BWSSB Update: ಫೆ.9ರಂದು ಜಲಮಂಡಳಿಯಿಂದ ನೀರಿನ ಅದಾಲತ್
BWSSB Update: ಬೆಂಗಳೂರಿನಲ್ಲಿ ಬೆಂಗಳೂರು ಜಲ ಮಂಡಳಿ (BWSSB)ಯು ನಾಳೆ (ಫೆ.9) ನೀರಿನ ಅದಾಲತ್ ಹಮ್ಮಿಕೊಂಡಿದೆ.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಂಗಳೂರು ಜಲ ಮಂಡಳಿ (BWSSB)ಯು ನಾಳೆ (ಫೆ.9) ನೀರಿನ ಅದಾಲತ್ ಹಮ್ಮಿಕೊಂಡಿದೆ.
ಬೆಂಗಳೂರು ಜಲ ಮಂಡಳಿಯ ವಿವಿಧ ಉಪ ವಿಭಾಗಗಳಾದ ಉತ್ತರ-2-1, ದಕ್ಷಿಣ-2-1, ನೈರುತ್ಯ -1, ನೈರುತ್ಯ - 4, ಪೂರ್ವ -1-2, ಪೂರ್ವ -2-2, ಆಗ್ನೇಯ - 2, ಆಗ್ನೇಯ – 5, ಪಶ್ಚಿಮ-1-2 ಮತ್ತು ಪಶ್ಚಿಮ-2-2, ಉಪವಿಭಾಗಗಳಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದು ಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಫೆ.09 ರಂದು ಬೆಳಗ್ಗೆ 9.30 ಗಂಟೆಯಿಂದ 11 ಗಂಟೆಯವರೆಗೆ ನೀರಿನ ಅದಾಲತ್‍ನ್ನು ಹಮ್ಮಿಕೊಂಡಿರುವುದಾಗಿ ಬಿಡಬ್ಲ್ಯುಎಸ್‌ಎಸ್‌ಬಿ ತಿಳಿಸಿದೆ.
ಯಲಹಂಕ ಓಲ್ಡ್ ಟೌನ್, ಯಲಹಂಕ ನ್ಯೂಟೌನ್, ಅಟ್ಟೂರು, ಜೆ.ಪಿ.ನಗರ-2, ಕೊತ್ತನೂರು ದಿಣ್ಣೆ, ವಿಜಯಬ್ಯಾಂಕ್ ಕಾಲೋನಿ, ಅರಕೆರೆ & ಮೈಕೋ ಲೇಔಟ್, ಜೆ.ಪಿ.ನಗರ – 1&3, ಜಯನಗರ 4ನೇ ಟಿ ಬ್ಲಾಕ್, ಜಯನಗರ 4ನೇ ಬ್ಲಾಕ್, ಹೊಂಬೇಗೌಡನಗರ, ಬೈರಸಂದ್ರ, ಎಲ್.ಎಲ್.ಆರ್, ಚಿಕ್ಕಲಾಲ್‍ಬಾಗ್, ಬನ್ನಪ್ಪ ಪಾರ್ಕ್, ಸುಧಾಮ ನಗರ -1, ಕತ್ರಿಗುಪ್ಪೆ, ಹೊಸಕೆರೆಹಳ್ಳಿ, ದೇವಗಿರಿ-1, ಇಟ್ಟಮಡು, ಬನಗಿರಿನಗರ, ಎ.ನಾರಾಯಣಪುರ, ದೊಡ್ಡನಕುಂದಿ, ವಿಜ್ಞಾನನಗರ, ಬಾಣಸವಾಡಿ, ಓ.ಎಂ.ಬಿ.ಆರ್., ಲಿಂಗರಾಜಪುರಂ, ಕಸ್ತೂರಿನಗರ, ಹಲಸೂರು, ದೊಮ್ಮಲೂರು, ಮಾರತ್‍ಹಳ್ಳಿ, ಕೋರಮಂಗಲ- 1&2, ವಿಜಯನಗರ ಓ.ಎಚ್.ಟಿ, ಮೂಡಲಪಾಳ್ಯ, ನಾಗರಬಾವಿ, ಅನ್ನಪೂರ್ಣೇಶ್ವರಿನಗರ, ಸರ್.ಎಂ.ವಿ ಲೇಔಟ್, ಮೂಡಲಪಾಳ್ಯ ಸೇವಾ ಠಾಣೆಗಳಲ್ಲಿ ಅದಾಲತ್ ನಡೆಯಲಿದೆ.
ಸಾರ್ವಜನಿಕರು ಕುಂದು ಕೊರತೆಗಳಿಗೆ ಸಂಬಂಧಿಸಿ ಮಂಡಳಿಯ 24x7 ದೂರು ನಿರ್ವಹಣಾ ಕೇಂದ್ರದ ಸಹಾಯವಾಣಿ 1916ಗೆ ಕರೆ ಮಾಡಿ ದೂರುಗಳನ್ನು ದಾಖಲಿಸಬಹುದು. ಅದೇ ರೀತಿ ವಾಟ್ಸ್‌ಆಪ್ ಸಂಖ್ಯೆ 8762228888 ಸಂದೇಶದ ಮೂಲಕ ದೂರನ್ನು ಸಲ್ಲಿಸಬಹುದು ಎಂದು ಬೆಂಗಳೂರು ಜಲ ಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ಕರ್ನಾಟಕ ಉಚ್ಛ ನ್ಯಾಯಾಲಯಕ್ಕೆ ಇಬ್ಬರು ಹೆಚ್ಚುವರಿ ನ್ಯಾಯಮೂರ್ತಿಗಳು
ಕರ್ನಾಟಕ ಉಚ್ಛ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ವಿಜಯಕುಮಾರ್ ಅದಗೌಡ ಪಾಟೀಲ್ ಮತ್ತು ರಾಜೇಶ್ ರೈ ಕಲ್ಲಂಗಳ ಅವರು ಫೆಬ್ರವರಿ 9 ರಂದು ಪದವಿಯ ಅಧಿಕಾರ ಪ್ರಮಾಣ ವಚನವನ್ನು ಸ್ವೀಕರಿಸಲಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಾಳೆ ಸಂಜೆ 6.30 ಗಂಟೆಗೆ ರಾಜಭವನದ ಗಾಜಿನ ಮನೆಯಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಈ ಇಬ್ಬರು ನ್ಯಾಯಮೂರ್ತಿಗಳಿಗೆ ಪ್ರಮಾಣ ಭೋದಿಸಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಗಮನಿಸಬಹುದಾದ ಸುದ್ದಿ
DIKSUCHI 2023: ದೇಶವನ್ನು ಬಲಪಡಿಸುವಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದು- ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
DIKSUCHI 2023: ಬೆಂಗಳೂರಿನಲ್ಲಿ ಬುಧವಾರ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ ಹಾಗೂ ನ್ಯಾಷನಲ್ ಅಕಾಡೆಮಿ ಆಫ್ ಕಸ್ಟಮ್ಸ್, ಇಂಡೈರೆಕ್ಟ್ ಟ್ಯಾಕ್ಸಸ್ & ನಾರ್ಕೋಟಿಕ್ಸ್ ವತಿಯಿಂದ 74ನೇ ಬ್ಯಾಚ್ ನ ಐಆರ್‌ಎಸ್ (ಸಿ ಅಂಡ್ ಐಟಿ)ನ ಪ್ರೊಬೆಷನರಿ ಅಧಿಕಾರಿಗಳ ದಿಕ್ಸೂಚಿ 2023 ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಿದರು. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ
ವಿಭಾಗ