ನೀವು ನಮ್ಮ ಮೆಟ್ರೋ ಪ್ರಯಾಣಿಕರಾ, ಝೀರೋ ಕೆವೈಸಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಗಮನಿಸಿದ್ದೀರಾ, ಏನಿದರ ಉಪಯೋಗ, ಇಲ್ಲಿದೆ ಆ ವಿವರ
ಕನ್ನಡ ಸುದ್ದಿ  /  ಕರ್ನಾಟಕ  /  ನೀವು ನಮ್ಮ ಮೆಟ್ರೋ ಪ್ರಯಾಣಿಕರಾ, ಝೀರೋ ಕೆವೈಸಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಗಮನಿಸಿದ್ದೀರಾ, ಏನಿದರ ಉಪಯೋಗ, ಇಲ್ಲಿದೆ ಆ ವಿವರ

ನೀವು ನಮ್ಮ ಮೆಟ್ರೋ ಪ್ರಯಾಣಿಕರಾ, ಝೀರೋ ಕೆವೈಸಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಗಮನಿಸಿದ್ದೀರಾ, ಏನಿದರ ಉಪಯೋಗ, ಇಲ್ಲಿದೆ ಆ ವಿವರ

ಬೆಂಗಳೂರಿನಲ್ಲಿ ನೀವು ನಮ್ಮಮೆಟ್ರೋ ಪ್ರಯಾಣಿಕರಾ, ಝೀರೋ ಕೆವೈಸಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ತಗೊಂಡಿಲ್ವ, ಏನಿದು, ಯಾಕೆ ತಗೊಳ್ಳಬೇಕು, ಅದರ ಉಪಯೋಗ ಏನು ಅಂತೀರಾ, ಇಲ್ಲಿದೆ ಆ ಎಲ್ಲ ವಿವರ.

ನೀವು ನಿತ್ಯವೂ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸ್ತೀರಾ, ಝೀರೋ ಕೆವೈಸಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಗಮನಿಸಿದ್ದೀರಾ ಅಥವಾ ಖರೀದಿಸಿದ್ದೀರಾ? ಇಲ್ಲಿದೆ ಅದರ ಉಪಯೋಗದ ವಿವರ. (ಸಾಂಕೇತಿಕ ಚಿತ್ರ)
ನೀವು ನಿತ್ಯವೂ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸ್ತೀರಾ, ಝೀರೋ ಕೆವೈಸಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಗಮನಿಸಿದ್ದೀರಾ ಅಥವಾ ಖರೀದಿಸಿದ್ದೀರಾ? ಇಲ್ಲಿದೆ ಅದರ ಉಪಯೋಗದ ವಿವರ. (ಸಾಂಕೇತಿಕ ಚಿತ್ರ)

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಓಮ್ನಿಚಾನಲ್ ಪೇಮೆಂಟ್ಸ್ ಪೂರೈಕೆದಾರ ಕಂಪನಿ ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜೀಸ್ ಲಿಮಿಟೆಡ್, ಝೀರೋ-ಕೆವೈಸಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ) ವಿತರಣೆ ಆರಂಭಿಸಿರುವುದಾಗಿ ಘೋಷಿಸಿದೆ. ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ (ಬಿಎಂಆರ್‌ಸಿಎಲ್‌) ಜತೆಗೂಡಿ ಆರ್‌ಬಿಎಲ್‌ ಬ್ಯಾಂಕ್‌ ಸಹಭಾಗಿತ್ವದಲ್ಲಿ ಈ ಕಾರ್ಯ ಶುರುಮಾಡಿರುವ ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜೀಸ್ ಲಿಮಿಟೆಡ್, ಪೂರ್ಣ ಕೆವೈಸಿ ಅಗತ್ಯ ಇಲ್ಲದ ಕಾರಣ, ಈ ಕಾರ್ಡ್‌ ಅನ್ನು ಬೇಗ ಸಕ್ರಿಯಗೊಳಿಸಬಹುದು. ಇದು ಭಾರತೀಯ ರಿಸರ್ವ್ ಬ್ಯಾಂಕ್‌ನ ನಿರ್ದೇಶನಕ್ಕೆ ಅನುಗುಣವಾಗಿ ಇದೆ ಎಂದು ಕಂಪನಿ ವಿವರಿಸಿದೆ. ಮೆಟ್ರೋ ಪ್ರಯಾಣಿಕರು ಝೀರೋ-ಕೆವೈಸಿ ಎನ್‌ಸಿಎಂಸಿಗೆ ಗರಿಷ್ಠ 2000 ರೂಪಾಯಿ ಟಾಪ್ ಅಪ್ ಮಾಡಬಹುದಾಗಿದೆ. ಈ ಕಾರ್ಡ್‌ ಅನ್ನು ಮೆಟ್ರೋ, ಬಸ್ ಮತ್ತು ವಾಟರ್ ಮೆಟ್ರೋ, ಪಾರ್ಕಿಂಗ್, ಟೋಲ್‌ ಮುಂತಾದ ಎಲ್ಲ ಟಚ್ ಪಾಯಿಂಟ್‌ಗಳಲ್ಲೂ ಬಳಸಬಹುದು ಎಂದು ಕಂಪನಿ ತಿಳಿಸಿದೆ.

57000ಕ್ಕೂ ಹೆಚ್ಚು ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ವಿತರಣೆ

ಬೆಂಗಳೂರಿನಲ್ಲಿ ಎಜಿಎಸ್ ಟ್ರಾನ್ಸಾಕ್ಟ್ 2023ರ ಮಾರ್ಚ್‌ ತಿಂಗಳಿಂದ ಆರ್‌ಬಿಎಲ್‌ ಬ್ಯಾಂಕ್ ಸಹಭಾಗಿತ್ವದಲ್ಲಿ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಶನ್‌ನ ಗ್ರಾಹಕರಿಗೆ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ) ಅನ್ನು ನೀಡುತ್ತಿದೆ. ಇಂದಿನಿಂದ, ಕಂಪನಿಯು ಬಿಎಂಆರ್‌ಸಿಎ‌ಲ್‌ಗೆ ಇದುವರೆಗೂ 57,000ಕ್ಕೂ ಹೆಚ್ಚು ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್‌ಗಳನ್ನು ನೀಡಿರುವುದಾಗಿ ಕಂಪನಿ ಹೇಳಿಕೊಂಡಿದೆ.

ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜೀಸ್‌ ನ ಝೀರೋ-ಕೆವೈಸಿ ಎನ್‌ಸಿಎಂಸಿಯು ಗ್ರಾಹಕರಿಗೆ ಕೆವೈಸಿ ವೆರಿಫಿಕೇಷನ್ ತೊಂದರೆಯಿಂದ ಮುಕ್ತಗೊಳಿಸುತ್ತದೆ. ವೇಗವಾಗಿ, ಹೆಚ್ಚು ಅನುಕೂಲಕರ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ವಿವಿಧ ಸಾರಿಗೆ ವಿಭಾಗಗಳಲ್ಲಿ ಅನುಕೂಲಕರ ಮತ್ತು ಸುಲಭ ಪಾವತಿ ಮಾಡುವ ಸೌಲಭ್ಯ ಒದಗಿಸುತ್ತದೆ.

ಪ್ರಯಾಣಿಕರು ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿನ ಟಿಕೆಟ್ ಕೌಂಟರ್‌ಗಳಿಂದ ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜೀಸ್ ವಿತರಣೆ ಮಾಡುವ ಝೀರೋ ಕೆವೈಸಿ ಎನ್‌ಸಿಎಂಸಿ ಗಳನ್ನು ಖರೀದಿಸಬಹುದು ಮತ್ತು ಅನುಕೂಲಕ್ಕೆ ತಕ್ಕಂತೆ ಟಾಪ್ ಅಪ್ ಮಾಡಬಹುದು.

"ಝೀರೋ ಕೆವೈಸಿ ಎನ್‌ಸಿಎಂಸಿಯ ವೇಗದ ವಿತರಣೆ ಮೂಲಕ ಹೆಚ್ಚು ಗ್ರಾಹಕರಿಗೆ ಅನುಕೂಲವಾಗಲಿದೆ. ಆ ಮೂಲಕ ಎನ್‌ಸಿಎಂಸಿ ಬಳಕೆ ಹೆಚ್ಚಾಗಲಿದೆ ಎಂಬ ನಂಬಿಕೆ ನಮಗಿದೆ’’ ಎಂದು ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜೀಸ್ ಲಿಮಿಟೆಡ್‌ ನ ಅಧ್ಯಕ್ಷ ಮತ್ತು ಎಂಡಿ ರವಿ ಬಿ ಗೋಯಲ್ ಹೇಳಿದರು.

ಒಂದು ಕಾರ್ಡ್ ಒಂದು ದೇಶ ಯೋಜನೆ

ಭಾರತ ಸರ್ಕಾರದ ಒಂದು ಕಾರ್ಡ್ ಒಂದು ದೇಶ ಯೋಜನೆಗೆ ಅನುಗುಣವಾಗಿ ಝೀರೋ- ಕೆವೈಸಿ ಎನ್‌ಸಿಎಂಸಿ ಅನ್ನು ಬಿಡುಗಡೆ ಮಾಡಲಾಗಿದ್ದು, ಈ ಯೋಜನೆಯು ಭಾರತದ ಸಾರಿಗೆ ಕ್ಷೇತ್ರದ ಭವಿಷ್ಯದಲ್ಲಿ ಭಾರಿ ಬದಲಾವಣೆ ಮಾಡುವ ನಿರೀಕ್ಷೆ ಇದೆ. ಪ್ರಸ್ತುತ ಕ್ಲೋಸ್ಡ್-ಲೂಪ್ ಟ್ರಾನ್ಸಿಟ್ ಕಾರ್ಡ್‌ಗಳನ್ನು ಭಾರತದಲ್ಲಿ ಮೆಟ್ರೋ ಅಥವಾ ಬಸ್ ಸಂಚಾರಕ್ಕೆ ನಿರ್ದಿಷ್ಟವಾಗಿ ಬಳಸಲಾಗುತ್ತದೆ. ಆದರೆ ಎನ್‌ಸಿಎಂಸಿಗಳನ್ನು ದೇಶದಾದ್ಯಂತ ಇರುವ ಎಲ್ಲ ಎನ್‌ಸಿಎಂಸಿ ಲಭ್ಯ ಇರುವ ಸ್ಥಳಗಳಲ್ಲಿ ಬಳಸಬಹುದಾಗಿದೆ.

"ನಮ್ಮ ಗ್ರಾಹಕರಿಗೆ ಅನುಕೂಲವಾಗುವಂತಹ ಪಾವತಿ ಸೌಲಭ್ಯ ಒದಗಿಸುವ ಮೂಲಕ ಈ ವಿಭಾಗದಲ್ಲಿ ಮಹತ್ವದ ಪಾತ್ರ ವಹಿಸಲು ನಾವು ಬದ್ಧರಾಗಿದ್ದೇವೆ. ಗ್ರಾಹಕರಿಗೆ ತೊಂದರೆ ಮುಕ್ತ ಮತ್ತು ಸುಲಭವಾದ ಸಾರಿಗೆ ವ್ಯವಸ್ಥೆ ಕಲ್ಪಿಸುವ ಬಿಎಂಆರ್‌ಸಿಎಲ್‌ ನ ಯೋಜನೆಗೆ ನೆರವಾಗಲು ನಮಗೆ ಸಂತೋಷ ಇದೆ. ಬೆಂಗಳೂರಿನಲ್ಲಿ ನಾವು ಮೊದಲು ಎನ್‌ಸಿಎಂಸಿ ಅನ್ನು ಬಿಡುಗಡೆ ಮಾಡಿದಾಗಿನಿಂದಲೂ ಅದರ ಸರಳ ಬಳಕೆ ವಿಧಾನ ಮತ್ತು ಸುಲಭವಾಗಿ ಟಾಪ್-ಅಪ್‌ ಮಾಡುವ ಸೌಲಭ್ಯಗಳಿಂದಾಹಿ ಹೆಚ್ಚಿನ ಪ್ರಯಾಣಿಕರು ಆಸಕ್ತಿ ತೋರಿಸಿದ್ದಾರೆ’ ಎಂದು ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜೀಸ್ ಲಿಮಿಟೆಡ್‌ ನ ಅಧ್ಯಕ್ಷ ಮತ್ತು ಎಂಡಿ ರವಿ ಬಿ ಗೋಯಲ್ ಹೇಳಿದರು.

Whats_app_banner