​ 11ರಂದು ಜನಿಸಿದ್ದ ಸುರೇಶ್ ಅವರು ಬಿಜೆಪಿ ಹಿರಿಯ ನಾಯಕರೂ ಹೌದು. ಹಾಲಿ ಶಾಸಕನಾಗಿರುವ ಅವರು ಈ ಹಿಂದೆ ಸಚಿವರೂ ಆಗಿದ್ದರು. ಸರಳ ಸಜ್ಜನಿಕೆಯ ರಾಜಕಾರಣಿ ಎಂದೇ ಹೆಸರು ಸಂಪಾದಿಸಿರುವ ಅವರು, ಬೆಂಗಳೂರಿನಲ್ಲಿ ಜನಿಸಿದರು. ಚಿಕ್ಕಂದಿನಿಂದಲೂ ಆರ್​​ಎಸ್​ಎಸ್​ನೊಂದಿಗೆ ಗುರುತಿಸಿಕೊಂಡಿದ್ದಾರೆ.

ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಸೈನ್ಸ್​​ನಲ್ಲಿ ಪದವಿ ಅಧ್ಯಯನ ಮುಗಿಸಿದ್ದ ಸುರೇಶ್ ಅವರು, ಅಂದಿನ ಪ್ರಧಾನಿ ಇಂದಿರಾಗಾಂಧಿ ಹೇರಿದ್ದ ಎಮರ್ಜನ್ಸಿ ವಿರೋಧಿಸಿ ಹೋರಾಟದಲ್ಲಿ ಭಾಗಿಯಾಗಿದ್ದರು. ಈ ಕಾರಣದಿಂದ ಅವರು ಜೈಲಿಗೂ ಹೋಗಿದ್ದರು. ಅಂದು ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ (ಇಂದಿನ ಪರಪ್ಪನ ಅಗ್ರಹಾರ) ಇದ್ದರು.

ಜೈಲಿನಿಂದ ಬಿಡುಗಡೆಯಾದ ನಂತರ 1977-1980ರಲ್ಲಿ ಬೆಂಗಳೂರು ಯೂನಿವರ್ಸಿಟಿಯಲ್ಲಿ ಕಾನೂನು ಪದವಿ ಪಡೆದರು. 1981ರಲ್ಲಿ ವಕೀಲರಾಗಿ ತಮ್ಮ ವೃತ್ತಿ ಬದುಕು ಶುರು ಮಾಡಿದರು. ಆದರೆ ಇದಾದ ಎರಡೇ ವರ್ಷಗಳಲ್ಲಿ ಬಿಜೆಪಿಯಿಂದ 198ರ3ರಲ್ಲಿ ಬಿಬಿಎಂಪಿ ಕಾರ್ಪೋರೇಟರ್ ಆಗಿ ಆಯ್ಕೆಯಾದರು.

ಎರಡು ಬಾರಿ ಈ ಸೇವೆ ಸಲ್ಲಿಸಿದ ಸುರೇಶ್ ಅವರು 1994 ಮತ್ತು 1999ರಲ್ಲಿ 2 ಅವಧಿಗೆ ರಾಜಾಜಿನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ಇದಲ್ಲದೆ, 2008 ಮತ್ತು 2013ರಲ್ಲೂ ಶಾಸಕರಾಗಿ ಮತ್ತೆ ನೇಮಕಗೊಂಡರು. ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅವರು ಶಿಕ್ಷಣ ಸಚಿವರೂ ಆಗಿದ್ದರು. ಇದೀಗ ಶಾಸಕರಾಗಿದ್ದಾರೆ.