ಕನ್ನಡ ಸುದ್ದಿ  /  Karnataka  /  Business News Gold Price Increased On Raksha Bandhan 2023 August 30 Gold And Silver Rate Today In Karnataka Pcp

Gold Price Today: ರಕ್ಷಾ ಬಂಧನದಂದು ಚಿನ್ನದ ದರ ಭಾರೀ ಏರಿಕೆ, ಬೆಳ್ಳಿ ದರ ತುಸು ಹೆಚ್ಚಳ, ಇಲ್ಲಿದೆ ಕರ್ನಾಟಕದ ಇಂದಿನ ಚಿನ್ನಾಭರಣ ದರ ವಿವರ

Gold rate today: ಸಹೋದರಿಗೆ ಚಿನ್ನದ ಉಡುಗೊರೆ ನೀಡಲು ಬಯಸುವವರಿಗೆ ಇಂದು ಚಿನ್ನದ ದರ ತುಸು ಆಘಾತ ನೀಡಬಹುದು. ಕರ್ನಾಟಕದಲ್ಲಿ ಚಿನ್ನದ ದರ ಕಳೆದ ಕೆಲವು ದಿನಗಳ ದರ ಹೆಚ್ಚಳಕ್ಕೆ ಹೋಲಿಸಿದರೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಇಂದು ಬೆಳಗ್ಗಿನ ಮಾಹಿತಿಯಂತೆ ಒಂದು ಗ್ರಾಂ ಚಿನ್ನದ ದರ 25 ರೂಪಾಯಿಯಷ್ಟು ಹೆಚ್ಚಳವಾಗಿದೆ.

ಚಿನ್ನದ ದರ ಹೆಚ್ಚಳ (ಸಾಂದರ್ಭಿಕ ಚಿತ್ರ)
ಚಿನ್ನದ ದರ ಹೆಚ್ಚಳ (ಸಾಂದರ್ಭಿಕ ಚಿತ್ರ) (Ashok Munjani)

ಬೆಂಗಳೂರು: ಇಂದು ರಕ್ಷಾ ಬಂಧನ. ಪ್ರೀತಿಯ ಸಹೋದರಿಗೆ ಸಹೋದರನು ಚಿನ್ನದ ಉಡುಗೊರೆ ನೀಡಲು ಇಂದು ಚಿನಿವಾರ ಪೇಟೆಗೆ ಬಂದರೆ ಕಿಸೆಗೆ ತುಸು ಹೊರೆಯಾಗಲಿದೆ. ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ದರದಲ್ಲಿ ಭಾರೀ ಏರಿಕೆಯಾಗಿದೆ. ಈ ಹಿಂದಿನ ದಿನಗಳಲ್ಲಿ ಗ್ರಾಂಗೆ ಹೆಚ್ಚೆಂದರೆ ಐದು ಅಥವಾ ರೂಪಾಯಿ ಏರಿಕೆ ಕಾಣುತ್ತಿದ್ದ ಚಿನ್ನದ ದರ ಇಂದು ಒಂದೇ ದಿನದಲ್ಲಿ ಗ್ರಾಂಗೆ 25 ರೂಪಾಯಿಯಷ್ಟು ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲಿ ಚಿನ್ನದ ದರ ಇನ್ನಷ್ಟು ಏರಿಕೆ ಕಾಣುವ ಸೂಚನೆಯಿದೆ. ವಿಶೇಷವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಷೇರುಪೇಟೆ ಮತ್ತು ಬುಲಿಯನ್‌ ಪೇಟೆ ಕೊಂಚ ಆಶಾದಾಯಕವಾಗಿರುವ ಪರಿಣಾಮ ಎಂಬಂತೆ ಚಿನ್ನದ ದರ ಹೆಚ್ಚಳವಾಗಿದೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕದಲ್ಲಿ 22 ಕ್ಯಾರೆಟ್‌ ಚಿನ್ನದ ದರ

ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,470 ರೂ ಇದೆ. ನಿನ್ನೆಯ 5,445 ರೂ ದರಕ್ಕೆ ಹೋಲಿಸಿದರೆ 25 ರೂಪಾಯಿಯಷ್ಟು ದರ ಹೆಚ್ಚಾಗಿದೆ. ಇಂದು 8 ಗ್ರಾಂ ಚಿನ್ನದ ಬೆಲೆ 43,760 ರೂಪಾಯಿ ಇದೆ. ನಿನ್ನೆ 43,560 ರೂ. ಇತ್ತು. ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ದರ 200 ರೂ. ಏರಿಕೆಯಾಗಿದೆ. ಕರ್ನಾಟಕದ ವಿವಿಧ ನಗರಗಳಲ್ಲಿ ಇಂದು ಹತ್ತು ಗ್ರಾಂ ಚಿನ್ನದ ದರ 54,700 ರೂ. ಇದೆ. ನಿನ್ನೆಯ 54,450 ರೂ. ಗೆ ಹೋಲಿಸಿದರೆ 250 ರೂ. ಏರಿಕೆ ಕಂಡಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,47,000 ರೂ. ನೀಡಬೇಕು. ನಿನ್ನೆಯ 5,44,500 ರೂ.ಗೆ ಹೋಲಿಸಿದರೆ 2500 ರೂಪಾಯಿ ಏರಿಕೆಯಾಗಿದೆ.

ಅಪರಂಜಿ ಚಿನ್ನವೂ ದುಬಾರಿ

ಅಪರಂಜಿಯಂತಹ ಸಹೋದರಿಗೆ ಇಂದು ಅಪರಂಜಿ ಚಿನ್ನದ ಉಡುಗೊರೆ ನೀಡಲು ಬಯಸಿದರೆ ನಿನ್ನೆಗಿಂತ ಗ್ರಾಂಗೆ 27 ರೂಪಾಯಿ ಹೆಚ್ಚು ನೀಡಬೇಕು. ಇಂದು ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ 5,967 ರೂ. ಇದೆ. ನಿನ್ನೆಯ 5,940 ರೂ.ಗೆ ಹೋಲಿಸಿದರೆ 27 ರೂ. ಏರಿಕೆಯಾಗಿದೆ. ನೀವು 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 47,736 ರೂ. ನೀಡಬೇಕಾಗುತ್ತದೆ. ನಿನ್ನೆ 47,520 ರೂ. ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 216 ರೂಪಾಯಿ ಏರಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 59,670 ರೂ. ಇದೆ. ನಿನ್ನೆಯ 59,400 ರೂ. ಗೆ ಹೋಲಿಸಿದರೆ 270 ರೂ. ಏರಿಕೆಯಾಗಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,96,700 ರೂ. ನೀಡಬೇಕು. ಮಂಗಳವಾರದ 5,94,000 ರೂ.ಗೆ ಹೋಲಿಸಿದರೆ ಬುಧವಾರ 2700 ರೂ. ಏರಿಕೆಯಾಗಿದೆ.

ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್‌ ಚಿನ್ನದ ದರ

ಇಂದಿನ ಬೆಳಗ್ಗಿನ ಧಾರಣೆಯಂತೆ 10 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ ಬೆಂಗಳೂರಿನಲ್ಲಿ 54,700 ರೂ. ಇದೆ. ಮಂಗಳೂರು 54,700 ರೂ., ಮೈಸೂರಿನಲ್ಲಿ 54,700 ರೂ. ಇದೆ. ಸಾಮಾನ್ಯವಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. ಮಜೂರಿ, ಇತರೆ ಶುಲ್ಕ ಇತ್ಯಾದಿಗಳಿಂದ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ದರ ವ್ಯತ್ಯಾಸ ಇರಬಹುದು. ಚೆನ್ನೈನಲ್ಲಿ 55,200 ರೂ., ಮುಂಬೈನಲ್ಲಿ 54,700 ರೂ., ದೆಹಲಿಯಲ್ಲಿ 54,850 ರೂ., ಕೋಲ್ಕತಾದಲ್ಲಿ 54,700 ರೂ., ಹೈದರಾಬಾದ್‌ 54,700 ರೂ., ಕೇರಳ 54,700 ರೂ., ಪುಣೆ 54,700 ರೂ., ಅಹಮದಾಬಾದ್‌ 54,750 ರೂ., ಜೈಪುರ 54,850 ರೂ., ಲಖನೌ 54,850 ರೂ., ಕೊಯಮುತ್ತೂರು 55,200 ರೂ., ಮಧುರೈ 55,200 ರೂ. ಹಾಗೂ ವಿಜಯವಾಡ 54,700 ರೂ. ಇದೆ.

ಪ್ರಮುಖ ನಗರಗಳಲ್ಲಿ ಅಪರಂಜಿ ಚಿನ್ನದ ದರ

10 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ಬೆಂಗಳೂರಿನಲ್ಲಿ 59,670 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ. ಚೆನ್ನೈನಲ್ಲಿ 60,220 ರೂ., ಮುಂಬೈನಲ್ಲಿ 59,670 ರೂ., ದೆಹಲಿಯಲ್ಲಿ 59,820 ರೂ., ಕೋಲ್ಕತಾದಲ್ಲಿ 59,670 ರೂ., ಹೈದರಾಬಾದ್‌ 59,670 ರೂ., ಕೇರಳ 59,670 ರೂ., ಪುಣೆ 59,670 ರೂ., ಅಹಮದಾಬಾದ್‌ 59,720 ರೂ., ಜೈಪುರ 59,820 ರೂ., ಲಖನೌ 59,820 ರೂ., ಕೊಯಮುತ್ತೂರು 60,220 ರೂ., ಮದುರೈ 60,220, ವಿಜಯವಾಡ 59,670 ರೂ. ಇದೆ.

ಬೆಳ್ಳಿ ದರ ಎಷ್ಟು?

ಚಿನಿವಾರ ಪೇಟೆಯ ಅಪ್‌ಡೇಟ್‌ ಪ್ರಕಾರ ಬುಧವಾರ ಬೆಳ್ಳಿ ದರ ಏರಿಕೆ ಕಂಡಿದೆ. ಒಂದು ಗ್ರಾಂ ಬೆಳ್ಳಿಗೆ 75.70 ರೂ., 8 ಗ್ರಾಂ ಬೆಳ್ಳಿಗೆ 605.60 ರೂ., 10 ಗ್ರಾಂ ಬೆಳ್ಳಿ ದರ 757 ರೂ., 100 ಗ್ರಾಂ ಬೆಳ್ಳಿಗೆ 7,570 ಮತ್ತು 1 ಕೆ.ಜಿ. ಬೆಳ್ಳಿ ದರ 75,700 ರೂಪಾಯಿ ಇದೆ.

ಬಹುತೇಕ ಜಾಣ ಸಹೋದರರು ಚಿನ್ನ ಖರೀದಿಸಿಲು ರಕ್ಷಾ ಬಂಧನದವರೆಗೆ ಕಾಯುವ ಸಾಧ್ಯತೆಯಿಲ್ಲ. ಕೆಲವು ದಿನಗಳ ಹಿಂದೆಯೇ ತಮ್ಮ ಪ್ರೀತಿಯ ಸಹೋದರಿಗೆ ಚಿನ್ನಾಭರಣ ಖರೀದಿಸಿಟ್ಟಿರಬಹುದು. ಈ ರೀತಿ ಈ ಹಿಂದೆಯೇ ಚಿನ್ನಾಭರಣ ಖರೀದಿಸಿಟ್ಟವರಿಗೆ ಇಂದು ನಷ್ಟವಿಲ್ಲ. ಆದರೆ, ಇಂದೇ ಖರೀದಿಸೋಣ ಎಂದುಕೊಂಡವರು ನಿನ್ನೆಗಿಂತ ಹೆಚ್ಚಿನ ದರದಲ್ಲಿ ಚಿನ್ನ ಖರೀದಿಸಿ ಸಹೋದರಿಗೆ ನೀಡುವುದು ಅನಿವಾರ್ಯ.