BVB-BBMP School Admission: ಭಾರತೀಯ ವಿದ್ಯಾಭವನ - ಬಿಬಿಎಂಪಿ ಪಬ್ಲಿಕ್ ಸ್ಕೂಲ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಕನ್ನಡ ಸುದ್ದಿ  /  ಕರ್ನಾಟಕ  /  Bvb-bbmp School Admission: ಭಾರತೀಯ ವಿದ್ಯಾಭವನ - ಬಿಬಿಎಂಪಿ ಪಬ್ಲಿಕ್ ಸ್ಕೂಲ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

BVB-BBMP School Admission: ಭಾರತೀಯ ವಿದ್ಯಾಭವನ - ಬಿಬಿಎಂಪಿ ಪಬ್ಲಿಕ್ ಸ್ಕೂಲ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

BVB-BBMP School Admission: ಬೆಂಗಳೂರಿನ ಶ್ರೀರಾಮಪುರ ಕ್ರಾಂತಿಕವಿ ಸರ್ವಜ್ಞರಸ್ತೆಯ 215ನೇ ಮುಖ್ಯರಸ್ತೆಯ ಭಾರತೀಯ ವಿದ್ಯಾಭವನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಶುವಿಹಾರಕ್ಕೆ ಅಡ್ಮಿಷನ್‌ ಶುರುವಾಗುತ್ತಿದೆ. ಮಾರ್ಚ್‌ 27ರಿಂದ ಅಡ್ಮಿಷನ್‌ ಶುರುವಾಗುತ್ತಿದ್ದು, ಏಪ್ರಿಲ್‌ 10ರ ತನಕ ಅರ್ಜಿ ವಿತರಣೆ ನಡೆಯಲಿದೆ ಎಂದು ಪಾಲಿಕೆ ಹೇಳಿದೆ.

ಭಾರತೀಯ ವಿದ್ಯಾಭವನ - ಬಿಬಿಎಂಪಿ ಪಬ್ಲಿಕ್ ಸ್ಕೂಲ್
ಭಾರತೀಯ ವಿದ್ಯಾಭವನ - ಬಿಬಿಎಂಪಿ ಪಬ್ಲಿಕ್ ಸ್ಕೂಲ್ (BBMP)

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಶಿಕ್ಷಣ ವ್ಯಾಪ್ತಿಗೆ ಒಳಪಡುವ ಭಾರತೀಯ ವಿದ್ಯಾಭವನ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜಂಟಿ ಆಯೋಗದಲ್ಲಿ ನಡೆಯುತ್ತಿರುವ ಪ್ರೀ ನರ್ಸರಿ ತರಗತಿ(ಸಿ.ಬಿ.ಎಸ್.ಸಿ ಪಠ್ಯಕ್ರಮ)ಗೆ ಸಾಲಿನ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದೆ ಎಂದು ಬಿಬಿಎಂಪಿ ತಿಳಿಸಿದೆ.

ಬೆಂಗಳೂರಿನ ಶ್ರೀರಾಮಪುರ ಕ್ರಾಂತಿಕವಿ ಸರ್ವಜ್ಞರಸ್ತೆಯ 215ನೇ ಮುಖ್ಯರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಶುವಿಹಾರಕ್ಕೆ ಅಡ್ಮಿಷನ್‌ ಪ್ರಾರಂಭವಾಗುತ್ತಿದೆ. ಮಾರ್ಚ್‌ 27ರಿಂದ ಅಡ್ಮಿಷನ್‌ ಶುರುವಾಗುತ್ತಿದ್ದು, ಏಪ್ರಿಲ್‌ 10ರ ತನಕ ಅರ್ಜಿ ವಿತರಣೆ ನಡೆಯಲಿದೆ.

• ಅರ್ಜಿ ನಮೂನೆಗಳನ್ನು ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್‌ 11ರಿಂದ ಏಪ್ರಿಲ್‌ 25ರ ತನಕ ಸಮಯವಿದೆ.

• ಭರ್ತಿ ಮಾಡಿದ ಅರ್ಜಿಯನ್ನು ಹಿರಿಯ ಸಹಾಯಕ ನಿರ್ದೇಶಕರ(ಶಿಕ್ಷಣ) 1ನೇ ಮಹಡಿಯ ಅನೆಕ್ಸ್- 3 ಕಟ್ಟಡ, ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಲ್ಲಿಸಬೇಕು.

• ಮಾ. 29 ರಂದು ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ನಡೆಯಲಿದೆ.

ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲಾತಿಗಳು:

1 . ಮಗುವಿನ ಪಾಸ್ ಪೋಟ್೯ ಸೈಜ್ ಫೋಟೋ - 5 ಸಂಖ್ಯೆ

2. ಮಗುವಿನ ಜೊತೆಗಿರುವ ತಂದೆ ತಾಯಿಯ ಭಾವಚಿತ್ರ(ಕುಟುಂಬ ಭಾವ ಚಿತ್ರ)

3. ಮಗುವಿನ ಜನನ ಪ್ರಮಾಣ ಪತ್ರ

4. ಅದಾಯ ಪ್ರಮಾಣ ಪತ್ರ

5. ಜಾತಿ ಪ್ರಮಾಣ ಪತ್ರ

6. ತಂದೆ / ತಾಯಿಯ ಆಧಾರ್ ಕಾರ್ಡ್ ಜೆರಾಕ್ಸ್

7. ಮಗುವಿನ ಆಧಾರ್ ಕಾರ್ಡ್ ಜೆರಾಕ್ಸ್

8. ತಂದೆ / ತಾಯಿಯ ಖಾಯಂ ವಿಳಾಸವಿರುವ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿ(ಭಾರತೀಯ ವಿದ್ಯಾಭವನ ಶಾಲೆಗೆ 3 ಕಿ.ಲೋ. ಸುತ್ತಮುತ್ತಲಿನ ಅಂತರದಲ್ಲಿ ವಾಸವಾಗಿರಬೇಕು.)

9. ಮಗುವಿನ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು(ಎತ್ತರ, ತೂಕ, ರಕ್ತದ ಗುಂಪು)

ಎಲ್ಲ ದಾಖಲೆಗಳನ್ನು ಪಾಲಕರು ಕಡ್ಡಾಯವಾಗಿ ತರಬೇಕು ಎಂದು ಪಾಲಿಕೆ ತಿಳಿಸಿದೆ.

ಗಮನಿಸಬಹುದಾದ ಸುದ್ದಿಗಳು

ರೆಗ್ಯುಲರ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡ್ತಾ ಇದ್ರೂ, KSOUನಲ್ಲಿ ಶಿಕ್ಷಣ ಪಡೆಯಬಹುದು, ಪ್ರವೇಶಾತಿಗೆ 31 ಕೊನೇದಿನ

ರೆಗ್ಯುಲರ್‌ ಕಾಲೇಜಿಗೆ ಹೋಗಿ ಡಿಗ್ರಿ, ಪಿಜಿ ಪದವಿ ಪಡೆಯಿರಿ. ಅದರ ಜತೆಗೆ ಮುಕ್ತ ದೂರ ಶಿಕ್ಷಣದ ಮೂಲಕವೂ ಇನ್ನೊಂದು ಪದವಿ, ಸರ್ಟಿಫಿಕೇಟ್‌ ಕೋರ್ಸ್‌ ಮಾಡಿಕೊಳ್ಳುವುದಕ್ಕೆ ಈಗ ಅವಕಾಶ ಇದೆ. ಇದನ್ನು ಸದುಪಯೋಗ ಮಾಡಿಕೊಂಡು ಶೈಕ್ಷಣಿಕ ಉನ್ನತಿ ಸಾಧಿಸಬಹುದು ಎಂದು ಕೆಎಸ್‌ಒಯು ಹೇಳಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

ಎಂ.ಎಡ್ ಸ್ನಾತಕೋತ್ತರ ಕೋರ್ಸ್ ಪ್ರವೇಶಾತಿಗೆ ಅರ್ಜಿ ಆಹ್ವಾನ

ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿರುವ ಸಂಯೋಜಿತ ಕಾಲೇಜುಗಳಲ್ಲಿ 2022-23ನೇ ಶೈಕ್ಷಣಿಕ ಸಾಲಿನ ಎಂ.ಎಡ್ (M.Ed) ಕೋರ್ಸಿನ ಪ್ರವೇಶಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಯೂನಿವರ್ಸಿಟಿ ಹೊರಡಿಸಿರುವ ಪ್ರಕಟಣೆಯ ಪ್ರಕಾರ, ಪ್ರವೇಶಾತಿ ಅರ್ಜಿಗಳನ್ನು ಆನ್‌ಲೈನ್‌ ಮೂಲಕ ಸಲ್ಲಿಸಬಹುದಾಗಿದೆ. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

ಕಂಪ್ಯೂಟರ್‌ ಸೈನ್ಸ್‌ನಲ್ಲಿ ಮಾಸ್ಟರ್‌ ಆಫ್‌ ಟೆಕ್ನಾಲಜಿ (ರೀಸರ್ಚ್‌); ಐಐಐಟಿ ದೆಹಲಿ ಪರಿಚಯಿಸಿದೆ ಹೊಸ ಕೋರ್ಸ್‌

Master of Technology: ಉದ್ಯಮ ಮತ್ತು ಸಮಾಜಕ್ಕೆ ಸಂಬಂಧಿಸಿದ ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಸಂಕೀರ್ಣ ಸಂಶೋಧನಾ ಸಮಸ್ಯೆಗಳನ್ನು ಪರಿಹರಿಸಲು ಪೂರ್ವ ಡಾಕ್ಟರೇಟ್ ಹಂತದಲ್ಲಿ ವಿದ್ಯಾರ್ಥಿಗಳಿಗೆ ನೆರವಾಗುವುದಕ್ಕೆ ಈ 2 ವರ್ಷಗಳ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner