IPO Analysis: ವಿಶಾಲ್ ಮೆಗಾ ಮಾರ್ಟ್ ಆರಂಭಿಕ ಷೇರು ವಿತರಣೆ, ಈ ಐಪಿಒಗೆ ಬಿಡ್ ಮಾಡಬಹುದೇ, ಜಿಎಂಪಿ ಎಷ್ಟಿದೆ? ಇಲ್ಲಿದೆ ವಿವರ
Vishal Mega Mart IPO: ವಿಶಾಲ್ ಮೆಗಾ ಮಾರ್ಟ್ ಐಪಿಒ ಇದೇ ಡಿಸೆಂಬರ್ 11ರಿಂದ ಬಿಡ್‌ಗೆ ಮುಕ್ತವಾಗಲಿದೆ. 8,000.00 ಕೋಟಿ ರೂಪಾಯಿಯ, 102.56 ಕೋಟಿ ಷೇರುಗಳ ಮಾರಾಟದ ಆಫರ್ ಫಾರ್ ಸೇಲ್ (ಒಎಫ್‌ಎಸ್) ಐಪಿಒ ಇದಾಗಿದೆ. ವಿಶಾಲ್ ಮೆಗಾ ಮಾರ್ಟ್ ಐಪಿಒ ಜಿಎಂಪಿ (ಗ್ರೇ ಮಾರ್ಕೆಟ್ ಪ್ರೀಮಿಯಂ) ಇಂದು (ಡಿಸೆಂಬರ್ 9) 24 ರೂಪಾಯಿ ಇದೆ.
Vishal Mega Mart IPO: ವಿಶಾಲ್ ಮೆಗಾ ಮಾರ್ಟ್ ಐಪಿಒ ಇದೇ ಡಿಸೆಂಬರ್ 11ರಿಂದ ಬಿಡ್‌ಗೆ ಮುಕ್ತವಾಗಲಿದೆ. 8,000.00 ಕೋಟಿ ರೂಪಾಯಿಯ, 102.56 ಕೋಟಿ ಷೇರುಗಳ ಮಾರಾಟದ ಆಫರ್ ಫಾರ್ ಸೇಲ್ (ಒಎಫ್‌ಎಸ್) ಐಪಿಒ ಇದಾಗಿದೆ. ವಿಶಾಲ್ ಮೆಗಾ ಮಾರ್ಟ್ ಐಪಿಒಗೆ ಡಿಸೆಂಬರ್ 11ರಿಂದ ಡಿಸೆಂಬರ್ 13ರವರೆಗೆ ಬಿಡ್ ಸಲ್ಲಿಸಲು ಅವಕಾಶವಿದೆ. ಈ ಐಪಿಒ ಬಿಎಸ್‌ಇ, ಎನ್‌ಎಸ್‌ಇಯಲ್ಲಿ ಡಿಸೆಂಬರ್ 18ರಂದು ಲಿಸ್ಟ್ ಆಗುವ ಸೂಚನೆಯಿದೆ. ವಿಶಾಲ್ ಮೆಗಾ ಮಾರ್ಟ್ ಐಪಿಒ ಬೆಲೆ ಬ್ಯಾಂಡ್ ಪ್ರತಿ ಷೇರಿಗೆ 74 ರೂಪಾಯಿಯಿಂದ 78 ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಅಪ್ಲಿಕೇಶನ್‌ಗೆ ಕನಿಷ್ಠ ಲಾಟ್ ಗಾತ್ರವು 190 ಷೇರುಗಳಾಗಿವೆ. ಒಂದು ಲಾಟ್‌ಗೆ ಅಪ್ಲೈ ಮಾಡಲು 14,820 ರೂಪಾಯಿ ಬೇಕಿರುತ್ತದೆ. ಎಸ್‌ಎನ್‌ಐಐ ಕನಿಷ್ಠ ಲಾಟ್ ಗಾತ್ರ 14 (2,660 ಷೇರುಗಳು). ಇಷ್ಟು ಲಾಟ್ ಖರೀದಿಸಲು 207,480 ರೂಪಾಯಿ ಬೇಕಿರುತ್ತದೆ. ಬಿಎನ್‌ಐಐ ಬಿಡ್‌ದಾರರು 68 ಲಾಟ್ (12,920 ಷೇರುಗಳು) ಖರೀದಿಸಬೇಕು. ಇದರ ದರ 1,007,760 ರೂಪಾಯಿ ಆಗಿದೆ.
ವಿಶಾಲ್ ಮೆಗಾ ಮಾರ್ಟ್ ಐಪಿಒ: ಪ್ರಮುಖ ದಿನಾಂಕಗಳು
- ಐಪಿಒ ಬಿಡ್ ಸಲ್ಲಿಕೆ ಆರಂಭ: ಡಿಸೆಂಬರ್ 11, 2024 (ಬುಧವಾರ)
- ಐಪಿಒ ಬಿಡ್ ಸಲ್ಲಿಕೆ ಕೊನೆಯ ದಿನ: ಡಿಸೆಂಬರ್ 13, 2024 (ಶುಕ್ರವಾರ)
- ಹಂಚಿಕೆ ಆರಂಭ: ಡಿಸೆಂಬರ್ 16, 2024
- ಹಣ ಮರುಪಾವತಿ ಆರಂಭ: ಡಿಸೆಂಬರ್ 17, 2024
- ಡಿಮ್ಯಾಟ್ ಖಾತೆಗೆ ಷೇರುಗಳು ಕ್ರೆಡಿಟ್ ಆಗುವ ದಿನ: ಡಿಸೆಂಬರ್ 17, 2024 (ಮಂಗಳವಾರ)
- ಷೇರುಪೇಟೆಯಲ್ಲಿ ಲಿಸ್ಟ್ ಆಗುವ ದಿನಾಂಕ: ಡಿಸೆಂಬರ್ 18, 2024 (ಬುಧವಾರ)
ವಿಶಾಲ್ ಮೆಗಾ ಮಾರ್ಟ್ ಐಪಿಒ ಜಿಎಂಪಿ
ವಿಶಾಲ್ ಮೆಗಾ ಮಾರ್ಟ್ ಐಪಿಒ ಜಿಎಂಪಿ (ಗ್ರೇ ಮಾರ್ಕೆಟ್ ಪ್ರೀಮಿಯಂ) ಇಂದು (ಡಿಸೆಂಬರ್ 9) 24 ರೂಪಾಯಿ ಇದೆ. ವಾರಾಂತ್ಯದಲ್ಲಿ 17 ರೂ ಜಿಎಂಪಿ ಇತ್ತು. ಈಗ ಏಳು ರೂಪಾಯಿಯಷ್ಟು ಹೆಚ್ಚಾಗಿದೆ. ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸೈಡ್ ವೇಸ್ ಟ್ರೆಂಡ್ ಇದ್ದರೂ ವಿಶಾಲ್ ಮೆಗಾ ಮಾರ್ಟ್ ಐಪಿಒ ಜಿಎಂಪಿ ಏರಿಕೆಯಾಗಿದೆ. ಇದರಿಂದ ಈ ಐಪಿಒಗೆ ಅತ್ಯಧಿಕ ಸಂಖ್ಯೆಯ ಜನರು ಅರ್ಜಿ ಸಲ್ಲಿಸುವ ಸೂಚನೆಯಿದೆ.
ಅರ್ಜಿ ಸಲ್ಲಿಸಬಹುದೇ? ಬೇಡವೇ?
ಐಪಿಒಗೆ ಅರ್ಜಿ ಸಲ್ಲಿಸುವ ಮುನ್ನ ಸಾಕಷ್ಟು ರಿಸರ್ಚ್ ಅಗತ್ಯ. ವಿವಿಧ ತಾಣಗಳಲ್ಲಿ ತಜ್ಞರು ನಿರ್ದಿಷ್ಟ ಐಪಿಒಗಳಿಗೆ ಅರ್ಜಿ ಸಲ್ಲಿಸಬಹುದೇ? ಬೇಡವೇ? ಅವಾಯ್ಡ್ ಮಾಡಬೇಕೇ? ಇತ್ಯಾದಿ ಸೂಚನೆ ನೀಡಿರುತ್ತಾರೆ. ಅಂದರೆ, ಅಪ್ಲೈ, ಮೇ ಅಪ್ಲೈ, ಅವಾಯ್ಡ್ ಎಂಬ ಸೂಚನೆ ನೀಡಿರುತ್ತಾರೆ. ಅಪ್ಲೈ ಎಂದಿದ್ದರೆ ಧೈರ್ಯವಾಗಿ ಬಿಡ್ ಸಲ್ಲಿಸಬಹುದು ಎಂದರ್ಥ. ಮೇ ಅಪ್ಲೈ ಅಂದರೆ “ಯೋಚಿಸಿ, ನಿಮಗೆ ಮಾರುಕಟ್ಟೆ ಕುರಿತು ಸಾಕಷ್ಟು ಜ್ಞಾನವಿದ್ದರೆ ಮುಂದಡಿ ಇಡಬಹುದು” ಎಂದರ್ಥ. ಇದೇ ರೀತಿ, ಅವಾಯ್ಡ್ ಎಂದರೆ, “ಕಂಪನಿಯ ವ್ಯವಹಾರ ಹೀಗೆ ಇದೆ, ಹಿಂದಿನ ತ್ರೈಮಾಸಿಕಗಳಲ್ಲಿ ಇಷ್ಟೆಲ್ಲ ನಷ್ಟ ಆಗಿದೆ, ಕಂಪನಿಯ ಆಡಳಿತದ ಕುರಿತು ಇಂತಹ ವಿಷಯಗಳಿವೆ… ಇತ್ಯಾದಿ ಅಂಶಗಳ ಆಧಾರದಲ್ಲಿ “ಅವಾಯ್ಡ್” ಎಂದು ಸೂಚಿಸುತ್ತಾರೆ. ವಿಶಾಲ್ ಮೆಗಾ ಮಾರ್ಟ್ ಐಪಿಒಗೆ ಮಾರುಕಟ್ಟೆ ತಜ್ಞರು "ಅಪ್ಲೈ- ಅರ್ಜಿ ಸಲ್ಲಿಸಬಹುದು" ಟ್ಯಾಗ್ ನೀಡಿದ್ದಾರೆ.
Disclaimer: ಷೇರುಪೇಟೆ ಮತ್ತು ಐಪಿಒ ಕುರಿತು ಮಾಹಿತಿ ನೀಡುವ ಸಲುವಾಗಿ ಈ ಲೇಖನ ಬರೆಯಲಾಗಿದೆ. ಯಾವುದೇ ಷೇರು ಅಥವಾ ಐಪಿಒ ಖರೀದಿಸಬೇಕೆಂದು ಹಿಂದೂಸ್ತಾನ್ ಟೈಮ್ಸ್ ಕನ್ನಡವು ಶಿಫಾರಸು ಮಾಡುವುದಿಲ್ಲ. ಎಚ್‌ಟಿ ಕನ್ನಡದ ಓದುಗ ಹೂಡಿಕೆದಾರರು ಷೇರುಪೇಟೆಯ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.