ಹಣಕ್ಕಾಗಿ ಮಾವನಿಂದಲೇ ಅಶ್ಲೀಲ ವೀಡಿಯೋ, ಫೋಟೋ ಬಹಿರಂಗ ಮಾಡುವ ಬೆದರಿಕೆ; ಬೆಂಗಳೂರು ಟೆಕ್ಕಿ ಆತ್ಮಹತ್ಯೆ
ಕನ್ನಡ ಸುದ್ದಿ  /  ಕರ್ನಾಟಕ  /  ಹಣಕ್ಕಾಗಿ ಮಾವನಿಂದಲೇ ಅಶ್ಲೀಲ ವೀಡಿಯೋ, ಫೋಟೋ ಬಹಿರಂಗ ಮಾಡುವ ಬೆದರಿಕೆ; ಬೆಂಗಳೂರು ಟೆಕ್ಕಿ ಆತ್ಮಹತ್ಯೆ

ಹಣಕ್ಕಾಗಿ ಮಾವನಿಂದಲೇ ಅಶ್ಲೀಲ ವೀಡಿಯೋ, ಫೋಟೋ ಬಹಿರಂಗ ಮಾಡುವ ಬೆದರಿಕೆ; ಬೆಂಗಳೂರು ಟೆಕ್ಕಿ ಆತ್ಮಹತ್ಯೆ

ಅಶ್ಲೀಲ ಫೋಟೋ ಹಾಗೂ ವೀಡಿಯೋಗಳನ್ನು ಬಹಿರಂಗಗೊಳಿಸುವಾಗಿ ಬೆದರಿಕೆ ಹಾಕುತ್ತಿದ್ದ ಮಾವನ ಕಾಟ ತಾಳಲಾರದೇ ಟೆಕ್ಕಿಯೊಬ್ಬರು ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೆಂಗಳೂರಿನಲ್ಲಿ ಟೆಕ್ಕಿಯೊಬ್ಬಳು ಮಾವನ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ
ಬೆಂಗಳೂರಿನಲ್ಲಿ ಟೆಕ್ಕಿಯೊಬ್ಬಳು ಮಾವನ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ

ಬೆಂಗಳೂರು: ಪತ್ನಿ ಅಣ್ಣನ ಮಗಳ ಅಶ್ಲೀಲ ವೀಡಿಯೋ ಹಾಗೂ ಫೋಟೋಗಳನ್ನು ಇಟ್ಟುಕೊಂಡು ಹಣಕ್ಕಾಗಿ ಬೇಡಿಕೆ ಇಟ್ಟು ಬೆದರಿಕೆ ಹಾಕುತ್ತಿದ್ದ ಮಾವನ ಕಾಟ ತಾಳಲಾರದೇ ಬೆಂಗಳೂರಿನ ಟೆಕ್ಕಿ ಒಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವತಿ ಗುರುವಾರ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಘಟನೆ ಹಿನ್ನೆಲೆಯಲ್ಲಿ ಕಿರುಕುಳ ನೀಡಿದ ಆರೋಪದ ಮೇಲೆ ಯುವತಿಯ ಮಾವ ಪ್ರವೀಣ್‌ಸಿಂಗ್‌ ಎಂಬಾತನನ್ನು ಬಂಧಿಸಲಾಗಿದೆ. ಇದಲ್ಲದೇ ಆಕೆಯ ಅತ್ತೆ ಕೂಡ ಆತದೊಂದಿಗೆ ಸೇರಿಕೊಂಡು ಬೆಂಬಲ ನೀಡಿದ ದೂರುಗಳಿದ್ದು. ಈ ಕುರಿತು ವಿಚಾರಣೆ ನಡೆಸುವುದಾಗಿ ಪ್ರಕರಣ ದಾಖಲಿಸಿಕೊಂಡಿರುವ ಬೆಂಗಳೂರಿನ ಎಚ್‌ಎಎಲ್‌ ಪೊಲೀಸರು ತಿಳಿಸಿದ್ದಾರೆ.

24 ವರ್ಷದ ಯುವತಿ ಪದವಿ ಓದುವಾಗಿನಿಂದಲೂ ತಮ್ಮ ಮಾವ ಹಾಗೂ ಸೋದರ ಅತ್ತೆ ಜತೆ ಬೆಂಗಳೂರಿನಲ್ಲಿಯೇ ನೆಲೆಸಿದ್ದರು. ಎರಡು ವರ್ಷದ ಹಿಂದೆಯೇ ಪದವಿ ಮುಗಿಸಿ ನಂತರ ಸಾಫ್ಟ್‌ವೇರ್‌ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಆಕೆಯ ಕೆಲವು ಫೋಟೋ ಹಾಗೂ ವೀಡಿಯೋಗಳನ್ನು ಮಾವ ಇಟ್ಟುಕೊಂಡಿದ್ದ. ಅವುಗಳನ್ನು ಇಟ್ಟುಕೊಂಡು ಕೆಲ ದಿನಗಳಿಂದ ಆತ ಹಣ ನೀಡುವಂತೆ ಯುವತಿಗೆ ಒತ್ತಾಯ ಮಾಡುತ್ತಲೇ ಇದ್ದ. ಹಣ ನೀಡದೇ ಇದ್ದರೆ ನಿಮ್ಮ ತಂದೆ ತಾಯಿಗೆ ಮುಂದೆ ಬಹಿರಂಗಪಡಿಸುವೆ ಎಂದು ಬೆದರಿಕೆಯನ್ನೂ ಹಾಕುತ್ತಿದ್ದ.

ಬೆಂಗಳೂರಿನ ಕುಂದಲಹಳ್ಳಿ ಹೊಟೇಲ್‌ಗೆ ಬರುವಂತೆ ಪೀಡಿಸಿದ್ದ.ಇದರಿಂದ ರೋಸಿ ಹೋಗಿದ್ದ ಆಕೆ ಭಾನುವಾರವೇ ಮನೆ ಬಿಟ್ಟು ಬೆಂಗಳೂರಿನ ಕುಂದಲಹಳ್ಳಿಯಲ್ಲಿ ಲಾಡ್ಜ್‌ಗೆ ಬಂದಿದ್ದಳು. ಈ ವೇಳೆ ಪೆಟ್ರೋಲ್‌ ಅನ್ನು ತಂದಿಟ್ಟುಕೊಂಡಿದ್ದಳು. ಕೊಠಡಿಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಆಗ ಅಲ್ಲಿಯೇ ದ್ದ ಮಾವ ಬೆಂಕಿಯನ್ನು ಆರಿಸಲು ಪ್ರಯತ್ನಿಸಿದ್ದ ಇದನ್ನು ಗಮನಿಸಿದ್ದ ಹೊಟೇಲ್‌ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆನಂತರ ಆಸ್ಪತ್ರೆಗೆ ಆಕೆಯನ್ನು ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಯುವತಿ ಮೃತಪಟ್ಟಿದ್ದಾಳೆ.

ಈ ಕುರಿತು ಮಾಹಿತಿ ನೀಡಿರುವ ವೈಟ್‌ಫೀಲ್ಡ್‌ ಡಿಸಿಪಿ ಶಿವಕುಮಾರ್‌ ಗುಣಾರಿ, ಯುವತಿ ಮಾವ ಲಾಡ್ಜ್‌ಗೆ ಆಗಮಿಸಿ ಆಕೆ ಅಲ್ಲಿಗೆ ಬರುವಂತೆ ಒತ್ತಾಯಿಸಿದ್ದ. ಹಣ ನೀಡುವಂತೆಯೂ ಬೆದರಿಕೆ ಹಾಕಿದ್ದ. ಈ ಕಾರಣದಿಂದ ಆಕೆ ಅಲ್ಲಿಗೆ ಆಗಮಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ವಿಚಾರಣೆ ವೇಳೆ ತಿಳಿದಿತ್ತು. ಈ ಸಂಬಂಧ ಪ್ರವೀಣ್‌ ಸಿಂಗ್‌ ಎಂಬಾತನನ್ನು ಬಂಧಿಸಲಾಗಿದೆ. ಯುವತಿಗೆ ಸಂಬಂಧಿಸಿದ ಕೆಲವು ವೀಡಿಯೋಗಳು ಹಾಗೂ ಫೋಟೋಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೆನ್‌ಡ್ರೈವ್‌ ಒಂದನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಆರು ವರ್ಷದಿಂದ ಆಕೆ ಮಾವ ಹಾಗೂ ಅತ್ತೆಯ ಬಳಿಯೇ ಇದ್ದಳು. ಅವರೊಂದಿಗೆ ಪ್ರವಾಸ ಹೋಗುವುದು ಕೂಡ ಇತ್ತು. ಇವೆಲ್ಲವೂ ಆಗಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಈ ಕುರಿತು ತನಿಖೆ ನಡೆಯಬೇಕು ಎನ್ನುವುದು ಯುವತಿ ತಾಯಿಯ ಒತ್ತಾಯವಾಗಿದೆ.

ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ /

ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.

Whats_app_banner