ಕನ್ನಡ ಸುದ್ದಿ  /  Karnataka  /  Bjp Mla Virupakshappa Bail Bjp Mla Virupakshappa Moves Hc For Anticipatory Bail In Bribery Case

BJP MLA Virupakshappa bail: ಕ್ಯಾಶ್‌ ಫಾರ್‌ ಕಾಂಟ್ರ್ಯಾಕ್ಟ್‌ ಡೀಲ್;‌ ಹೈಕೋರ್ಟಲ್ಲಿ ಮಾಡಾಳ್‌ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಅರ್ಜಿ

BJP MLA Virupakshappa bail: ಚನ್ನಗಿರಿ ಶಾಸಕರ ಪರ ವಕೀಲರು ಅರ್ಜಿಯ ತುರ್ತು ವಿಚಾರಣೆಯನ್ನು ಕೋರಿ ನ್ಯಾಯಮೂರ್ತಿ ಕೆ.ನಟರಾಜನ್ ಅವರ ಪೀಠವನ್ನು ಸಂಪರ್ಕಿಸಿದರು. ಮಂಗಳವಾರ ಪಟ್ಟಿ ಮಾಡಿದ ನಂತರ ವಿಚಾರಣೆ ನಡೆಸುವುದಾಗಿ ನ್ಯಾಯಪೀಠವು ಹೇಳಿದೆ.

ಚನ್ನಗಿರಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ
ಚನ್ನಗಿರಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ

ಬೆಂಗಳೂರು: ಭ್ರಷ್ಟಾಚಾರ ಕೇಸ್‌ನಲ್ಲಿ ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಕೋರಿ ಸೋಮವಾರ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಚನ್ನಗಿರಿ ಶಾಸಕರ ಪರ ವಕೀಲರು ಅರ್ಜಿಯ ತುರ್ತು ವಿಚಾರಣೆಯನ್ನು ಕೋರಿ ನ್ಯಾಯಮೂರ್ತಿ ಕೆ.ನಟರಾಜನ್ ಅವರ ಪೀಠವನ್ನು ಸಂಪರ್ಕಿಸಿದರು. ಮಂಗಳವಾರ ಪಟ್ಟಿ ಮಾಡಿದ ನಂತರ ವಿಚಾರಣೆ ನಡೆಸುವುದಾಗಿ ನ್ಯಾಯಪೀಠವು ಹೇಳಿದೆ.

ಆಪಾದಿತ ನಗದು-ಗುತ್ತಿಗೆ ಹಗರಣದಲ್ಲಿ, ಶಾಸಕರ ಪುತ್ರ ವಿ ಪ್ರಶಾಂತ್ ಮಾಡಾಳ್‌ ಅವರಿಂದ 8 ಕೋಟಿ ರೂಪಾಯಿಯನ್ನು ಲೋಕಾಯುಕ್ತ ಅಧಿಕಾರಿಗಳು ಕಳೆದ ವಾರ ವಶಪಡಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್‌ ಅವರನ್ನು ನಂಬರ್‌ 1 ಆರೋಪಿಯನ್ನಾಗಿ ಎಫ್‌ಐಆರ್‌ನಲ್ಲಿ ಹೆಸರಿಸಿದ್ದಾರೆ.

ವಿರೂಪಾಕ್ಷಪ್ಪ ಅಧ್ಯಕ್ಷರಾಗಿದ್ದ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ ಕಚೇರಿಯಲ್ಲಿ 40 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಪ್ರಶಾಂತ್‌ ಮಾಡಾಳ್‌ ಲೋಕಾಯುಕ್ತರ ಬಲೆಗೆ ಬಿದ್ದಿದ್ದರು. ಕೋಟ್ಯಂತರ ರೂಪಾಯಿ ನಗದು ವಶಪಡಿಸಿದ್ದರು. ಈ ವಿದ್ಯಮಾನದ ಬೆನ್ನಿಗೆ ವಿರೂಪಾಕ್ಷಪ್ಪ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಕೆಎಸ್‌ಡಿಎಲ್ ಕಚೇರಿಯಲ್ಲಿ 2 ಕೋಟಿ ರೂ. ಮತ್ತು ಪ್ರಶಾಂತ್ ಮನೆಯಿಂದ 6 ಕೋಟಿ ರೂ. ಒಟ್ಟಾರೆಯಾಗಿ 8.23 ​​ಕೋಟಿ ರೂಪಾಯಿ ನಗದು, ಅಪಾರ ಪ್ರಮಾಣದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ಕರ್ನಾಟಕದ ವಿವಿಧ ಭಾಗಗಳಲ್ಲಿ ಭೂಮಿಯಲ್ಲಿ ದೊಡ್ಡ ಹೂಡಿಕೆಗಳು ಪತ್ತೆಯಾಗಿವೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ಈ ನಡುವೆ, ತಮ್ಮ ಬಗ್ಗೆ ಅವಹೇಳನಕಾರಿ ಸುದ್ದಿಗಳನ್ನು ಪ್ರಕಟಿಸದಂತೆ ಮಾಧ್ಯಮ ಸಂಸ್ಥೆಗಳಿಗೆ ತಡೆಯಾಜ್ಞೆ ನೀಡುವಂತೆ ಕೋರಿ ವಿರೂಪಾಕ್ಷಪ್ಪ ಅವರು ಬೆಂಗಳೂರಿನ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಇಂದು ಲಂಚ ಪ್ರಕರಣದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

“#ಮೈಸೂರು ಸ್ಯಾಂಡಲ್ ಸೋಪ್ ಲಂಚದ 4ನೇ ದಿನ! ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಇನ್ನೂ ತಲೆಮರೆಸಿಕೊಂಡಿದ್ದಾರೆ. ಬೊಮ್ಮಾಯಿ ಸರ್ಕಾರವು ತಲೆಮರೆಸಿಕೊಂಡಿರುವ ಶಾಸಕನನ್ನು ಬಂಧಿಸಲು ಸಾಧ್ಯವಾಗದಿದ್ದರೆ, ಅದು #ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಅಪರಾಧಿಗಳನ್ನು ಹೇಗೆ ನಿಭಾಯಿಸುತ್ತದೆ? ಶೀಘ್ರದಲ್ಲೇ ಲಂಚದ ಗೇಟ್ ಕುರಿತು ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲಾಗುವುದು. ಗೃಹ ಸಚಿವರು ಮತ್ತು ಮುಖ್ಯಮಂತ್ರಿ ಪದತ್ಯಾಗ ಮಾಡಬೇಕಾದ ಸನ್ನಿವೇಶ ಇದು" ಎಂದು ರಣದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.

ಇನ್ನೂ ಕೆಲವರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆಯೇ ಎಂದು ತಿಳಿದುಕೊಳ್ಳಲು ಯತ್ನಿಸಿದರು.

ಬಿಜೆಪಿ ಶಾಸಕನ ಪುತ್ರ ಪ್ರಶಾಂತ್‌ ಮಾಡಾಳ್‌ ಅವರು ಮಾರ್ಚ್‌ 3ರಂದು ಬಂಧಿಸಲ್ಪಟ್ಟಾಗ ಪೇಪರ್‌ ತಿಂದಿದ್ದಾರಾ? ಆ ಚೀಟಿಯಲ್ಲಿ ಅಪರಾಧ ವಿಭಾಗದ ಡಿಸಿಪಿ ಯತೀಶ್‌ ಚಂಧ್ರ ಐಪಿಎಸ್‌ ಅವರ ಹೆಸರೂ ಬರೆದಿತ್ತಾ? ಚೀಟಿಯಲ್ಲಿ ಇಬ್ಬರು ರಾಜಕಾರಣಿಗಳ ಮಕ್ಕಳ ಹೆಸರೂ ಇದೆಯೇ? ಯಾರು ಎಲ್ಲರೂ ಹಣವನ್ನು ಸ್ವೀಕರಿಸಿದ್ದರಾ? ಎಂದು ಸುರ್ಜೇವಾಲಾ ಪ್ರಶ್ನಿಸಿದ್ದಾರೆ.

ಗಮನಿಸಬಹುದಾದ ಸುದ್ದಿಗಳು

ನೇಮಕಾತಿ ನಿಯಮದ ಲೋಪ ದುರ್ಬಳಕೆ?; ಪೊಲೀಸ್ ಇಲಾಖೆಯಲ್ಲಿದ್ದಾರಂತೆ ಗರಿಷ್ಠ ಅವಧಿ ಮೀರಿದ ಪ್ರೊಬೇಷನರಿಗಳು!

ಇಲಾಖೆ ನಿಗದಿ ಮಾಡಿದ ಗರಿಷ್ಠ ಪ್ರೊಬೇಷನರಿ ಕಾಲಮಿತಿ ಮೀರಿದರೂ, ಇಲಾಖಾ ಪರೀಕ್ಷೆ ಉತ್ತೀರ್ಣರಾಗದ, ತರಬೇತಿ ಮುಗಿಸದ ಅಧಿಕಾರಿ, ಸಿಬ್ಬಂದಿ ವರ್ಗದ ವಿರುದ್ಧ ಕ್ರಮ ಜರುಗಿಸುವುದಕ್ಕೆ ಡಿಜಿಪಿ ಸೂಚನೆ ನೀಡಿದ್ದಾರೆ ಎಂಬುದು ಈ ಸಂಚಲನಕ್ಕೆ ಕಾರಣ. ಪೊಲೀಸ್‌ ಇಲಾಖೆಯಲ್ಲಿ ಪ್ರೊಬೇಷನರಿ ಅವಧಿಯು ಕನಿಷ್ಠ 2 ವರ್ಷ 6 ತಿಂಗಳು.

ರಾಜ್ಯದ ಪೊಲೀಸ್‌ ಇಲಾಖೆಯಲ್ಲಿ ಪ್ರೊಬೇಷನರಿಯ ಗರಿಷ್ಠ ಅವಧಿ ಮೀರಿದರೂ ಪ್ರೊಬೇಷನರಿಯಾಗಿಯೇ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿ ವರ್ಗದ ವಿಚಾರ ಪೊಲೀಸ್‌ ವಲಯದಲ್ಲಿ ಚರ್ಚೆಗೆ ಒಳಗಾಗಿದೆ. ಡಿಜಿಪಿ ರವಾನಿಸಿರುವ ಸೂಚನೆ ಈ ಸಂಚಲನ ಸೃಷ್ಟಿಸಿದೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

ಶ್ರಮಿಕರಿಗಾಗಿ ಶ್ರಮಿಕ್‌ ನಿವಾಸ್‌ ವಸತಿ ಯೋಜನೆ; ಏನಿದು ಯೋಜನೆ - ಯಾರು ಫಲಾನುಭವಿಗಳು?

ಶ್ರಮಿಕರಿಗಾಗಿಯೇ ಇರುವ ಶ್ರಮಿಕ್ ನಿವಾಸ್ ಎಂಬ ವಸತಿ ಯೋಜನೆ ರಾಜ್ಯದಲ್ಲಿ ಶೀಘ್ರದಲ್ಲೇ ಜಾರಿಯಾಗಲಿದೆ. ಇದು ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಕಾರ್ಮಿಕ ಇಲಾಖೆ ಇದನ್ನು ರೂಪಿಸಿದೆ. ಇಂತಹ ಯೋಜನೆ ದೇಶದಲ್ಲೇ ಮೊದಲು ಎಂದು ಇಲಾಖೆ ಮೂಲಗಳು ತಿಳಿಸಿವೆ.

ರಾಜ್ಯ ಕಾರ್ಮಿಕ ಇಲಾಖೆ ಜಾರಿ ಮಾಡಿರುವ ಈ ಮಹತ್ವಾಕಾಂಕ್ಷಿ ಯೋಜನೆಯಿಂದ ಶ್ರಮಿಕ ವರ್ಗದ, ಅದರಲ್ಲೂ ವಲಸೆ ಕಾರ್ಮಿಕರ, ಬಹು ದಿನಗಳ ವಸತಿ ಸಮಸ್ಯೆ ನಿವಾರಣೆ ಆಗಲಿದೆ. ದೊಡ್ಡಬಳ್ಳಾಪುರದಲ್ಲಿ “ಶ್ರಮಿಕ್ ನಿವಾಸ್” ವಸತಿ ಸಮುಚ್ಚಯ ಶೀಘ್ರವೇ ಲೋಕಾರ್ಪಣೆಗೊಳ್ಳಲಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ತಿಳಿಸಿದ್ದಾರೆ. ಇಲ್ಲಿದೆ ಫುಲ್‌ ಡಿಟೇಲ್ಸ್‌

IPL_Entry_Point