ಕನ್ನಡ ಸುದ್ದಿ  /  Karnataka  /  Bmtc Bus Upi Payment: Bangalore Bmtc Passengers Can Use Upi To Pay Bus Tickets

BMTC Bus UPI Payment: ಬಿಎಂಟಿಸಿ ಬಸ್‌ನಲ್ಲಿ ಗೂಗಲ್‌ ಪೇ, ಫೋನ್‌ ಪೇ, ಯುಪಿಐ ಪಾವತಿ ಮೂಲಕ ಟಿಕೆಟ್‌ ಪಡೆಯಲು ಅವಕಾಶ

ಬಿಎಂಟಿಸಿ ಬಹುತೇಕ ಬಸ್‌ ನಿರ್ವಾಹಕರಿಗೆ ಆ್ಯಂಡ್ರಾಯ್ಡ್‌ ಸೌಲಭ್ಯದ ವಿದ್ಯುನ್ಮಾನ ಟಿಕೆಟ್‌ ಯಂತ್ರ (ETM) ನೀಡಲಾಗುತ್ತಿದ್ದು, ಇದಕ್ಕೆ ಗೂಗಲ್‌ ಪೇ, ಫೋನ್‌ ಪೇ, ಭೀಮ್‌ ಇತ್ಯಾದಿ ಯುಪಿಐ ಮೂಲಕ ಸ್ಕ್ಯಾನ್‌ ಮಾಡಬಹುದಾದ ಯುಪಿಐ ವ್ಯವಸ್ಥೆ ಅಳವಡಿಸಲಾಗುತ್ತಿದೆ.

BMTC Bus UPI Payment: ಬಿಎಂಟಿಸಿ ಬಸ್‌ನಲ್ಲಿ ಗೂಗಲ್‌ ಪೇ, ಫೋನ್‌ ಪೇ, ಯುಪಿಐ ಪಾವತಿ ಮೂಲಕ ಟಿಕೆಟ್‌ ಖರೀದಿಸಲು ಅವಕಾಶ
BMTC Bus UPI Payment: ಬಿಎಂಟಿಸಿ ಬಸ್‌ನಲ್ಲಿ ಗೂಗಲ್‌ ಪೇ, ಫೋನ್‌ ಪೇ, ಯುಪಿಐ ಪಾವತಿ ಮೂಲಕ ಟಿಕೆಟ್‌ ಖರೀದಿಸಲು ಅವಕಾಶ

ಬೆಂಗಳೂರು: ಉದ್ಯಾನನಗರಿಯಲ್ಲಿ ಪ್ರತಿನಿತ್ಯ ಸಾವಿರಾರು ಬಿಎಂಟಿಸಿ ಬಸ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಬಹುತೇಕ ಬಸ್‌ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತ ಇರುತ್ತವೆ. ಇಂತಹ ಸಮಯದಲ್ಲಿ ಎಲ್ಲರಿಗೂ ಟಿಕೆಟ್‌ ನೀಡುವುದು, ಚಿಲ್ಲರೆ ನೀಡುವುದು ಕಂಡೆಕ್ಟರ್‌ಗಳಿಗೆ ತ್ರಾಸದಾಯಕವಾಗಿರುತ್ತದೆ. ಚಿಲ್ಲರೆ ಕೊಡಿ, ಚಿಲ್ಲರೆ ಇದ್ರೆ ಮಾತ್ರ ಬಸ್‌ ಹತ್ತಿ ಎಂಬ ಡೈಲಾಗ್‌ಗಳು ಸಾಮಾನ್ಯ. ಆದರೆ, ಮುಂದಿನ ದಿನಗಳಲ್ಲಿ ಆನ್‌ಲೈನ್‌ ಮೂಲಕ ಟಿಕೆಟ್‌ ಪಡೆಯುವ ಅವಕಾಶವನ್ನು ಬಿಎಂಟಿಸಿ ಬಸ್‌ನಲ್ಲಿ ಪಡೆಯಬಹುದು.

ಈ ಹಿಂದೆಯೇ ಇಂತಹ ವ್ಯವಸ್ಥೆ ಅಳವಡಿಸಲಾಗಿದ್ದರೂ, ಬಹುತೇಕ ಬಸ್‌ಗಳಲ್ಲಿ ಇಂತಹ ಸೌಲಭ್ಯ ನೀಡಲಾಗಿರಲಿಲ್ಲ. ಒಂದಿಷ್ಟು ಸಮಯದ ಬಳಿಕ ಈ ವ್ಯವಸ್ಥೆ ನಿಲ್ಲಿಸಲಾಗಿತ್ತು. ಕೊರೋನಾ ಹೆಚ್ಚಾಗಿದ್ದ ಸಂದರ್ಭದಲ್ಲಿ ಬಿಎಂಟಿಸಿ ನಗದು ರಹಿತ ಟಿಕೆಟ್‌ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ನಂತರ ಅನೇಕ ಸಮಸ್ಯೆಗಳು ಕಂಡುಬಂದು ಸ್ಥಗಿತಗೊಂಡಿತ್ತು.

ಬಿಎಂಟಿಸಿ ಬಹುತೇಕ ಬಸ್‌ ನಿರ್ವಾಹಕರಿಗೆ ಆ್ಯಂಡ್ರಾಯ್ಡ್‌ ಸೌಲಭ್ಯದ ವಿದ್ಯುನ್ಮಾನ ಟಿಕೆಟ್‌ ಯಂತ್ರ (ETM) ನೀಡಲಾಗುತ್ತಿದ್ದು, ಇದಕ್ಕೆ ಗೂಗಲ್‌ ಪೇ, ಫೋನ್‌ ಪೇ, ಭೀಮ್‌ ಇತ್ಯಾದಿ ಯುಪಿಐ ಮೂಲಕ ಸ್ಕ್ಯಾನ್‌ ಮಾಡಬಹುದಾದ ಯುಪಿಐ ವ್ಯವಸ್ಥೆ ಅಳವಡಿಸಲಾಗುತ್ತಿದೆ.

"ಈಗಾಗಲೇ ಪ್ರಾಯೋಗಿಕವಾಗಿ 1,500 ಇಟಿಎಂಗಳನ್ನು ನಿರ್ವಾಹಕರಿಗೆ ನೀಡಲಾಗಿದೆ. ಈ ವರ್ಷದ ಅಂತ್ಯದೊಳಗೆ ಎಂಟು ಸಾವಿರ ಹೊಸ ಇಟಿಎಂಗಳನ್ನು ಅಳವಡಿಸಿಕೊಳ್ಳಲಿದೆʼʼ ಎಂದು ಬಿಎಂಟಿಸಿ ನಿರ್ದೇಶಕ (ಐಟಿ) ಎ.ವಿ ಸೂರ್ಯ ಸೇನ್ ಹೇಳಿದ್ದಾರೆ.

ಡಿಜಿಟಲ್ ವ್ಯಾಲೆಟ್ ಆಗಿ ಕಾರ್ಯನಿರ್ವಹಿಸುವ ಮೊಬಿಲಿಟಿ ಕಾರ್ಡ್, ಪ್ರಯಾಣಿಕರಿಗೆ ವಿವಿಧ ಸಾರಿಗೆ ಮತ್ತು ಸಂಬಂಧಿತ ಸೇವೆಗಳಾದ ಬೈಕು ಬಾಡಿಗೆ ಅಥವಾ ಪಾರ್ಕಿಂಗ್‌ಗೆ ಪಾವತಿ ಮಾಡಲು ಅವಕಾಶ ನೀಡುತ್ತದೆ. 2019 ರಲ್ಲಿ ಇದನ್ನು ಪ್ರಾರಂಭಿಸಲಾಗಿದ್ದರೂ, ಅಗತ್ಯ ಮೂಲಸೌಕರ್ಯಗಳ ಕೊರತೆಯಿಂದಾಗಿ ಜಾರಿಗೆ ಬಂದಿರಲಿಲ್ಲ.

ಕಳೆದ ಎರಡು ವರ್ಷಗಳಿಂದ ಸೂಕ್ತವಾದ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳನ್ನು (ಇಟಿಎಂ) ಹುಡುಕುತ್ತಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ಈಗ ಅದನ್ನು ಜಾರಿಗೆ ತರಲು ನಿರ್ಧರಿಸಿದೆ.

ಡಿಸೆಂಬರ್ ಅಂತ್ಯದ ವೇಳೆಗೆ ನಿಗಮವು ಡಿಜಿಟಲ್ ಪಾವತಿಗೆ ಅನುವು ಮಾಡಿಕೊಡುವ 8,000 ಹೊಸ ಇಟಿಎಂಗಳನ್ನು ಅಳವಡಿಸಿಕೊಳ್ಳಲಿದೆ ಎಂದು ಬಿಎಂಟಿಸಿ ನಿರ್ದೇಶಕ (ಐಟಿ) ಎ. ವಿ. ಸೂರ್ಯ ಸೇನ್ ಹೇಳಿದ್ದಾರೆ. ' ಈ ಯಂತ್ರಗಳು ಟಿಕೆಟ್‌ಗಳನ್ನು ಮುದ್ರಿಸುವ ಜೊತೆಗೆ ಯುಪಿಐ ಆಧಾರಿತ ಪಾವತಿಗಳು ಮತ್ತು ಮೊಬಿಲಿಟಿ ಕಾರ್ಡ್‌ಗಳಿಂದಾಗುವ ಪಾವತಿಗಳನ್ನು ಒಳಗೊಂಡಂತೆ ಕಾರ್ಡ್ ಬಳಕೆಗೂ ಅವಕಾಶ ನೀಡುತ್ತವೆ' ಎಂದು ಮಾಹಿತಿ ನೀಡಿದ್ದಾರೆ.

ಆ್ಯಂಡ್ರಾಯ್ಡ್‌ ತಂತ್ರಜ್ಞಾನವನ್ನು ಹೊಂದಿರುವ ಹೊಸ ಟಿಕೆಟ್ ಯಂತ್ರವು ಟಚ್‌ ಸ್ಕ್ರೀನ್‌ ತಂತ್ರಜ್ಞಾನ ಹೊಂದಿದೆ. ಟಿಕೆಟ್‌ ಕೊಡುವುದು ಮಾತ್ರವಲ್ಲದೆ ವೈಫೈ ಕನೆಕ್ಟ್, ಯುಪಿಐ ಕ್ಯುಆರ್‌ ಕೋಡ್‌ ಪ್ರದರ್ಶನ ಸೌಲಭ್ಯ ಒಳಗೊಂಡಿದೆ. ಪ್ರಯಾಣಿಕರು ಹತ್ತುವ ಹಾಗೂ ಇಳಿಯುವ ನಿಲ್ದಾಣದ ಹೆಸರನ್ನು ಯಂತ್ರದಲ್ಲಿ ನಮೂದಿಸಿದರೆ ದರ ತೋರಿಸಲಿದೆ. ಮುಂದುವರಿದಾಗ ನಗದು ಮತ್ತು ಯುಪಿಐ ಪಾವತಿ ಎಂಬ ಎರಡು ಆಯ್ಕೆಗಳು ಸ್ಕ್ರೀನ್ ಮೇಲೆ ತೋರಿಸುತ್ತದೆ. ಯುಪಿಐ ಆಯ್ಕೆ ಮಾಡಿದರೆ ಸ್ಕ್ರೀನ್​ ಮೇಲೆ ಬಾರ್‌ ಕೋಡು ಬರುತ್ತದೆ. ಪ್ರಯಾಣಿಕರು ಗೂಗಲ್ ಪೇ ಅಥವಾ ಫೋನ್​ಪೇ ಮೂಲಕ ಸ್ಕ್ಯಾನ್ ಮಾಡಿ ಹಣ ಪಾವತಿಸಬಹುದು. ಹಣ ಪಾವತಿಯಾಗುತ್ತಿದ್ದಂತೆ ಆ್ಯಂಡ್ರಾಯ್ಡ್‌ ತಂತ್ರಜ್ಞಾನ ಆಧಾರಿತ ಯಂತ್ರದಿಂದ ಟಿಕೆಟ್‌ ಬರಲಿದೆ.

ಆದರೆ, ಯುಪಿಐ ಪಾವತಿ ವ್ಯವಸ್ಥೆಯಲ್ಲಿ ಹಣ ಕಟ್‌ ಆಗುವುದು, ಯುಪಿಐ ಕೆಲಸ ಮಾಡದೆ ಇರುವುದು ಇತ್ಯಾದಿ ತೊಂದರೆಗಳು ಇವೆ. ಈಗಾಗಲೇ ಬೆಂಗಳೂರು ಟ್ರಾಫಿಕ್‌ ಪೊಲೀಸರ ಬಳಿ ಇರುವ ಇಂತಹ ವ್ಯವಸ್ಥೆಗಳಲ್ಲಿ ರಸೀದಿ ಬರಲು ಕೆಲವೊಮ್ಮೆ ಗಂಟೆಗಟ್ಟಲೆ ಕಾಯಬೇಕಿರುತ್ತದೆ.

ಎಲ್ಲಾದರೂ ಬಸ್‌ನೊಳಗೂ ಈ ರೀತಿ ಟಿಕೆಟಿಂಗ್‌ ಯಂತ್ರದಿಂದ ಟಿಕೆಟ್‌ ಹೊರಬರುವುದು ವಿಳಂಬವಾದರೆ ಪ್ರಯಾಣಿಕರು ಕಷ್ಟಪಡಬೇಕಾಗಬಹುದು. ಕಂಡೆಕ್ಟರ್‌ ಜತೆಗೆ ಪ್ರಯಾಣಿಕ ಅನಗತ್ಯ ವಾದವಿವಾದಗಳಿಗೂ ಕಾರಣವಾಗಬಹುದು.

IPL_Entry_Point

ವಿಭಾಗ