ಕರ್ನಾಟಕದಲ್ಲಿ ದುಬಾರಿ ಮದ್ಯ ಜುಲೈ 1 ರಿಂದ ಅಗ್ಗ; ಮದ್ಯದ 16 ಸ್ಲ್ಯಾಬ್‌ಗಳ ದರ ವಿವರ ಹೀಗಿದೆ ನೋಡಿ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದಲ್ಲಿ ದುಬಾರಿ ಮದ್ಯ ಜುಲೈ 1 ರಿಂದ ಅಗ್ಗ; ಮದ್ಯದ 16 ಸ್ಲ್ಯಾಬ್‌ಗಳ ದರ ವಿವರ ಹೀಗಿದೆ ನೋಡಿ

ಕರ್ನಾಟಕದಲ್ಲಿ ದುಬಾರಿ ಮದ್ಯ ಜುಲೈ 1 ರಿಂದ ಅಗ್ಗ; ಮದ್ಯದ 16 ಸ್ಲ್ಯಾಬ್‌ಗಳ ದರ ವಿವರ ಹೀಗಿದೆ ನೋಡಿ

ಕರ್ನಾಟಕದಲ್ಲಿ ದುಬಾರಿ ಮದ್ಯ ಜುಲೈ 1 ರಿಂದ ಅಗ್ಗವಾಗಲಿದೆ. ಅಬಕಾರಿ ಸುಂಕದ ಮೂಲಕ ಹೆಚ್ಚುವರಿ ಆದಾಯ ಸಂಗ್ರಹಿಸಲು ಕರ್ನಾಟಕ ಸರ್ಕಾರ ಮುಂದಾಗಿದ್ದು, ಮದ್ಯದ 18 ಸ್ಲ್ಯಾಬ್‌ಗಳನ್ನು 18ಕ್ಕೆ ಇಳಿಸಿದೆ, ಅಬಕಾರಿ ಸುಂಕವನ್ನೂ ಇಳಿಸಿದೆ. ಮದ್ಯದ 16 ಸ್ಲ್ಯಾಬ್‌ಗಳ ದರ ವಿವರ ಹೀಗಿದೆ ನೋಡಿ.

ಕರ್ನಾಟಕದಲ್ಲಿ ದುಬಾರಿ ಮದ್ಯ ಜುಲೈ 1 ರಿಂದ ಅಗ್ಗ; ಮದ್ಯದ 16 ಸ್ಲ್ಯಾಬ್‌ಗಳ ದರ ವಿವರ
ಕರ್ನಾಟಕದಲ್ಲಿ ದುಬಾರಿ ಮದ್ಯ ಜುಲೈ 1 ರಿಂದ ಅಗ್ಗ; ಮದ್ಯದ 16 ಸ್ಲ್ಯಾಬ್‌ಗಳ ದರ ವಿವರ (Canva)

ಬೆಂಗಳೂರು: ಕರ್ನಾಟಕದ ಮದ್ಯಪಾನಿಗಳಿಗೆ ಖುಷಿಕೊಡುವ ಸುದ್ದಿ. ಜುಲೈ 1 ರಿಂದ ದುಬಾರಿ ಮದ್ಯದ ದರ ಇಳಿಕೆಯಾಗಲಿದ್ದು, ಕೊಂಚ ಅಗ್ಗವಾಗಲಿದೆ. ಹೆಚ್ಚುವರಿ ಅಬಕಾರಿ ಸುಂಕ ಸಂಗ್ರಹಿಸುವ ಸಲುವಾಗಿ ಈಗ ಚಾಲ್ತಿಯಲ್ಲಿರುವ ಮದ್ಯದ 18 ಸ್ಲ್ಯಾಬ್‌ಗಳಿಗೆ ಬದಲಾಗಿ 16 ಸ್ಲ್ಯಾಬ್‌ಗಳನ್ನು ರಚಿಸಿದ್ದು, ತೆರಿಗೆಯನ್ನು ಪರಿಷ್ಕರಿಸಿ ಇಳಿಕೆ ಮಾಡಿದೆ. ಈ ಹೊಸ ತೆರಿಗೆ ದರ ಮತ್ತು ಮದ್ಯದ ದರ ಜುಲೈ 1 ರಿಂದ ಜಾರಿಗೆ ಬರುವ ನಿರೀಕ್ಷೆ ಇದೆ.

ಬಹಳ ವರ್ಷಗಳ ಬಳಿಕ ಮದ್ಯದ ದರ ಇಳಿಕೆ ಮಾಡುವಂತಹ ಪರಿಷ್ಕರಣೆ ನಡೆದಿದೆ. ಇದಕ್ಕಾಗಿ ಸ್ಲ್ಯಾಬ್‌ಗಳನ್ನು ಕೂಡ ಕಡಿಮೆಮಾಡಲಾಗಿದೆ. ಪರಿಷ್ಕೃತ ತೆರಿಗೆ ದರ ಮತ್ತು ಸ್ಲ್ಯಾಬ್‌ಗಳು ಬ್ರ್ಯಾಂಡಿ, ವಿಸ್ಕಿ, ಜಿನ್‌, ರಮ್‌ ಮತ್ತು ಇತರೆ ಮದ್ಯಗಳಿಗೆ ಅನ್ವಯವಾಗುತ್ತದೆ. ಆದರೆ ಇದು ಬಿಯರ್, ವೈನ್, ಫೆನ್ನಿ, ಸೇಂದಿ, ಶರಾಬುಗಳಿಗೆ ಅನ್ವಯವಲ್ಲ.

ಅಬಕಾರಿ ಇಲಾಖೆ ಈಗಾಗಲೇ ಹೊಸ ಸ್ಲ್ಯಾಬ್‌ಗಳು ಮತ್ತು ದರ ವಿವರಗಳ ಅಧಿಸೂಚನೆ ಪ್ರಕಟಿಸಿದೆ. ಇದನ್ನು ಡಿಸ್ಟಿಲರಿಗಳು ತಮ್ಮ ಲೇಬಲ್‌ಗಳ ಮೇಲೆ ಪ್ರಕಟಿಸಿದ ಬಳಿಕವಷ್ಟೆ ಹೊಸ ಬೆಲೆ ಚಾಲ್ತಿಗೆ ಬರಲಿದೆ. ಪ್ರತಿಯೊಂದು ಸ್ಲ್ಯಾಬ್‌ಗೆ ಒಂದು ಶ್ರೇಣಿ ಇರುವುದರಿಂದ ನಿರ್ದಿಷ್ಟ ಬ್ರಾಂಡ್‌ನ ಬೆಲೆ ಕಡಿಮೆಯಾಗುತ್ತದೆಯೇ ಅಥವಾ ಇಲ್ಲವೇ ಎಂದು ಹೇಳುವುದು ಈಗ ಕಷ್ಟ. ಮದ್ಯ ತಯಾರಕರು ಈಗ ತಮ್ಮ ಲೇಬಲ್‌ಗಳ ತಾಜಾ ಘೋಷಿತ ಬೆಲೆಯನ್ನು ಒದಗಿಸಲು ಪ್ರಾರಂಭಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.

ಹೊಸ ದರ ಮತ್ತು ಹೆಚ್ಚುವರಿ ಅಬಕಾರಿ ಸುಂಕದ ವಿವರ

ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) (ತಿದ್ದುಪಡಿ) ನಿಯಮಗಳು, 2024 ರೊಂದಿಗೆ ಜೂನ್ 18 ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ಸ್ಲ್ಯಾಬ್‌ಗಳ ಪರಿಷ್ಕರಣೆ ಮಾಡಲಾಗಿದೆ. ಹೊಸ ಅಧಿಸೂಚನೆಯ ನಂತರ, ಅತಿ ಹೆಚ್ಚು ಹೆಚ್ಚುವರಿ ಅಬಕಾರಿ ಸುಂಕವನ್ನು ಹೊಂದಿರುವ ಹಿಂದಿನ ತೆರಿಗೆ ವ್ಯವಸ್ಥೆಗೆ ಹೋಲಿಸಿದರೆ 20,000 ರೂಪಾಯಿಗಿಂತ ಹೆಚ್ಚು ಘೋಷಿತ ಬೆಲೆಯೊಂದಿಗೆ (ಡಿಸ್ಟಿಲರಿಯಿಂದ) ಮದ್ಯದ ಮೇಲೆ ವಿಧಿಸಲಾಗುವ ಪ್ರತಿ ಬಲ್ಕ್ ಲೀಟರ್‌ಗೆ 3,000 ರೂಪಾಯಿ ಹೆಚ್ಚಿನ ಹೆಚ್ಚುವರಿ ಸುಂಕವನ್ನು ವಿಧಿಸಲಾಗುತ್ತದೆ. 15,000 ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಘೋಷಿತ ಬೆಲೆಯ ಮೇಲೆ 5,358 ರೂಪಾಯಿ ವಿಧಿಸಲಾಗಿದೆ.

ಘೋಷಿತ ದರ ಹೆಚ್ಚುವರಿ ಅಬಕಾರಿ ಸುಂಕ

751 ರಿಂದ 900 ರೂಪಾಯಿ 770 ರೂಪಾಯಿ

901 ರಿಂದ 1,050 ರೂಪಾಯಿ 870 ರೂಪಾಯಿ

1,051 ರಿಂದ 1,300 ರೂಪಾಯಿ 970 ರೂಪಾಯಿ

1,301 ರಿಂದ 1,800 ರೂಪಾಯಿ 1,200 ರೂಪಾಯಿ

1,801 ರಿಂದ 2,500 ರೂಪಾಯಿ 1,400 ರೂಪಾಯಿ

2,501 ರಿಂದ 5,000 ರೂಪಾಯಿ 1,600 ರೂಪಾಯಿ

5,001 ರಿಂದ 8,000 ರೂಪಾಯಿ 2,000 ರೂಪಾಯಿ

8,001 ರಿಂದ 12,500 ರೂಪಾಯಿ 2,400 ರೂಪಾಯಿ

12,501 ರಿಂದ 15,000 ರೂಪಾಯಿ 2,600 ರೂಪಾಯಿ

15,001 ರಿಂದ 20,000 ರೂಪಾಯಿ 2,800 ರೂಪಾಯಿ

20,000 ರೂಪಾಯಿ ಮತ್ತು ಮೇಲ್ಪಟ್ಟು3,000 ರೂಪಾಯಿ

ನೆರೆಯ ರಾಜ್ಯಗಳೊಂದಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಬೆಲೆಗಳನ್ನು ಸ್ಪರ್ಧಾತ್ಮಕವಾಗಿಸಲು ಇಲ್ಲಿನ ಡಿಸ್ಟಿಲರಿಗಳು ಮತ್ತು ಆತಿಥ್ಯ ಉದ್ಯಮದ ಬಹುಕಾಲದ ಬೇಡಿಕೆಯನ್ನು ಪರಿಹರಿಸಲು ಹೆಚ್ಚುವರಿ ಅಬಕಾರಿ ಸುಂಕವನ್ನು ವಿಶೇಷವಾಗಿ ಪ್ರೀಮಿಯಂ ಮದ್ಯದ ಮೇಲೆ ಹೆಚ್ಚಾಗಲಿದ್ದು, ಸರ್ಕಾರದ ಆದಾಯವೂ ಹೆಚ್ಚಳವಾಗುವ ನಿರೀಕ್ಷೆ ಇದೆ.

ಘೋಷಿತ ದರ ಹೆಚ್ಚುವರಿ ಅಬಕಾರಿ ಸುಂಕ

700 ರಿಂದ 799 ರೂಪಾಯಿ 816 ರೂಪಾಯಿ

800 ರಿಂದ 899 ರೂಪಾಯಿ 870 ರೂಪಾಯಿ

900 ರಿಂದ 999 ರೂಪಾಯಿ 938 ರೂಪಾಯಿ

1,000 ರಿಂದ 1,099 ರೂಪಾಯಿ 982 ರೂಪಾಯಿ

1,100 ರಿಂದ 1,199 ರೂಪಾಯಿ 1,102 ರೂಪಾಯಿ

1,200 ರಿಂದ 1,299 ರೂಪಾಯಿ 1,325 ರೂಪಾಯಿ

1,300 ರಿಂದ 1,399 ರೂಪಾಯಿ 1,541 ರೂಪಾಯಿ

1,400 ರಿಂದ 1,799 ರೂಪಾಯಿ 1,667 ರೂಪಾಯಿ

1,800 ರಿಂದ 2,199 ರೂಪಾಯಿ 1,860 ರೂಪಾಯಿ

2,200 ರಿಂದ 4,924 ರೂಪಾಯಿ 2,124 ರೂಪಾಯಿ

4,925 ರಿಂದ 7,650 ರೂಪಾಯಿ 2,483 ರೂಪಾಯಿ

7,651 ರಿಂದ 15,000 ರೂಪಾಯಿ 3,571 ರೂಪಾಯಿ

15,000 ರೂಪಾಯಿ ಮೇಲ್ಪಟ್ಟು 5,358 ರೂಪಾಯಿ

ಸರ್ಕಾರದ ಮೂಲಗಳ ಪ್ರಕಾರ, ಹೆಚ್ಚಿನ ಹೆಚ್ಚುವರಿ ಅಬಕಾರಿ ಸುಂಕದ ಕಾರಣ, ಪ್ರೀಮಿಯಂ ಮದ್ಯವು ಕರ್ನಾಟಕದ ಒಟ್ಟು ಅಬಕಾರಿ ಆದಾಯದಲ್ಲಿ ಕೇವಲ 2 ರಿಂದ 3 ಪ್ರತಿಶತದಷ್ಟು ಕೊಡುಗೆ ನೀಡಿದರೆ ಅದು ತೆಲಂಗಾಣದಲ್ಲಿ 52 ಪ್ರತಿಶತದಷ್ಟಿದೆ. ಪ್ರಸ್ತುತ, ಉದ್ಯಮದ ಅಂದಾಜಿನ ಪ್ರಕಾರ, ಕರ್ನಾಟಕದಲ್ಲಿ ಹೆಚ್ಚಿನ ಪ್ರೀಮಿಯಂ ಬ್ರಾಂಡ್‌ಗಳು ಘೋಷಿತ ಬೆಲೆಯ ಮೇಲೆ ಸುಮಾರು 80 ಪ್ರತಿಶತ ಅಥವಾ ಹೆಚ್ಚಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಹೊಂದಿವೆ.

Whats_app_banner