ಕನ್ನಡ ಸುದ್ದಿ / ಕರ್ನಾಟಕ /
Milk Rate Hike: ಕರ್ನಾಟಕದಲ್ಲಿ ಮತ್ತೆ ಹಾಲಿನ ದರ ಏರಿಕೆ ಪ್ರಸ್ತಾವ, ಎಷ್ಟು ಹೆಚ್ಚಾಗಬಹುದು, ರೈತರಿಗೆ ನೀಡೋದು ಎಷ್ಟು; ಈವರೆಗಿನ 10 ಅಂಶಗಳು
Milk Rate Hike ನಂದಿನಿ ಹಾಲಿನ ದರ( Nandini Milk) ಕರ್ನಾಟಕದಲ್ಲಿ ಮತ್ತೆ ಹೆಚ್ಚಳವಾಗುವ ಸೂಚನೆಯಿದೆ. ಸರ್ಕಾರದ ಪ್ರಮುಖರು ಹೇಳಿರುವ ಪ್ರಕಾರ ಲೀಟರ್ ಹಾಲಿನ ದರ ಲೀಟರ್‌ಗೆ 3 ರಿಂದ 5 ರೂ. ಏರಿಕೆಯಾಗಬಹುದು. ಇದನ್ನು ಉತ್ಪಾದಕರಿಗೆ ನೀಡುವುದಾಗಿ ಸರ್ಕಾರ ಹೇಳಿದೆ. ಹಾಲಿನ ದರ ಏರಿಕೆ ಕುರಿತ ಈವರೆಗಿನ ಬೆಳವಣಿಗೆಗಳ ಅಂಶಗಳು ಇಲ್ಲಿವೆ.
ನಂದಿನಿ ಹಾಲಿನ ದರವನ್ನು ಮತ್ತೆ ಏರಿಕೆ ಮಾಡಲು ಕರ್ನಾಟಕ ಸರ್ಕಾರ ಸಿದ್ದತೆ ಮಾಡಿಕೊಳ್ಳುತ್ತಿದೆ.
Karnataka Milk Rate Hike ಕರ್ನಾಟಕದಲ್ಲಿ ನಂದಿನಿ ಹಾಲಿನ ದರ( Nandini Milk Rate hike) ಏರಿಕೆ ಚರ್ಚೆಗಳು ಶುರುವಾಗಿವೆ. ಈ ಬಾರಿ ಹಿಂದಿನ ಎಲ್ಲಾ ಬಾರಿಗಿಂತಲೂ ಹೆಚ್ಚಿನ ದರ ಆಗಬಹುದು ಎನ್ನುವ ಸೂಚನೆಗಳು ಸಿಎಂ ಸಿದ್ದರಾಮಯ್ಯ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿಕೆಯಿಂದ ದೊರೆತಿದೆ. ಈಗ ಕರ್ನಾಟಕದಲ್ಲಿ ಹಾಲಿನ ದರ ಎಷ್ಟಿದೆ. ಹಾಲು ಉತ್ಪಾದನೆ ಪ್ರಮಾಣ, ರೈತರಿಗೆ ಸಿಗುತ್ತಿರುವ ಮೊತ್ತ ಹಾಗೂ ಸಹಾಯಧನದ ವಿವರಗಳನ್ನೊಳಗೊಂಡ ಹಾಲಿನ ಕುರಿತಾದ ಈವರೆಗಿನ ಬೆಳವಣಿಗೆಗಳ ಹತ್ತು ಅಂಶಗಳು ಇಲ್ಲಿವೆ.
- ಭಾರತದ ಒಟ್ಟು ಹಾಲು ಉತ್ಪಾದನೆಯ ಶೇಕಡಾ 5.34 ರಷ್ಟನ್ನು ಹೊಂದಿರುವ ಅಗ್ರ ಹಾಲು ಉತ್ಪಾದಕ ರಾಜ್ಯಗಳ ಪಟ್ಟಿಯಲ್ಲಿ ರಾಜಸ್ಥಾನ, ಉತ್ತರಪ್ರದೇಶ, ಮಧ್ಯಪ್ರದೇಶ ,ಗುಜರಾತ್ ನಂತರ ಕರ್ನಾಟಕ 9 ನೇ ಸ್ಥಾನದಲ್ಲಿದೆ.
- ಕರ್ನಾಟಕ ಹಾಲು ಒಕ್ಕೂಟ ವ್ಯಾಪ್ತಿಯಲ್ಲಿ ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ವಿಜಯಪುರ, ಧಾರವಾಡ, ಬಳ್ಳಾರಿ, ಶಿವಮೊಗ್ಗ ಸೇರಿ ಒಟ್ಟು 16 ಒಕ್ಕೂಟಗಳಿವೆ. ರಾಜ್ಯದಲ್ಲಿ ಕೆಎಂಎಫ್ ಅಡಿ 10 ಲಕ್ಷ ಹಾಲು ಉತ್ಪಾದಕರಿದ್ದು, ಕೆಎಂಎಫ್ ಅಡಿ 14,700 ಹಾಲು ಉತ್ಪಾದಕರ ಸಹಕಾರಿ ಸಂಘಗಳು ನೋಂದಣಿಯಾಗಿ ಹಾಲು ಉತ್ಪಾದನೆ ಮಾಡುತ್ತಿವೆ. ಪ್ರತಿ ವರ್ಷ 16 ಸಾವಿರ ಕೋಟಿ ರೂ. ವಹಿವಾಟು ನಡೆಯುತ್ತಿದೆ. 25 ಲಕ್ಷ ಹಾಲು ಉತ್ಪಾದಕ ಸಂಘದ ಸದಸ್ಯರು ಒಕ್ಕೂಟದಲ್ಲಿದ್ದಾರೆ.
ಇದನ್ನೂ ಓದಿರಿ: Breaking News: ಕರ್ನಾಟಕದಲ್ಲಿ ಹಾಲಿನ ದರ ಹೆಚ್ಚಳ, ಲೀಟರ್ ನಂದಿನಿ ಹಾಲು 2.10 ರೂ ದುಬಾರಿ - ಕರ್ನಾಟಕದಲ್ಲಿ ಒಂದು ದಿನಕ್ಕೆ ಅಂದಾಜು ಒಂದು ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಕೋವಿಡ್ ನಂತರ ಕರ್ನಾಟಕದಲ್ಲಿ ಹಾಲಿನ ಉತ್ಪಾದನೆಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೋವಿಡ್‌ಗೂ ಮೊದಲು ನಿತ್ಯ 86 ರಿಂದ 88 ಲಕ್ಷ ಲೀಟರ್ ಸಂಗ್ರಹವಾಗುತ್ತಿತ್ತು.
- ರೈತರಿಗೆ 1 ಲೀಟರ್‌ಗೆ 5 ರೂ.ನಂತೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ಒಕ್ಕೂಟ ವ್ಯಾಪ್ತಿಯಲ್ಲಿ ಎಮ್ಮೆಯ ಹಾಲಿಗೆ ಪ್ರತಿ ಲೀಟರ್‌ಗೆ 30 ರಿಂದ 35 ರೂ., ಆಕಳು ಹಾಲಿಗೆ 26 ರಿಂದ 30 ರೂ. ದರವಷ್ಟೇ ಇದೆ. ಖಾಸಗಿಯಾಗಿ ಮಾರಿದರೆ ಉತ್ಪಾದಕರಿಗೆ 40 ರೂ. ಗೆ ಸಿಗಲಿದೆ.
- ಕರ್ನಾಟಕ ಹಾಲು ಮಹಾಮಂಡಳದ ಪ್ರಕಾರ ನಂದಿನಿ ಹಾಲಿನ ದರ ಲೀಟರ್‌ಗೆ ಕಳೆದ ಜೂನ್‌ನಲ್ಲಿ 2.10 ರೂ.ದುಬಾರಿಯಾಗಿದ್ದು, ಲೀಟರ್ ಹಾಲಿನ ದರ ಲೀಟರ್‌ಗೆ 42 ರೂಪಾಯಿಗಳಿಂದ ಈಗ 44 ರೂಪಾಯಿ ಗಳನ್ನು ಪಾವತಿಸಲಾಗುತ್ತಿದೆ. ಇದೇ ರೀತಿ ಟೋನ್ಡ್ ಹಾಲು, ವಿಶೇಷ ಹಾಲಿನ ದರವೂ ಲೀಟರ್‌ಗೆ 54 ರೂ.ವರೆಗೂ ಇದೆ.
ಇದನ್ನೂ ಓದಿರಿ: Cm Siddaramaiah: ಹಾಲಿನ ಬೆಲೆ ಏರಿಸಿದ್ದಲ್ಲ, ಬೆಂಬಲ ಬೆಲೆ ಕೊಟ್ಟಿದ್ದು, ಬಿಜೆಪಿ ವಿಪರೀತ ಸುಳ್ಳು ಹೇಳುತ್ತೆ ಎಂದ ಸಿದ್ದರಾಮಯ್ಯ - ಕೇರಳದಲ್ಲಿ ಒಂದು ಲೀಟರ್ ಹಾಲಿನ ಬೆಲೆ 52 ರುಪಾಯಿ ಇದೆ. ಗುಜರಾತ್ನಲ್ಲಿ ಅಮುಲ್ ಒಂದು ಲೀಟರ್ಗೆ 56 ರೂ. ಮಹಾರಾಷ್ಟ್ರದಲ್ಲಿ 56 ರೂ. ದೆಹಲಿ ಮದರ್ ಡೈರಿಯ ಹಾಲಿನ ಬೆಲೆ 54 ರೂ. ಇದೆ.
- ಕರ್ನಾಟಕದಲ್ಲಿ ಹಾಲಿನ ದರವನ್ನು ಎರಡು ತಿಂಗಳ ಹಿಂದೆಯಷ್ಟೇ ಲೀಟರ್‌ಗೆ 2 ರೂ.ಗಳಷ್ಟು ಏರಿಕೆ ಮಾಡಲಾಗಿತ್ತು. ಇದಕ್ಕೂ ಆರು ತಿಂಗಳ ಮೊದಲು ಕೂಡ ಏರಿಕೆಯಾಗಿತ್ತು.
- ನಂದಿನಿಯ ಎಲ್ಲ ಮಾದರಿಯ ಹಾಲಿನ ದರ ಕಳೆದ ಜೂನ್‍ನಲ್ಲೇ ಪ್ರತಿ ಲೀಟರ್‍ಗೆ 2 ರೂ 10 ಪೈಸೆಗೆ ಹೆಚ್ಚಿಸಿ ಪರಿಷ್ಕರಿಸಲಾಗಿದೆ. ಪ್ರತಿ ಲೀಟರ್ ಟೋನ್ಡ್ ಹಾಲು 42 ರಿಂದ 44 ಕ್ಕೆ, ಸಮೃದ್ಧಿ ಹಾಲು 51 ರಿಂದ 53, ಶುಭಂ ಹಾಲು 48 ರಿಂದ 50 ಹೀಗೆ ಎಲ್ಲ ಮಾದರಿಯ ಹಾಲಿನ ದರವನ್ನು ಜೂನ್‌ನಲ್ಲಿ ಏರಿಕೆ ಮಾಡಲಾಗಿತ್ತು
- ಈಗ ಮತ್ತೆ ಹಾಲಿನ ದರ ಏರಿಕೆ ಪ್ರಸ್ತಾಪವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಗಡಿಯಲ್ಲಿ ನಡೆದ ಸಮಾರಂಭದಲ್ಲಿ ಹಾಲಿನ ದರ ಏರಿಸುವ ಕುರಿತು ಸೂಚ್ಯವಾಗಿ ಹೇಳಿದ್ದಾರೆ. ಅಂದರೆ ಸುಮಾರು ಮೂರು ರೂ.ವರೆಗೂ ಲೀಟರ್ ಹಾಲಿನ ಏರಿಕೆಯಾಗಬಹುದು ಎನ್ನುವುದು ಸಿದ್ದರಾಮಯ್ಯ ಅವರ ಅಭಿಪ್ರಾಯ.
- ಇದೇ ಕುರಿತಾಗಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ತುಮಕೂರಿನಲ್ಲಿ ಮಾತನಾಡಿದ್ದು, ಲೀಟರ್‌ಗೆ ಐದು ರೂ.ಗಳನ್ನಾದರೂ ಏರಿಸಬೇಕು. ಇದರಿಂದ ಗ್ರಾಹಕರಿಗೆ ಕೊಂಚ ಹೊರೆ ಎನ್ನಿಸಿದರೂ ಹಾಲು ಉತ್ಪಾದಕರಿಗೆ ನೆರವಾಗಲಿದೆ. ಹೆಚ್ಚಳ ಮಾಡಿದ ಹಣವನ್ನು ರೈತರಿಗೆ ನೀಡುತ್ತೇವೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.