ಕನ್ನಡ ಸುದ್ದಿ  /  Karnataka  /  Business News How To Recharge Namma Metro Card Using Paytm In Online Follow This Simple Steps Rmy

ಪೇಟಿಎಂನಲ್ಲಿ ನಮ್ಮ ಮೆಟ್ರೋ ಕಾರ್ಡ್ ರಿಚಾರ್ಜ್ ಮಾಡಿಕೊಳ್ಳುವುದು ಹೇಗೆ; ಈ ವಿಧಾನ ಅನುಸರಿಸಿ -Namma Metro Card Recharge

ನಿಮ್ಮ ಬಳಿ ನಮ್ಮ ಮೆಟ್ರೋ ರೈಲು ಪ್ರಯಾಣದ ಕಾರ್ಡ್ ಇದ್ದರೆ ನೀವು ಆನ್‌ಲೈನ್ ಮೂಲಕ ಪೇಟಿಎಂನಲ್ಲಿ ರಿಚಾರ್ಜ್ ಮಾಡಿಕೊಳ್ಳಬಹುದು. ಅದು ಹೇಗೆ ಅನ್ನೋದರ ವಿವರ ಇಲ್ಲಿದೆ.

ಪೇಟಿಎಂನಲ್ಲಿ ನಮ್ಮ ಮೆಟ್ರೋ ಕಾರ್ಡ್ ರಿಚಾರ್ಜ್ ಮಾಡಿಕೊಳ್ಳುವುದು  ಹೇಗೆ ಅನ್ನೋದನ್ನ ತಿಳಿಯಿರಿ
ಪೇಟಿಎಂನಲ್ಲಿ ನಮ್ಮ ಮೆಟ್ರೋ ಕಾರ್ಡ್ ರಿಚಾರ್ಜ್ ಮಾಡಿಕೊಳ್ಳುವುದು ಹೇಗೆ ಅನ್ನೋದನ್ನ ತಿಳಿಯಿರಿ

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿರುವ ನಮ್ಮ ಮೆಟ್ರೋ ರೈಲು ಸೇವೆಯಿಂದ ಜನಸಾಮಾನ್ಯರು ಕಚೇರಿಯಿಂದ ಮನೆ, ಮನೆಯಿಂದ ಕಚೇರಿಗೆ ಹೋಗಲು ತುಂಬಾ ಅನುಕೂಲಕರವಾಗಿದೆ. ಆರಂಭದಲ್ಲಿ ಬೈಯಪ್ಪನಹಳ್ಳಿಯಿಂದ ಎಂಜಿ ರಸ್ತೆಗೆ ಆರಂಭವಾಗಿದ್ದ ಈ ಸೇವೆ ಇದೀಗ ನಗರದ ಮೂಲ ಮೂಲೆಗೆ ವಿಸ್ತರಿಸಲಾಗುತ್ತಿದೆ. ನೀವೇನಾದರೂ ನಿತ್ಯ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದರೆ ನಿಮ್ಮ ಬಳಿ ಮೆಟ್ರೋ ಕಾರ್ಡ್ ಇದ್ದರೆ ಆನ್‌ಲೈನ್‌ನಲ್ಲಿ ನೀವೇ ಪೇಮೆಂಟ್ ಆ್ಯಪ್‌ಗಳನ್ನು ಬಳಸಿ ರಿಚಾರ್ಜ್ ಮಾಡಿಕೊಳ್ಳಬಹುದು. ಇದರಿಂದ ಮೆಟ್ರೋ ನಿಲ್ದಾಣಗಳಲ್ಲಿನ ಕೌಂಟರ್‌ಗಳ ಮುಂದೆ ನಿಮಿಷಗಳ ಕಾಲ ನಿಂತು ಕಾರ್ಡ್ ರಿಜಾರ್ಜ್ ಮಾಡಿಸುವುದನ್ನು ತಪ್ಪಿಸಬಹುದು. ಅದು ಹೇಗೆ ಅನ್ನೋದರ ವಿವರ ಇಲ್ಲಿದೆ.

ಸಂಚಾರ ದಟ್ಟಣೆಯನ್ನು ತಪ್ಪಿಸಿ ಸುಗಮವಾಗಿ ಕಚೇರಿ, ಆಫೀಸ್ ಹಾಗೂ ಇತರೆ ಕೆಲಸ ಕಾರ್ಯಗಳಿಗೆ ಹೋಗಲು ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಅತ್ಯುತ್ತಮ ಸೇವೆಯಾಗಿದೆ. ಮೆಟ್ರೋ ನಿಲ್ದಾಣಗಳ ಕೌಂಟರ್‌ಗಳ ಬಳಿ ನಿಮಿಷಗಳ ಕಾಲ ನಿಂತು ಟಿಕೆಟ್ ಪಡೆದು ಪ್ರಯಾಣಿಸುವಾಗ ಎಷ್ಟು ಬಾರಿ ನಿರ್ದಿಷ್ಟ ಸಮಯದ ರೈಲನ್ನು ತಪ್ಪಿಸಿಕೊಂಡಿರುವಂತ ನಿರ್ದರ್ಶನಗಳಿವೆ.

ಇಂತಹ ಸಮಸ್ಯೆ ಹಾಗೂ ಸಮಯ ಉಳಿತಾಯಕ್ಕಾಗಿ ಮೆಟ್ರೋದಲ್ಲಿ ಪ್ರಯಾಣಿಸುವಾಗ ಮೆಟ್ರೋ ಕಾರ್ಡ್ ಹೊಂದುವುದು ಅಗತ್ಯವಾಗಿದೆ. ಒಂದು ವೇಳೆ ನೀವು ಹೊಸದಾಗಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದರೆ ಅಥವಾ ಹಿಂದಿನಿಂದಲೂ ಮೆಟ್ರೋ ಪ್ರಯಾಣಿಕರು ನೀವಾಗಿದ್ದರೆ ಆನ್‌ಲೈನ್‌ ಪೇಮೆಂಟ್ ಆ್ಯಪ್ ಪೇಟಿಎಂ ಮೂಲಕ ಮೆಟ್ರೋ ಕಾರ್ಡ್ ರಿಚಾರ್ಜ್ ಮಾಡಿಕೊಳ್ಳಿ. ಅದು ಹೇಗೆ ಎಂಬುದರ ಮಾಹಿತಿಯನ್ನು ನಿಮಗಾಗಿ ಇಲ್ಲಿ ನೀಡಲಾಗಿದೆ.

ಪೇಟಿಎಂನಲ್ಲಿ ನಮ್ಮ ಮೆಟ್ರೋ ಕಾರ್ಡ್ ರಿಚಾರ್ಜ್ ಮಾಡುವ ವಿಧಾನ

  • ನಿಮ್ಮ ಫೋನ್‌ನಲ್ಲಿರುವ ಪೇಟಿಎಂ ಆಪ್ ಓಪನ್ ಮಾಡಿ
  • ರಿಚಾರ್ಜ್ ಮತ್ತು ಬಿಲ್ ಪೇಮೆಂಟ್ಸ್ ಅನ್ನು ಟ್ಯಾಪ್ ಮಾಡಿ
  • ವೀವ್ ಮೋರ್‌ ಮೇಲೆ ಕ್ಲಿಕ್ ಮಾಡಿ
  • ಸೆಲೆಕ್ಟ್ ಸಿಟಿ ಆಯ್ಕೆಯನ್ನು ಕ್ಲಿಕ್ ಮಾಡಿ ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್ ನಗರಗಳಲ್ಲಿ ನಿಮ್ಮ ನಗರವನ್ನು ಆಯ್ಕೆ ಮಾಡಿ
  • ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಆಯ್ಕೆ ಮಾಡಿ
  • ನಿಮ್ಮ ಕಾರ್ಡ್ ಸಂಖ್ಯೆಯನ್ನು ನಮೂದಿಸಿ, ರಿಚಾರ್ಜ್ ಮೊತ್ತವನ್ನು ನಮೂಡಿಸಿ
  • ನಂತರ ಪ್ರೊಸೀಡ್ ಮೇಲೆ ಕ್ಲಿಕ್ ಮಾಡಿ
  • ರಿಚಾರ್ಜ್ ಪ್ರಕ್ರಿಯೆ ಮುಗಿಸಲು ಪೇಮೆಂಟ್ ವಿಧಾನವನ್ನು ಆಯ್ಕೆ ಮಾಡಿಕೊಳ್ಳಿ

ಇದನ್ನೂ ಓದಿ: ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೋ ಸಂಪರ್ಕ ಸಾಧ್ಯತೆ; ಕಾರ್ಯ ಸಾಧ್ಯತಾ ವರದಿಗೆ ಟೆಂಡರ್ ಆಹ್ವಾನ

ಪೇಟಿಎಂನಲ್ಲಿ ನಮ್ಮ ಮೆಟ್ರೋ ಕಾರ್ಡ್ ರಿಚಾರ್ಜ್ ಅಷ್ಟೇ ಅಲ್ಲದೆ, ಇಎಂಐ, ಗ್ಯಾಸ್ ಬಿಲ್, ಮೊಬೈಲ್ ರಿಚಾರ್ಜ್‌ಗಳನ್ನು ಮಾಡಿಕೊಳ್ಳಬಹುದು. ಖಾತೆಯಿಂದ ಖಾತೆಗೆ ಹಣವನ್ನು ವರ್ಗಾವಣೆ ಮಾಡಿಕೊಳ್ಳಬಹುದು.

(This copy first appeared in Hindustan Times Kannada website. To read more like this please logon to kannada.hindustantimes.com )

IPL_Entry_Point