Gold Price Today: ಶುಕ್ರವಾರವೂ ದುಬಾರಿಯಾದ ಬಂಗಾರ, ಕರ್ನಾಟಕದ ವಿವಿಧ ನಗರಗಳಲ್ಲಿ ಇಂದಿನ ಚಿನ್ನ ಬೆಳ್ಳಿ ಧಾರಣೆ ಹೀಗಿದೆ ನೋಡಿ
Gold Price Today: ಕರ್ನಾಟಕದಲ್ಲಿ ಇಂದು ಕೂಡ ಚಿನ್ನದ ದರ ದುಬಾರಿಯಾಗಿದೆ. ಕಳೆದ ಮೂರು ನಾಲ್ಕು ದಿನದಿಂದ ಬಂಗಾರದ ದರ ಗಮನಾರ್ಹವಾಗಿ ಏರಿಕೆ ಕಾಣುತ್ತಿದೆ. ಇಂದು ಒಂದು ಗ್ರಾಂ ಚಿನ್ನದ ದರ 15 ರೂಪಾಯಿಯಷ್ಟು ಹೆಚ್ಚಳವಾಗಿದೆ.
ಬೆಂಗಳೂರು: ಚಿನ್ನಾಭರಣ ಖರೀದಿಗೆ ಶುಕ್ರವಾರ ಶುಭದಿನವೆಂದು ನಂಬಿಕೆ. ಶುಕ್ರವಾರ ಲಕ್ಷ್ಮಿದೇವಿಯ ದಿನವೆಂದು, ಈ ದಿನ ಚಿನ್ನಾಭರಣ ಖರೀದಿಸಿದರೆ ಮನೆಯ ಸಮೃದ್ಧಿ, ಐಶ್ವರ್ಯ ಹೆಚ್ಚಾಗುತ್ತದೆ ಎಂದು ನಂಬಿಕೆಯಿದೆ. ಆದರೆ, ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಚಿನ್ನದ ದರ ಏರಿಕೆ ಕಾಣುತ್ತಿದೆ. ಜಾಗತಿಕ ಚಿನಿವಾರ ಪೇಟೆಯಲ್ಲಿ ಚಿನ್ನದ ಹೂಡಿಕೆ ಮೇಲೆ ಸಕಾರಾತ್ಮಕ ಭಾವನೆ ಹೆಚ್ಚಾಗಿರುವುದರಿಂದ ಚಿನ್ನಾಭರಣ ದರ ಭಾರತದಲ್ಲಿ ಏರಿಕೆ ಕಾಣುತ್ತಿದೆ. ಡಾಲರ್ ದುರ್ಬಲವಾಗಿರುವುದು ಮತ್ತು ಯುಎಸ್ ಬಾಂಡ್ ಎಲ್ಡ್ ಕಡಿಮೆಯಾಗಿರುವುದು ಚಿನ್ನದ ಮೇಲೆ ಹೂಡಿಕೆ ಹೆಚ್ಚಳಕ್ಕೆ ಕಾರಣವಾಗಿದೆ.
ಟ್ರೆಂಡಿಂಗ್ ಸುದ್ದಿ
22 ಕ್ಯಾರೆಟ್ ಚಿನ್ನದ ದರ
ಇಂದು ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 5,515 ರೂ ಇದೆ. ನಿನ್ನೆಯ 5,500 ರೂ ದರಕ್ಕೆ ಹೋಲಿಸಿದರೆ 30 ರೂಪಾಯಿಯಷ್ಟು ದರ ಹೆಚ್ಚಾಗಿದೆ. ಇಂದು 8 ಗ್ರಾಂ ಚಿನ್ನದ ಬೆಲೆ 44,120 ರೂಪಾಯಿ ಇದೆ. ನಿನ್ನೆ 44,000 ರೂ. ಇತ್ತು. ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ದರ 120ರೂ. ಏರಿಕೆಯಾಗಿದೆ. ಕರ್ನಾಟಕದ ವಿವಿಧ ನಗರಗಳಲ್ಲಿ ಇಂದು ಹತ್ತು ಗ್ರಾಂ ಚಿನ್ನದ ದರ 55,150 ರೂ. ಇದೆ. ನಿನ್ನೆಯ 55,000 ರೂ. ಗೆ ಹೋಲಿಸಿದರೆ 150 ರೂ. ಏರಿಕೆ ಕಂಡಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,51,500 ರೂ. ನೀಡಬೇಕು. ನಿನ್ನೆಯ 5,50,000 ರೂ.ಗೆ ಹೋಲಿಸಿದರೆ 1500 ರೂಪಾಯಿ ಏರಿಕೆಯಾಗಿದೆ.
ಅಪರಂಜಿ ಚಿನ್ನದ ದರ
ಇಂದು ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 6,010 ರೂ. ಇದೆ. ನಿನ್ನೆಯ 6,000 ರೂ.ಗೆ ಹೋಲಿಸಿದರೆ 33 ರೂ. ಏರಿಕೆಯಾಗಿದೆ. ನೀವು 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 48,1280 ರೂ. ನೀಡಬೇಕಾಗುತ್ತದೆ. ನಿನ್ನೆ 48,000 ರೂ. ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 128 ರೂಪಾಯಿ ಏರಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 60,160 ರೂ. ಇದೆ. ನಿನ್ನೆಯ 60,000 ರೂ. ಗೆ ಹೋಲಿಸಿದರೆ 160 ರೂ. ಏರಿಕೆಯಾಗಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 6,01,600 ರೂ. ನೀಡಬೇಕು. ನಿನ್ನೆಯ 6,00,000 ರೂ.ಗೆ ಹೋಲಿಸಿದರೆ ಬುಧವಾರ 1600 ರೂ. ಏರಿಕೆಯಾಗಿದೆ.
ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ದರ
ಇಂದಿನ ಬೆಳಗ್ಗಿನ ಧಾರಣೆಯಂತೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ದರ ಬೆಂಗಳೂರಿನಲ್ಲಿ 55,150 ರೂ. ಇದೆ. ಮಂಗಳೂರು 55,150 ರೂ., ಮೈಸೂರಿನಲ್ಲಿ 55,150 ರೂ. ಇದೆ. ಸಾಮಾನ್ಯವಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. ಮಜೂರಿ, ಇತರೆ ಶುಲ್ಕ ಇತ್ಯಾದಿಗಳಿಂದ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ದರ ವ್ಯತ್ಯಾಸ ಇರಬಹುದು. ಚೆನ್ನೈನಲ್ಲಿ 55,450 ರೂ., ಮುಂಬೈನಲ್ಲಿ 55,150 ರೂ., ದೆಹಲಿಯಲ್ಲಿ 55,300 ರೂ., ಕೋಲ್ಕತಾದಲ್ಲಿ 55,150 ರೂ., ಹೈದರಾಬಾದ್ 55,150 ರೂ., ಕೇರಳ 55,150 ರೂ., ಪುಣೆ 55,150 ರೂ., ಅಹಮದಾಬಾದ್ 55,200 ರೂ., ಜೈಪುರ 55,300 ರೂ., ಲಖನೌ 55,300 ರೂ., ಕೊಯಮುತ್ತೂರು 55,450 ರೂ., ಮಧುರೈ 55,450 ರೂ. ಹಾಗೂ ವಿಜಯವಾಡ 55,150 ರೂ., ಇದೆ.
ಪ್ರಮುಖ ನಗರಗಳಲ್ಲಿ ಅಪರಂಜಿ ಚಿನ್ನದ ದರ
10 ಗ್ರಾಂ 24 ಕ್ಯಾರೆಟ್ ಚಿನ್ನದ ದರ ಬೆಂಗಳೂರಿನಲ್ಲಿ 60,160 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ. ಚೆನ್ನೈನಲ್ಲಿ 60,490 ರೂ., ಮುಂಬೈನಲ್ಲಿ 60,160 ರೂ., ದೆಹಲಿಯಲ್ಲಿ 60,130 ರೂ., ಕೋಲ್ಕತಾದಲ್ಲಿ 60,160 ರೂ., ಹೈದರಾಬಾದ್ 60,160 ರೂ., ಕೇರಳ 60,160 ರೂ., ಪುಣೆ 60,160 ರೂ., ಅಹಮದಾಬಾದ್ 60,210 ರೂ., ಜೈಪುರ 60,310 ರೂ., ಲಖನೌ 60,310 ರೂ., ಕೊಯಮುತ್ತೂರು 60,49 ರೂ., ಮದುರೈ 60,490, ವಿಜಯವಾಡ 60,160 ರೂ. ಇದೆ.
ಬೆಳ್ಳಿ ದರ ಎಷ್ಟು?
ಇಂದು ಒಂದು ಗ್ರಾಂ ಬೆಳ್ಳಿಗೆ 76.50 ರೂ., 8 ಗ್ರಾಂ ಬೆಳ್ಳಿಗೆ 612 ರೂ., 10 ಗ್ರಾಂ ಬೆಳ್ಳಿ ದರ 765 ರೂ., 100 ಗ್ರಾಂ ಬೆಳ್ಳಿಗೆ 7,650 ಮತ್ತು 1 ಕೆ.ಜಿ. ಬೆಳ್ಳಿ ದರ 76,500 ರೂಪಾಯಿ ಇದೆ.
ಹಬ್ಬದ ಅವಧಿಯಲ್ಲಿ ಚಿನ್ನಾಭರಣ ಖರೀದಿಸುವವರಿಗೆ ಕೆಲವು ನೂರು ರೂಪಾಯಿ ಏರಿಕೆಯ ಪರಿಣಾಮ ಉಂಟಾಗಲಿದೆ. ಚಿನ್ನವು ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿರುವುದರಿಂದ ಹಣದುಬ್ಬರ ಕಾಲದಲ್ಲಿ ಹೂಡಿಕೆಗೆ ಅತ್ಯುತ್ತಮವಾಗಿದೆ. ಹೀಗಾಗಿ, ಚಿನ್ನಾಭರಣ ಖರೀದಿಸಿದರೆ ನಷ್ಟವಿಲ್ಲ. ಸದ್ಯ ಅಮೆರಿಕದಲ್ಲಿ ಕೇಂದ್ರ ಬ್ಯಾಂಕ್ ಬಡ್ಡಿದರ ಹೆಚ್ಚಿಸದು ಎನ್ನುವ ನಂಬಿಕೆಯಿದೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಹೂಡಿಕೆದಾರರು ಹೂಡಿಕೆಯತ್ತ ಗಮನ ಹರಿಸುತ್ತಿದ್ದಾರೆ. ಇದೇ ಕಾರಣದಿಂದ ಮುಂದಿನ ಕೆಲವು ದಿನ ಚಿನ್ನದ ದರ ಏರಿಕೆ ಕಾಣುವ ಸಾಧ್ಯತೆಯಿದೆ.