ನಾರಾಯಣ ಹೆಲ್ತ್ ಅದಿತಿ ಆರೋಗ್ಯ ವಿಮೆ; 10 ಸಾವಿರ ರೂ ಪ್ರೀಮಿಯಂಗೆ 1 ಕೋಟಿ ರೂ ಸರ್ಜರಿ ಕವರೇಜ್‌- ಏನಿದು ಯೋಜನೆ
ಕನ್ನಡ ಸುದ್ದಿ  /  ಕರ್ನಾಟಕ  /  ನಾರಾಯಣ ಹೆಲ್ತ್ ಅದಿತಿ ಆರೋಗ್ಯ ವಿಮೆ; 10 ಸಾವಿರ ರೂ ಪ್ರೀಮಿಯಂಗೆ 1 ಕೋಟಿ ರೂ ಸರ್ಜರಿ ಕವರೇಜ್‌- ಏನಿದು ಯೋಜನೆ

ನಾರಾಯಣ ಹೆಲ್ತ್ ಅದಿತಿ ಆರೋಗ್ಯ ವಿಮೆ; 10 ಸಾವಿರ ರೂ ಪ್ರೀಮಿಯಂಗೆ 1 ಕೋಟಿ ರೂ ಸರ್ಜರಿ ಕವರೇಜ್‌- ಏನಿದು ಯೋಜನೆ

ನಾರಾಯಣ ಹೆಲ್ತ್ ಅದಿತಿ ಆರೋಗ್ಯ ವಿಮೆಯನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, 10 ಸಾವಿರ ರೂ ಪ್ರೀಮಿಯಂಗೆ 1 ಕೋಟಿ ರೂ ಸರ್ಜರಿ ಕವರೇಜ್‌ ನೀಡುತ್ತದೆ. ಏನಿದು ಯೋಜನೆ, ಎಲ್ಲೆಲ್ಲಿ ಲಭ್ಯವಿದೆ ಎಂಬಿತ್ಯಾದಿ ವಿವರ ಇಲ್ಲಿದೆ.

ನಾರಾಯಣ ಹೆಲ್ತ್ ಅದಿತಿ ಆರೋಗ್ಯ ವಿಮೆಯನ್ನು ಪರಿಚಯಿಸಿದ್ದು, 10 ಸಾವಿರ ರೂ ಪ್ರೀಮಿಯಂಗೆ 1 ಕೋಟಿ ರೂ ಸರ್ಜರಿ ಕವರೇಜ್‌ ನೀಡುವ ಯೋಜನೆ ಜಾರಿಯಾಗಿದೆ.
ನಾರಾಯಣ ಹೆಲ್ತ್ ಅದಿತಿ ಆರೋಗ್ಯ ವಿಮೆಯನ್ನು ಪರಿಚಯಿಸಿದ್ದು, 10 ಸಾವಿರ ರೂ ಪ್ರೀಮಿಯಂಗೆ 1 ಕೋಟಿ ರೂ ಸರ್ಜರಿ ಕವರೇಜ್‌ ನೀಡುವ ಯೋಜನೆ ಜಾರಿಯಾಗಿದೆ.

ಬೆಂಗಳೂರು: ಆರೋಗ್ಯ ವಿಮೆಯ ಪ್ರಾಮಖ್ಯ ಹೆಚ್ಚುತ್ತಿರುವ ಸಂದರ್ಭದಲ್ಲಿ ಹೃದ್ರೋಗಗಳಿಗೆ ಚಿಕಿತ್ಸೆ ಒದಗಿಸುವ ಡಾ.ದೇವಿ ಪ್ರಸಾದ್ ಶೆಟ್ಟಿ ಅವರ ನಾರಾಯಣ ಹೆಲ್ತ್ ಹೊಸ ಆರೋಗ್ಯ ವಿಮೆ ‘ಅದಿತಿ’ಯನ್ನು ಮಾರುಕಟ್ಟೆ ಪರಿಚಯಿಸಿದೆ. ಶಸ್ತ್ರಚಿಕಿತ್ಸೆಗಳಿಗೆ ವಿಮಾ ನೆರವು ಒದಗಿಸುವ ದೃಷ್ಟಿಯಿಂದ ಹೊಸ ವಿಮಾ ಉತ್ಪನ್ನವನ್ನು ನಾರಾಯಣ ಹೆಲ್ತ್ ಪರಿಚಯಿಸಿದೆ.

ನಾರಾಯಣ ಹೆಲ್ತ್ ಅದಿತಿ ವಿಮಾ ಉತ್ಪನ್ನದ ಬಗ್ಗೆ ಮಾತನಾಡುತ್ತ, “ಭಾರತದಲ್ಲಿ, 70 ದಶಲಕ್ಷ ಶಸ್ತ್ರಚಿಕಿತ್ಸೆಗಳ ಅವಶ್ಯಕತೆಯಿದೆ. ಆದರೆ, ಬೆಲ್‌ವೆದರ್ ಕಾರ್ಯವಿಧಾನಗಳಿಗೆ ಅಂದರೆ ಸಿಸೇರಿಯನ್ ಹೆರಿಗೆ, ಲ್ಯಾಪರೊಟಮಿ ಮತ್ತು ತೆರೆದ ಮುರಿತದ ಚಿಕಿತ್ಸೆಗಾಗಿ ಜನರಿಗೆ ಸಾಧ್ಯವಾಗದ ಕಾರಣ ಕೇವಲ 20 ದಶಲಕ್ಷ ಜನರು ಮಾತ್ರ ಇಂತಹ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಅಂತರವನ್ನು ನಿವಾರಿಸುವುದಕ್ಕಾಗಿ ನಾರಾಯಣ ಹೆಲ್ತ್ ತನ್ನ ಮೊದಲ ಆರೋಗ್ಯ ವಿಮಾ ಉತ್ಪನ್ನ ‘ಅದಿತಿ’ಯನ್ನು ಜುಲೈ 1 ರಂದು ಮಾರುಕಟ್ಟೆಗೆ ಪರಿಚಯಿಸಿದೆ” ಎಂದು ನಾರಾಯಣ ಹೆಲ್ತ್ ಅಧ್ಯಕ್ಷ ಡಾ ದೇವಿ ಪ್ರಸಾದ್ ಶೆಟ್ಟಿ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.

ಮುಂದಿನ ದಿನಗಳಲ್ಲಿ ಭಾರತವು ಕಾರ್ಯತಂತ್ರದ ಬದಲಾವಣೆಗೆ ನಾಂದಿ ಹಾಡಲಿದೆ. ಅಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಬಲಪಡಿಸುವುದು ಮಾತ್ರವಲ್ಲ. ಮೂಲಸೌಕರ್ಯ ಬಲಪಡಿಸುವುದಷ್ಟೇ ಅಲ್ಲ, ಮಲೇರಿಯಾ, ಟಿಬಿ, ಎಚ್ಐವಿ ಮತ್ತು ವಿವಿಧ ಶಸ್ತ್ರಚಿಕಿತ್ಸೆಗಳು ಲಭ್ಯವಾಗುವಂತೆ ಮಾಡುವಲ್ಲಿ ಇದು ಮಹತ್ವದ ಹೆಜ್ಜೆ ಎಂದು ಡಾ. ದೇವಿಪ್ರಸಾದ್ ಶೆಟ್ಟಿ ಹೇಳಿದರು.

ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಅದಿತಿ ವಿಮೆಯ ಪ್ರಯೋಗ

"ಮೈಸೂರು, ಮಂಡ್ಯ ಮತ್ತು ಚಾಮರಾಜನಗರದಲ್ಲಿ ಪೈಲಟ್ ಪ್ರಾಜೆಕ್ಟ್ ಆಗಿ ಪರಿಚಯಿಸಲಾದ ಅದಿತಿ, ಒಂದೆರಡು ವಾರಗಳಲ್ಲಿ ಬೆಂಗಳೂರಿನಲ್ಲೂ ಪ್ರಾರಂಭವಾಗುವ ನಿರೀಕ್ಷೆಯಿದೆ. ಭಾರತದಾದ್ಯಂತ ಈ ವಿಮಾ ಉತ್ಪನ್ನವನ್ನು ಪರಿಚಯಿಸುವ ಮೊದಲು ಇದು ಹೇಗೆ ಜನರನ್ನು ಸೆಳೆಯುತ್ತದೆ ಎಂಬುದನ್ನು ನಾವು ಪ್ರಾಯೋಗಿಕವಾಗಿ ಈ ಮೂರು ಜಿಲ್ಲೆಗಳಲ್ಲಿ ನೋಡಲಿದ್ದೇವೆ. ಅದಿತಿ ಆರಂಭಿಕ ಮಟ್ಟದ ಯೋಜನೆಯಾಗಿದ್ದು, ನಾವು ಶೀಘ್ರದಲ್ಲೇ ಪರಿಚಯಿಸಲಿರುವ ಮೂರು ಯೋಜನೆಗಳಲ್ಲಿ ಇದುವೇ ಮೊದಲನೆಯದು” ಎಂದು ನಾರಾಯಣ ಹೃದಯಾಲಯದ ಉಪಾಧ್ಯಕ್ಷ ಡಾ.ವಿರೇನ್ ಪ್ರಸಾದ್ ಶೆಟ್ಟಿ ಹೇಳಿದರು.

ಸಾಂಪ್ರದಾಯಿಕ ಯೋಜನೆಗಳಿಗಿಂತ ಭಿನ್ನವಾಗಿ, ಅದಿತಿ ಸುಗಮ ಮತ್ತು ಪರಿಣಾಮಕಾರಿ ಅನುಭವಕ್ಕೆ ಆದ್ಯತೆ ನೀಡುತ್ತದೆ. ಆದ್ದರಿಂದ ಕವರೇಜ್ ಪ್ರಾಥಮಿಕವಾಗಿ ವಿಶ್ವಾಸಾರ್ಹ ನಾರಾಯಣ ಹೆಲ್ತ್ ನೆಟ್‌ವರ್ಕ್‌ನಲ್ಲಿರಲಿದೆ. ಅಲ್ಲಿ ಅನುಭವಿ ವೈದ್ಯರು ಮತ್ತು ಸುಧಾರಿತ ಸೌಲಭ್ಯಗಳು ಕಾಯುತ್ತವೆ. ಇದು ಆಡಳಿತಾತ್ಮಕ ಅಡೆತಡೆಗಳನ್ನು ಕಡಿಮೆ ಮಾಡುತ್ತದೆ. ಇತರ ದೇಶಗಳಲ್ಲಿ, ನಾವು ನೀಡುತ್ತಿರುವುದನ್ನು ವಿಮೆಗಿಂತ ಮ್ಯಾನೇಜ್ಡ್ ಕೇರ್ ಎಂದು ಕರೆಯಲಾಗುತ್ತದೆ ಎಂದು ಡಾ. ಶೆಟ್ಟಿ ವಿವರಿಸಿದರು.

ನಾರಾಯಣ ಹೆಲ್ತ್ ಇನ್ಶೂರೆನ್ಸ್ ಲಿಮಿಟೆಡ್‌ನ ನಿರ್ದೇಶಕ ರವಿ ವಿಶ್ವನಾಥ್ ಪ್ರಕಾರ, ಅಸ್ತಿತ್ವದಲ್ಲಿರುವ ಸಹ-ಆರೋಗ್ಯ ಸಮಸ್ಯೆಗಳಿದ್ದರೆ ಮತ್ತು ರೋಗಿಗಳು ವಯಸ್ಸಾದವರಾಗಿದ್ದರೆ ಪ್ರೀಮಿಯಂ ಬದಲಾಗುತ್ತದೆ.

ಅದಿತಿ ವಿಮೆಯಲ್ಲಿ 10 ಸಾವಿರ ರೂ ಪ್ರೀಮಿಯಂಗೆ 1 ಕೋಟಿ ರೂ ಸರ್ಜರಿ ಕವರೇಜ್‌

ಅದಿತಿ ವಿಮೆಯ ಪ್ರೀಮಿಯಂ ವರ್ಷಕ್ಕೆ 10,000 ರೂಪಾಯಿ. ಇದರಲ್ಲಿ ಒಂದು ಕುಟುಂಬದ ನಾಲ್ವರು ಹಿರಿಯರ ಆರೋಗ್ಯಕ್ಕೆ ವಿಮೆ ರಕ್ಷಣೆ ದೊರೆಯಲಿದೆ. ಕುಟುಂಬದ ಕಿರಿಯ ವ್ಯಕ್ತಿಯ ವಯಸ್ಸು 45 ಎಂದು ನಿಗದಿ ಮಾಡಲಾಗಿದೆ. ವಿಮಾದಾರರು 5 ಲಕ್ಷ ರೂಪಾಯಿ ಚಿಕಿತ್ಸೆ ಮತ್ತು 1 ಕೋಟಿ ರೂಪಾಯಿ ತನಕದ ಶಸ್ತ್ರಚಿಕಿತ್ಸೆಯನ್ನು ಅದಿತಿ ಖಾತರಿ ಮಾಡುತ್ತದೆ. ಇದೇ ವೇಳೆ, ಸಾಂಪ್ರದಾಯಿಕ ವಿಮಾ ಕಂಪನಿಗಳು 20,000 ರಿಂದ 48,000 ರೂಪಾಯಿ ಪ್ರೀಮಿಯಂ ಪಡೆದು ಈ ವಿಮಾ ರಕ್ಷಣೆ ನೀಡುತ್ತವೆ. ಇದು ಎಲ್ಲರಿಂದಲೂ ಭರಿಸುವುದು ಸಾಧ್ಯವಿಲ್ಲ. ಹೀಗಾಗಿ ಪ್ರತಿಯೊಬ್ಬರಿಗೂ ಆರೋಗ್ಯ ವಿಮೆ ನೀಡುವ ಆಲೋಚನೆ ಅದಿತಿಯದ್ದು ಎಂದು ವಿರೇನ್ ವಿವರಿಸಿದರು.

ವಿಮೆಯನ್ನು ಬಯಸುವ ಯಾರಿಗಾದರೂ ಅವರ ವೈದ್ಯಕೀಯ ಪರಿಸ್ಥಿತಿಗಳನ್ನು ಲೆಕ್ಕಿಸದೆ ನಾವು ಇಲ್ಲ ಎಂದು ಹೇಳಲು ಹೋಗುವುದಿಲ್ಲ. ಆಯ್ಕೆ ಮಾಡಿಕೊಂಡ ಪ್ರೊಸೀಜರ್‌ಗಳನ್ನು ಮಾಡಬೇಕಾಗಿ ಬಂದಾಗ ಅದಿತಿಯನ್ನು ಆರಂಭದಲ್ಲಿ ನಾರಾಯಣ ಆರೋಗ್ಯಕ್ಕೆ ಮಾತ್ರ ನಿರ್ಬಂಧಿಸಲಾಗುತ್ತದೆ. ಆದರೆ. ವಿಮೆದಾರರು ತುರ್ತುಚಿಕಿತ್ಸೆ ಪಡೆಯಬೇಕಾಗಿ ಬಂದಾಗ ಎಲ್ಲಿ ಬೇಕಾದರೂ ಅದನ್ನು ಪಡೆಯಬಹುದು ಎಂದು ವೀರೇನ್ ಪ್ರಸಾದ್ ಹೇಳಿದರು.

Whats_app_banner