ಬೆಂಗಳೂರು ಅಯೋಧ್ಯೆ ನಡುವೆ ವಿಮಾನ ಯಾನಕ್ಕೆ ಬಹುಬೇಡಿಕೆ; ಶೇ 100 ರಷ್ಟು ಹೆಚ್ಚಿದ ಬುಕಿಂಗ್‌, ಎಷ್ಟಿದೆ ಪ್ರಯಾಣ ದರ, ಇಲ್ಲಿದೆ ವಿವರ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಅಯೋಧ್ಯೆ ನಡುವೆ ವಿಮಾನ ಯಾನಕ್ಕೆ ಬಹುಬೇಡಿಕೆ; ಶೇ 100 ರಷ್ಟು ಹೆಚ್ಚಿದ ಬುಕಿಂಗ್‌, ಎಷ್ಟಿದೆ ಪ್ರಯಾಣ ದರ, ಇಲ್ಲಿದೆ ವಿವರ

ಬೆಂಗಳೂರು ಅಯೋಧ್ಯೆ ನಡುವೆ ವಿಮಾನ ಯಾನಕ್ಕೆ ಬಹುಬೇಡಿಕೆ; ಶೇ 100 ರಷ್ಟು ಹೆಚ್ಚಿದ ಬುಕಿಂಗ್‌, ಎಷ್ಟಿದೆ ಪ್ರಯಾಣ ದರ, ಇಲ್ಲಿದೆ ವಿವರ

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಬಳಿಕ ಬೆಂಗಳೂರು ಅಯೋಧ್ಯೆ ನಡುವೆ ವಿಮಾನ ಯಾನಕ್ಕೆ ಬಹುಬೇಡಿಕೆ ಉಂಟಾಗಿದೆ. ಜನವರಿ 22ಕ್ಕೆ ಹೋಲಿಸಿದರೆ ಈಗ ಶೇ 100 ರಷ್ಟು ಹೆಚ್ಚು ಬುಕಿಂಗ್‌ ಆಗುತ್ತಿದ್ದು, ಪ್ರಯಾಣ ದರ ಮತ್ತು ಇತರೆ ವಿವರ ಇಲ್ಲಿದೆ.

ಬೆಂಗಳೂರು ಅಯೋಧ್ಯೆ ನಡುವೆ ವಿಮಾನ ಯಾನಕ್ಕೆ ಬಹುಬೇಡಿಕೆ ಉಂಟಾಗಿದೆ. ಕಳೆದ ನಾಲ್ಕುವಾರಗಳ ಅವಧಿಯನ್ನು ಗಮನಿಸಿದರೆ ಶೇ 100 ರಷ್ಟು ಹೆಚ್ಚಿದ ಬುಕಿಂಗ್‌ ಕಾರಣ ಧಾರ್ಮಿಕ ಪ್ರವಾಸೋದ್ಯಮ ಬೆಳವಣಿಗೆ ಕಂಡುಬಂದಿದೆ. ಬೆಂಗಳೂರು ಅಯೋಧ್ಯೆ ನಡುವೆ ಎಷ್ಟಿದೆ ಪ್ರಯಾಣ ದರ ಎಂಬಿತ್ಯಾದಿ ವಿವರ ಇಲ್ಲಿದೆ.
ಬೆಂಗಳೂರು ಅಯೋಧ್ಯೆ ನಡುವೆ ವಿಮಾನ ಯಾನಕ್ಕೆ ಬಹುಬೇಡಿಕೆ ಉಂಟಾಗಿದೆ. ಕಳೆದ ನಾಲ್ಕುವಾರಗಳ ಅವಧಿಯನ್ನು ಗಮನಿಸಿದರೆ ಶೇ 100 ರಷ್ಟು ಹೆಚ್ಚಿದ ಬುಕಿಂಗ್‌ ಕಾರಣ ಧಾರ್ಮಿಕ ಪ್ರವಾಸೋದ್ಯಮ ಬೆಳವಣಿಗೆ ಕಂಡುಬಂದಿದೆ. ಬೆಂಗಳೂರು ಅಯೋಧ್ಯೆ ನಡುವೆ ಎಷ್ಟಿದೆ ಪ್ರಯಾಣ ದರ ಎಂಬಿತ್ಯಾದಿ ವಿವರ ಇಲ್ಲಿದೆ.

ಬೆಂಗಳೂರು: ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಬಳಿಕ ಜನವರಿ 22ರ ನಂತರ ಬೆಂಗಳೂರು- ಅಯೋಧ್ಯೆ ನಡುವಿನ ವಿಮಾನ ಯಾನಕ್ಕೆ ಶೇ 100ರಷ್ಟು ಬೇಡಿಕೆ ಹೆಚ್ಚಾಗಿದೆ. ನಾಲ್ಕು ವಾರ ಕಳೆದರೂ ಬೇಡಿಕೆ ಕಡಿಮೆಯಾಗಿಲ್ಲ. ಎರಡೂ ನಗರಗಳ ನಡುವೆ ಸಂಚರಿಸುವ ವಿಮಾನಗಳ ಸೀಟುಗಳು ಭರ್ತಿಯಾಗಿದ್ದು, ಬುಕ್ಕಿಂಗ್‌ನಲ್ಲೂ ಬೇಡಿಕೆ ಶೇಕಡ 100ರಷ್ಟು ಹೆಚ್ಚಳವಾಗಿದೆ ಎಂದು ವಿಮಾನ ಯಾನ ಕಂಪನಿಗಳು ಹೇಳಿಕೊಂಡಿವೆ.

ಬೆಂಗಳೂರು ಮತ್ತು ಅಯೋಧ್ಯೆ ನಡುವೆ ಏರ್ ಇಂಡಿಯಾ ಮತ್ತು ಸ್ಪೈಸ್ ಜೆಟ್ ವಿಮಾನಗಳು ಪ್ರತಿನಿತ್ಯ ನೇರ ಹಾರಾಟ ನಡೆಸುತ್ತಿವೆ. ಕಳೆದ ನಾಲ್ಕು ವಾರಗಳ ಅವಧಿಯಲ್ಲಿ ಪ್ರಯಾಣಿಕರು ಇಲ್ಲ ಎಂದು ಒಂದು ದಿನವೂ ಒಂದು ವಿಮಾನ ಹಾರಾಟವೂ ಮೊಟಕುಗೊಂಡಿಲ್ಲ ಎಂದು ಎರಡೂ ವಿಮಾನ ಯಾನ ಸಂಸ್ಥೆಗಳು ತಿಳಿಸಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಬೆಂಗಳೂರು- ಅಯೋಧ್ಯೆ ವಿಮಾನ ಯಾನಕ್ಕೆ ಶೇ 100 ಬೇಡಿಕೆ ಹೆಚ್ಚಳ

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಸಂದರ್ಭ ಜನವರಿ 22ರ ವಿಮಾನ ಯಾನದ ಬೇಡಿಕೆಗೆ ಹೋಲಿಸಿದರೆ ಈಗ ಬುಕ್ಕಿಂಗ್‌ ಶೇ 100 ಹೆಚ್ಚಾಗಿವೆ. ಏಕಮುಖ ಪ್ರಯಾಣಕ್ಕೆ 7,000 ರೂಪಾಯಿಯಿಂದ 11,000 ರೂಪಾಯಿ ದರ ಇದ್ದರೂ ಬೇಡಿಕೆ ಕುಸಿದಿಲ್ಲ ಎಂದು ಟ್ರಾವೆಲ್ ಏಜೆನ್ಸಿ ಪ್ರತಿನಿಧಿಗಳು ತಿಳಿಸಿದ್ದಾರೆ.

ಒಂದು ನಿಲುಗಡೆಯ ವಿಮಾನ ಯಾನವು ಸ್ಥಿರವಾದ ಬೆಳವಣಿಗೆ ದಾಖಲಿಸಿದೆ. ತೀರ್ಥಯಾತ್ರೆ, ಧಾರ್ಮಿಕ ಪ್ರವಾಸದಲ್ಲಿ ಆಸಕ್ತಿ ಹೊಂದಿರುವ ಪ್ರಯಾಣಿಕರ ಗುಂಪುಗಳ ಸಂಖ್ಯೆ ಹೆಚ್ಚಾಗಿರುವುದು ಗಮನಿಸಬೇಕಾದ ಅಂಶ. ಜನವರಿ 17ರಂದು ಅಯೋಧ್ಯೆ- ಬೆಂಗಳೂರು ನಡುವೆ ವಿಮಾನ ಯಾನ ಶುರು ಮಾಡಿದ್ದು, ಇದುವರೆಗೂ ಬೇಡಿಕೆ ಇಳಿಮುಖವಾಗಿಲ್ಲ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ತಿಳಿಸಿದ್ದಾಗಿ ವರದಿ ವಿವರಿಸಿದೆ.

ಅಯೋಧ್ಯೆಗೆ ತಲುಪಲು ಹಲವು ದಾರಿ

ಅಯೋಧ್ಯೆಗೆ ಹೋಗುವುದಕ್ಕೆ ಬೆಂಗಳೂರಿನಿಂದ ಲಕ್ನೋಗೆ ವಿಮಾನದಲ್ಲಿ ಹೋಗಿ ಅಲ್ಲಿಂದ ರಸ್ತೆ ಸಾರಿಗೆ ಬಳಸುವವರೂ ಇದ್ದಾರೆ. ಅಯೋಧ್ಯೆಗೆ ಹೋಗುವವರು ಕೇವಲ ಹಿರಿಯ ನಾಗರಿಕರಷ್ಟೇ ಅಲ್ಲ, ಯುವ ಪೀಳಿಗೆಯವರೂ ಹೋಗುತ್ತಿರುವುದು ಹೊಸ ಟ್ರೆಂಡ್ ಎಂದು ಪ್ರವಾಸೋದ್ಯಮ ಕ್ಷೇತ್ರದ ಪರಿಣತರು ಹೇಳಿದ್ದಾಗಿ ವರದಿ ಹೇಳಿದೆ.

“ನೇರ ವಿಮಾನಗಳ ಜೊತೆಗೆ, ಲಕ್ನೋಗೆ ವಿಮಾನ ಯಾನದ ಮೂಲಕ ಆನಂತರ ಅಲ್ಲಿಂದ ಅಯೋಧ್ಯೆಗೆ ರಸ್ತೆ ಸಾರಿಗೆಯನ್ನು ಸಹ ಗ್ರಾಹಕರು ಆರಿಸಿಕೊಳ್ಳುತ್ತಿದ್ದಾರೆ. ಸಾಂಪ್ರದಾಯಿಕವಾಗಿ ಹಿರಿಯರ ವಿಭಾಗಕ್ಕೆ ಇದು ಸೀಮಿತವಲ್ಲ. ಬದಲಾವಣೆ ಹೇಗಿದೆ ಎಂದರೆ ಯುವ ಪೀಳಿಗೆ ಮತ್ತು ಬೆಂಗಳೂರಿನ ಯುವ ತಲೆಮಾರು ಅಯೋಧ್ಯೆ ವಿಚಾರದತ್ತ ಆಸಕ್ತವಾಗಿರುವುದು ವಿಶೇಷ” ಎಂದು ಥಾಮಸ್ ಕುಕ್ (ಭಾರತ) ಲಿಮಿಟೆಡ್‌ನ ಅಧ್ಯಕ್ಷ ಮತ್ತು ದೇಶದ ಮುಖ್ಯಸ್ಥ ರಾಜೀವ್ ಕಾಳೆ ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ.

ರಾಮಾಯಣ, ರಾಮನಿಗೆ ಸಂಬಂಧಿಸಿದ ಪ್ರದೇಶಗಳಿಗೂ ಪ್ರವಾಸಿಗರು

ರಾಮಾಯಣ, ರಾಮನಿಗೆ ಸಂಬಂಧಿಸಿದ ಪ್ರದೇಶಗಳಿಗೂ ಜನ ಹೋಗತೊಡಗಿದ್ದಾರೆ. ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ ಮತ್ತು ಬೆಳಗಾವಿಯಂತಹ ಇತರ ನಗರಗಳು ಸಹ ಜನರ ಈ ಪ್ರವೃತ್ತಿಗೆ ಉತ್ತೇಜನ ನೀಡುತ್ತಿವೆ. ಹಂಪಿ, ರಾಮೇಶ್ವರಂ ಮತ್ತು ಮಧುರೈ ಸೇರಿ ಭಗವಾನ್ ರಾಮನ ಜೀವನಕ್ಕೆ ಸಂಬಂಧಿಸಿದ ಸ್ಥಳಗಳನ್ನು ಅನ್ವೇಷಿಸುವ ವಿಚಾರದಲ್ಲಿ ಗ್ರಾಹಕರ ಉತ್ಸಾಹ ಹೆಚ್ಚಾಗಿದೆ ಎಂದು ಎಸ್‌ಒಟಿಸಿ ಟ್ರಾವೆಲ್‌ನ ಅಧ್ಯಕ್ಷ ಡೇನಿಯಲ್ ಡಿಸೋಜಾ ಹೇಳಿರುವುದಾಗಿ ವರದಿ ವಿವರಿಸಿದೆ.

“ರಾಮ ಮಂದಿರ ನೋಡುವುದರೊಂದಿಗೆ, ರಾಮಾಯಣದ ಹಾದಿ, ಯೋಗ ಸೇರಿ ಸಾಂಸ್ಕೃತಿಕ ಅಂಶಗಳು ಜೋಡಿಕೊಂಡು ದೇವಾಲಯ ಪ್ರವಾಸೋದ್ಯಮವು ಪ್ರಬಲ ಬೆಳವಣಿಗೆ ದಾಖಲಿಸಿದೆ” ಎಂದು ಅವರು ಹೇಳಿದ್ದಾಗಿ ವರದಿ ಹೇಳಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner