ಕನ್ನಡ ಸುದ್ದಿ  /  Karnataka  /  Bwssb News Update: Water Adalath On 23rd March In Bengaluru

BWSSB News Update: 23 ರಂದು ಜಲ ಮಂಡಳಿಯಿಂದ ನೀರಿನ ಅದಾಲತ್

BWSSB News Update: ಬೆಂಗಳೂರಿನಲ್ಲಿ ಮಾ.23ರಂದು ನೀರಿನ ಅದಾಲತ್‌ ನಡೆಸುವುದಾಗಿ ಬೆಂಗಳೂರು ಜಲಮಂಡಳಿ ಘೋಷಿಸಿದೆ. ಬೆಳಗ್ಗೆ 9.30 ಗಂಟೆಯಿಂದ 11 ಗಂಟೆಯವರೆಗೆ ನಡೆಯಲಿದೆ.

ಬೆಂಗಳೂರು ಜಲ ಮಂಡಳಿ (ಸಾಂಕೇತಿಕ ಚಿತ್ರ)
ಬೆಂಗಳೂರು ಜಲ ಮಂಡಳಿ (ಸಾಂಕೇತಿಕ ಚಿತ್ರ)

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಾ.23ರಂದು ನೀರಿನ ಅದಾಲತ್‌ ನಡೆಸುವುದಾಗಿ ಬೆಂಗಳೂರು ಜಲಮಂಡಳಿ ಘೋಷಿಸಿದೆ.

ಬೆಂಗಳೂರು ಜಲ ಮಂಡಳಿಯ ವಿವಿಧ ಉಪ ವಿಭಾಗಗಳಾದ ಆಗ್ನೇಯ -3, ಆಗ್ನೇಯ 6, ಪಶ್ಚಿಮ 1-3, ವಾಯುವ್ಯ -5, ಉತ್ತರ 2-3, ದಕ್ಷಿಣ 1-3, ನೈರುತ್ಯ – 3, ನೈರುತ್ಯ -6, ಮತ್ತು ಪೂರ್ವ 2-4, ಉಪವಿಭಾಗಗಳಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದು ಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯ ನೀರಿನ ಅದಾಲತ್‌ನಲ್ಲಿ ನಡೆಯಲಿದೆ. ನೀರಿನ ಅದಾಲತ್‍ ಮಾರ್ಚ್ 23 ರಂದು ಬೆಳಗ್ಗೆ 9.30 ಗಂಟೆಯಿಂದ 11 ಗಂಟೆಯವರೆಗೆ ನಡೆಯಲಿದೆ ಎಂದು ಜಲಮಂಡಳಿ ತಿಳಿಸಿದೆ.

ಆದಾಲತ್ ನಡೆಯುವ ಸೇವಾಠಾಣೆಗಳಿವು

ಅರಳೂರು, ದೊಡ್ಡ ಕಣ್ಣನಹಳ್ಳಿ, ಕಸವನಹಳ್ಳಿ, ಬಿ.ಟಿ.ಎಂ ಲೇಔಟ್, 1,2 ಮತ್ತು 3, ವೆಸ್ಟ್ ಆಫ್ ಕಾರ್ಡ್ ರಸ್ತೆ, 1 ಮತ್ತು 2, ಕಾಮಾಕ್ಷಿಪಾಳ್ಯ, ಕಮಲಾನಗರ, ಮಹಾಲಕ್ಷ್ಮೀ ಲೇಔಟ್, ಅಗ್ರಹಾರ ದಾಸರಹಳ್ಳಿ, ಶೆಟ್ಟಿಹಳ್ಳಿ, ಅಬ್ಬಿಗೆರೆ, ಚಿಕ್ಕಸಂದ್ರ, ಸಿಡೇದಹಳ್ಳಿ, ದೊಡ್ಡಬಿದರಕಲ್ಲು, ಜಿ.ಕೆ.ವಿ.ಕೆ, ಮಾನ್ಯತಾ ಟೆಕ್‍ಪಾರ್ಕ್, ಅಂಜನಾಪುರ, ಬ್ಯಾಂಕ್ ಆಫೀಸರ್ಸ್ ಲೇಔಟ್, ಗೊಟ್ಟಿಗೆರೆ, ಎಂ.ಎನ್.ಕೆ ಪಾರ್ಕ್, ಬಿ.ಟಿ.ಆರ್, ಮೌಂಟ್‍ಜಾಯ್, ನಾಗೇಂದ್ರ ಬ್ಲಾಕ್, ಗಿರಿನಗರ, ಅಂಗಧೀರನಹಳ್ಳಿ, ಹೆಮ್ಮಿಗೆಪುರ, ಬನಶಂಕರಿ 6ನೇ ಹಂತ, ಕೆ.ಆರ್. ಪುರಂ, ಬಸವನಪುರ, ದೇವಸಂದ್ರ, ರಾಮಮೂರ್ತಿ ನಗರ, ವಿಜಿನಾಪುರ, ದೂರವಾಣಿನಗರ ಇಲ್ಲಿ ನೀರಿನ ಅದಾಲತ್ ಹಮ್ಮಿಕೊಳ್ಳಲಾಗಿದೆ.

ಸಾರ್ವಜನಿಕರು ಕುಂದು ಕೊರತೆಗಳಿಗೆ ಸಂಬಂಧಿಸಿ ಮಂಡಳಿಯ 24x7 ದೂರು ನಿರ್ವಹಣಾ ಕೇಂದ್ರದ ಸಹಾಯವಾಣಿ 1916ಗೆ ಕರೆ ಮಾಡಿ ದೂರುಗಳನ್ನು ದಾಖಲಿಸಬಹುದು. ಹಾಗೂ ವಾಟ್ಸ್‌ಆಪ್‌ ಸಂಖ್ಯೆ 8762228888 ಸಂದೇಶದ ಮೂಲಕ ದೂರು ಸಲ್ಲಿಸಬಹುದಾಗಿದೆ ಎಂದು ಬೆಂಗಳೂರು ಜಲ ಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಗಮನಿಸಬಹುದಾದ ಸುದ್ದಿಗಳು

M.Ed. Admission: ಎಂ.ಎಡ್ ಸ್ನಾತಕೋತ್ತರ ಕೋರ್ಸ್ ಪ್ರವೇಶಾತಿಗೆ ಅರ್ಜಿ ಆಹ್ವಾನ

ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿರುವ ಸಂಯೋಜಿತ ಕಾಲೇಜುಗಳಲ್ಲಿ 2022-23ನೇ ಶೈಕ್ಷಣಿಕ ಸಾಲಿನ ಎಂ.ಎಡ್ (M.ed) ಕೋರ್ಸಿನ ಪ್ರವೇಶಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

ರೆಗ್ಯುಲರ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡ್ತಾ ಇದ್ರೂ, KSOUನಲ್ಲಿ ಶಿಕ್ಷಣ ಪಡೆಯಬಹುದು, ಪ್ರವೇಶಾತಿಗೆ 31 ಕೊನೇದಿನ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ವಿವಿಧ ಕೋರ್ಸುಗಳ ಪ್ರವೇಶಾತಿ ಪ್ರಾರಂಭವಾಗಿದೆ. ರೆಗ್ಯುಲರ್‌ ಕಾಲೇಜಿಗೆ ಹೋಗಿ ಡಿಗ್ರಿ, ಪಿಜಿ ಪದವಿ ಪಡೆಯಿರಿ. ಅದರ ಜತೆಗೆ ಮುಕ್ತ ದೂರ ಶಿಕ್ಷಣದ ಮೂಲಕವೂ ಇನ್ನೊಂದು ಪದವಿ, ಸರ್ಟಿಫಿಕೇಟ್‌ ಕೋರ್ಸ್‌ ಮಾಡಿಕೊಳ್ಳುವುದಕ್ಕೆ ಈಗ ಅವಕಾಶ ಇದೆ. ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಜೀವನೋದ್ದೇಶ ಏನು?; ಗುರಿ ಮತ್ತು ಗುರುವನ್ನು ಕಂಡುಕೊಳ್ಳಲು ಇಲ್ಲಿದೆ ಪಂಚ ಸೂತ್ರ

Life purpose: ಜೀವನೋದ್ದೇಶವನ್ನು ಗುರುತಿಸುವುದು ಸುಲಭದ ಕೆಲಸವಲ್ಲ. ನಿಮ್ಮ ಜೀವನದ ಗುರಿ ಮತ್ತು ಉದ್ದೇಶದ ಸ್ಪಷ್ಟತೆ ಇಲ್ಲದೇ ಇದ್ದಾಗ, ಮಾರ್ಗದರ್ಶಕರ ನೆರವು ಕೂಡ ಬೇಕಾಗುತ್ತದೆ. ಆದಾಗ್ಯೂ, ಬದುಕಿನ ಹಾದಿಯಲ್ಲಿ ಇದೊಂದು ನಿರ್ಣಾಯಕ ಘಟ್ಟ ಎಂಬುದು ವಾಸ್ತವ. ಜೀವನೋದ್ದೇಶ ತಿಳಿಯಬೇಕಾ? ಇಲ್ಲಿ ಕ್ಲಿಕ್‌ ಮಾಡಿ

ಚುನಾವಣಾ ಬೆಟ್ಟಿಂಗ್‌ ಶುರು; ಕಡೂರಲ್ಲಿ ಬೆಳ್ಳಿ ಪ್ರಕಾಶ್‌ ಪರ ʻಆಸ್ತಿʼ ಬಾಜಿಗಿಟ್ಟ ತೆಲುಗು ಸಮಾಜದ ಮುಖಂಡ!

ರಾಜ್ಯದಲ್ಲಿ ಈಗ ವಿಧಾನಸಭೆ ಚುನಾವಣೆಯ ಕಾವು ದಿನೇದಿನೆ ಏರುತ್ತಿದೆ. ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಅನೇಕ ಕುತೂಹಲಕಾರಿ ವಿಚಾರಗಳು ಗಮನಸೆಳೆಯುತ್ತವೆ. ರಾಜಕೀಯ ರಂಗು ಅನೇಕರ ಬದುಕಿನ ಮೇಲೂ ಪರಿಣಾಮ ಬೀರುವುದು ಸುಳ್ಳಲ್ಲ. ಸೋಮವಾರ ಅಂಥದ್ದೇ ಒಂದು ಪ್ರಸಂಗ ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ. ಪೂರ್ಣ ವರದಿ ಓದಲು ಇಲ್ಲಿ ಕ್ಲಿಕ್‌ ಮಾಡಿ