ಬೆಂಗಳೂರು ನೀರಿನ ದರ ಇಂದಿನಿಂದಲೇ ಏರಿಕೆ, ಪ್ರತಿ ಲೀಟರ್‌ಗೆ 1 ಪೈಸೆ ತನಕ ಹೆಚ್ಚಳ, ಹೊಸ ದರ ವಿವರ ಹೀಗಿದೆ
Bengaluru Water Tariffs: ಬೆಂಗಳೂರು ನಗರದಲ್ಲಿ 11 ವರ್ಷಗಳ ಬಳಿಕ ನೀರಿನ ದರ ಇಂದು ಅಧಿಕೃತವಾಗಿ ಏರಿಕೆಯಾಗಿದೆ. ಪ್ರತಿ ಲೀಟರ್‌ಗೆ 1 ಪೈಸೆ ತನಕ ಹೆಚ್ಚಳವಾಗಿದ್ದು ಹೊಸ ದರ ವಿವರ ಹೀಗಿದೆ

Bengaluru Water Tariffs: ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇಂದಿನಿಂದ (ಏಪ್ರಿಲ್ 10) ಅಧಿಕೃತವಾಗಿ ನೀರಿನ ದರ ಏರಿಕೆಯಾಗಿದೆ. ಬೆಂಗಳೂರು ಜಲ ಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್ ಮನೋಹರ್ ಈ ವಿಚಾರವನ್ನು ಬುಧವಾರವೇ (ಏಪ್ರಿಲ್ 9) ಪ್ರಕಟಿಸಿದ್ದು, ಗೃಹ ಬಳಕೆ ನೀರಿಗೆ ಪ್ರತಿ ಲೀಟರ್‌ಗೆ 0.15 ಪೈಸೆಯಿಂದ 1 ಪೈಸೆವರೆಗೂ ಹೆಚ್ಚಳವಾಗಲಿದೆ. ಏಪ್ರಿಲ್ 10ರಿಂದಲೇ ಹೊಸ ದರ ಜಾರಿಯಾಗಲಿದೆ ಎಂದು ತಿಳಿಸಿದ್ದರು. ಬೆಂಗಳೂರು ಮಹಾನಗರದಲ್ಲಿ 11 ವರ್ಷಗಳ ಬಳಿಕ ನೀರಿ ದರ ಏರಿಕೆಯಾಗಿದೆ. ಸ್ವಾಯತ್ತ ಸಂಸ್ಥೆಯಾಗಿರುವ ಬೆಂಗಳೂರು ಜಲಮಂಡಳಿಗೆ ಸರ್ಕಾರದಿಂದ ಹಣಕಾಸಿನ ನೆರವು ಸಿಗುವುದಿಲ್ಲ. ಕುಡಿಯುವ ನೀರಿಗೆ ವಿಧಿಸುವ ಶುಲ್ಕವೇ ಪ್ರಮುಖ ಆದಾಯವಾಗಿದೆ. ದಶಕದಲ್ಲಿ ವಿದ್ಯುತ್ ವೆಚ್ಚವು ಶೇಕಡ 107 ರಷ್ಟು ಹೆಚ್ಚಾಗಿದೆ ಎಂಬುದರ ಕಡೆಗೆ ರಾಮ್ ಪ್ರಸಾತ್ ಮನೋಹರ್ ಗಮನಸೆಳೆದಿದ್ದರು.
ಬೆಂಗಳೂರು ಜಲ ಮಂಡಳಿಗೆ ಈಗ ಪ್ರತಿ ತಿಂಗಳು 200 ಕೋಟಿ ರೂ ವೆಚ್ಚವಿದೆ. ಸಂಗ್ರಹವಾಗುತ್ತಿರುವುದು 120 ಕೋಟಿ ರೂಪಾಯಿ ಮಾತ್ರ. 80 ಕೋಟಿ ರೂಪಾಯಿ ಕೊರತೆ ಇದೆ. ಬೇರೆ ಆದಾಯ ಇಲ್ಲದ ಕಾರಣ ಆದಾಯ ಮತ್ತು ಖರ್ಚುಗಳನ್ನು ಸರಿದೂಗಿಸುವುದಕ್ಕಾಗಿ ನೀರಿನ ದರ ಏರಿಸಲಾಗಿದೆ ಎಂದು ರಾಮ್ ಪ್ರಸಾತ್ ವಿವರಿಸಿದ್ದರು.
ಬೆಂಗಳೂರು ನೀರಿನ ದರ ಇಂದಿನಿಂದಲೇ ಏರಿಕೆ
ಬೆಂಗಳೂರಿನಲ್ಲಿರುವ ವಸತಿ ಸಮುಚ್ಛಯ ಕಟ್ಟಡಗಳಿಗೆ ಲೀಟರ್‌ಗೆ 0.3 ಪೈಸೆಯಿಂದ 1 ಪೈಸೆಯವರೆಗೂ ಹೆಚ್ಚಳವಾಗಿದೆ. ಹೆಚ್ಚು ನೀರು ಬಳಸುವ (ಬಲ್ಕ್) ವಸತಿಯೇತರ ಅಂದರೆ ವಾಣಿಜ್ಯ/ಕೈಗಾರಿಕೆ ಸಂಪರ್ಕಕ್ಕೆ 0.9 ಪೈಸೆಯಿಂದ 1.9 ಪೈಸೆವರೆಗೂ ಹೆಚ್ಚಳವಾಗಿದೆ. ಅಷ್ಟೇ ಅಲ್ಲ, ಒಳಚರಂಡಿ ಶುಲ್ಕವನ್ನು ಶೇಕಡ 25ರಷ್ಟು ಹೆಚ್ಚಿಸಲಾಗಿದೆ. ಇದಲ್ಲದೆ, ಕೊಳವೆ ಬಾವಿ/ ಬಾವಿ/ಸಾರ್ವಜನಿಕ ಕೊಳವೆ ಬಾವಿಗಳಿಗೆ ವಿಧಿಸುವ ಶುಲ್ಕವನ್ನು ಪ್ರತಿ ಮನೆಗೆ 30 ರೂಪಾಯಿ ಮತ್ತು ವಸತಿಯೇತರ ಸಂಪರ್ಕಕ್ಕೆ 125 ರೂಪಾಯಿಗೆ ಏರಿಕೆ ಮಾಡಲಾಗಿದೆ.
ಗೃಹ ಬಳಕೆ ನೀರಿನ ದರ
1) 0-8000 ಸಾವಿರ ಲೀಟರ್ ಸ್ಲ್ಯಾಬ್: ಪ್ರತಿ ಅಟರ್‌ಗೆ 0.15 ಪೈಸೆ ಹೆಚ್ಚಳ (1 ಪೈಸೆಗಿಂತ ಕಡಿಮೆ) - ಉದಾಹರಣೆಗೆ ಈ ಸ್ಲ್ಯಾಬ್ ನಡಿಯಲ್ಲಿ ಪ್ರತಿ 1 ಸಾವಿರ ಆಟರ್‌ಗೆ ಪ್ರಸ್ತುತ ದರ 7ರಿಂದ 8.50 ಪೈಸೆ ಹೆಚ್ಚಳ.
2) 8001-25000 ಲೀಟರ್ ಸ್ಲ್ಯಾಬ್: ಪ್ರತಿ ಆಟರ್‌ಗೆ 0.3 ಪೈಸೆ ಹೆಚ್ಚಳ (1 ಪೈಸೆಗಿಂತ ಕಡಿಮೆ) -ಉದಾಹರಣೆಗೆ ಈ ಸ್ಲ್ಯಾಬ್ ಅಡಿಯಲ್ಲಿ ಪ್ರತಿ 1 ಸಾವಿರ ಆಟರ್‌ಗೆ ಪ್ರಸ್ತುತ ದರ 11ರಿಂದ 14 ರೂ. ಹೆಚ್ಚಳ.
3) 25,001-50000 ಲೀಟರ್ ಸ್ಲ್ಯಾಬ್ : ಪ್ರತಿ ಅಟರ್‌ಗೆ 0.8 ಪೈಸೆ ಹೆಚ್ಚಳ (1 ಪೈಸೆಗಿಂತ ಕಡಿಮೆ)
4) 50001-100000 ಲೀಟರ್ ಸ್ಲ್ಯಾಬ್: ಪ್ರತಿ ಅಟರ್‌ಗೆ 1 ಪೈಸೆ ಹೆಚ್ಚಳ
5) 100001 ರಿಂದ ಹೆಚ್ಚು ಲೀಟರ್ ಸ್ಲ್ಯಾಬ್ : ಪ್ರತಿ ಆಟರ್‌ಗೆ 1 ಪೈಸೆ ಹೆಚ್ಚಳ
ಗೃಹೇತರ ಬಳಕೆ - ವಾಣಿಜ್ಯ/ ಕೈಗಾರಿಕೆ ಬಳಕೆ ನೀರಿನ ದರ
1) ಕೈಗಾರಿಕೆಗಳಿಗೆ/ಬಲ್ಕ್ ಸಪ್ಲೈ ಸ್ಲ್ಯಾಬ್: ಪ್ರತಿ ಲೀಟರ್‌ಗೆ 0.9 ಪೈಸೆ ಹೆಚ್ಚಳ (1ಪೈಸೆಗಿಂತ ಕಡಿಮೆ)
2) 0-10,000 ಲೀಟರ್ ಸ್ಲ್ಯಾಬ್: ಪ್ರತಿ ಲೀಟರ್‌ಗೆ 1 ಪೈಸೆ ಹೆಚ್ಚಳ
3) 10,001-25,000 ಲೀಟರ್ ಸ್ಲ್ಯಾಬ್: ಪ್ರತಿ ಲೀಟರ್‌ಗೆ 1.3 ಪೈಸೆ ಹೆಚ್ಚಳ
4) 25,001-50,000 ಲೀಟರ್ ಸ್ಲ್ಯಾಬ್: ಪ್ರತಿ ಲೀಟರ್‌ಗೆ 1.5 ಪೈಸೆ ಹೆಚ್ಚಳ
5) 50,001-75,000 ಲೀಟರ್ ಸ್ಲ್ಯಾಬ್: ಪ್ರತಿ ಲೀಟರ್‌ಗೆ 1.9 ಪೈಸೆ ಹೆಚ್ಚಳ
6) 760001-1 ಲಕ್ಷ ಲೀಟರ್ ಸ್ಲ್ಯಾಬ್: ಪ್ರತಿ ಲೀಟರ್‌ಗೆ 1.1 ಪೈಸೆ ಹೆಚ್ಚಳ
7) 1 ಲಕ್ಷ ಮತ್ತು ಅದಕ್ಕೂ ಹೆಚ್ಚು ಲೀಟರ್ ಸ್ಲ್ಯಾಬ್: ಪ್ರತಿ ಲೀಟರ್‌ಗೆ 1.2 ಪೈಸೆ ಹೆಚ್ಚಳ
ಬೆಂಗಳೂರಲ್ಲಿ ಪ್ರತಿ ವರ್ಷ ಇನ್ನು ನೀರಿನ ದರ ಶೇ 3 ಹೆಚ್ಚಳ
ಬೆಂಗಳೂರಲ್ಲಿ ಪ್ರತಿ ವರ್ಷ ಏಪ್ರಿಲ್ 1ರಿಂದ ನೀರಿನ ದರವನ್ನು ಶೇ 3ರಷ್ಟು ಏರಿಕೆ ಮಾಡಲು ನಿರ್ಧರಿಸಲಾಗಿದೆ. ಒಮ್ಮೆಲೆ ದರ ಹೆಚ್ಚಳದ ಮೂಲಕ ಜನರಿಗೆ ಹೊರೆಯಾಗುವುದನ್ನು ಕಡಿಮೆ ಮಾಡುವ ಉದ್ದೇಶ ಮಂಡಳಿಯದ್ದು. ಅದೇ ರೀತಿ, ಕರ್ನಾಟಕ ರಾಜ್ಯ ಆಡಳಿತ ಸುಧಾರಣಾ ಆಯೋಗದ ಶಿಫಾರಸಿನಂತೆ 2026ರ ಏಪ್ರಿಲ್‌ನಿಂದ ಪ್ರತಿ ವರ್ಷ ನೀರಿನ ದರವನ್ನು ಶೇ 3ರಷ್ಟು ಹೆಚ್ಚಳ ಮಾಡಲು ಜಲಮಂಡಳಿ ನಿರ್ಧರಿಸಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್ ಮನೋಹರ್ ತಿಳಿಸಿದರು.
